Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Shukra Gochar october 2023 ಅಕ್ಟೋಬರ್‌ನಲ್ಲಿ ಸಿಂಹ ರಾಶಿಯಲ್ಲಿ ಶುಕ್ರ ಗೋಚಾರ ಫಲ: ದ್ವಾದಶ ರಾಶಿಗಳಿಗೆ ಹೇಗಿರಲಿದೆ
ಶುಕ್ರನನ್ನು ಸಂಪತ್ತು, ಸೌಕರ್ಯದ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನ ಅನುಕೂಲಕ ಸ್ಥಾನದಲ್ಲಿದ್ದರೆ ಉತ್ತಮ ಪ್ರಯೋಜನ ನೀಡುತ್ತಾನೆ. ಅನುಕೂಲಕರ ಸ್ಥಾನದಲ್ಲಿ ಇರದಿದ್ದರೆ ಈ ಅವಧಿಯಲ್ಲಿ ಹಣಕಾಸು, ಕೌಟುಂಬಿಕ, ವೃತ್ತಿ ಜೀವನದ ಬಗ್ಗೆ ಜಾಗ್ರತೆವಹಿಸಬೇಕು. ಈ ತಿಂಗಳು ಅಕ್ಟೋಬರ್ 2ರಂದು ಶುಕ್ರ ಸಿಂಹ ರಾಶಿಗೆ ಸಂಚರಿಸಲಿದೆ. ಈ ಸಂಚಾರದ ಅವಧಿಯಲ್ಲಿ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಶುಕ್ರ ನಿಮ್ಮ 5ನೇ ಮನೆಯಲ್ಲಿ ಇರಲಿದೆ. ಈ ಸಂಕ್ರಮಣದ ಸಮಯದಲ್ಲಿ ನೀವು ಅಭದ್ರತೆಯ ಭಾವನೆಯನ್ನು ಅನುಭವಿಸಬಹುದು, ಇದರಿಂದಾಗಿ ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಆತ್ಮವಿಶ್ವಾಸದ ಕೊರತೆ ಎದುರಾಗುವುದು. ಈ ಅವಧಿಯಲ್ಲಿ ಅತಿಯಾಗಿ ಯೋಚಿಸಿ ಮಾನಸಿಕ ಒತ್ತಡ ಅಧಿಕ
ಇದಲ್ಲದೆ, ಇದು ನಿಮ್ಮ ದಕ್ಷತೆಗೆ ಅಡ್ಡಿಯಾಗುತ್ತದೆ.
ವೃತ್ತಿ ಜೀವನದಲ್ಲಿ ಕೆಲಸದ ಒತ್ತಡ ಇರಲಿದೆ. ಕೆಲಸದಲ್ಲಿ ಅತೃಪ್ತಿ ಇರಲಿದೆ. ಉದ್ಯೋಗ ಬದಲಾವಣೆ ಆಲೋಚನೆ ತಲೆಗೆ ಬರಬಹುದು, ಆದರೆ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಈ ಅವಧಿಯಲ್ಲಿ, ವಿದೇಶದಲ್ಲಿ ಉದ್ಯೋಗ ಪಡೆಯುವ ಸಾಧ್ಯತೆಗಳು ಹೆಚ್ಚು. ಉದ್ಯೋಗದಲ್ಲಿ ಈ ಅವಧಿ ಸರಾಸರಿಯಾಗಿರಲಿದೆ.
ವ್ಯಾಪಾರಸ್ಥರಿಗೆ ಮಿಶ್ರಫಲ, ಲಾಭ-ನಷ್ಟ ಎರಡೂ ಇರಲಿದೆ. ಪಾಲುದಾರಿಕೆಯ ವ್ಯಾಪಾರ ಮಾಡುವಾಗ ಜಾಗ್ರತೆವಹಿಸಿ. ಆರ್ಥಿಕವಾಗಿ ಈ ಅವಧಿ ಒಳ್ಳೆಯದಿದೆ. ಪ್ರಮುಖ ಹೂಡಿಕೆಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಈ ಅವಧಿಯಲ್ಲಿ ಮಾಡಲು ಹೋಗಬೇಡಿ, ನಷ್ಟ ಉಂಟಾಗಬಹುದು.
