Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ವಿಶ್ವದ ಅತೀ ದೊಡ್ಡ ಹಾವು ವಾಸುಕಿ ಇಂಡಿಕಸ್: ಎಷ್ಟು ದೊಡ್ಡ ಹಾವಿದು ಗೊತ್ತಾ?
ಭೂಮಿ ಮೇಲೆ ಅತ್ಯಂತ ದೊಡ್ಡ ಹಾಗೂ ಉದ್ದದ ಹಾವು ಯಾವುದು ಅಂದ್ರೆ ಸಾಮಾನ್ಯವಾಗಿ ಕೇಳಿ ಬರುವ ಉತ್ತರ ಅಂದ್ರೆ ಅದು ಅನಾಕೊಂಡಾ. ಅಮೇಜಾನ್ ಕಾಡಿನಲ್ಲಿ ಕಂಡುಬರುವ ಈ ಹಾವುಗಳು ಭೂಮಿ ಮೇಲಿನ ಅತ್ಯಂತ ದೊಡ್ಡ ಹಾವುಗಳು ಎಂದು ಕರೆಯಲಾಗಿದೆ. ಇಂದಿಗೂ ಕೂಡ ದೈತ್ಯ ಹಾವುಗಳು ಅಮೇಜಾನ್ ಮಳೆ ಕಾಡಿನಲ್ಲಿ ನೆಲೆಸಿವೆ ಎಂದು ನಂಬಲಾಗಿದೆ.
ಆದ್ರೆ ಈ ಸಿದ್ಧಾಂತಗಳ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡುವಂತಹ ಹೊಸ ಆವಿಷ್ಕಾರವೊಂದು ಹಿಂದಿನ ವರ್ಷ ನಡೆದಿತ್ತು. ಅದೇ ಭಾರತದಲ್ಲಿ ಕಂಡುಬಂದಿದ್ದ ದೈತ್ಯಾಕಾರದ ಹಾವಿನ ಅವಶೇಷ. ಯಾರು ಊಹಿಸದಷ್ಟು ದೊಡ್ಡದಾಗಿದ್ದ ಈ ಅಸ್ಥಿಪಂಜರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದು ವಿಶ್ವದ ಅತ್ಯಂತ ದೊಡ್ಡ ಗಾತ್ರದ ಹಾವು ಎಂದು ಕರೆಯಲಾಯಿತು.

ಹಾಗೆ ಈ ಹಾವಿಗೆ ವಾಸುಕಿ ಇಂಡಿಕಸ್ ಎಂದು ಕರೆಯಲಾಗಿದೆ. ಇದು 10.9 ಮೀಟರ್ ಅಂದರೆ 36 ಅಡಿಯಿಂದ 50 ಅಡಿ ಉದ್ದವಿತ್ತು ಎಂದು ಅಂದಾಜಿಸಲಾಗಿದೆ. ಇದು 47 ಮಿಲಿಯನ್ ವರ್ಷಗಳ ಹಿಂದೆ ಭಾರತದ ಭೂ ಭಾಗದಲ್ಲಿ ನೆಲೆಸಿತ್ತು ಎಂದು ಕೂಡ ನಂಬಲಾಗಿದೆ. ಭೂಮಿ ಮೇಲೆ ಈವರೆಗೆ ವರದಿಯಾಗಿರುವ ಅತೀ ದೊಡ್ಡ ಹಾವು ಕೂಡ ಇದೇ ಆಗಿದೆ ಎಂದು ಹಾಗೆ ಈ ಕುರಿತ ಸಂಶೋದನೆಗಳನ್ನು ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಈ ಹಾವು ಪತ್ತೆಯಾಗಿದ್ದು ಎಲ್ಲಿ?
ಇತಿಹಾಸದ ಪುಟಗಳಲ್ಲಿ ಭಾರತ ಕುರಿತಾಗಿ ಹಲವು ರೀತಿಯ ಅಧ್ಯಯನಗಳು, ಆವಿಷ್ಕಾರಗಳು ನಡೆಯುವುದು ಸಾಮಾನ್ಯ. ಈ ನೆಲದಲ್ಲಿ ಹೊಸ ಹೊಸ ಅಚ್ಚರಿಗಳು ಯಾವಾಗಲು ಎದುರಾಗುತ್ತದೆ. ಅದೇ ರೀತಿ 2005ರಲ್ಲಿ ಗುಜರಾತ್‌ನ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಮಾಡಿ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿದ್ದ ಸಮಯದಲ್ಲಿ ಮೂಳೆಗಳು ಪತ್ತೆಯಾದವು.
