Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಬೆಟ್ಟದ ಮೇಲೆ ವಿಚಿತ್ರ ಜೀವಿ ಪ್ರತ್ಯಕ್ಷ.! ಏಲಿಯನ್ ವಿಡಿಯೋ ವೈರಲ್
ನೀವು ಏಲಿಯನ್ ಕಂಡ ಕಥೆಗಳ ಕೇಳಿರುತ್ತೀರಿ. ಅಷ್ಟೆ ಏಕೆ ಅಲ್ಲಿ ಇಲ್ಲಿ ಯಾವುದೋ ವಿಚಿತ್ರ ಪ್ರಾಣಿ ಕಾಣಿಸಿಕೊಂಡ ಬಗ್ಗೆಯೂ ನೋಡಿರ್ತೀರಿ. ಹಾಗೆ ಇಲ್ಲೊಂದು ಕಡೆ ಏಲಿಯನ್ ಕಾಣಿಸಿಕೊಂಡಿದೆ ಎಂಬ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 8ರಿಂದ 10 ಅಡಿ ಉದ್ದವಿರುವ ವ್ಯಕ್ತಿ ಬೆಟ್ಟದ ಮೇಲಿಂದ ಇಳಿದುಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬ್ರೆಜಿಲ್‌ನ ದ್ವೀಪವೊಂದರ ಬೆಟ್ಟದ ಮೇಲೆ ಮಾನವನಂತಿರುವ ಎರಡು ಜೀವಿಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಭೂಮಿಯ ಮೇಲೆ ಅನ್ಯಗ್ರಹ ಜೀವಿಗಳ ಭೇಟಿಯ ಬಗ್ಗೆ ಮತ್ತೆ ಕಿಡಿ ಹೊತ್ತಿಸಿದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಜೀವಿಗಳು 10-ಅಡಿ ಎತ್ತರದವು ಮತ್ತು ಆಗ್ನೇಯ ಬ್ರೆಜಿಲ್‌ನ ಕರಾವಳಿಯಿಂದ ಮೂರು ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿರುವ ಇಲ್ಹಾ ಡೊ ಮೆಲ್ ಎಂಬ ದ್ವೀಪದಲ್ಲಿ ಕಾಣಿಸಿಕೊಂಡದೆ.
ವಿಚಿತ್ರ ಎಂದ ನೆಟ್ಟಿಗರು
ವಿಡಿಯೋ ಮಾಡುತ್ತಿರುವವರು ಅವರು ಮನುಷ್ಯರು ಎಂದು ಒಪ್ಪಲು ಸಾಧ್ಯವಿಲ್ಲ ಎನ್ನುತ್ತಿರುವುದು ಕೇಳಿಬರುತ್ತಿದೆ. ಇದು ನಿಜವಾಗಿಯೂ ವಿಚಿತ್ರ ಯಾರಾದರೂ ಇಷ್ಟು ಉದ್ದವಿರುವ ಮನುಷ್ಯರನ್ನು ಹಿಂದೆ ನೋಡಿದ್ದೀರಾ ಎಂದು ವಿಡಿಯೋದಲ್ಲಿ ಹೇಳಲಾಗುತ್ತಿದೆ. ಆದರೆ ಅವರು ವೇಗವಾಗಿ ಬೆಟ್ಟವನ್ನಿಳಿದು ಬರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಬ್ರೆಜಿಲ್ ಸರ್ಕಾರ ಹೇಳಿದ್ದೇನು?
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ. ಬ್ರೆಜಿಲ್ ಸರ್ಕಾರ ಎಚ್ಚೆತ್ತುಕೊಂಡಿತು. ಈ ವಿಡಿಯೋದಲ್ಲಿ ಕಾಣಿಸುತ್ತಿರುವ ವ್ಯಕ್ತಿಗಳು ಪ್ರವಾಸಿಗರೇ ಅಥವಾ ಸ್ಥಳೀಯ ನಿವಾಸಿಗಳೇ ಎಂಬುದು ನಮಗೆ ಸ್ಪಷ್ಟವಾಗಿಲ್ಲ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮೆಕ್ಸಿಕೋದಲ್ಲಿ ಏಲಿಯನ್ ಶವಗಳ ಪ್ರದರ್ಶನ
ಈ ಹಿಂದೆ ಮೆಕ್ಸಿಕೋದಲ್ಲಿ ಏಲಿಯನ್‌ಗಳ ಶವ ಪ್ರದರ್ಶನ ಮಾಡಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಮೆಕ್ಸಿಕೋದ ಕಾಂಗ್ರೆಸ್ ಅಧಿಕೃತ ಕಾರ್ಯಕ್ರಮದಲ್ಲಿ ಎರಡು "ಏಲಿಯನ್‌ಗಳ ಶವಗಳನ್ನು" ಅನಾವರಣಗೊಳಿಸಲಾಗಿತ್ತು. ಯುಫಾಲಜಿಸ್ಟ್ ಜೈಮ್ ಮೌಸ್ಸನ್ ಈ ಏಲಿಯನ್ ಶವಗಳನ್ನು ಅನಾವರಣಗೊಳಿಸಿದ್ದರು. ಎರಡು ಸಣ್ಣ ಶವಗಳನ್ನು ಕಾರ್ಯಕ್ರಮದಲ್ಲಿ ನೆರೆದಿದ್ದ ವೀಕ್ಷಕರಿಗೆ ಪ್ರದರ್ಶಿಸಲಾಗಿತ್ತು.

