Latest Updates
-
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು!
ವಿಪರೀತ ರಾಜಯೋಗ : ಈ 4 ರಾಶಿಯವರಿಗೆ ಹಣದ ಮಳೆಯೇ ಹರಿದು ಬರಲಿದೆ!
ಯಾವುದಾದರೂ ವ್ಯಕ್ತಿಗೆ ಏಕಾಏಕಿ ಶ್ರೀಮಂತಿಕೆ ಬಂದರೆ, ಸಂಪತ್ತು ಆತನ ಮನೆಯಲ್ಲಿ ಕಾಲು ಮುರಿದುಕೊಂಡು ಕುಳಿತ್ತಿದ್ದರೆ ಆತನದ್ದು ರಾಜ ಯೋಗ ಎಂದು ಹೇಳುವುದುಂಟು. ನಮ್ಮ ಜನ್ಮ ಕುಂಡಲಿಯಲ್ಲಿ ರಾಜಯೋಗವಿದ್ದರೆ ಖುಷಿ, ಸಂಪತ್ತು, ಸಮೃದ್ಧಿ, ಆರೋಗ್ಯ ಉತ್ತಮವಾಗಲಿದ್ಯಂತೆ. ಇನ್ನೂ ವೇದಿಕ ಜ್ಯೋತಿಷ್ಯದ ಪ್ರಕಾರ ಒಟ್ಟು 30 ಯೋಗಗಳಿದ್ಯಂತೆ. ಅದ್ರಲ್ಲಿ ವಿಪರೀತ ರಾಜಯೋಗವನ್ನು ತುಂಬಾನೇ ಶುಭಕರ ಯೋಗ ಎಂದು ಕರೆಯಲಾಗುತ್ತದೆ.
ವಿಪರೀತ ರಾಜ ಯೋಗಗಳಲ್ಲಿ ಎಷ್ಟು ವಿಧ?
ವಿಪರೀತ ರಾಜ ಯೋಗಗಳಲ್ಲಿ ಒಟ್ಟು ಮೂರು ವಿಧ ಹಾಗಾದ್ರೆ ಅವುಗಳು ಯಾವುದು ಅನ್ನೋದನ್ನು ತಿಳಿಯೋಣ :

ಹರ್ಷ ಯೋಗ
ಜಾತಕದಲ್ಲಿ ಆರನೇ ಮನೆಯ ಅಧಿಪತಿ ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿದ್ದಾಗ ಜಾತಕದಲ್ಲಿ ಹರ್ಷರಾಜಯೋಗವು ರೂಪುಗೊಳ್ಳುತ್ತದೆ. ಹರ್ಷ ರಾಜಯೋಗದ ಪ್ರಭಾವದಿಂದಾಗಿ ನಿಮಗೆ ಆರೋಗ್ಯಕರ ಜೀವನ, ಸಂಪತ್ತು, ಕುಟುಂಬದಲ್ಲಿ ಸಂತೋಷ, ಸಮಾಜದಲ್ಲಿ ಗೌರವ ಮತ್ತು ಐಷಾರಾಮಿ ಜೀವನವನ್ನು ನಡೆಸುವಂತಾಗುತ್ತಂತೆ. ಇನ್ನೂ ಆರನೇ ಮನೆಯ ಅಧಿಪತಿ ಆರನೇ ಮನೆಯಲ್ಲಿ ಇದ್ದರೆ ಹರ್ಷ ರಾಜಯೋಗವು ಮಾನ್ಯವಾಗೋದಿಲ್ಲ.
ಸರಳ ಯೋಗ
ಎಂಟನೇ ಮನೆಯ ಅಧಿಪತಿಯು ಜಾತಕದಲ್ಲಿ ಆರನೇ ಅಥವಾ ಹನ್ನೆರಡನೇ ಮನೆಯಲ್ಲಿದ್ದಾಗ ಸರಳ ರಾಜಯೋಗವು ರೂಪುಗೊಳ್ಳುತ್ತದೆ. ಸರಳ ರಾಜಯೋಗದಿಂದಾಗಿ ನೀವು ಉತ್ತಮ ಗುಣ, ಸಂಪತ್ತು, ಶಕ್ತಿ, ಶತ್ರುಗಳ ಮೇಲೆ ಜಯ ಪಡೆಯಲು ಸಾಧ್ಯವಾಗುತ್ತದೆ. ಇನ್ನೂ ಎಂಟನೇ ಮನೆಯ ಅಧಿಪತಿ ಎಂಟನೇ ಮನೆಯಲ್ಲಿದ್ದರೆ ಸರಳ ರಾಜಯೋಗವು ಮಾನ್ಯವಾಗುವುದಿಲ್ಲ.
ವಿಮಲ ಯೋಗ
ಹನ್ನೆರಡನೇ ಮನೆಯ ಅಧಿಪತಿ ಎಂಟನೇ ಅಥವಾ ಆರನೇ ಮನೆಯಲ್ಲಿದ್ದಾಗ ವಿಮಲ ರಾಜಯೋಗವು ರೂಪುಗೊಳ್ಳುತ್ತದೆ. ಇದರ ಶುಭ ಫಲದಿಂದಾಗಿ ನೀವು ಸಂಪತ್ತು, ಒಳ್ಳೆಯ ಗುಣ, ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯಂತಹ ಶುಭ ಫಲಿತಾಂಶಗಳನ್ನು ಪಡೆಯಬಹುದು. ಮತ್ತೊಂದೆಡೆ ಹನ್ನೆರಡನೇ ಮನೆಯ ಅಧಿಪತಿ ಹನ್ನೆರಡನೇ ಮನೆಯಲ್ಲಿದ್ದರೆ ವಿಮಲ ರಾಜಯೋಗ ಎಂದು ಪರಿಗಣಿಸಲಾಗುವುದಿಲ್ಲ.
