Latest Updates
-
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ!
ವಿಕ್ರಮ ಸಂವತ್ಸರ 2080 : ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
ವಿಕ್ರಮ ಸಂವತ್ಸರ 2080 ಹಿಂದೂಗಳಿಗೆ ಹೊಸ ವರ್ಷ. ಭಾರತ ಸೇರಿದಂತೆ ಜತ್ತಿನ ಅನೇಕ ದೇಶಗಳು ಇಂದಿಗೂ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಪಾಲಿಸುತ್ತಿದ್ದಾರೆ. ಆದರೆ ನೇಪಾಳದಲ್ಲಿ ಮಾತ್ರ ವಿಕ್ರಮ ಸಂವತ್ಸರದ ಪ್ರಕಾರ ದೇಶವನ್ನು ನಡೆಸಲಾಗುತ್ತಿದೆ.
ವಿಕ್ರಮ ಸಂವತ್ಸರ 2080 ಆರಂಭವಾಗಿದ್ದು ಹಿಂದೂಗಳು 2023, ಮಾರ್ಚ್ 22 ರಂದು ಹೊಸ ವರುಷಕ್ಕೆ ಕಾಲಿಟ್ಟಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಹೊಸ ವರ್ಷದಲ್ಲಿ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಿದ್ದು ಕೆಲವೊಂದು ರಾಶಿಗಳಿಗೆ ಇದರಿಂದ ಶುಭವಾಗಲಿದೆ. ವಿಕ್ರಮ ಸಂವತ್ಸರ ಆರಂಭವಾಗಿರೋದ್ರಿಂದ ಹಣ, ಉದ್ಯೋಗ, ವ್ಯಾಪಾರದಲ್ಲಿ ಉತ್ತಮ ಪ್ರಗತಿಯಾಗಲಿದೆ. ಹಾಗಾದ್ರೆ ವಿಕ್ರಮ ಸಂವತ್ಸರ ಆರಂಭವಾಗಿರೋದ್ರಿಂದ ಯಾವೆಲ್ಲಾ ರಾಶಿಗಳಿಗೆ ಶುಭ ಫಲವಿದೆ ಅನ್ನೋದನ್ನ ತಿಳಿದುಕೊಳ್ಳೋಣ.

ವಿಕ್ರಮ ಸಂವತ್ಸರದಲ್ಲಿ ಗ್ರಹಗಳ ಸಂಚಾರ ಹೇಗಿರಲಿದೆ?
ನ್ಯಾಯದೇವತೆಯಾದ ಶನಿಯು 30 ವರ್ಷಗಳ ನಂತರ ಮೊದಲ ಬಾರಿಗೆ ಕುಂಭ ರಾಶಿ ಪ್ರವೇಶಿಸಿದ್ದಾನೆ. ಇತ್ತ ರಾಹು ಮತ್ತು ಶುಕ್ರ ಮೇಷ ರಾಶಿಯಲ್ಲಿ ಕುಳಿತ್ತಿದ್ದರೆ. ಅತ್ತ ಕೇತು ತುಲಾ ರಾಶಿ ಪ್ರವೇಶಿಸಿದ್ದಾನೆ. ಇನ್ನೂ ಮಂಗಳ ಗ್ರಹವು ಮಾರ್ಚ್ 13 ರಂದು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಗ್ರಹಗಳ ರಾಜ ಸೂರ್ಯ ದೇವಗುರುವು ಗುರು ಮತ್ತು ಬುಧನೊಂದಿಗೆ ಮೀನಯನ್ನು ರಾಶಿಯನ್ನು ಪ್ರವೇಶಿಸಿದ್ದಾನೆ. ಇನ್ನೂ ಗುರುವು ಹೊಸ ವರ್ಷದಂದು 12 ವರ್ಷಗಳ ನಂತರ ಮೀನ ರಾಶಿ ಪ್ರವೇಶಿಸಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಈ ಅದ್ಭುತ ಸಂಯೋಜನೆಯು ಮಿಥುನ, ಸಿಂಹ, ತುಲಾ ಮತ್ತು ಧನು ರಾಶಿಯ ಜನರಿಗೆ ತುಂಬಾನೇ ಉತ್ತಮ ಹೇಳಲಾಗುತ್ತದೆ.

