Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಣ್ಣುಗಳಿಗೆ ಇಲಿ ವಿಷ ಸವರಿದ ಮಾರಾಟಗಾರರು: ಇಲಿ ವಿಷ ಹಚ್ಚುವುದೇಕೆ ಗೊತ್ತಾ?
ಇತ್ತೀಚಿಗೆ ಆಹಾರ ಸುರಕ್ಷತೆ ಅನ್ನೋದು ಮರಿಚಿಕೆಯಾಗುತ್ತಿದೆ. ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ಹಲವು ಬಾರಿ ಆಲೋಚಿಸಬೇಕಾದ ಅನಿವಾರ್ಯ ಸ್ಥಿತಿಗೆ ಬಂದಿದ್ದೇವೆ. ಅದ್ರಲ್ಲೂ ಕಲುಷಿತ ಆಹಾರ, ನಕಲಿ, ರಾಸಾಯನಿಕಯುಕ್ತ ಆಹಾರ, ಮಿಶ್ರಣ ಮಾಡಲಾದ ಆಹಾರ ಸೇರಿದಂತೆ ಹಲವು ರೀತಿಯ ಅಪಾಯಗಳು ಕಣ್ಣ ಮುಂದೆಯೇ ಇರುತ್ತದೆ. ಹಾಗೆ ಮಾರುಕಟ್ಟೆಯಲ್ಲಿನ ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ಅದನ್ನು ಪರೀಕ್ಷೆಗೆ ಒಳಪಡಿಸುವುದು ಅಥವಾ ಅದರ ಸುರಕ್ಷತೆಯ ಬಗ್ಗೆ ಆಲೋಚಿಸುವುದು ಮುಖ್ಯ ಎನಿಸಿದೆ.
ಅದ್ರಲ್ಲೂ ರಸ್ತೆ ಬದಿಯ ಆಹಾರ ಸೇವಿಸುವ ಮುನ್ನ ನೂರು ಬಾರಿ ಯೋಚಿಸಬೇಕಾಗಿದೆ. ಅಸುರಕ್ಷಿತ ಆಹಾರ ಸೇವನೆಯಿಂದ ಪ್ರಾಣಕ್ಕೂ ಸಂಚಕಾರ ಬರಬಹುದು. ಹಾಗೆ ಈಗ ವೈರಲ್ ಆಗುತ್ತಿರುವ ಮುಂಬೈನ ವಿಡಿಯೋವೊಂದು ಹಣ್ಣುಗಳನ್ನು ಸೇವಿಸುವ ಮುನ್ನ ಮತ್ತೊಮ್ಮೆ ಆಲೋಚಿಸುವಂತೆ ಮಾಡಿದೆ. ಹಲವರು ರಸ್ತೆ ಬದಿಯ ಕರಿದ ತಿಂಡಿಗಳ ಬದಲಾಗಿ ಹಣ್ಣುಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಆದ್ರೆ ಈಗ ಈ ಹಣ್ಣುಗಳು ಕೂಡ ವಿಷಕಾರಿ ಅಂಶಗಳಿಂದ ತುಂಬಿರುವ ಸಾಧ್ಯತೆ ದಟ್ಟವಾಗಿದೆ.

ಮುಂಬೈನ ಮಲಾಡ್ ಪ್ರದೇಶದಲ್ಲಿ ಹಣ್ಣು ಮಾರಾಟಗಾರರು ಹಣ್ಣುಗಳ ಮೇಲೆ ಇಲಿ ವಿಷ (Rat Poison) ಹಚ್ಚುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಮಾತ್ರವಲ್ಲ ಜೀವಕ್ಕೂ ಅಪಾಯ ತರಲಿದೆ. ಇಲಿಗಳನ್ನು ನಾಶ ಮಾಡಲು ಈ ವಿಷವನ್ನು ಬಳಸಲಾಗುತ್ತದೆ. ಆದ್ರೆ ಈ ವಿಷವನ್ನು ರಸ್ತೆ ಬದಿಯ ಹಣ್ಣು ವ್ಯಾಪಾರಿ ತನ್ನ ಅಂಗಡಿಯಲ್ಲಿನ ಹಣ್ಣುಗಳಿಗೆ ಸವರಿರುವುದು ವರದಿಯಾಗಿದೆ.
ಹಣ್ಣು ಮಾರಾಟಗಾರ ಬಾಳೆಹಣ್ಣಿಗೆ ಈ ವಿಷವನ್ನು ಹಚ್ಚುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಲಾಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಅಂಗಡಿಗೆ ಭೇಟಿ ನೀಡಿ ಹಳದಿ ರಂಜಕ ಸೇರಿದಂತೆ ಹಲವು ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುವ ಇಲಿ ವಿಷವಾದ ರಾಟೋಲ್ ಉತ್ಪನ್ನ ವಶಕ್ಕೆ ಪಡೆದು ಅಂಗಡಿಯನ್ನು ಬಂದ್ ಮಾಡಿಸಿದ್ದಾರೆ. ಹಾಗೆ ಮನೋಜ್ ಸಂಗಮ್‌ಲಾಲ್ ಕೇಸರ್ವಾನಿ (42) ಮತ್ತು ರಾಹುಲ್ ಸದನ್‌ಲಾಲ್ ಕೇಸರ್ವಾನಿ (25)ಎಂಬ ಇಬ್ಬರನ್ನು ಬಂಧಿಸಲಾಗಿದೆ.
