Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಂದೆಯನ್ನೇ ಮದುವೆಯಾದ ಮಗಳು..! ಕಲಿಗಾಲದಲ್ಲಿ ಇದೆಲ್ಲಾ ಸಾಧ್ಯ ಎಂದ ಜನ..!!
ತಂದೆ ಮಗಳ ಸಂಬಂಧ ಅನ್ನೋದು ಪವಿತ್ರವಾದ ಬಂಧವಾಗಿದೆ. ತಂದೆ ಹಾಗೂ ಮಗಳ ಈ ಬಂಧನವನ್ನು ಒಂದು ಪದದಲ್ಲಿ ವಿವರಿರಲು ಸಾಧ್ಯವಿಲ್ಲ ಬಿಡಿ. ತಂದೆ ಮಗಳಿಗಾಗಿ ಎಂತಹ ಕಠಿಣ ಕೆಲಸವನ್ನಾದರು, ಆಕೆಯ ಬದುಕಿ ನಿರ್ಮಿಸಲು ಎಂತಹ ಸಾಹಸವನ್ನಾದರು ಮಾಡುತ್ತಾನೆ ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಆಕೆಗಾಗಿ ತಂದೆ ತನ್ನ ಸರ್ವಸ್ವವನ್ನೂ ಮುಡುಪಿಡುತ್ತಾನೆ.
ಆದ್ರೆ ಇತ್ತೀಚಿಗೆ ಇಂತಹ ಪವಿತ್ರ ಸಂಬಂಧಗಳಿಗೂ ಅರ್ಥವಿಲ್ಲದ ಪರಿಸ್ಥಿತಿಯಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ. ಅಂದರೆ ಈ ಸಂಬಂಧಗಳಿಗೆ ಅರ್ಥವೇ ಇಲ್ಲದಂತೆ ಬದುಕುವವರ ನಾವು ನೋಡಿದ್ದೇವೆ. ಅದರಲ್ಲೂ ಮಕ್ಕಳೇ ಈಗ ಪೋಷಕರನ್ನು ದೂರ ಇಡುವುದು, ವೃದ್ಧಾಶ್ರಮಕ್ಕೆ ಕಳುಹಿಸಿವುದು, ಅವರಿಂದ ಕೆಲವ ಮಾಡಿಸುವುದು, ಹಿಂಸೆ ನೀಡುವುದು ಹೀಗೆ ಒಂದಿಷ್ಟು ಘಟನೆಗಳ ನಾವು ನೋಡಿದ್ದೇವೆ.

ಆದ್ರೆ ಇಲ್ಲೊಂದು ಕಡೆ ಈಗ ತಂದೆಯೇ ಮಗಳನ್ನು ಮದುವೆಯಾಗಿರುವ ಅಚ್ಚರಿಯ ಹಾಗೂ ಆಘಾತಕಾರಿ ಘಟನೆಯೊಂದು ನಡೆದಿದೆ. ಹೌದು ನಾವಿಂದು ಇಂತಹ ವಿಚಿತ್ರ ಘಟನೆ ನಡೆದಿರುವ ಕುರಿತು ತಿಳಿದುಕೊಳ್ಳೋಣ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಅದರಲ್ಲಿ ತಂದೆ ಹಾಗೂ ಮಗಳು ನಿಂತಿದ್ದಾರೆ. ಆದ್ರೆ ಇಬ್ಬರು ಮದುವೆಯಾಗಿರುವುದಾಗಿ ಹೇಳುತ್ತಿರುವುದು ಅಲ್ಲಿ ನೆರೆದಿರುವವರಿಗೆ ಆಘಾತ ತಂದಿದೆ.
