Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಲೋಕಸಭೆ ಕಣಕ್ಕೆ ವೀರಪ್ಪನ್ ಪುತ್ರಿ..! ಎಲ್ಲಿಂದ ಸ್ಪರ್ಧೆ..? ಆಕೆ ಹಿನ್ನೆಲೆ ಏನು ಗೊತ್ತಾ?
ಕಾಡುಗಳ್ಳ ದಂತ ಚೋರ ಎಂದು ಕುಖ್ಯಾತಿ ಪಡೆದಿದ್ದ ವೀರಪ್ಪನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆತ ತಮಿಳುನಾಡು ಕರ್ನಾಟಕ ಗಡಿ ಭಾಗದಲ್ಲಿ ಇಡೀ ಅರಣ್ಯ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಮಹಾನ್ ಕಳ್ಳ. ಆದ್ರೆ ಮುಂದೊಂದು ದಿನ ಅದೇ ಕಾಡಿನಲ್ಲಿ ಆತ ಹತ್ಯೆಯಾದ ಬಗ್ಗೆಯೂ ನಮಗೆ ತಿಳಿದ ವಿಚಾರವೆ.
ಆದ್ರೆ ಆತನ ಪುತ್ರಿ ವಿದ್ಯಾ ರಾಣಿ ಬಗ್ಗೆ ನಿಮಗೆ ತಿಳಿದಿದ್ಯಾ? ಆಕೆ ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಈ ಬಾರಿ ಗೆಲುವು ಪಡೆದು ಸಂಸತ್ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಹಾಗಾದ್ರೆ ಯಾರು ಈ ವಿದ್ಯಾ ರಾಣಿ ? ಆಕೆಯ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳೋಣ.

ಏಪ್ರಿಲ್ 19 ರಂದು ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮತ್ತು ದಕ್ಷಿಣ ರಾಜ್ಯದಲ್ಲಿ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಪ್ರತಿ ಮತವನ್ನು ತಮ್ಮತ್ತ ತಿರುಗಿಸಲು ಎಲ್ಲಾ ಪ್ರಯತ್ನಗಳ ಮಾಡುತ್ತಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರದ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಅಭ್ಯರ್ಥಿ ವಿದ್ಯಾರಾಣಿ ಕೂಡ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಯಾರು ಈ ವಿದ್ಯಾ ರಾಣಿ
ಕಾಡುಗಳ್ಳ ವೀರಪ್ಪನ್ ಪುತ್ರಿಯಾಗಿರುವ ವಿದ್ಯಾ ರಾಣಿ ಸಮಾಜಸೇವೆ ಮಾಡಬೇಕೆಂದು ಹಲವು ವರ್ಷದಿಂದಲೂ ರಾಜಕೀಯ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಅವರು ತಮ್ಮ ರಾಜಕೀಯ ಜೀವನವನ್ನು ಬಿಜೆಪಿ ಸೇರುವ ಮೂಲಕ ಆರಂಭಿಸಿದ್ದರು. 2020ರಲ್ಲಿ ಮೊದಲು ಬಿಜೆಪಿ ಸೇರಿದ ಅವರು ಭಾರಿ ಸುದ್ದಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ತಂದೆಯ ಸಮಾನ ಎಂದು ಹೇಳಿಕೆ ನೀಡಿ ಭಾರಿ ಸುದ್ದಿಯಾಗಿದ್ದರಯ.
ಅವರು ವೃತ್ತಿಯಲ್ಲಿ ವಕೀಲರಾಗಿದ್ದರು, ಸಾಮಾಜಿಕ ಕಾರ್ಯಕರ್ತೆಯಾಗಿ ಆದಿವಾಸಿಗಳ, ದಲಿತರ ಪರವಾಗಿ ಕೆಲಸ ಮಾಡಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ, ಅವರು ಎಲ್‌ಟಿಟಿಇ ಸಂಸ್ಥಾಪಕರಾದ ವೇಲುಪಿಳ್ಳೈ ಪ್ರಭಾಕರನ್ ಅವರನ್ನು ಈಗಲೂ ಪೂಜಿಸುವ ತಮಿಳು ರಾಷ್ಟ್ರೀಯವಾದಿ ಪಕ್ಷವಾದ ಎನ್‌ಟಿಕೆಗೆ ಪಕ್ಷಾಂತರ ಆದರು.
