Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ವಸ್ತುಗಳನ್ನು ಬೇರೆಯವರೊಂದಿಗೆ ಎಕ್ಸ್ ಚೇಂಜ್ ಮಾಡಬೇಡಿ! ದುರಾದೃಷ್ಟ ಬೆನ್ನು ಹತ್ತಿ ಬರುತ್ತೆ!
ಚಿಕ್ಕಂದಿನಿಂದಲೂ ನಮಗೆ "ಶೇರಿಂಗ್ ಇಸ್ ಕೇರಿಂಗ್" ಅನ್ನೋದನ್ನು ಕಲಿಸಿಕೊಟ್ಟಿದ್ದಾರೆ. ನಮ್ಮಲ್ಲಿ ಏನೇ ಇದ್ರು ಅದನ್ನು ನಾವು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳಬೇಕು ಅನ್ನೋ ಪಾಠವನ್ನು ಪೋಷಕರು ನಮಗೆ ಹೇಳಿಕೊಟ್ಟಿದ್ದಾರೆ. ಹೀಗಾಗಿ ನಾವು ಏನೇ ಇದ್ರೂ ಬೇರೆಯವರಿಗೆ ಕೊಟ್ಟು ತಿನ್ನುತ್ತೇವೆ. ಇದಿಷ್ಟೇ ಅಲ್ಲದೇ. ನಮ್ಮ ಸ್ನೇಹಿತರಿಂದ ಅಥವಾ ಆಪ್ತರಿಂದ ಕೆಲ ವಸ್ತುಗಳನ್ನು ಅದಲೂ ಬದಲು ಮಾಡಿಕೊಳ್ಳುತ್ತೇವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ತಪ್ಪು. ನಾವು ಯಾವುದೇ ವಸ್ತುವನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಹಾಗೂ ಅವರಿಂದ ಯಾವುದೇ ವಸ್ತುವನ್ನು ಪಡೆದುಕೊಳ್ಳಬಾರದಂತೆ. ಈ ರೀತಿ ಹಂಚಿಕೊಳ್ಳೋದ್ರಿಂದ ಸಂಕಷ್ಟವನ್ನು ಎದುರಿಸಬೇಕಾಗುತ್ತಂತೆ. ಹಾಗಾದ್ರೆ ಯಾವ ವಸ್ತುಗಳನ್ನು ನಾವು ಇತರರೊಂದಿಗೆ ಹಂಚಿಕೊಳ್ಳಬಾರದು ಅನ್ನೋದನ್ನು ತಿಳಿಯೋಣ.

1. ಬಟ್ಟೆ
ಒಳ್ಳೆ ಒಳ್ಳೆ ಬಟ್ಟೆಗಳನ್ನು ಹಾಕಿಕೊಂಡು ಇತರರ ಎದುರು ನಾವು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಸ್ನೇಹಿತರಿಂದ ಅಥವಾ ಆಪ್ತರಿಂದ ಬಟ್ಟೆಯನ್ನು ಪಡೆದುಕೊಳ್ಳುತ್ತೇವೆ. ಹಾಗೂ ಕೆಲವೊಂದು ಸಲ ನಮ್ಮ ಬಟ್ಟೆಯನ್ನು ಅವರು ಧರಿಸುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿ ಮಾಡೋದು ಒಳ್ಳೆಯದಲ್ಲವಂತೆ. ಬೇರೆಯವರ ಬಟ್ಟೆಯನ್ನು ನಾವು ಧರಿಸಿದರೆ ಅವರ ದುರಾದೃಷ್ಟ ನಮಗೆ ವರ್ಗಾವಣೆಯಾಗುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಅವರಿಗೆ ಏನಾದ್ರು ಚರ್ಮದ ಸಮಸ್ಯೆ ಇದ್ದರೂ ಕೂಡ ಅದು ನಮಗೂ ವರ್ಗಾವಣೆ ಆಗುತ್ತದೆ.