24 ವರ್ಷದ ಯುವತಿಯೊಬ್ಬರು ತನ್ನ 50 ವರ್ಷದ ತಂದೆಯನ್ನು ವಿವಾಹವಾಗಿದ್ದಾರೆಂದು ಹೇಳಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆ ಇದು ಹೇಗೆ ಸಾಧ್ಯ ಎಂದು ಎಲ್ಲರಲ್ಲೂ ಆಘಾತಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು ಸಮಾಜವಾದಿ ಪಕ್ಷದ ನಾಯಕ ಜಯ್ ಸಿಂಗ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಕೆಂಪು ಸೀರೆ ಹಾಗೂ ಉದ್ದನೆಯ ಕುಂಕುಮ ಹಚ್ಚಿಕೊಂಡಿರುವ 24 ವರ್ಷದ ಯುವತಿ ತನ್ನ ತಂದೆಯನ್ನೇ ವಿವಾಹವಾಗಿದ್ದಾಳೆ. "ಇವರು ನನ್ನ ತಂದೆ, ಮತ್ತು ಈಗ ನಾವು ಸಂತೋಷದಿಂದ ಮದುವೆಯಾಗಿದ್ದೇವೆ ಎಂದು ಜಗತ್ತಿಗೆ ತೋರಿಸಿದ್ದೇವೆ" ಎಂದು ಪಕ್ಕದವರನ್ನು ಉದ್ದೇಶಿಸಿ ಹೇಳುವುದು ಕಂಡುಬರುತ್ತದೆ. ಪಕ್ಕದಲ್ಲಿ ನಿಂತಿದ್ದ ಅವಳ ತಂದೆ, "ಹೌದು, ಅವಳು ನನ್ನ ಮಗಳು. ಹಾಗಾದರೆ ಇದರಲ್ಲಿ ಏನು ಸಮಸ್ಯೆ?" ಎಂದು ಸಂಬಂಧವನ್ನು ದೃಢಪಡಿಸಿದರು. ಈ ವಿಡಿಯೋ ಸುಮಾರು 5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಅಲ್ಲದೆ ಇದನ್ನು ನೋಡಿದ ಮಂದಿ ಆಘಾತಕ್ಕೆ ಒಳಗಾಗಿದ್ದಾರೆ.
ನೀವು ಯಾವ ಯುಗದಲ್ಲಿ ವಾಸಿಸುತ್ತಿದ್ದೀರಿ? ನಾಚಿಕೆಯಾಗುವುದಿಲ್ಲವೆ? ಅದರಲ್ಲೂ ವಿಡಿಯೋ ಏಕೆ ಮಾಡಿ ತೋರಿಸುತ್ತೀರಿ? ಎಂದು ಅಲ್ಲಿದ್ದ ಗುಂಪಿಲ್ಲಿರುವವರು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಯುವತಿ ನಮ್ಮಿಬ್ಬರ ಜೋಡಿ ನೋಡಿ ಗಾಸಿಪ್ ಮಾಡುತ್ತಿದ್ದರು. ಅವರಿಗೆ ಉತ್ತರ ನೀಡಿದ್ದೇವೆ. ತಂದೆಯನ್ನು ಬಹಳ ಕಾಲದಿಂದ ನಾನು ಪ್ರೀತಿಸುತ್ತಿದ್ದೆ ಈಗ ಮದುವೆಯಾಗಿದ್ದೇನೆ. ಅದರಲ್ಲಿ ನನಗೆ ಸಮಸ್ಯೆ ಇಲ್ಲ ಎಂದು ಯುವತಿ ಹೇಳುತ್ತಿರುವುದು ವಿಡಿಯೋದಲ್ಲಿ ನಾವು ಸಹ ಕೇಳಬಹುದು.
ಆದ್ರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೋಡುಗರು ಆಘಾತಕ್ಕೊಳಗಾಗಿದ್ದಾರೆ. ಜನ ಇಂದು ಸಂಬಂಧಗಳಿಗೆ ನೀಡುವ ಮಹತ್ವ ನೋಡಿ ಶಾಕ್ ಆಗಿದ್ದಾರೆ. ತಂದೆ ಮಗಳನ್ನೇ ವಿವಾಹವಾಗುವುದನ್ನು ನೋಡಿ ಸಮಾಜ ಯಾವ ಕಡೆಗೆ ಸಾಗುತ್ತಿದೆ ಎಂಬುದನ್ನು ನೆನೆದು ಆಘಾತಕ್ಕೆ ಒಳಗಾಗಿದ್ದಾರೆ.
ಆದ್ರೆ ಈ ಇಬ್ಬರು ಇದಕ್ಕೂ ಮೊದಲು ಹಲವು ರೀಲ್ಸ್ ವಿಡಿಯೋ ಮಾಡುತ್ತಿದ್ದರಂತೆ, ಅದರಲ್ಲೂ ಕೂಡ ತಂದೆ ಮಗಳು ಎಂಬುದನ್ನು ಮರೆತಿರುವಂತೆ ವಿಡಿಯೋಗಳ ಹಂಚಿಕೊಂಡಿದ್ದರು. ಆದ್ರೆ ಈಗ ಇಬ್ಬರು ಮದುವೆಯಾಗಿದ್ದಾರೆ. ಎಲ್ಲರ ಕೈಗೆ ಮೊಬೈಲ್ ಸಿಕ್ಕ ಬಳಿಕ ಸಂಬಂಧಗಳ ಉಳಿಸಿಕೊಳ್ಳುವುದು ಎಷ್ಟು ಕಷ್ಟವೋ ಅದರಂತೆ ನಮ್ಮ ನಡುವಿನ ಸಂಬಂಧಗಳನ್ನೇ ನಾವು ಮರೆತಿರುವಂತಿದೆ.



Click it and Unblock the Notifications











