Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜನವರಿ 16ಕ್ಕೆ ಇಂಟರ್‌ನೆಟ್ ಬಂದ್ ಆಗುತ್ತಾ? ಸಿಂಪ್ಸನ್ ಪೋಸ್ಟರ್ ವೈರಲ್..!
ನೀವು 'ದಿ ಸಿಂಪ್ಸನ್' ಎಂಬ ಅಮೆರಿಕನ್ ಟಿವಿ ಶೋ ಕುರಿತು ಕೇಳಿರಬಹುದು. ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಟೂನ್ ಕುರಿತು ಒಂದಿಷ್ಟು ವಿಡಿಯೋಗಳು, ಫೋಟೋಗಳನ್ನು ನೋಡಿರುತ್ತೀರಿ. ಈ ಶೋ ಹೆಚ್ಚೇನು ಇಂಟರೆಸ್ಟಿಂಗ್ ಇಂದ ಕೂಡಿರುವ ಕುರಿತಂತೆ ಎಲ್ಲಿಯೂ ಚರ್ಚೆ ಆಗಿಲ್ಲ. ಆದ್ರೆ ಕೆಲವೊಂದು ವಿಚಿತ್ರ ಕಾರಣಕ್ಕೆ ಈ ಶೋ ಯಾವಾಗಲು ಸುದ್ದಿಯಾಗಿದೆ.
ಅದರಲ್ಲೂ ಭವಿಷ್ಯದ ಘಟನೆಗಳನ್ನು ನಿಖರವಾಗಿ ಹೇಳುವಂತಹ ಕಾರ್ಟೂನ್ ಎಂಬ ಖ್ಯಾತಿಗೆ ಇದು ಕಾರಣವಾಗಿದೆ. ದಿ ಸಿಂಪ್ಸನ್' ಶೋನಲ್ಲಿ ಬಂದಿರುವ ಹಲವು ಫೋಟೋಗಳು ಮುಂಬರುವ ಭವಿಷ್ಯದಲ್ಲಿ ನಡೆಯುವ ಘಟನೆಗಳ ಹೇಳಿರುತ್ತದೆ. ಈ ಘಟನೆಗಳು ಹಲವು ಬಾರಿ ನಿಜವಾಗಿದೆ ಕೂಡ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಮತ್ತೆ ಅಧಿಕಾರಕ್ಕೆ ಬರುವುದನ್ನು ಕೂಡ ಸಿಂಪ್ಸನ್ ಶೋನಲ್ಲಿ ಮೊದಲೇ ಹೇಳಿರುವುದು ಇದೊಕ್ಕೊಂದು ತಾಜ ಉದಾಹರಣೆಯಾಗಿದೆ.

ಈಗ ಮತ್ತೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನವರಿ 16ರಂದು ಇಡೀ ಜಗತ್ತಿನಲ್ಲಿ ಇಂಟರ್‌ನೆಟ್ ಬ್ಲಾಕ್‌ಔಟ್ ಆಗಲಿದೆ ಎನ್ನುವ ಪೋಸ್ಟ್ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡುಗರಿಗೆ ಅಚ್ಚರಿಯ ಜೊತೆಗೆ ಕುತೂಹಲಕ್ಕೆ ಕಾರಣವಾಗಿದೆ. 'ದಿ ಸಿಂಪ್ಸನ್' ಶೋ ಒಂದು ಸಂಚಿಕೆಯಲ್ಲಿ ಈ ಕುರಿತ ಪೋಸ್ಟರ್ ಇರುವುದನ್ನು ವೀಕ್ಷಕರು ಗುರುತಿಸಿದ್ದಾರೆ.
