ನವೆಂಬರ್‌ 3ಕ್ಕೆ ಸಿಂಹ ರಾಶಿಗೆ ಶುಕ್ರ ಸಂಚಾರ: ಈ ಸಂಚಾರ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ?

ಎಲ್ಲಾ ರೀತಿಯ ಭೌತಿಕ ಸುಖಗಳನ್ನು ನೀಡುವ ಗ್ರಹವೆಂದರೆ ಅದು ಶುಕ್ರ. ಕರ್ಕ ರಾಶಿಯಲ್ಲಿರುವ ಶುಕ್ರ . ನವೆಂಬರ್ 03 ರ ಬೆಳಗ್ಗೆ 5:12ಕ್ಕೆ ಸಿಂಹ ರಾಶಿಗೆ ಸಾಗಲಿದೆ. ಶುಕ್ರನ ಈ ರಾಶಿ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ:

ಮೇಷ ರಾಶಿ
ಈ ಸಂಚಾರದಲ್ಲಿ ಶುಕ್ರ ನಿಮ್ಮ 5ನೇ ಮನೆಯಲ್ಲಿ ಇರುವುದರಿಂದ ಶುಕ್ರನ ಈ ಸ್ಥಾನ ನಿಮಗೆ ಅನುಕೂಲಕರವಾಗಿದೆ, ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಅನುರಾಗ ಹೆಚ್ಚಾಗಲಿದೆ. ಮಗುವಿನ ಅಪೇಕ್ಷಿತ ದಂಪತಿಗೆ ಮಗವಿನ ಭಾಗ್ಯ ದೊರೆಯಲಿದೆ. ಒಟ್ಟಿನಲ್ಲಿ ಈ ಸಂಚರ ನಿಮಗೆ ಮಂಗಳಕರವಾಗಿದೆ.

Venus Transit In Leo

ವೃಷಭ ರಾಶಿ
ವೃಷಭ ರಾಶಿಯಲ್ಲಿ ಶುಕ್ರ 4 ನೇ ಮನೆಗೆ ಸಂಚರಿಸಲಿದೆ. ಈ ಅವಧಿಯಲ್ಲಿ ಬಾಕಿಯುಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು. ಸ್ಥಿರಾಸ್ತಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ. ಮನೆ ಅಥವಾ ವಾಹನ ಖರೀದಿಗೆ ಈ ಸಮಯ ಉತ್ತಮವಾಗಿದೆ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಈ ಅವಧಿ ಉತ್ತಮವಾಗಿರುತ್ತದೆ.

ಮಿಥುನ ರಾಶಿ
ಶುಕ್ರ ಮಿಥುನ ರಾಶಿಯಲ್ಲಿ 3ನೇ ಮನೆಗೆ ಸಂಚರಿಸಲಿದೆ. ಈ ಅವಧಿಯಲ್ಲಿ ಧಾರ್ಮಿಕ ವಿಷಯಗಳಕಡೆಗೆ ತುಂಬಾ ಗಮನಹರಿಸುತ್ತೀರಿ. ನಿಮ್ಮ ಸ್ವಭಾವವೂ ಮೃದುವಾಗುವುದು. ಕುಟುಂಬದಲ್ಲಿ ಸಹೋದರನ ಜೊತೆಗೆ ಭಿನ್ನಾಭಿಪ್ರಾಯವಾಗದಂತೆ ನೋಡಿಕೊಳ್ಳಿ. ಅಲ್ಲದೆ ನಿಮ್ಮ ಕೆಲಸದ ಯೋಜನೆಗಳನ್ನು ಇತರರ ಜೊತೆಗೆ ಹಂಚಿಕೊಳ್ಳಲು ಹೋಗಬೇಡಿ.

ಕರ್ಕ ರಾಶಿ
ಕರ್ಕ ರಾಶಿಯಲ್ಲಿ 2ನೇ ಮನೆಗೆ ಸಂಚರಿಸಲಿದೆ. ಶುಕ್ರನ ಈ ಸಂಚಾರ ನಿಮ್ಮ ಆರ್ಥಿಕ ಭಾಗವನ್ನು ಬಲಪಡಿಸುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಬಲಗಣ್ಣಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ಪಿತೂರಿಗೆ ಒಳಪಡಬೇಡಿ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದಗಳು ಬಗೆಹರಿಯಲಿವೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿದೆ.

