Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಟ ಸಾವಿತ್ರಿ ವ್ರತ 2023 : ಸಮಯ, ದಿನಾಂಕ ಹಾಗೂ ಮಹತ್ವವೇನು?
ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ವಟ ಸಾವಿತ್ರಿ ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ಈ ಬಾರಿ ವಟ ಸಾವಿತ್ರಿ ವ್ರತವನ್ನು ಮೇ 19 ರಂದು ಆಚರಣೆ ಮಾಡಲಾಗುತ್ತಿದೆ. ನಾರದ ಪುರಾಣದಲ್ಲಿ ಇದನ್ನು ಬ್ರಹ್ಮ ಸಾವಿತ್ರಿ ವ್ರತ ಎಂದೂ ಕರೆಯಲಾಗಿದೆ. ಈ ವ್ರತವನ್ನು ವಿವಾಹಿತ ಮಹಿಳೆಯರು ತಮ್ಮ ಪತಿಗಾಗಿ ಆಚರಣೆ ಮಾಡುತ್ತಾರೆ. ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಪತಿಗೆ ದೀರ್ಘಾಯುಷ್ಯ ಕರುಣಿಸಲೆಂದು ಏನನ್ನೂ ತಿನ್ನದೆ, ನೀರನ್ನೂ ಮುಟ್ಟದೇ ಉಪವಾಸ ಕೈಗೊಳ್ಳುತ್ತಾರೆ.
ಅಷ್ಟಕ್ಕು ವಟ ಸಾವಿತ್ರಿ ವ್ರತವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಶುಭ ಮುಹೂರ್ತ ಯಾವುದು? ವ್ರತ ಮಾಡಲು ಏನೆಲ್ಲಾ ಸಾಮಗ್ರಿಗಳು ಬೇಕು ಅನ್ನೋದನ್ನು ತಿಳಿಯೋಣ.

ಸಮಯ ಹಾಗೂ ಶುಭ ಮುಹೂರ್ತ
ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಅಮಾವಾಸ್ಯೆ ತಿಥಿಯು ಮೇ 18 ರಂದು ರಾತ್ರಿ 09:42 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 19ರ ರಾತ್ರಿ 09:22 ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿ ಪ್ರಕಾರ ಈ ಉಪವಾಸವನ್ನು ಮೇ 19 ರಂದು ಆಚರಿಸಲಾಗುತ್ತದೆ.
ವಟ ಸಾವಿತ್ರಿ ಉಪವಾಸ 3 ದಿನಗಳ ಮೊದಲು ಪ್ರಾರಂಭವಾಗುತ್ತದೆ :
ಪೌರಾಣಿಕ ನಂಬಿಕೆಯ ಪ್ರಕಾರ ಸಾವಿತ್ರಿ ದೇವಿಯು ತನ್ನ ಪತಿ ಸತ್ಯವಾನನ ಜೀವವನ್ನು ಉಳಿಸಲು ಸತತ 3 ದಿನಗಳ ಕಾಲ ಉಪವಾಸವನ್ನು ಆಚರಿಸಿದ್ದಳು ಎಂದು ಹೇಳಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಜ್ಯೇಷ್ಠ ಮಾಸದ ಹುಣ್ಣಿಮೆ ಅಥವಾ ಅಮಾವಾಸ್ಯೆಯ 3 ದಿನಗಳ ಮೊದಲು ವಟ ಸಾವಿತ್ರಿ ವ್ರತವನ್ನು ಪ್ರಾರಂಭಿಸಲು ಇದು ಕೂಡ ಒಂದು ಕಾರಣವಾಗಿದೆ. ಈ ವ್ರತವು ತ್ರಯೋದಶಿ ತಿಥಿಯಿಂದ ಆರಂಭವಾಗುತ್ತದೆ. ಮತ್ತು ಅಮಾವಾಸ್ಯೆಯ ದಿನದಂದು ಆಲದ ಮರವನ್ನು ಪೂಜಿಸಿ ಪ್ರದಕ್ಷಿಣೆ ಹಾಕುವ ಮೂಲಕ ಪೂಜೆ ಕೈಗೊಳ್ಳಲಾಗುತ್ತದೆ.
ವಟ ಸಾವಿತ್ರಿ ವ್ರತ ಆಚರಿಸಲು ಬೇಕಾಗುವ ಸಾಮಗ್ರಿಗಳು :
ಎರಡು ಬಿದಿರಿನ ಬುಟ್ಟಿಗಳು, ಸಾವಿತ್ರಿ ಮತ್ತು ಸತ್ಯವಾನ್ ವಿಗ್ರಹಗಳು, ಬಿದಿರಿನ ಫ್ಯಾನ್, ಹಸಿ ಹತ್ತಿ, ನೀರು ತುಂಬಿದ ಮಣ್ಣಿನ ಮಡಕೆ, ಅಗರಬತ್ತಿ, ಗಂಗಾಜಲ, ಧೂಪದ್ರವ್ಯ, 1.25 ಮೀಟರ್ ಬಟ್ಟೆ, ಹಣ್ಣುಗಳು, ಏಳು ಬಗೆಯ ಧಾನ್ಯಗಳು, ಹೂವುಗಳು, ಮಣ್ಣಿನ ದೀಪ, ಅಕ್ಕಿ, ಸುಗಂಧ ದ್ರವ್ಯ,ಸಿಂಧೂರ, ವೀಳ್ಯದೆಲೆ, ತೆಂಗಿನಕಾಯಿ, ಆಲದ ಮರ, ನೆನೆಸಿದ ಕಾಳುಗಳು, ಸಿಹಿತಿಂಡಿಗಳು, ಮನೆಯಲ್ಲಿ ತಯಾರಿಸಿದ ಸಿಹಿ ತಿನಿಸುಗಳು.
ವಟ ಸಾವಿತ್ರಿ ವ್ರತದ ಮಹತ್ವವೇನು?
ವಟ ಸಾವಿತ್ರಿ ವ್ರತವನ್ನು ಆಚರಿಸುವ ಸ್ತ್ರೀಯರ ಪುತ್ರ, ಮೊಮ್ಮಗ ಸಂಪತ್ತನ್ನು ಪಡೆಯುತ್ತಾರಂತೆ. ಮತ್ತು ತಮ್ಮ ಪತಿಯೊಂದಿಗೆ ಬ್ರಹ್ಮಲೋಕದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ನಂಬಲಾಗಿದೆ. ವಿವಾಹಿತ ಮಹಿಳೆಯರಿಗೆ ಈ ಉಪವಾಸವನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ. ನಮಗೆಲ್ಲಾ ಉತ್ತರ ಭಾರತದಲ್ಲಿ ಆಚರಿಸುವ ಕರ್ವಾ ಚೌತ್ ಬಗ್ಗೆ ಗೊತ್ತಿದೆ. ಅದು ಕೂಡ ಗಂಡಂದಿರಿಗಾಗಿ ಆಚರಣೆ ಮಾಡಲಾಗುತ್ತದೆ. ಈ ವ್ರತ ಆಚರಣೆಯನ್ನು ಭಕ್ತಿಯಿಂದ ಆಚರಣೆ ಮಾಡಿದ್ರೆ ಉತ್ತಮ ಫಲಿತಾಂಶ ಪಡೆಯಬಹುದಂತೆ.



Click it and Unblock the Notifications