UFOಗಳ ಪತ್ತೆ ಮಾಡಲು ಮುಂದಾಗಿತ್ತು ಅಮೆರಿಕ
ವಿಶ್ವಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಪತನಗೊಂಡಿದ್ದ 9 ಯುಎಫ್‌ಒ (ಗುರುತಿಸಲಾಗದ ಹಾರುವ ವಸ್ತು) ವಾಹನಗಳು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ವಶದಲ್ಲಿದೆ ಎಂದು ಡೇಲಿ ಮೇಲ್ ವರದಿ ಮಾಡಿತ್ತು. ಅನ್ಯಗ್ರಹ ಜೀವಿಗಳು ತಮ್ಮ ಸಂಚಾರಕ್ಕೆ ಬಳಸುವ ವಾಹನ ಎನ್ನಲಾದ ಯುಎಫ್‌ಒಗಳನ್ನು ಅಮೆರಿಕದ ಸಿಐಎ ತನ್ನ ವಶಕ್ಕೆ ತೆಗೆದುಕೊಂಡಿದ್ದು, ರಹಸ್ಯ ಸ್ಥಳದಲ್ಲಿ ಸಂಗ್ರಹಿಸಿದೆ ಎಂದು ವರದಿಯಾಗಿದೆ.
ಅಮೆರಿಕದ ಬೇಹುಗಾರಿಕಾ ಪಡೆ ಸಿಐಎ, ಒಂದು ರಹಸ್ಯ ತಂಡವನ್ನು ಹೊಂದಿದೆ. ಈ ತಂಡಕ್ಕೆ ಆಫೀಸ್ ಆಫ್ ಗ್ಲೋಬಲ್ ಅಕ್ಸೆಸ್ (ಒಜಿಎ) ಎಂದು ಕರೆಯಲಾಗುತ್ತದೆ. ಈ ತಂಡದ ಸದಸ್ಯರು ವಿಶ್ವಾದ್ಯಂತ ಯುಎಫ್‌ಒ ಪತನವಾದ ಸ್ಥಳಕ್ಕೆ ಧಾವಿಸಿ ಅಲ್ಲಿ ಸಿಗುವ ಭಗ್ನಗೊಂಡ ಯುಎಫ್‌ಒ ವಾಹನಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ.
ಕರ್ನಾಟಕಕ್ಕೂ ಇದೆ ನಂಟು
ಗದಗ ಜಿಲ್ಲೆಯ ಸಮೀಪದ ಅಂಟೂರು ಗ್ರಾಮದಲ್ಲಿ 2017ರಲ್ಲಿ ಏಲಿಯನ್ ಗಳು ಆಗಮಿಸಿದ್ದವು ಎಂಬ ಸುದ್ದಿ ಹಾರಿದಾಡಿತ್ತು. ಗದ್ದೆಗಳಲ್ಲಿ ಬೃಹತ್ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಈ ಹೆಜ್ಜೆ ಗುರುತುಗಳು ಏಲಿಯನ್ ಗಳದ್ದೇ ಎಂಬ ಮಾತು ಕೂಡ ಕೇಳಿಬಂದಿತ್ತು. ರಾತ್ರಿ ಸುಮಾರು 2 ಗಂಟೆ ಹೊತ್ತಿನಲ್ಲಿ ವಿಚಿತ್ರ ಪ್ರಾಣಿಗಳು ದೊಡ್ಡ ಮಟ್ಟದ ಉಸಿರಾಟ ಮಾಡುತ್ತಾ ತಿರುಗಾಡುತ್ತಿತ್ತು. ಅವುಗಳ ಉಸಿರಾಟದ ಶಬ್ದಕ್ಕೇ ಹೆದರಿ ನಾವು ಮನೆಯಿಂದ ಆಚೆ ಬರಲಿಲ್ಲ ಎಂದು ಗ್ರಾಮದ ಹಲವು ಮಹಿಳೆಯರು ಹೇಳಿದ್ದರು.



Click it and Unblock the Notifications