Money: ಈ ಜಾಗದಲ್ಲಿ ಹಣ ಇಟ್ಟರೆ ಬಡವನಾಗೋದು ಖಚಿತ! ಲಕ್ಷ್ಮಿ ಹತ್ತಿರವೂ ಬರಲ್ಲ

ಈ ಸ್ಥಳಗಳಲ್ಲಿ ಹಣ ಇಡುವ ವ್ಯಕ್ತಿ ಬಡವನಾಗೋದು ಖಚಿತ! ಲಕ್ಷ್ಮಿ ದೇವಿಯು ಕೋಪಗೊಂಡು ಶಾಶ್ವತವಾಗಿ ಹೊರಟು ಹೋಗುತ್ತಾಳೆ. ಹೌದು, ಮನೆಯಲ್ಲಿ ಕೆಲವು ಜಾಗಗಳಲ್ಲಿ ಹಣವನ್ನು ಇಡಬಾರದು. ಹೀಗೆ ದುಡ್ಡು (money) ಇಡುವುದರಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗಿ, ನೀವು ಬಡವರಾಗುತ್ತೀರಿ. ವಾಸ್ತು ಶಾಸ್ತ್ರದಲ್ಲಿ (Vaastu shastra) ಎಲ್ಲಾದಕ್ಕೂ ನಿಯಮಗಳಿವೆ. ಅದರಂತೆ, ಹಣ ಇಡುವುದಕ್ಕೂ ಕೆಲವು ನಿಯಮಗಳಿವೆ. ಏಕೆಂದರೆ, ನೀವು ಹಣವನ್ನು ತಪ್ಪಾದ ಜಾಗದಲ್ಲಿ ಇಟ್ಟರೆ, ಮನೆಯಲ್ಲಿ ಕಡು ಬಡತನ ಕಾಡುತ್ತದೆ. ಹಾಗಿದ್ರೆ, ಹಣವನ್ನು ಯಾವ ಜಾಗದಲ್ಲಿ ಇಡಬಾರದು? ಎನ್ನುವುದನ್ನು ತಿಳಿಯೋಣ ಬನ್ನಿ.

ವಾಸ್ತು ಶಾಸ್ತ್ರದ ಮಹತ್ವ ಬಹಳಷ್ಟು ಜನರಿಗೆ ತಿಳಿದಿಲ್ಲ. ನಾವು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ, ಫಲಿತಾಂಶ ತುಂಬಾ ಶುಭ ಮತ್ತು ಸಮೃದ್ಧವಾಗಿರುತ್ತವೆ. ಆದಾಗ್ಯೂ, ಈ ನಿಯಮಗಳನ್ನು ನಿರ್ಲಕ್ಷಿಸಿದರೆ, ಅದರ ಫಲಿತಾಂಶ ನಕಾರಾತ್ಮಕವಾಗಿರಬಹುದು. ವಾಸ್ತು ಶಾಸ್ತ್ರದಲ್ಲಿ, ಸಂಪತ್ತಿನ (ಹಣ) ಬಗ್ಗೆ ಹಲವು (Vastu Tips for Wealth) ನಿಯಮಗಳಿವೆ. ನಾವಿಂದು ಈ ಲೇಖನದಲ್ಲಿ, ನೀವು ಮನೆಯಲ್ಲಿ ಹಣವನ್ನು ಇಡಬಾರದ ಕೆಲವು ಸ್ಥಳಗಳ ಬಗ್ಗೆ ತಿಳಿಸಿದ್ದೇವೆ. ನೀವು ಈ ಸ್ಥಳಗಳಲ್ಲಿ ಹಣವನ್ನು ಇಟ್ಟರೆ, ಲಕ್ಷ್ಮಿ ದೇವಿಯು ನಿಮ್ಮಿಂದ ಶಾಶ್ವತವಾಗಿ ದೂರವಾಗುತ್ತಾಳೆ. ನಿಮ್ಮ ಜೀವನವು ಬಡತನದಲ್ಲಿ ಕಳೆಯುತ್ತದೆ. ನೀವು ಎಂದಿಗೂ ಹಣವನ್ನು ಈ ಸ್ಥಳಗಳಲ್ಲಿ ಇಡಬಾರದು.

vastu tips for money

ಈ ದಿಕ್ಕಿನಲ್ಲಿ ಹಣವನ್ನು ಇಡಲೇಬೇಡಿ

ನೀವು ತಪ್ಪಾಗಿ ಸಹ ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಹಣವನ್ನು ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ದಿಕ್ಕನ್ನು ಯಾವಾಗಲೂ ಯಮರಾಜನ ದಿಕ್ಕು ಎಂದು ಪರಿಗಣಿಸಲಾಗಿದೆ. ಒಂದುವೇಳೆ, ದಕ್ಷಿಣ ದಿಕ್ಕಿನಲ್ಲಿ ಹಣವನ್ನು ಇಡಲು ಪ್ರಾರಂಭಿದರೆ, ನೀವು ಸಾಲದ ಸುಳಿಯಲ್ಲಿ ಸಿಲುಕಬಹುದು. ಅಲ್ಲದೆ, ನೀವು ಜೀವನವನ್ನು ಬಡತನದಲ್ಲಿ ಕಳೆಯಬೇಕಾಗುತ್ತದೆ.