ಕೌಟುಂಬಿಕ ಜೀವನದಲ್ಲಿ ಏರಳಿತಗಳಿರಲಿದೆ. ಕುಟುಂಬದಲ್ಲಿ ಸಮಸ್ಯೆ ಬಗೆ ಹರಿಸಲು ನೀವು ಬಯಸುವುದಾದರೆ ಕೋಪ ನಿಯಂತ್ರಣದಲ್ಲಿಡಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಜೋಪಾನ. ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಕಡೆಯೂ ಗಮನಹರಿಸಿ.
ಪರಿಹಾರ: 'ಓಂ ನಮೋ ನಾರಾಯಣ' ಮಂತ್ರವನ್ನು ಪ್ರತಿದಿನ 41 ಬಾರಿ ಜಪಿಸಿ.
ವೃಷಭ ರಾಶಿ
ವೃಷಭ ರಾಶಿಯ ನಾಲ್ಕನೇ ಮನೆಯಲ್ಲಿ ಶುಕ್ರ ಇರಲಿದೆ. ಈ ಅವಧಿಯಲ್ಲಿ ಸೌಕರ್ಯಗಳು ಕಡಿಮೆಯಾಗುವುದು. ಅನಾವಶ್ಯಕ ಚಿಂತೆಗಳು ನಿಮ್ಮ ಜೀವನದ ಮೇಲೆ ಹೊರೆಯಾಗಬಹುದು. ಕುಟುಂಬ ಜೀವನದಲ್ಲೂ ಏರಳಿತಗಳಿರುತ್ತದೆ. ಆದರೆ ಉದ್ಯೋಗದಲ್ಲಿ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರ ಉದ್ದೇಶಕ್ಕೆ ಸಾಕಷ್ಟು ಪ್ರಯಾಣ ಮಾಡಬಹುದು. ಹಣ ಹೂಡಿಕೆಗೆ, ಆಸ್ತಿ ಖರೀದಿಗೆ ಈ ಸಮಯ ಅನುಕೂಲಕರವಾಗಿದೆ. ವೈವಾಹಿಕ ಜೀವನದಲ್ಲಿ ಬಾಂಧವ್ಯ ಉತ್ತಮವಾಗಿರಲಿದೆ. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು, ಆರೋಗ್ಯದ ಕಡೆಗೆ ಗಮನಹರಿಸಿ.
ಪರಿಹಾರ: 'ಓಂ ಶುಕ್ರಾಯ ನಮಃ' ಮಂತ್ರವನ್ನು ಪ್ರತಿದಿನ 23 ಬಾರಿ ಜಪಿಸಿ.
ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ 3ನೇ ಮನೆಯಲ್ಲಿ ಇರಲಿದೆ. ಈ ಸಂಚಾರ ನಿಮಗೆ ಮಂಗಳಕರವಾಗಿರಲಿದೆ. ನಿಮ್ಮ ಬುದ್ಧಿವಂತಿಕೆ, ಜ್ಞಾನ ಮತ್ತು ಕೌಶಲ್ಯದಿಂದ ವೈಯಕ್ತಿಕ ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ವಿದೇಶಿ ವಸ್ತುಗಳಲ್ಲಿ ಹೂಡಿಕೆ ಮಾಡಿದವರು ಉತ್ತಮ ಲಾಭವನ್ನು ಗಳಿಸುತ್ತೀರಿ. ಈ ಸಮಯವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಅನುಕೂಲಕರವಾಗಿದೆ. ನೀವು ಷೇರು ವಹಿವಾಟು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೆ ಉತ್ತಮ ಲಾಭ ಗಳಿಸುತ್ತೀರಿ. ಈ ಅವಧಿಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದು. ಸಂಬಂಧದಲ್ಲಿ ಸಾಮರಸ್ಯ ಉತ್ತಮವಾಗಿರಲಿದೆ.