2. ಚಪ್ಪಲಿ
ಹೆಚ್ಚಿನವರು ಬೇರೆಯವರ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಬೇರೆಯವರ ಚಪ್ಪಲಿ ಹಾಗೂ ಶೂಗಳನ್ನು ಧರಿಸುವವರ ಸಂಖ್ಯೆ ತುಂಬಾನೇ ಕಡಿಮೆ. ಯಾಕಂದ್ರೆ ನಮ್ಮ ಸೈಜ್ ಚಪ್ಪಲಿ ಬೇರೆಯವರಿಗೆ ಆಗೋದಿಲ್ಲ. ಒಂದು ವೇಳೆ ಬೇರೆಯವರ ಚಪ್ಪಲಿ ನಮಗೆ ಫಿಟ್ ಆಗೋ ತರ ಇದ್ರೆ ಖಂಡಿತ ನಾವು ಚಪ್ಪಲಿಗಳನ್ನು ಅದಲು ಬದಲಿ ಮಾಡಿಕೊಳ್ಳುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಸರಿಯಲ್ಲ.
ಈ ರೀತಿ ಮಾಡಿದ್ರೆ ನಮ್ಮ ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತಂತೆ. ದುರಾದೃಷ್ಟ ಸುತ್ತಿಕೊಳ್ಳುತ್ತಂತೆ. ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಶನಿಯು ನಮ್ಮ ಪಾದದಲ್ಲಿ ವಾಸಿಸುತ್ತಿರುತ್ತಾನಂತೆ. ಹೀಗಾಗಿ ಬೇರೆಯವರ ಚಪ್ಪಲಿಯನ್ನು ನಾವು ಧರಿಸಿದರೆ ಅವರ ಶನಿ ದೋಷ ನಮಗೆ ವರ್ಗಾವಣೆಯಾಗುತ್ತಂತೆ. ಇದರಿಂದ ನಮ್ಮ ಮನೆಯಲ್ಲಿ ಹಲವು ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತಂತೆ.
3. ಪೆನ್
ನಾವು ಹೆಚ್ಚಿನ ಸಂದರ್ಭಗಳಲ್ಲಿ ಬೇರೆಯವರಿಂದ ಪೆನ್ ಪಡೆದುಕೊಳ್ಳುತ್ತೇವೆ. ಸಾಮಾನ್ಯವಾಗಿ ಕಾಲೇಜಿಗೆ ಹೋಗುವಾಗ ನಾವು ಪೆನ್ ತೆಗೆದುಕೊಂಡು ಹೋಗೋದಿಲ್ಲ. ಅರ್ಜಂಟ್ ಗೆ ಯಾರ ಬಳಿಯಾದರೂ ಪೆನ್ ಇದ್ದರೆ ಅವರಿಂದ ಪಡೆದುಕೊಳ್ಳುತ್ತೇವೆ. ಹಾಗೂ ಅದನ್ನು ಅವರಿಗೆ ವಾಪಾಸ್ಸ್ ನೀಡೋದಿಲ್ಲ. ಇನ್ನೂ ಬ್ಯಾಂಕ್ ಗೆ ಹೋದಾಗಲೂ ಬೇರೆಯವರಿಂದ ಪೆನ್ ತೆಗೆದುಕೊಳ್ಳುತ್ತೇವೆ. ಆದರೆ ಅದನ್ನು ಅವರಿಗೆ ವಾಪಾಸ್ಸ್ ನೀಡೋದಕ್ಕೆ ನೆನಪಿಲ್ಲದೆ ಮನೆಗೆ ತರುತ್ತೇವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದು ತಪ್ಪು. ಬೇರೆಯವರ ಪೆನ್ ನಾವೇ ಇಟ್ಟುಕೊಂಡರೆ ಅವರ ದುರಾದೃಷ್ಟವನ್ನು ನಾವೇ ಆಹ್ವಾನ ಮಾಡಿ ನಮ್ಮ ಬೆನ್ನಿಗೆ ಕಟ್ಟಿಕೊಂಡಂತಾಗುತ್ತಂತೆ. ಒಂದು ವೇಳೆ ಪೆನ್ ತೆಗೆದುಕೊಂಡರೂ ಕೂಡ ನಮ್ಮ ಕೆಲಸ ಆದ ತಕ್ಷಣ ಅವರಿಗೆ ವಾಪಾಸ್ಸ್ ನೀಡಬೇಕು.