ಎಂದಿಗೂ ಕತ್ತಲೆಯ ಸ್ಥಳದಲ್ಲಿ ತಿಜೋರಿ ಇಡಬೇಡಿ

ಹಣವನ್ನು ಸುರಕ್ಷಿತವಾಗಿಡುವಾಗ ಇದನ್ನು ನೆನಪಿನಲ್ಲಿಡಬೇಕು. ನೀವು ಎಂದಿಗೂ ಕತ್ತಲೆಯಾದ ಸ್ಥಳದಲ್ಲಿ ತಿಜೋರಿ ಇಡಬಾರದು. ನೀವು ತಿಜೋರಿಯನ್ನು ಇಡುವ ಸ್ಥಳವು ಸ್ವಚ್ಛವಾಗಿದೆಯೇ ಎಂದು ಪರಿಶೀಲಿಸಿ. ಆ ಸ್ಥಳದಲ್ಲಿ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಿ. ನೀವು ತಿಜೋರಿಯನ್ನು ಕತ್ತಲೆಯಲ್ಲಿ ಇಟ್ಟರೆ, ನಿಮ್ಮ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ನೀವು ದುಡ್ಡನ್ನು ಇಡುವುದಾದರೆ, ಬೆಳಕಿರುವ ಸ್ಥಳದಲ್ಲಿ ಇಡಿ.

Take a Poll

ಅಪ್ಪಿ ತಪ್ಪಿಯೂ ಸ್ನಾನಗೃಹದ ಬಳಿ ಇಡಬಾರದು

ನೀವು ಅಪ್ಪಿ ತಪ್ಪಿಯೂ ಸ್ನಾನಗೃಹದ ಬಳಿ ತಿಜೋರಿ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ಸ್ಥಳವು ಕೊಳಕಾಗಿದೆ ಮತ್ತು ಬಾತ್ ರೂಮಿನಿಂದ ನೆಗೆಟಿವಿಟಿ ಹೆಚ್ಚಾಗಿ ಹೊರ ಬರುತ್ತದೆ. ಹಾಗಾಗಿ, ನೀವು ಈ ಸ್ಥಳದಲ್ಲಿ ಹಣವನ್ನು ಇಟ್ಟಾಗ, ದುಡ್ಡು ನಿಮ್ಮ ಕೈಯಲ್ಲಿ ಎಂದಿಗೂ ಉಳಿಯುವುದಿಲ್ಲ. ಇದರಿಂದ ಬಡತನ ನಿಮ್ಮನ್ನು ಕಾಡುತ್ತದೆ.

ಕೊಳಕು ಇರುವಲ್ಲಿ ಲಕ್ಷ್ಮೀ ದೇವಿ ಎಂದಿಗೂ ನೆಲೆಸುವುದಿಲ್ಲ

ಹಣ ಎಂದರೆ ಲಕ್ಷ್ಮೀ ದೇವಿ. ಕೊಳಕು ಇರುವಲ್ಲಿ ಲಕ್ಷ್ಮೀ ದೇವಿ ಎಂದಿಗೂ ನೆಲೆಸುವುದಿಲ್ಲ. ಹಾಗಾಗಿ, ಇಂತಹ ಜಾಗದಲ್ಲಿ ದುಡ್ಡು ಇಡಬಾರದು. ಮುಖ್ಯವಾಗಿ ಯಾವಾಗಲೂ ಹಣವನ್ನು ಇಡುವಾಗ ಶುಚಿಯಾದ, ಶುದ್ಧವಾದ ಜಾಗದಲ್ಲಿ ಇಡಬೇಕು. ತಪ್ಪಿಯೂ ಕೊಳಕು ಇರುವ ಸ್ಥಳದಲ್ಲಿ ದುಡ್ಡನ್ನು ಇರಿಸಬಾರದು. ಅಲ್ಲದೇ ನೀವು ಹಣ ಇಡುವಂತಹ ಜಾಗದಲ್ಲಿ ಮಿಸ್ ಆಗಿಯೂ ಪೊರಕೆಯನ್ನು ಇಡಬಾರದು. ಪೊರಕೆ ಎಂದರೆ, ಅದು ಮನೆಯನ್ನು ಸ್ವಚ್ಚ ಮಾಡುವ ವಸ್ತು. ಅದರ ಬಳಿ ದುಡ್ಡು ಇಡುವಂತಹ ತಪ್ಪು ಎಂದಿಗೂ ಮಾಡಬೇಡಿ.

ಇನ್ನು ಸಾಮಾನ್ಯವಾಗಿ ನಿಮಗೆ ಯಾರಾದರೂ ಏನಾದರು ವಸ್ತುಗಳನ್ನು ಉಡುಗೊರೆ ನೀಡುತ್ತಾರೆ. ಅಂತಹ ವಸ್ತುಗಳ ಜೊತೆಗೆ ಹಣವನ್ನು ಇಟ್ಟುಕೊಳ್ಳಬಾರದು. ಇದರಿಂದ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇದಲ್ಲದೆ, ನೀವು ಬಡವರಾಗುವ ಸಾಧ್ಯತೆ ಸಹ ಹೆಚ್ಚಾಗಿರುತ್ತದೆ.

English summary

Vastu Tips for Wealth: Avoid Keeping Money in These Places at Home

Vastu Tips for Wealth: Avoid Keeping Money in These Places at Home
Story first published: Wednesday, June 11, 2025, 12:03 [IST]
X
Desktop Bottom Promotion