Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಮನೆಯಲ್ಲಿ ಲಕ್ಷ್ಮೀಯ ಫೋಟೋ ಅಥವಾ ಮೂರ್ತಿಯನ್ನು ಇಡೋವಾಗ ಈ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿ!
ಮಾತೇ ಲಕ್ಷ್ಮಿಯಲ್ಲಿ ದೈವೀಕ ಶಕ್ತಿಯಿದೆ. ಆಕೆಯನ್ನು ಭಕ್ತಿಯಿಂದ ಬೇಡಿಕೊಂಡವರಿಗೆ ಆಸ್ತಿ ಹಾಗೂ ಸಮೃದ್ಧಿಯನ್ನು ಕರುಣಿಸುತ್ತಾಳೆ. ಹೆಚ್ಚಾಗಿ ಪ್ರತಿಯೊಬ್ಬ ಹಿಂದುವಿನ ಮನೆಯಲ್ಲೂ ಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ಅದ್ರಲ್ಲೂ ಶುಕ್ರವಾರದ ದಿನ ವಿಶೇಷ ದಿನ. ಈ ದಿನ ಲಕ್ಷ್ಮಿಯನ್ನು ಬೇಡಿಕೊಂಡರೆ ಸಂಪತ್ತು ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆಯಿದೆ.
ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮೀಯನ್ನು ಪೂಜಿಸುವಾಗ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಯಾವುದೇ ರೀತಿ ತಪ್ಪುಗಳು ಆಗದಂತೆ ಗಮನ ಕೊಡೋದು ತುಂಬಾನೇ ಮುಖ್ಯ. ಅಷ್ಟಕ್ಕು ಮನೆಯಲ್ಲಿ ಲಕ್ಷ್ಮೀಯ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಲಕ್ಷ್ಮೀಯ ನಿಂತಿರುವ ಮೂರ್ತಿಯನ್ನು ಮನೆಯಲ್ಲಿ ಇಡಬಹುದಾ? ಮಾತೆ ಲಕ್ಷ್ಮೀಯ ಮುಖ ಯಾವ ದಿಕ್ಕಿಗೆ ಇರಬೇಕು ಅನ್ನೋದನ್ನು ತಿಳಿಯೋಣ.

ಮನೆಯ ಯಾವ ಜಾಗದಲ್ಲಿ ಲಕ್ಷ್ಮೀ ಫೋಟೋವನ್ನು ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮೀಯ ಫೋಟೋ ಅಥವಾ ಮೂರ್ತಿಯನ್ನು ಯಾವಾಗಲೂ ಉತ್ತರಕ್ಕೆ ಮುಖ ಮಾಡಿರುವಂತೆ ಇಡಬೇಕಂತೆ. ಒಂದು ವೇಳೆ ನೀವು ಮನೆಯಲ್ಲಿ ಲಕ್ಷ್ಮೀಯ ಫೋಟೋ ಅಥವಾ ಮೂರ್ತಿಯನ್ನು ಸರಿಯಾದ ಜಾಗದಲ್ಲಿ ಇಟ್ಟರೆ ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ, ಆಸ್ತಿ, ಹಾಗೂ ಸಮೃದ್ಧಿ ಹೆಚ್ಚಾಗಲಿದ್ಯಂತೆ.
ಹೀಗಾಗಿ ಮನೆಯೊಳಗಡೆ ಲಕ್ಷ್ಮೀಯ ಫೋಟೋ ಇಡಲು ಸರಿಯಾದ ಜಾಗ ಎಂದರೆ ಉತ್ತರ ದಿಕ್ಕು ಅಥವಾ ಪೂರ್ವ ದಿಕ್ಕಿನ ಈಶಾನ್ಯ ಭಾಗದಲ್ಲಿ ಇಟ್ಟರೆ ಉತ್ತಮ. ಇನ್ನೂ ಅಪ್ಪಿ ತಪ್ಪಿಯೂ ಲಕ್ಷ್ಮೀಯ ಫೋಟೋ ಅಥವಾ ಮೂರ್ತಿಯನ್ನು ದಕ್ಷಿಣ ದಿಕ್ಕಿನಲ್ಲಿ ಇಡೋದಕ್ಕೆ ಹೋಗಬೇಡಿ. ಯಾಕಂದ್ರೆ ಇದ್ರಿಂದ ಮನೆಗೆ ಒಳ್ಳೆಯದಾಗೋದಿಲ್ವಂತೆ. ಮನೆಯಲ್ಲಿ ಬಡತನ ಆವರಿಸಿಕೊಳ್ಳುತ್ತಂತೆ.
ಲಕ್ಷ್ಮೀಯ ಮುಖ ಯಾವ ದಿಕ್ಕಿಗೆ ಇರಬೇಕು?
ಮಾತೆ ಲಕ್ಷ್ಮೀಯ ಫೋಟೋ ಅಥವಾ ಮೂರ್ತಿಯನ್ನು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನ ಈಶಾನ್ಯ ಭಾಗದಲ್ಲೇ ಇಡಬೇಕು. ಅದೇ ರೀತಿ ಲಕ್ಷ್ಮೀಯ ಮುಖ ಪಶ್ಚಿಮಕ್ಕೆ ಮುಖ ಮಾಡಿರುವಂತೆ ಇಡಬೇಕು. ಇನ್ನೂ ಲಕ್ಷ್ಮೀ ಫೋಟೋದ ಬಲಭಾಗದಲ್ಲಿ ಗಣೇಶ ಹಾಗೂ ಎಡಭಾಗದಲ್ಲಿ ವಿಷ್ಣುವಿನ ಫೋಟೋ ಇರುವಂತೆ ಇಟ್ಟರೆ ಒಳ್ಳೆಯದು.
