Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಕರ್ಕಾಟಕ ರಾಶಿಯಲ್ಲಿ ಶುಕ್ರ ಸಂಚಾರ 2023 : ಯಾರಿಗೆ ಶುಭ? ಯಾರಿಗೆ ಅಶುಭ?
ಮೇ 30, 2023 ರಂದು ಶುಕ್ರನು ಕರ್ಕಾಟಕ ರಾಶಿ ಪ್ರವೇಶ ಮಾಡಲಿದ್ದಾನೆ. ಜುಲೈ 7 ರವರೆಗೂ ಇದೇ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಶುಕ್ರನು ಕರ್ಕಾಟ ರಾಶಿಯನ್ನು ಪ್ರವೇಶ ಮಾಡುತ್ತಿರೋದ್ರಿಂದ ಇದರ ಪರಿಣಾಮ ಎಲ್ಲಾ ರಾಶಿಯ ಮೇಲೂ ಬೀಳಲಿದೆ. ಅಷ್ಟಕ್ಕು ಕರ್ಕಾಟಕ ರಾಶಿಯಲ್ಲಿ ಶುಕ್ರ ಸಂಚರಿಸ್ತಿರೋದ್ರಿಂದ ಯಾವೆಲ್ಲಾ ರಾಶಿಯವರಿಗೆ ಒಳ್ಳೆಯದಾಗಲಿದೆ? ಯಾವೆಲ್ಲಾ ರಾಶಿಯವರಿಗೆ ಇದರಿಂದ ಅಶುಭ ಫಲ ದೊರೆಯಲಿದೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ನಿಮ್ಮ ಕುಟುಂಬದಲ್ಲಿ ಶಾಂತಿ ನೆಲೆಯಾಗಲಿದೆ. ನಟನೆ, ರಂಗಭೂಮಿ, ನೃತ್ಯ ಮುಂತಾದ ಕಲೆಗಳ ಅಧ್ಯಯನಕ್ಕೆ ಒಲವು ತೋರುವವರು ಅಂತಹ ವಿಷಯಗಳಲ್ಲಿ ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರಿಸಬಹುದು. ಉದ್ಯೋಗಗಳಲ್ಲಿಯೂ ಬಡ್ತಿ ಪಡೆಯುವ ಸಾಧ್ಯತೆಗಳಿವೆ. ವಿವಾಹಿತರ ಪತಿ/ಪತ್ನಿ ಗಮನಾರ್ಹ ಸಾಧನೆ ಮಾಡಲಿದ್ದಾರೆ. ನಿಮ್ಮ ಭಾವನೆಗಳು ನಿಯಂತ್ರಣದಲ್ಲಿರಲಿ. ಕೆಮ್ಮು, ಶೀತ, ಎದೆನೋವಿನ ಸೋಂಕಿನ ಬಗ್ಗೆ ಜಾಗರೂಕರಾಗಿರಿ.

ವೃಷಭ ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ನೀವು ಈ ಸಮಯದಲ್ಲಿ ಸಣ್ಣ ಪ್ರವಾಸಗಳನ್ನು ಮಾಡುವ ಸಾಧ್ಯತೆಗಳಿದೆ. ನಿಮ್ಮ ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ.ನಿಮ್ಮ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವೂ ಸುಧಾರಿಸುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವೂ ಉತ್ತಮವಾಗುತ್ತದೆ. ವ್ಯವಹಾರದಲ್ಲಿ ಯಶಸ್ವಿಯಾಗುತ್ತೀರಿ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ.