ಅಷ್ಟಕ್ಕೂ ವಿಪರೀತ ರಾಜಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಶುಭಫಲ ಪ್ರಾಪ್ತಿಯಾಗಲಿದೆ ಅನ್ನೋದನ್ನು ತಿಳಿಯೋಣ :
ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಪರೀತ ರಾಜಯೋಗವು ಮೇಷ ರಾಶಿಯವರಿಗೆ ತುಂಬಾನೇ ಮಂಗಳಕರವಾಗಿದೆ. ಈ ರಾಜಯೋಗವು ಮೇಷ ರಾಶಿಯವರ 12 ನೇ ಮನೆಯಲ್ಲಿ ಸಂಭವಿಸಲಿದೆ. ಈ ಸಂದರ್ಭದಲ್ಲಿ ಗುರು, ಬುಧ ಮತ್ತು ಸೂರ್ಯನ ಸಂಯೋಗ ಆಗಲಿದೆ.
ಇನ್ನೂ ಶನಿ ಮತ್ತು ರಾಹು ಪಾಪಕರ್ತರಿ ಯೋಗದಲ್ಲಿದ್ದಾರೆ. ಹೀಗಾಗಿ ವ್ಯಕ್ತಿಯು ಆಕಸ್ಮಿಕವಾಗಿ ಹಣವನ್ನು ಪಡೆಯುತ್ತಾನೆ. ಹಳೆಯ ಹೂಡಿಕೆಯು ನಿಮಗೆ ಲಾಭ ನೀಡುತ್ತದೆ. ಇನ್ನೂ ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೂ ಪ್ರಯೋಜನವಾಗಲಿದೆ.
ತುಲಾ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಪರೀತ ರಾಜಯೋಗದಿಂದಾಗಿ ತುಲಾ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ನೀವು ಕೋರ್ಟ್ ವಿಚಾರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಸಾಲ ನೀಡಿದ ಹಣವನ್ನು ಮರಳಿ ಪಡೆಯಬಹುದು. ಇಷ್ಟೇ ಅಲ್ಲ, ಇಷ್ಟು ಸಮಯದಿಂದ ನಿಮಗೆ ಬರಬೇಕಾಗಿದ್ದ ದುಡ್ಡು ವಾಪಾಸ್ಸ್ ಆಗುತ್ತದೆ. ಕೆಲಸದ ವಿಚಾರದಲ್ಲಿ ಪ್ರಯಾಣದ ಸಾಧ್ಯತೆಯಿದೆ. ಈ ಸಮಯದಲ್ಲಿ ತುಲಾ ರಾಶಿಯವರ ಬಾಳಿನಲ್ಲಿ ಎಲ್ಲವೂ ಒಳ್ಳೆಯದಾಗಲಿದೆ. ನೀವು ಅಂದುಕೊಂಡಿದ್ದೆಲ್ಲಾ ನೆರವೇರಲಿದೆ.
ಮಕರ ರಾಶಿ
ವಿಪರೀತ ರಾಜಯೋಗವು ಮಕರ ರಾಶಿಯವರಿಗೆ ಶುಭ ಫಲಿತಾಂಶಗಳನ್ನೇ ನೀಡಲಿದೆ. ಈ ಸಮಯದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಹಾಗೂ ನೀವು ಅಂದುಕೊಂಡ ಕೆಲಸಗಳೆಲ್ಲಾ ಯಶಸ್ವಿಯಾಗುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಸಾಕಷ್ಟು ಹಣ ಪಡೆಯುತ್ತೀರಿ. ಇನ್ನೂ ನೀವು ಇಷ್ಟಪಟ್ಟ ಸಂಗಾತಿಯ ಕೈ ಹಿಡಿಯೋದಕ್ಕೆ ಸಾಧ್ಯವಾಗುತ್ತದೆ.
ಸಿಂಹ ರಾಶಿ
ವಿಪರೀತ ರಾಜಯೋಗವು ಸಿಂಹ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಸಿಂಹ ರಾಶಿಯ ಎಂಟನೇ ಮನೆಯಲ್ಲಿ ಬುಧ ಮತ್ತು ಗುರು ಕುಳಿತಿದ್ದಾರೆ. ಮತ್ತು ಶುಕ್ರ ಮೂರನೇ ಮನೆಯಲ್ಲಿ ಕುಳಿತಿದ್ದಾರೆ. ಇದಕ್ಕೆ ವಿರುದ್ಧವಾದ ರಾಜಯೋಗ ಸೃಷ್ಟಿಯಾಗುತ್ತಿದೆ. ಹೀಗಾಗಿ ಈ ಸಮಯದಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯುತ್ತೀರಿ. ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಉದ್ಯೋಗವನ್ನು ಹುಡುಕುತ್ತಿರುವ ಜನರು ಈ ಅವಧಿಯಲ್ಲಿ ಲಾಭವನ್ನು ಪಡೆಯುತ್ತಾರೆ.



Click it and Unblock the Notifications