ಪರಿಹಾರ: 'ಓಂ ಶುಕ್ರಾಯ ನಮಃ' ಮಂತ್ರವನ್ನು ಪ್ರತಿದಿನ 41 ಬಾರಿ ಪಠಿಸಿ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಶುಕ್ರ 2ನೇ ಮನೆಯಲ್ಲಿ ಇರಲಿದೆ. ಈ ಸಂಕ್ರಮಣದ ಸಮಯದಲ್ಲಿ ಕೆಲಸದಲ್ಲಿ ಅಧಿಕ ಒತ್ತಡ ಇರಲಿದೆ. ನೀವು ನಿರೀಕ್ಷೆ ಮಾಡಿದಂತೆ ಫಲ ಸಿಗದಿದ್ದಾಗ ಅತೃಪ್ತಿ ಉಂಟಾಗುವುದು. ಉದ್ಯೋಗ ಬದಲಾವಣೆಯ ಬಗ್ಗೆ ಆಲೋಚಿಸಬಹುದು. ವ್ಯಾಪಾಸ್ಥರಿಗೆ ಈ ಅವಧಿ ಮಧ್ಯಮವಾಗಿದೆ. ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಶುಕ್ರನ ಈ ಸಾಗಣೆಯ ಸಮಯದಲ್ಲಿ ಖರ್ಚು ಅಧಿಕವಿರಲಿದೆ. ಇದರಿಂದ ಆರ್ಥಿಕ ಸಮಸ್ಯೆ ಇರಲಿದೆ. ಕುಟುಂಬದಲ್ಲಿ ಹೊಂದಾಣಿಕೆಯಲ್ಲಿ ಕೊರತೆ ಇರಬಹುದು. ಈ ಅವಧಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ.
ಈ ಸಾರಿಗೆ ಅವಧಿಯಲ್ಲಿ ನೀವು, ವೃತ್ತಿಪರ ಹಾಗೂ ವೈಯಕ್ತಿಕ ಜವಾಬ್ದಾರಿಗಳ ನಡುವೆ ಸಮತೋಲನ ಕಾಪಾಡುವುದು ಒಳ್ಳೆಯದು.
ಪರಿಹಾರ: ಗುರುವಾರ ಗುರು ಮಂತ್ರ ಪಠಿಸಿದರೆ ಒಳ್ಳೆಯದು.
ಸಿಂಹ ರಾಶಿ
ಶುಕ್ರ ಸಿಂಹ ರಾಶಿಗೆ ಸಂಚರಿಸಲಿದೆ. ಶುಕ್ರ ಮೊದಲ ಮನೆಯಲ್ಲಿ ಇರುವುದರಿಂದ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಮೇಲಾಧಿಕಾರಿಗಳು ನಿಮ್ಮ ಶ್ರಮ ಗುರುತಿಸುವುದಿಲ್ಲ, ಇದರಿಂದ ಕೆಲಸದಲ್ಲಿ ಅತೃಪ್ತಿ ಉಂಟಾಗುವುದು. ವೃತ್ತಿ ಜೀವನದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕವಲ್ಲ, ಲಾಭ ಗಳಿಸಲು ಕಷ್ಟವಾಗುವುದು. ಪ್ರಯಾಣದ ಸಮಯದಲ್ಲಿ ಜಾಗ್ರತೆ ಇಲ್ಲದಿದ್ದರೆ ಆರ್ಥಿಕ ನಷ್ಟ ಉಂಟಾಗುವುದು. ಹಣದ ವಿಷಯಕ್ಕೆ ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಸಂಬಂಧ ಪರಿಸ್ಥಿತಿ ತಿಳಿಯಾಗಿಸಲು ತಾಳ್ಮೆಯಿಂದ ವರ್ತಿಸಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವುದು.
ಪರಿಹಾರ: ಶನಿವಾರದಂದು ಶನಿ ದೇವಾಲಯಕ್ಕೆ ಭೇಟಿ ನೀಡಿ
ಕರ್ಕ ರಾಶಿ
ಕನ್ಯಾ ರಾಶಿಯಲ್ಲಿ 12ನೇ ಮನೆಯಲ್ಲಿ ಶುಕ್ರ ಇರಲಿದೆ. ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ. ಕೆಲವರಿಗೆ ಹೊಸ ಉದ್ಯೋಗ ಅವಕಾಶಗಳು ಸಿಗಲಿದೆ. ನಿಮ್ಮ ಕಠಿಣಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದರಿಂದ ವೃತ್ತಿ ಜೀವನದಲ್ಲಿ ತೃಪ್ತಿ ಇರಲಿದೆ. ವ್ಯಾಪಾರಸ್ಥರು ಉತ್ತಮ ಲಾಭ ಗಳಿಸುತ್ತೀರಿ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನಿಮಗೆ ಉಳಿತಾಯ ಮಾಡಲು ಸಾಧ್ಯವಾಗುವುದು. ವೈವಾಹಿಕ ಜೀವನದಲ್ಲಿ ಸಂಬಂಧ ಚೆನ್ನಾಗಿರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ಮಂಗಳಕರವಾಗಿರಲಿದೆ.