ಮಿಥುನ ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ನಿಮ್ಮ ಕುಟುಂಬದೊಂದಿಗೆ ನೀವು ಸಂತೋಷದ ಸಮಯವನ್ನು ಕಳೆಯುತ್ತೀರಿ. ಪೂರ್ವಜರ ವ್ಯವಹಾರಗಳಲ್ಲಿ ಲಾಭದ ಸಾಧ್ಯತೆಗಳಿದೆ. ನಿಮ್ಮ ವ್ಯಾಪಾರ ಪಾಲುದಾರರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಮತ್ತು ನಿಮ್ಮ ವ್ಯವಹಾರದಲ್ಲಿ ನೀವು ಒಟ್ಟಿಗೆ ಅಭಿವೃದ್ಧಿಯನ್ನು ಕಾಣಲು ಸಹಾಯವಾಗುತ್ತದೆ. ಯುವಕ/ಯುವತಿಯರ ಮದುವೆ ಮಾತುಕತೆಗಳು ನಡೆಯುವ ಸಾಧ್ಯತೆಗಳಿದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿದ್ದರೆ ಒಳ್ಳೆಯದು.
ಕರ್ಕಾಟಕ ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಈ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಕೇವಲ ಒಳ್ಳೆಯ ಆಲೋಚನೆಗಳು ಮತ್ತು ಸಕಾರಾತ್ಮಕ ಆಲೋಚನೆಗಳು ಬರುತ್ತವೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸಂಬಂಧ ಉತ್ತಮವಾಗುತ್ತದೆ. ವ್ಯಾಪಾರದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ನೆಚ್ಚಿನ ಬಾಳ ಸಂಗಾತಿಯನ್ನೇ ಮದುವೆಯಾಗಲಿದ್ದೀರಿ. ನಿಮ್ಮ ಪ್ರೀತಿ ಪಾತ್ರರು ಮತ್ತಷ್ಟು ಹತ್ತಿರವಾಗುತ್ತಾರೆ.
ಸಿಂಹ ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಇದರ ಪರಿಣಾಮವಾಗಿ ನಿಮ್ಮ ಸಾಗರೋತ್ತರ ಪ್ರಯಾಣದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನೀವು ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಬಡ್ತಿ ಮತ್ತು ನಿಮ್ಮ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಇನ್ನೂ ವಿದೇಶಿ ವ್ಯಾಪಾರದಿಂದ ಲಾಭವನ್ನೂ ಪಡೆಯುತ್ತೀರಿ. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರಲಿದೆ. ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.
ಕನ್ಯಾರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಈ ಸಮಯದಲ್ಲಿ ನಿಮ್ಮ ಪ್ರೀತಿಯ ಸಂಬಂಧಗಳು ಬಲವಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯವು ಉತ್ತಮಗೊಳ್ಳುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ವ್ಯಾಪಾರದಲ್ಲಿ ಪ್ರಯತ್ನ ಪಟ್ಟರೆ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಉದ್ಯೋಗದ ಸ್ಥಳದಲ್ಲಿ ಮೇಲಾಧಿಕಾರಿಗಳ ಬೆಂಬಲ ಪಡೆಯುತ್ತೀರಿ. ಕಷ್ಟ ಕಾಲದಲ್ಲಿ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಹಣದ ಉಳಿತಾಯದ ಬಗ್ಗೆ ಜಾಗರೂಕತೆ ವಹಿಸಿ.
ತುಲಾ ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ನೀವು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರೆ ಇದು ನಿಮಗೆ ಉತ್ತಮ ಸಮಯ. ಇನ್ನೂ ಉದ್ಯೋಗ ಸ್ಥಳದಲ್ಲಿ ನಿಮ್ಮ ಸಂಬಂಧಗಳು ಹಾಳಾಗುತ್ತದೆ. ಇನ್ನೂ ನೀವು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇ ಆದರೆ ಬಡ್ತಿ ಪಡೆಯುವ ಸಾಧ್ಯತೆಗಳಿದೆ. ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವೂ ಸುಧಾರಿಸುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ.