ಹಣ್ಣುಗಳಿಗೆ ಇಲಿ ವಿಷ ಏಕೆ ಹಚ್ಚುತ್ತಾರೆ?
ಇಲಿ ವಿಷಗಳಲ್ಲಿ ಅತ್ಯಧಿಕ ರಾಸಾಯನಿಕಗಳು ಜೀವಕ್ಕೆ ಹಾನಿ ಮಾಡುತ್ತದೆ. ಇದನ್ನು ಹಣ್ಣುಗಳಿಗೆ ಹಚ್ಚುವುದು ಪ್ರಾಣಕ್ಕೆ ಹಾನಿ ಮಾಡಲಿದೆ. ಆದ್ರೆ ಹಣ್ಣುಗಳ ಮಾರಾಟಗಾರರು ಹಣ್ಣುಗಳನ್ನು ಇಲಿಗಳಿಂದ ರಕ್ಷಿಸಲು ಈ ಉಪಾಯ ಮಾಡುತ್ತಾರೆ. ಇಲಿ ವಿಷದಲ್ಲಿನ ವಾಸನೆಯು ಇಲಿಗಳನ್ನು ಹಣ್ಣಿನ ಅಂಗಡಿಯಿಂದ ದೂರ ಮಾಡಲಿದೆ. ಹಾಗೆ ಇಲಿ ವಿಷವನ್ನು ಹಣ್ಣುಗಳಿಗೆ ಹಚ್ಚುವುದು ಹಣ್ಣು ಮತ್ತಷ್ಟು ದಿನ ಫ್ರೆಶ್ ಆಗಿಡಲಿದೆ. ಹೀಗಾಗಿ ಮಾರಾಟಗಾರರು ಈ ವಿಷವನ್ನು ಹಣ್ಣುಗಳಿಗೆ ಹಚ್ಚಲು ಬಳಸುತ್ತಾರೆ.
ಮುಂಬೈನ ಈವ ವಿಡಿಯೋ ವೈರಲ್ ಆಗಿದ್ದು, ನೋಡುಗರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಲವರು ಈ ರೀತಿ ಹಣ್ಣುಗಳನ್ನು ಸರಿಯಾಗಿ ತೊಳೆಯದೆ ಸೇವಿಸಿದರೆ ಜೀವಕ್ಕೆ ಹಾನಿಯಾಗುವುದು ಖಚಿತ ಎಂಬ ಆತಂಕ ಹೊರಹಾಕಿದ್ದಾರೆ. ಒಂದು ವೇಳೆ ಮಕ್ಕಳು ಈ ಹಣ್ಣನ್ನು ಸೇವಿಸಿದರೆ ಖಂಡಿತ ಅವರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಲಿದೆ.
ರಸ್ತೆ ಬದಿಯ ವ್ಯಾಪಾರಿಗಳು ಇಲಿಗಳಿಂದ ತಮ್ಮ ಉತ್ಪನ್ನವನ್ನು ರಕ್ಷಿಸಿಕೊಳ್ಳು ಈ ರೀತಿಯ ಅಪಾಯಕಾರಿ ಉಪಾಯ ಮಾಡಿರುವುದು ಗ್ರಾಹಕರು ಅಲ್ಲಿನ ಸ್ಥಳೀಯರಿಗೆ ಆಘಾತ ತಂದಿದೆ. ಹಣ್ಣುಗಳನ್ನು ಆರೋಗ್ಯ ವೃದ್ಧಿಯ ಕಾರಣದಿಂದ ಸೇವಿಸಲಾಗುತ್ತದೆ. ಆದ್ರೆ ಈ ರೀತಿ ಅಪಾಯಕಾರಿ ಮಟ್ಟದ ವಿಷ ಅದರಲ್ಲಿ ಬೆರೆತರೆ ಜೀವಕ್ಕೆ ಹಾನಿಯಾಗಬಹುದು. ಹೀಗಾಗಿ ನೀವು ಕೂಡ ಮಾರುಕಟ್ಟೆಯಿಂದ ಖರೀದಿಸಿ ತರುವ ಹಣ್ಣು, ತರಕಾರಿ ಸೇರಿ ಯಾವುದೇ ಆಹಾರ ಪದಾರ್ಥಗಳ ಸೇವನೆಗೂ ಮುನ್ನ ಸುರಕ್ಷತಾ ಮಾನದಂಡಗಳ ಪಾಲಿಸುವುದು ಸೂಕ್ತ.



Click it and Unblock the Notifications