ಪರಿಹಾರ: ಶನಿವಾರದಂದು ಶನಿ ದೇವರಿಗೆ ಪೂಜೆ ಸಲ್ಲಿಸಿ.
ತುಲಾ ರಾಶಿ
ತುಲಾ ರಾಶಿಯವರಲ್ಲಿ 11ನೇ ಮನೆಯಲ್ಲಿ ಇರಲಿದೆ. ಶುಕ್ರನ ಸ್ಥಾನದಿಂದಾಗಿ ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉತ್ತಮ ಅವಕಾಶ ನೀಡುವುದರಿಂದ ನಿಮಗೆ ಕೆಲಸದಲ್ಲಿ ತೃಪ್ತಿ ಇರಲಿದೆ. ವ್ಯಾಪಾರ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದರೆ ಈ ಅವಧಿ ಅನುಕೂಲಕರವಾಗಿರಲಿದೆ. ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಉತ್ತಮವಾಗಿರಲಿದೆ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಇರುವುದಿಲ್ಲ. ವ್ಯವಹಾರವನ್ನು ಯಶಸ್ವಿಗೊಳಿಸಲು ಮತ್ತು ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಈ ಅವಧಿ ಉತ್ತಮವಾಗಿದೆ.
ಪರಿಹಾರ: ಮಂಗಳವಾರ ಹನುಮಂತನಿಗೆ ಪೂಜೆ ಸಲ್ಲಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಶುಕ್ರ 10ನೇ ಮನೆಯಲ್ಲಿ ಇರಲಿದೆ. ಶುಕ್ರನ ಈ ಸಂಚಾರ ನಿಮಗೆ ಮಿಶ್ರಫಲ. ಕೆಲಸದ ಒತ್ತಡ ಅಧಿಕವಿರಲಿದೆ. ಕೆಲಸದ ವಿಷಯಕ್ಕೆ ತುಂಬಾ ಪ್ರಯಾಣ ಮಾಡಬೇಕಾಗಿ ಬರುವುದು. ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ. ಹಣಕಾಸಿನ ದೃಷ್ಟಿಯಿಂದ ನೋಡಿದರೆ ಈ ಅವಧಿಯಲ್ಲಿ ಮಧ್ಯಮ ಫಲ. ಖರ್ಚುಗಳು ಅಧಿಕವಿರಲಿದೆ. ಕುಟುಂಬ ಜೀವನದಲ್ಲಿಯೂ ಏರಳಿತವಿರಲಿದೆ, ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವಿರಲಿದೆ. ನೀವು ಆರೋಗ್ಯದ ಕಡೆ ಗಮನಹರಿಸಿ.
ಪರಿಹಾರ: ಸೋಮವಾರ ಶಿವನಿಗೆ ಅಭಿಷೇಕ ಮಾಡಿ.
ಧನು ರಾಶಿ
ಧನು ರಾಶಿಯವರಲ್ಲಿ ಶುಕ್ರ 9ನೇ ಮನೆಯಲ್ಲಿ ಇರಲಿದೆ. ಈ ಅವಧಿ ನಿಮಗೆ ಮಿಶ್ರಫಲ. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ಸರಾಸರಿ ಲಾಭ ಪಡೆಯುತ್ತಾರೆ. ಕಠಿಣ ಸ್ಪರ್ಧೆಯಿಂದಾಗಿ ನಿಮ್ಮ ಜೀವನದಲ್ಲಿ ಸವಾಲುಗಳು ಉಂಟಾಗಬಹುದು, ಇದರಿಂದಾಗಿ ನೀವು ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ.ಹಣಕಾಸಿನ ಅಂಶದ ಬಗ್ಗೆ ಹೇಳುವುದಾದರೆ ನಿಮ್ಮ ಆದಾಯವು ಸರಾಸರಿಯಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಸೌಹಾರ್ದತೆ ಉತ್ತಮವಾಗಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ. ಸಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು, ನೀವು ಸರಿಯಾದ ದೈನಂದಿನ ದಿನಚರಿಯನ್ನು ಅನುಸರಿಸುವುದು ಬಹಳ ಮುಖ್ಯ.
ಪರಿಹಾರ: 'ಓಂ ನಮಃ ಶಿವಾಯ' ಮಂತ್ರವನ್ನು ಪ್ರತಿದಿನ 41 ಬಾರಿ ಪಠಿಸಿ.