ಆರಂಭದಲ್ಲಿ 27 ಕಶೇರುಖಂಡಗಳು ಪತ್ತೆಯಾದವು. ಆದ್ರೆ ಇದು ಮೊಸಳೆ ಜಾತಿಗೆ ಸೇರಿದ ಯಾವುದಾದರು ಪ್ರಾಣಿಯದ್ದು ಇರಬಹುದು ಎಂದು ನಂಬಲಾಗಿತ್ತು. ನಂತರದ ದಿನಗಳಲ್ಲಿ ವಿಶ್ಲೇಷಕರು ಇದು ಹಾವಿನ ಮೂಳೆಗಳು ಎಂಬುದನ್ನು ಖಚಿತ ಪಡಿಸಿದರು. ಅಂದಾಜಿನ ಪ್ರಕಾರ ವಾಸುಕಿ ಇಂಡಿಕಸ್ ಕೊಲಂಬಿಯಾದ 13 ಮೀಟರ್ (42.7 ಅಡಿ) ಅಳಿವಿನಂಚಿನಲ್ಲಿರುವ ಹಾವಿನ ಟೈಟಾನೊಬೊವಾದಂತೆ ಅತೀ ದೊಡ್ಡ ಹಾವಿನ ಪ್ರಬೇದ ಎಂದು ಗುರುತಿಸಲಾಯಿತು.
ವಾಸುಕಿ ಇಂಡಿಕಸ್ ಕಣ್ಮರೆಯಾಗಿದ್ದು ಹೇಗೆ?
ಈ ಹಾವುಗಳು ಭೂಮಿ ಮೇಲಿಂದ ನಾಶವಾಗಲು ಕಾರಣವೇನು ಎಂಬುದನ್ನು ಕೂಡ ಹಲವು ರೀತಿಯಲ್ಲಿ ವಿಶ್ಲೇಷಿಸಲಾಗಿದೆ. ಈ ಹಾವು ಭೂಮಿ ಮೇಲೆ ವಾಸಿಸುವ ಹಾಗೆ ಹೊಂಚು ಹಾಕಿ ತನ್ನ ಆಹಾರವನ್ನು ಪಡೆಯುವ ಜೀವಿ ಎಂದು ಹೇಳಲಾಗಿದೆ. ಹಾಗೆ ವಾಸುಕಿ ಯಾವ ರೀತಿಯ ಪ್ರಾಣಿಗಳನ್ನು ತಿನ್ನುತ್ತಿತ್ತು ಎಂದು ನಾವು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಈ ಹಾವು ಬೃಹತ್ ಗಾತ್ರದ ಪ್ರಾಣಿಗಳಿಂದ ಹಿಡಿದು ಚಿಕ್ಕ ಪುಟ್ಟ ಪ್ರಾಣಿಗಳನ್ನು ಕೂಡ ತನ್ನ ಆಹಾರವಾಗಿ ಬಳಸಿರಬಹುದು. ನೀರಿನಲ್ಲಿ ವಾಸವಿರುವ ಪ್ರಾಣಿಗಳನ್ನು ಕೂಡ ಇದು ಬೇಟೆಯಾಡುವ ಸಾಮರ್ಥ್ಯ ಹೊಂದಿರಲಿದೆ ಎಂದಿದ್ದಾರೆ. ಹಾಗೆ ಈ ಹಾವು ಕಣ್ಮರೆಯಾಗಲು ಆಹಾರ ಕೊರತೆಯೂ ಕೂಡ ಒಂದು ಕಾರಣವಾಗಿರಬಹುದು, ಬೃಹತ್ ಗಾತ್ರದ ಈ ಹಾವು ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆಯಾಡಿ ತಿನ್ನುವುದು ಕಷ್ಟ ಅದು ಆಹಾರಕ್ಕಾಗಿ ಕಾದು ಕುಳಿತುಕೊಳ್ಳಬೇಕು, ಇದರಿಂದ ಈ ಹಾವುಗಳ ಸಂಖ್ಯೆ ಕಡಿಮೆಯಾಗಿ ಕೊನೆಯಲ್ಲಿ ನಾಶವಾಗಿರಬಹುದು ಎನ್ನಲಾಗಿದೆ.
ಹಾಗೆ ನೈಸರ್ಗಿಕ ವಿಕೋಪಗಳಿಂದಲೂ ಕೂಡ ಇವುಗಳು ನಾಶವಾಗಿರಬಹುದು. ದೊಡ್ಡ ಗಾತ್ರದ ಹಾವುಗಳಾಗಿರುವುದರಿಂದ ಪ್ರವಾಹ, ಕಾಡ್ಗಿಚ್ಚಿನಂತಹ ಸಮಯದಲ್ಲಿ ತಪ್ಪಿಸಿಕೊಳ್ಳಲು ಆಗದೆ ಸಾವುಗಳು ಸಂಭವಿಸಿರಬಹುದು ಅಂತಲೂ ಅಂದಾಜಿಸಲಾಗಿದೆ.



Click it and Unblock the Notifications