ನಿಂತಿರುವ ಲಕ್ಷ್ಮೀಯ ಮೂರ್ತಿಯನ್ನು ಮನೆಯಲ್ಲಿ ಇಡಬಹುದಾ?
ಹೆಚ್ಚಿನ ಮನೆಗಳಲ್ಲಿ ನಿಂತಿರುವ ಲಕ್ಷ್ಮೀಯ ಫೋಟೋವನ್ನು ಯಾವುದೇ ಕಾರಣಕ್ಕೂ ಇಡೋದಿಲ್ಲ. ಯಾಕಂದ್ರೆ ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ನಿಂತಿರುವ ಲಕ್ಷ್ಮೀಯ ಫೋಟೋ ಆಗಲಿ ಅಥವಾ ಮೂರ್ತಿಯನ್ನಾಗಲಿ ಇಡೋದಕ್ಕೆ ಹೋಗಬೇಡಿ. ಇನ್ನೂ ಉತ್ತಮ ಸಂಪತ್ತು ಮತ್ತು ಅದೃಷ್ಟಕ್ಕಾಗಿ ಗೂಬೆ ಮತ್ತು ದೇವತೆ ಎರಡನ್ನೂ ಒಂದೇ ಚೌಕಟ್ಟಿನಲ್ಲಿ ತೋರಿಸುವ ಲಕ್ಷ್ಮಿಯ ಫೋಟೋವನ್ನು ಇಡಬೇಡಿ.
ಒಂದಕ್ಕಿಂತ ಹೆಚ್ಚು ಲಕ್ಷ್ಮೀಯ ಫೋಟೋವನ್ನು ಒಟ್ಟಿಗೆ ಇಡಬಹುದಾ?
ವಾಸ್ತು ಶಾಸ್ತ್ರದ ಪ್ರಕಾರ ಒಂದಕ್ಕಿಂತ ಹೆಚ್ಚು ಲಕ್ಷ್ಮೀಯ ಮೂರ್ತಿಯನ್ನು ಒಂದೇ ಜಾಗದಲ್ಲಿ ಇಡಬಾರದು. ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಇನ್ನೂ ಲಕ್ಷ್ಮೀಯ ಫೋಟೋ ಅಥವಾ ಮೂರ್ತಿಯ ಹತ್ತಿರ ಸುಂದರವಾದ ರಂಗೋಲಿ ಬಿಡಿಸಿದರೆ ತುಂಬಾನೇ ಒಳ್ಳೆಯದು. ಇನ್ನೂ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಲಕ್ಷ್ಮೀಯನ್ನು ಶ್ರದ್ಧಾ, ಭಕ್ತಿಯಿಂದ ಬೇಡಿಕೊಂಡರೆ ಆ ಮನೆಯಲ್ಲಿ ಯಾವಾಗಲೂ ಖುಷಿ, ಸಮೃದ್ಧಿ, ಅದೃಷ್ಟ ತುಂಬಿರುತ್ತಂತೆ.
ಲಕ್ಷ್ಮಿ ಇರುವ ಕೋಣೆಯನ್ನು ಅಲಂಕರಿಸುವುದು ಹೇಗೆ?
- ಲಕ್ಷ್ಮೀಯನ್ನು ಇಡುವ ಜಾಗ ಯಾವಾಗಲೂ ಸ್ವಚ್ಛವಾಗಿರಬೇಕು
- ಲಕ್ಷ್ಮೀ ದೇವರ ಫೋಟೋ ಅಥವಾ ಮೂರ್ತಿಯನ್ನು ಹೂವು ಮತ್ತು ದೀಪಗಳಿಂದ ಅಲಂಕರಿಸಬೇಕು
- ಪೂಜೆಯ ಸಂದರ್ಭದಲ್ಲಿ ರಂಗೋಲಿ ಹಾಕೋದನ್ನು ಮರೀಬೇಡಿ
- ಪೂಜಾ ಕೋಣೆಯಲ್ಲಿ ಲಕ್ಷ್ಮೀ ಹಾಗೂ ಗಣೇಶನ ಬೆಳ್ಳಿಯ ಮೂರ್ತಿಯನ್ನು ಪಕ್ಕ ಪಕ್ಕದಲ್ಲಿ ಇಟ್ಟರೆ ಉತ್ತಮ
- ಲಕ್ಷ್ಮೀ ಪೂಜೆಗೂ ಮೊದಲು ತುಳಸಿಯನ್ನು ಪೂಜಿಸಿದರರ ಲಕ್ಷ್ಮೀಯನ್ನು ಒಲಿಸಿಕೊಳ್ಳಬಹುದಂತೆ.
ಲಕ್ಷ್ಮೀಯನ್ನು ಮನೆಯಲ್ಲಿ ಪೂಜಿಸುವುದಾದರೆ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇಡಬೇಕು. ಪೂಜೆಯ ಸಂದರ್ಭದಲ್ಲಿ ಯಾವುದೇ ತಪ್ಪುಗಳಾಗದಂತೆ ನೋಡಿಕೊಳ್ಳಿ.



Click it and Unblock the Notifications