ಮಕರ ರಾಶಿ
ಮಕರ ರಾಶಿಯವರಲ್ಲಿ ಶುಕ್ರ 8ನೇ ಮನೆಯಲ್ಲಿ ಇರಲಿದೆ. ಶುಕ್ರನ ಸಂಚಾರವು ನಿಮ್ಮ ಜೀವನದಲ್ಲಿ ಅನೇಕ ಹೊಸ ವೃತ್ತಿ-ಸಂಬಂಧಿತ ಅವಕಾಶಗಳನ್ನು ತರುತ್ತದೆ . ವೃತ್ತಿ ಜೀವನದಲ್ಲಿ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಸ್ಥರು ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯುತ್ತಾರೆ. ಹಣಕಾಸಿನ ಬಗ್ಗೆ ಹೇಳುವುದಾದರೆ ಈ ಅವಧಿ ಉತ್ತಮವಾಗಿದೆ. ಇದಲ್ಲದೆ, ಹಣವನ್ನು ಉಳಿಸುವ ಅವಕಾಶಗಳು ನಿಮ್ಮ ಜೀವನದಲ್ಲಿ ಬರುತ್ತವೆ. ನಿಮ್ಮ ಕಠಿಣ ಪರಿಶ್ರಮವು ನಿಮಗೆ ಪ್ರಚಾರಗಳು, ಪ್ರೋತ್ಸಾಹಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅಥವಾ ಯಾವುದೇ ಆಸ್ತಿಯನ್ನು ಖರೀದಿಸುವುದು ಭವಿಷ್ಯದಲ್ಲಿ ನಿಮಗೆ ಮಂಗಳಕರವಾಗಿರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಶುಕ್ರನ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಪರಿಹಾರ: ಶನಿವಾರದಂದು ಕಾಲಭೈರವನ ಆರಾಧಿಸಿ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಶುಕ್ರ 7ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ತೃಪ್ತಿ ಇರಲಿದೆ. ನಿಮ್ಮ ಜೀವನದಲ್ಲಿ ಹೊಸ ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಈ ಅವಧಿ ಫಲಪ್ರದವಾಗಿದೆ. ಸಮಯವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಸಹ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಆರ್ಥಿಕ ಲಾಭ ಪಡೆಯುತ್ತೀರಿ. ಷೇರುಗಳಲ್ಲಿ ಹೂಡಿಕೆ ಮಾಡಬಹುದು, ಈ ಅವಧಿಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದು. ಸಂಗಾತಿಯೊಂದಿಗಿನ ಜೀವನ ಚೆನ್ನಾಗಿರಲಿದೆ. ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.
ಪರಿಹಾರ: ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
ಮೀನ ರಾಶಿ
ಮೀನ ರಾಶಿಯಲ್ಲಿ ಶುಕ್ರ 6ನೇ ಮನೆಯಲ್ಲಿ ಇರಲಿದೆ. ಅವಧಿಯು ನಿಮ್ಮ ಮಕ್ಕಳ ಪ್ರಗತಿಗೆ ಹೆಚ್ಚು ಗಮನ ಕೊಡುವುದನ್ನು ಸೂಚಿಸುತ್ತದೆ ವೃತ್ತಿಪರ ಜೀವನದಲ್ಲಿ ವರ್ಗಾವಣೆಯ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಆದಾಯದಲ್ಲಿ ಹೆಚ್ಚಳದ ಬಲವಾದ ಸಾಧ್ಯತೆಯಿದೆ, ಇದು ನಿಮಗೆ ತೃಪ್ತಿಯನ್ನು ನೀಡುತ್ತದೆ.
ವ್ಯಾಪಾರ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವವರು ಹೂಡಿಕೆಯಿಂದ ಲಾಭವನ್ನು ಪಡೆಯುತ್ತಾರೆ. ಷೇರುಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.
ಸಂಬಂಧದ ಬಗ್ಗೆ ಈ ಹೇಳುವುದಾದರೆ ಸಂಗಾತಿಯೊಂದಿಗೆ ಬಾಂಧವ್ಯ ಚೆನ್ನಾಗಿರಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆ ಕಂಡು ಬರುವುದು.
ಪರಿಹಾರ- ಶುಕ್ರ ಮಂತ್ರ ಪಠಿಸಿ



Click it and Unblock the Notifications