ವೀರಪ್ಪನ್ ಜನರ ಸೇವೆ ಮಾಡಲು ಬಯಸಿದ್ದರು
ವೀರಪ್ಪನ್ ತನ್ನ ಸ್ಫೂರ್ತಿ ಎಂದು ಕರೆಯುವ ವಿದ್ಯಾ, ತನ್ನ ತಂದೆ ಜನರಿಗೆ ಸೇವೆ ಸಲ್ಲಿಸಲು ಬಯಸಿದ್ದರು ಆದರೆ ಅವರು ಅದನ್ನು ಮಾಡಲು ಆರಿಸಿಕೊಂಡ ಮಾರ್ಗವು ಮಾತ್ರ ತಪ್ಪಾಗಿತ್ತು, ಹೀಗಾಗಿ ಜನರ ಸೇವೆಗಾಗಿ ತಾನು ರಾಜಕೀಯಕ್ಕೆ ಸೇರಿದ್ದೇನೆ ಎಂದಿದ್ದರು.
"ಭಾರತದ ಜನರ ಸೇವೆ ಮಾಡಲು ಪಕ್ಷವು ನನಗೆ ಅವಕಾಶ ನೀಡಿದೆ, ಅಲ್ಲಿ ನಾನು ಕೃಷ್ಣಗಿರಿಯ ಜನರಿಗಾಗಿ ಧ್ವನಿಯಾಗಲಿದ್ದೇನೆ. ನನ್ನ ಗಮನ ರೈತರ ಶ್ರೇಯೋಭಿವೃದ್ಧಿಗೆ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುವುದು. ನಾನು ಅಲ್ಲಿರುತ್ತೇನೆ. ಜನರಿಗಾಗಿ ಅವರ ವಕ್ತಾರರಾಗಿ," ಎಂದು ಅವರು ಹೇಳಿದ್ದಾರೆ.
ರಾಜ್‌ಕುಮಾರ್ ಮತ್ತು ಸಚಿವ ನಾಗಪ್ಪ ಅಪಹರಣ
ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರನ್ನು ಅಪಹರಣ ಮಾಡಿದ ವೀರಪ್ಪನ್ ಅಣ್ಣಾವ್ರನ್ನು 108 ದಿನಗಳ ವನವಾಸ ಮಾಡಿಸಿದ ಕರಾಳ ನೆನಪು ರಾಜ್ಯದ ಕೋಟ್ಯಂತರ ರಾಜ್ ಅಭಿಮಾನಿಗಳನ್ನು ಕೆರಳುವಂತೆ ಮಾಡಿದ್ದ. ಇದರಿಂದಾಗಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರ್ಕಾರ ಪಟ್ಟ ಪಾಡು ಯಾವ ಶತ್ರು ಸರ್ಕಾರಕ್ಕೂ ಬೇಡ ಎನ್ನುವಂತಾಗಿತ್ತು.
ನಂತರ ಮಾಜಿ ಸಚಿವ ನಾಗಪ್ಪ ಅವರ ಅಪಹರಣ ಸರ್ಕಾರವನ್ನೇ ಅಣಕಿಸುವಂತೆ ಮಾಡಿತ್ತು. ಕಡೆಗೂ ಎಸ್.ಟಿ.ಎಫ್ ಕಾಡುಗಳ್ಳ ನರಹಂತಕ ವೀರಪ್ಪನ್ ಎನ್‌ಕೌಂಟರ್‌ಗೆ ಬಲಿಯಾಗಿದ್ದು ರೋಚಕ. ಆದ್ರೆ ಇದಾದ ಬಳಿಕ ವಿದ್ಯಾ ರಾಣಿ ರಾಷ್ಟ್ರೀಯ ಸ್ವಯಂ ಸಂಘ ಪರಿವಾರದ "ವನವಾಸಿ ಕಲ್ಯಾಣ ಆಶ್ರಮ"ದ ಸಹಕಾರದೊಂದಿಗೆ ಕಾನೂನು ಶಿಕ್ಷಣ ಪದವಿ ಪಡೆದಿದ್ದರು, ಬಳಿಕ ತಮಿಳುನಾಡಿನ ಹಿಂದುಳಿದ ಮೋರ್ಚಾದ ರಾಜ್ಯ ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದರು.



Click it and Unblock the Notifications