ಮಿಥುನ ರಾಶಿ
ಹಿಂದೂ ಹೊಸ ವರ್ಷ 2023ರಲ್ಲಿ ಮಿಥುನ ರಾಶಿಯವರಿಗೆ ವೃತ್ತಿಪರ ಜೀವನದಲ್ಲಿ ತುಂಬಾನೇ ಒಳ್ಳೆಯದಾಗಲಿದೆ. ನಿಮಗೆ ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಯಶಸ್ಸು ಸಾಧಿಸುತ್ತೀರಿ. ಆರ್ಥಿಕವಾಗಿ ಅಭಿವೃದ್ಧಿಯಾಗುತ್ತೀರಿ. ನೀವು ಅಂದುಕೊಂಡಿದ್ದ ಗುರಿಯನ್ನು ಸಾಧಿಸುತ್ತೀರಿ. ಈ ಬಾರಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ.

ಸಿಂಹ ರಾಶಿ
ಹೊಸ ಸಂವತ್ಸರ 2080ರಲ್ಲಿ ಸಿಂಹ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಪೂರ್ವಿಕರ ಆಸ್ತಿಯಿಂದ ಲಾಭವಾಗಬಹುದು. ನಿಮ್ಮ ಆದಾಯದ ಮೂಲಗಳು ಹೆಚ್ಚಾಗಬಹುದು. ಖರ್ಚು-ವೆಚ್ಚಗಳು ನಿಯಂತ್ರಣದಲ್ಲಿರುತ್ತವೆ. ಒಟ್ಟಾರೆಯಾಗಿ, ಬ್ಯಾಂಕ್ ಬ್ಯಾಲೆನ್ಸ್ ಕಾಪಾಡಿಕೊಳ್ಳಬಹುದು. ಕಷ್ಟ ಕಾಲದಲ್ಲಿ ಕುಟುಂಬ ಸದಸ್ಯರ ಬೆಂಬಲ ಇರುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತಹ ಅಡೆತಡೆಗಳು ನಿವಾರಣೆಯಾಗುತ್ತವೆ.

ತುಲಾ ರಾಶಿ
ಹೊಸ ಸಂವತ್ಸರವು ತುಲಾ ರಾಶಿಯವರಿಗೆ ಉತ್ತಮ ಫಲಿತಾಂಶವನ್ನು ನೀಡಲಿದೆ. ಗ್ರಹಗಳ ದುಷ್ಪರಿಣಾಮದಿಂದ ಹಾಳಾಗುತ್ತಿದ್ದ ಕೆಲಸಗಳಲ್ಲಿ ಇನ್ನು ಮುಂದೆ ಸುಧಾರಣೆ ಖಂಡಿತ ಕಾಣುತ್ತೀರಿ. ವೃತ್ತಿಪರ ಜೀವನದಲ್ಲಿ ನಿಮ್ಮ ಶತ್ರುಗಳು ಪ್ರಾಬಲ್ಯ ಸಾಧಿಸಲು ಸಾಧ್ಯವಾಗುವುದಿಲ್ಲ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಇನ್ನೂ ಶಿಕ್ಷಣ ಕ್ಷೇತ್ರದಲ್ಲಿ ನೀವು ಪ್ರಗತಿ ಮತ್ತು ಗೌರವ ಎರಡನ್ನೂ ಪಡೆಯುತ್ತೀರಿ.

ಧನು ರಾಶಿ sagittarius
ಹೊಸ ಸಂವತ್ಸರ 2023 ಧನು ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆರ್ಥಿಕ ಸಂಕಷ್ಟದಿಂದ ಪಾರಾಗುತ್ತೀರಿ. ನಿಮ್ಮ ಮಾತಿನಿಂದ ನೀವು ಎಲ್ಲರ ಹೃದಯವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಈ ವರ್ಷ ನೀವು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಸರ್ಕಾರಿ ಉದ್ಯೋಗಗಳಿಗಾಗಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಹೊಸ ವರ್ಷದಲ್ಲಿ ಶುಭ ಸುದ್ದಿ ಸಿಗಬಹುದು.
ಒಟ್ಟಿನಲ್ಲಿ ಈ ವಿಕ್ರಮ ಸಂವತ್ಸರ 2080 ಈ ನಾಲ್ಕು ರಾಶಿಯ ಜನರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಅಂತಾನೇ ಹೇಳಬಹುದು.



Click it and Unblock the Notifications