ವೃಶ್ಚಿಕ ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಈ ಸಮಯದಲ್ಲಿ ನೀವು ಸಂತೋಷವಾಗಿರುತ್ತೀರಿ ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ. ಈ ಅವಧಿಯಲ್ಲಿ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವಿದ್ಯಾರ್ಥಿಗಳಿಗೆ ಇದು ಬಹಳ ಉತ್ತಮ ಸಮಯ. ನೀವು ಯಾವುದೇ ಕಲಾತ್ಮಕ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರೆ, ಈ ಅವಧಿಯಲ್ಲಿ ನಿಮ್ಮ ಅದೃಷ್ಟವೇ ಬದಲಾಗಲಿದೆ.
ಧನು ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ನಿಮ್ಮ ಖರ್ಚಿನ ಮೇಲೆ ನಿಗಾಯಿಡಿ. ಈ ಅವಧಿಯಲ್ಲಿ ಯಾವುದೇ ರೀತಿ ಅನೈತಿಕವಾಗಿ ನಡೆದುಕೊಳ್ಳಬೇಡಿ. ಇಲ್ಲದಿದ್ದರೆ, ಭವಿಷ್ಯದಲ್ಲಿ ನೀವು ಕುಟುಂಬ ಸದಸ್ಯರೊಂದಿಗೆ ಟೀಕೆ ಮತ್ತು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಿ. ವ್ಯಾವಹಾರದಲ್ಲಿ ಪಾಲುದಾರರೊಂದಿಗೆ ನಿಮ್ಮ ಸಂಬಂಧ ಚೆನ್ನಾಗಿರೋದಿಲ್ಲ. ಈ ಅವಧಿಯಲ್ಲಿ ಯಾರಿಗೂ ಸಾಲ ನೀಡೋದಕ್ಕೆ ಹೋಗಬೇಡಿ.
ಮಕರ ಸಂಕ್ರಾಂತಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ. ನಿಮ್ಮ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣಬಹುದು. ಉದ್ಯೊಗಿಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಇದು ಉತ್ತಮ ಸಮಯ. ಮದುವೆಯಾಗಬೇಕು ಅನ್ನುವವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯವಿದೆ. ಅವಿವೇಕದ ಮತ್ತು ಅನುಚಿತ ವರ್ತನೆಗಳಿಂದ ನೀವು ನಷ್ಟ ಅನುಭವಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ತಾಳ್ಮೆ ತುಂಬಾನೇ ಮುಖ್ಯ.
ಮೀನ ರಾಶಿ
ಶುಕ್ರನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡ್ತಿರೋದ್ರಿಂದ ಮೀನ ರಾಶಿಯವರಿಗೆ ಇದು ಉತ್ತಮ ಸಮಯ ಅಂತಾನೇ ಹೇಳಬಹುದು. ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಈ ಅವಧಿಯಲ್ಲಿ ನೀವು ಹೊಸ ವಾಹನವನ್ನು ಖರೀದಿಸುವ ಸಾಧ್ಯತೆಯಿದೆ. ಇನ್ನೂ ವಿದ್ಯಾರ್ಥಿಗಳಿಗೆ ಮನಸ್ಸು ಕೇಂದ್ರೀಕರಿಸಲು ಕೊಂಚ ಕಷ್ಟವಾಗುತ್ತದೆ. ಸಂಶೋಧನೆ ನಡೆಸುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಹುದು. ವಿವಾಹಿತ ದಂಪತಿಗಳು ತಮ್ಮ ಮಕ್ಕಳ ಬಗ್ಗೆ ಸಕಾರಾತ್ಮಕ ಸುದ್ದಿಗಳನ್ನು ಪಡೆಯಬಹುದು. ಈ ಸಮಯದಲ್ಲಿ ಉದ್ಯೋಗ ಬದಲಾವಣೆಯ ಸಾಧ್ಯತೆಗಳಿವೆ. ಹೊಸ ಕೆಲಸ ನಿಮಗೆ ಯಶಸ್ಸನ್ನು ನೀಡುತ್ತದೆ.



Click it and Unblock the Notifications