ಸಿಂಹ ರಾಶಿ
ಶುಕ್ರ ಸಿಂಹ ರಾಶಿಗೆ ಸಂಚರಿಸಲಿದೆ. ಈ ಸಂಚಾರನಿಮ್ಮನ್ನು ಅನೇಕ ಅನಿರೀಕ್ಷಿತ ಪರಿಣಾಮಗಳನ್ನು ಎದುರಿಸುವಂತೆ ಮಾಡುತ್ತದೆ. ಆರೋಗ್ಯದ ಬಗ್ಗೆ ಅತ್ಯಂತ ಎಚ್ಚರಿಕೆ ಅಗತ್ಯ. ಕೆಲಸದ ವ್ಯಾಪ್ತಿ ವಿಸ್ತಾರವಾಗಲಿದೆ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಅಥವಾ ಜಂಟಿ ವ್ಯವಹಾರವನ್ನು ಮಾಡಲು ಬಯಸಿದರೆ, ಅದಕ್ಕೆ ಈ ಸಮಯ ಉತ್ತಮವಾಗಿದೆ. ನಿಮಗೆ ಸರ್ಕಾರದಿಂದ ಸಂಪೂರ್ಣ ಬೆಂಬಲವೂ ಸಿಗುತ್ತದೆ. ನಿಮ್ಮ ಹೆತ್ತವರ ಆರೋಗ್ಯದ ಬಗ್ಗೆ ಯೋಚಿಸಿ. ನೀವು ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ, ಸಮಯವು ಉತ್ತಮವಾಗಿರುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ 12ನೇ ಮನೆಯಲ್ಲಿ ಇರಲಿದೆ. ಈ ಸಂಚಾರದ ಸಮಯದಲ್ಲಿ ನೀವು ವಿಪರೀತ ಖರ್ಚುಗಳು ಬರಬಹುದು. ಐಷಾರಾಮಿ ವಸ್ತುಗಳ ಮೇಲೆ ಖರ್ಚು ಇರುತ್ತದೆ. ವಿದೇಶ ಪ್ರವಾಸದ ಲಾಭವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ, ಆ ದೃಷ್ಟಿಯಿಂದ ಗ್ರಹಗಳ ಸಂಚಾರವು ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ಯಾರಿಗೂ ಹೆಚ್ಚು ಸಾಲ ನೀಡಬೇಡಿ, ಇಲ್ಲದಿದ್ದರೆ ಹಣವನ್ನು ಸಮಯಕ್ಕೆ ಸ್ವೀಕರಿಸಲಾಗುವುದಿಲ್ಲ. ವಿವಾದಿತ ವಿಷಯಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದರೆ ಒಳ್ಳೆಯದು.

ತುಲಾ ರಾಶಿ
ತುಲಾ ರಾಶಿಯವರಲ್ಲಿ ಶುಕ್ರ 11ನೇ ಮನೆಯಲ್ಲಿ ಇರಲಿದೆ. ಶುಕ್ರ ಸಂಕ್ರಮಣದ ಪ್ರಭಾವವು ನಿಮಗೆ ಎಲ್ಲಾ ರೀತಿಯಲ್ಲೂ ಉತ್ತಮ ಯಶಸ್ಸನ್ನು ತರುತ್ತದೆ. ಕುಟುಂಬದಲ್ಲಿ ಹಿರಿಯ ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳು ಬೆಳೆಯಲು ಬಿಡಬೇಡಿ, ನಿಮ್ಮ ಆದಾಯದ ಮೂಲಗಳು ಹೆಚ್ಚಾಗುವುದು ಮಾತ್ರವಲ್ಲ, ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಗ್ರಹಗಳ ಸಂಚಾರವು ಆ ದೃಷ್ಟಿಯಿಂದ ತುಂಬಾ ಅನುಕೂಲಕರವಾಗಿರುತ್ತದೆ. . ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲಾಗುವುದು. ಪ್ರೇಮ ಸಂಬಂಧಿ ವಿಷಯಗಳಲ್ಲಿ ತೀವ್ರತೆ ಇರುತ್ತದೆ. ನವ ದಂಪತಿಗಳಿಗೆ ಮಗು ಜನಿಸುವ ಸಾಧ್ಯತೆಯೂ ಇದೆ.