ಈ ಪೋಸ್ಟರ್‌ನಲ್ಲಿ ಟ್ರಂಪ್‌ನಂತೆ ಕಾಣುವ ಕಾರ್ಟೂನ್ ಹಿಂದೆ ನೋ ಇಂಟರ್‌ನೆಟ್ ಆನ್ 16 ಜನವರಿ 2025 ಎಂದು ಬರೆಯಲಾಗಿದೆ. ಈ ವಿಡಿಯೋವು ಜನವರಿ 16 ರಂದು ನಡೆಯಲಿರುವ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭದೊಂದಿಗೆ ಕೊನೆಗೊಳ್ಳಲಿದೆ ಎಂದು ತೋರಿಸಲಾಗಿದೆ. ಆದರೆ ಟ್ರಂಪ್ ಪದಗ್ರಹಣವು ಜನವರಿ 20ರಂದು ನಿಗದಿಯಾಗಿದೆ.
ಈ ಸಿಂಪ್ಸನ್ ಶೋನಲ್ಲಿ ಬರುವಂತಹ ಇಂತಹ ಭವಿಷ್ಯದ ಕುರಿತ ಹಲವು ಘಟನೆಗಳು ನಿಜವಾಗಿರುವುದು ಹಾಗೆ ಇದನ್ನು ಬಲವಾಗಿ ನಂಬುವಂತಹ ಒಂದು ಸಮುದಾಯವೇ ಬೆಳೆದಿದೆ. ಅಮೆರಿಕದಲ್ಲಿ ಈ ಶೋ ಇತ್ತೀಚಿಗೆ ಫೇಮಸ್ ಆಗಿರುವುದು ಇದೇ ಕಾರಣಕ್ಕೆ. ಈ ಶೋನಲ್ಲ ಬರುವ ಕೆಲವೊಂದು ಎಪಿಸೋಡ್‌ನಲ್ಲಿ ಹೇಳಲಾದ ವಿಚಾರಗಳು ನಿಜವಾಗುತ್ತಿರುವುದು ಬಹಳಷ್ಟು ಚರ್ಚೆಗೂ ಕಾರಣವಾಗಿದೆ.
ನಾಳೆ ಇಂಟರ್‌ನೆಟ್ ಬಂದ್ ಆಗುತ್ತಾ?
ಸಿಂಪ್ಸನ್ ಶೋನಲ್ಲಿ ಹೇಳಿರುವಂತೆ ಜನವರು 16ರಂದು ವಿಶ್ವದಾದ್ಯಂತ ಇಂಟರ್‌ನೆಟ್ ಸಮಸ್ಯೆ ಉದ್ಭವಿಸಲಿದೆ ಎಂಬ ಸೂಚನೆ ಇದೆ. ಆದ್ರೆ ಈ ರೀತಿ ಉಂಟಾಗುವುದು ಬಹುತೇಕ ಕಡಿಮೆ. ಅಮೆರಿಕದ ಕೆಲವೊಂದು ಭಾಗದಲ್ಲಿ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದಂತೆ. ಅಲ್ಲಿನ ಲಾಸ್ ಎಂಜಲಿಸ್‌ನಲ್ಲಿ ಕಾಡ್ಗಿಚ್ಚು ಹರಡಿರುವುದು ಈಗಾಗಲೇ ವಿದ್ಯುತ್ ಸಂಪರ್ಕ ಕಡಿತದ ಸಮಸ್ಯೆಗೆ ಕಾರಣವಾಗಿದೆ. ಹಾಗೆ ಇಂಟರ್‌ನೆಟ್ ಸೇವೆಯಲ್ಲೂ ಏರುಪೇರಾಗುವ ಸಂಭವವಿದೆ. ಆದರೆ ಇಡೀ ವಿಶ್ವಕ್ಕೆ ಇದು ಸಮಸ್ಯೆಯಾಗುವುದು ಅನುಮಾನ ಎನ್ನಲಾಗಿದೆ.
ಈ ಪೋಸ್ಟ್ ಹೊರ ಬೀಳುತ್ತಿದ್ದಂತೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಜನರು ಕೂಡ ಸಿಂಪ್ಸನ್ ಹೇಳಿರುವ ಈ ಭವಿಷ್ಯ ನಿಜವಾಗಲಿದೆ ಅಂತಲೇ ನಂಬಿದ್ದಾರೆ.



Click it and Unblock the Notifications