4. ವಾಚ್
ಈಗಂತೂ ಮಾರುಕಟ್ಟೆಯಲ್ಲಿ ಸ್ಟೈಲಿಶ್ ಆದ ವಾಚ್ ಲಭ್ಯವಿದೆ. ಹೆಚ್ಚಂದ್ರೆ ಒರ್ವ ವ್ಯಕ್ತಿ ಎಷ್ಟು ವಾಚ್ ಗಳ ಕಲೆಕ್ಷನ್ ಇಟ್ಟುಕೊಳ್ಳಬಹುದು. 3-4 ವಾಚ್ ಅಷ್ಟೇ. ನಮ್ಮ ನಿಮ್ಮಂತಹ ಸಾಮಾನ್ಯ ಜನರು ಹೆಚ್ಚಿನ ದುಡ್ಡನ್ನು ವಾಚ್ ಮೇಲೆ ಹೂಡಿಕೆ ಮಾಡೋದಿಲ್ಲ. ಬದಲಾಗಿ ತುಂಬಾ ಇಷ್ಟ ಆದ್ರೆ ನಮ್ಮ ಸ್ನೇಹಿತರ ಅಥವಾ ಒಡಹುಟ್ಟಿದವರ ವಾಚ್ ಧರಿಸುತ್ತೇವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿ ಮಾಡೋದು ತಪ್ಪು. ಯಾಕಂದ್ರೆ ಅವರಿಗೆ ಕೆಟ್ಟ ಕಾಲ ನಡೀತಿದ್ರೆ ಅವರ ಗ್ರಹಚಾರಗಳೆಲ್ಲಾ ನಿಮಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೀದಿಯಲ್ಲಿ ಹೋಗೋ ಮಾರಿಯನ್ನು ನೀವ್ಯಾಕೆ ಮೈ ಮೇಲೆ ಎಳೆದುಕೊಳ್ತೀರಿ.
5. ಉಂಗುರ
ಉಗುರದ ವಿಚಾರದಲ್ಲೂ ಹಾಗೆ ನಾವು ತುಂಬಾನೇ ಜಾಗೃತರಾಗಿ ಇರ್ಬೇಕು. ನಮಗೆ ತುಂಬಾ ಸಂಕಷ್ಟಗಳು ಎದುರಾದ ಸಮಯದಲ್ಲಿ ನಾವು ಜ್ಯೋತಿಷಿಗಳ ಬಳಿ ಹೋಗಿ ಅದಕ್ಕೆ ಪರಿಹಾರ ಕಂಡುಕೊಳ್ತೀವಿ. ಕಲವೊಂದು ಸಲ ನಮ್ಮ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ನೋಡಿ ಬಣ್ಣ ಬಣ್ಣದ ಹರಳುಗಳ ಉಂಗುರವನ್ನು ಧರಿಸುವಂತೆ ಜ್ಯೋತಿಷಿಗಳು ಮಾರ್ಗದರ್ಶನ ನೀಡುತ್ತಾರೆ.
ಹೀಗಾಗಿ ನಮ್ಮ ಸ್ನೇಹಿತರು ಅಥವಾ ಆಪ್ತರ ಬಳಿ ಆ ರೀತಿಯ ಉಂಗುರಗಳು ಇದ್ದರೆ ನಮಗೆ ಇಷ್ಟ ಆಯ್ತು ಅಂತ ಅದನ್ನು ಧರಿಸೋದಕ್ಕೆ ಹೋಗಬೇಡಿ. ಒಂದು ದಿನವಾದ್ರೂ ಸರಿ, ಕೆಲವು ಗಂಟೆಗಳಾದರೂ ಸರಿ ಬೇರೆಯವರ ಉಂಗುರ ಧರಿಸಲೇಬಾರದು. ಯಾಕಂದ್ರೆ ಅವರ ದುರಾದೃಷ್ಟ ನಿಮಗೆ ವರ್ಗಾವಣೆ ಆಗುತ್ತದೆ. ಹೀಗಾಗಿ ಎಚ್ಚರಿಕೆಯಿಂದಿರಿ.
ಈ ಮೇಲಿನ ಯಾವುದೇ ವಸ್ತುಗಳನ್ನು ನಿಮ್ಮ ಸ್ನೇಹಿತರಿಂದ ಅಥವಾ ಆಪ್ತರಿಗೆ ಕೊಡೋದು ಹಾಗೂ ತೆಗೆದುಕೊಳ್ಳೋದನ್ನು ಮಾಡಲೇಬೇಡಿ. ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ. ನಿಮ್ಮ ವಸ್ತುಗಳನ್ನು ಮಾತ್ರ ನೀವು ಧರಿಸಿ.



Click it and Unblock the Notifications