ವೃಶ್ಚಿಕ ರಾಶಿ
ಹತ್ತನೇ ಮನೆಯಲ್ಲಿ ಶುಕ್ರನ ಸಂಕ್ರಮಣ ಪ್ರಭಾವದಿಂದ ಕೆಲಸದಲ್ಲಿ ಪ್ರಗತಿ ಕಾಣಬಹುದು. ಈ ಸಂಚಾರ ನಿಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ನೀವು ಯಾವುದೇ ರೀತಿಯ ಚುನಾವಣೆಗೆ ಸ್ಪರ್ಧಿಸಲು ಬಯಸಿದರೆ, ಆ ದೃಷ್ಟಿಯಿಂದಲೂ ಈ ಬಾರಿ ಉತ್ತಮವಾಗಿರುತ್ತದೆ. ಸ್ಥಿರಾಸ್ತಿಗೆ ಸಂಬಂಧಿಸಿದ ವಿಷಯಗಳು ಬಗೆಹರಿಯಲಿವೆ. ನೀವು ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ, ಈ ಅವಧಿ ನಿಮಗೆ ಅನುಕೂಲಕರವಾಗಿರುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆ. ಪ್ರಯಾಣದ ವೇಳೆ ಜಾಗ್ರತೆವಹಿಸಿ.

ಧನು ರಾಶಿ
ಧನು ರಾಶಿಯಲ್ಲಿ ಶುಕ್ರ 9ನೇ ಮನೆಯಲ್ಲಿ ಇರಲಿದೆ. ವಿದೇಶ ಪ್ರವಾಸದ ಲಾಭವನ್ನು ಪಡೆಯುತ್ತೀರಿ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಕೆಲಸದ ದೃಷ್ಟಿಯಿಂದ ಈ ಗ್ರಹಗಳ ಸಂಚಾರವು ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದರಿಂದ ಉತ್ತಮ ಫಲ ಪಡೆಯುತ್ತೀರಿ.

ಮಕರ ರಾಶಿ
ಎಂಟನೇ ಮನೆಯಲ್ಲಿ ಶುಕ್ರ ಸಂಕ್ರಮಣದ ಪರಿಣಾಮವು ತುಂಬಾ ಒಳ್ಳೆಯದಲ್ಲ. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆವಹಿಸಬೇಕು. ಕೆಲಸದ ಸ್ಥಳದಲ್ಲಿ ಪಿತೂರಿಗೆ ಬಲಿಯಾಗುವುದನ್ನು ತಪ್ಪಿಸಿ. ಆರ್ಥಿಕ ಅಂಶವು ಬಲವಾಗಿರುತ್ತದೆ. ಸಾಮಾಜಿಕವಾಗಿಯೂ ನಿಮ್ಮ ವರ್ಚಸ್ಸು ಬೆಳೆಯಲಿದೆ.

ಕುಂಭ ರಾಶಿ
ಕುಂಭ ರಾಶಿಯಲ್ಲಿ 7ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲಸದಲ್ಲಿ ಪ್ರಗತಿ ಕಾಣುವಿರಿ. ಮದುವೆಗೆ ಸಂಬಂಧಿಸಿದ ಮಾತುಕತೆಗಳು ಯಶಸ್ವಿಯಾಗುತ್ತವೆ. ದಾಂಪತ್ಯ ಜೀವನದಲ್ಲೂ ಮಾಧುರ್ಯ ಇರಲಿದೆ.ಸಂಬಂಧಿಕರ ಬೆಂಬಲ ಇರುತ್ತದೆ. ಕುಟುಂಬದಲ್ಲಿ ಹೊಸ ಅತಿಥಿಯ ಆಗಮನದಿಂದ ವಾತಾವರಣವು ಆಹ್ಲಾದಕರವಾಗಿರುತ್ತದೆ.

ಮೀನ ರಾಶಿ
ಮೀನ ರಾಶಿಯವರಲ್ಲಿ ಶುಕ್ರ 6ನೇ ಮನೆಯಲ್ಲಿ ಇರಲಿದೆ. ಈ ಶುಕ್ರನ ಸ್ಥಾನ ನಿಮಗೆ ಅನುಕೂಲಕರವಲ್ಲ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಗಮನಹರಿಸಿ. ಅಧಿಕ ಖರ್ಚು ನಿಯಂತ್ರಿಸುವುದು ಒಳ್ಳೆಯದು. ಕೆಲಸದ ಜಾಗದಲ್ಲಿ ಅಧಿಕ ಜಾಗ್ರತೆವಹಿಸಿ, ಮದುವೆಗೆ ಸಂಬಂಧಿಸಿದ ಮಾತುಕತೆಗಳು ಮುಂದೂಡುವುದು ಒಳ್ಳೆಯದು.

English summary

Venus Transit In Leo 2023: Effects On 12 Zodiac Signs In Kannada

Venus Transit In Leo 3 November 2023, here are how it affects on zodiac signs, read on.
Story first published: Thursday, November 2, 2023, 21:21 [IST]
X
Desktop Bottom Promotion