Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಸ್ತು ಪ್ರಕಾರ ಮನೆಯಲ್ಲಿ ಸತ್ತವರ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು?
ಮನೆಯಲ್ಲಿ ಹಿರಿಯರು ಸತ್ತು ಹೋದ ಸಂದರ್ಭದಲ್ಲಿ ಅವರ ಫೋಟೋವನ್ನು ನಾವು ಮನೆಯಲ್ಲಿ ನೇತು ಹಾಕಿಕೊಳ್ಳುತ್ತೇವೆ. ಇದಕ್ಕೆ ಹಲವು ಕಾರಣಗಳು ಇರಬಹುದು. ಒಂದು ಸದಾ ಅವರ ನೆನಪು ನಮ್ಮ ಮನಸ್ಸಿನಲ್ಲಿ ಉಳಿಯಲಿ ಎನ್ನುವ ಕಾರಣಕ್ಕೆ.
ಹೆಚ್ಚಿನವರು ಮನೆಯ ಲಿವಿಂಗ್ ರೂಂ ನಲ್ಲಿ ಹಿರಿಯರ ಫೋಟೋವನ್ನು ಇಡುತ್ತಾರೆ. ಇನ್ನೂ ಕೆಲವರು ಬೆಡ್ ರೂಂ ಗೆ ಹತ್ತಿರವಾಗಿ ಇರುವಂತೆ ಇಡುತ್ತದೆ. ಸತ್ತ ಹಿರಿಯರ ಫೋಟೋ ಮನೆಯಲ್ಲಿದ್ದರೆ ಅವರ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಸುಖ, ಸಮೃದ್ಧಿ ಹೆಚ್ಚಾಗಿರುತ್ತೆ ಅಂತ ಹೇಳಲಾಗುತ್ತದೆ.

ಇನ್ನೂ ನಿಮ್ಮ ಮನೆಯಲ್ಲಿ ಹಿರಿಯರ ಫೋಟೋವನ್ನು ಇಡುವಾಗ ತುಂಬಾನೇ ಜಾಗರೂಕರಾಗಿ ಇರಬೇಕು. ಜಾಗ ಇದೆ ಅಂತ ಎಲ್ಲಂದರಲ್ಲಿ ಹಾಕೋದಕ್ಕೆ ಹೋಗಬೇಡಿ. ಇದರಿಂದ ನಿಮ್ಮ ಮನೆಗೆ ಕೆಟ್ಟದಾಗುವ ಸಾಧ್ಯತೆ ಇರುತ್ತದೆ. ಅಷ್ಟಕ್ಕು ಮನೆಯಲ್ಲಿ ನಿಮ್ಮ ಹಿರಿಯರ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಅನ್ನೋದನ್ನು ತಿಳಿದುಕೊಳ್ಳೋಣ.
ವಾಸ್ತು ಪ್ರಕಾರ ಮನೆಯಲ್ಲಿ ಸತ್ತವರ ಫೋಟೋವನ್ನು ಹೇಗಿಡಬೇಕು?
ಮನೆಯ ಒಳಗಡೆ ಸತ್ತ ಪೂರ್ವಜರ ಫೋಟೋವನ್ನು ಇಡುವಾಗ ತುಂಬಾನೇ ಜಾಗರೂಕರಾಗಿ ಇರಬೇಕು. ಆ ಫೋಟೋಗಳನ್ನು ಮನೆಯ ಶೆಲ್ಫ್ ಅಥವಾ ಬೀರುನಲ್ಲಿ ಇಡಬೇಕು. ಯಾವುದೇ ಕಾರಣಕ್ಕೂ ಪೂರ್ವಜರ ಫೋಟೋವನ್ನು ಜೋತು ಹಾಕಬಾರದು. ಒಂದು ವೇಳೆ ಜೋತು ಹಾಕಿದರೆ ಪೂರ್ವಜನರಿಗೆ ಅಪಮಾನ ಮಾಡಿದಂತಾಗುತ್ತಂತೆ. ಹಾಗೂ ಅವರ ಆಶೀರ್ವಾದವನ್ನೂ ನಾವು ಪಡೆಯೋದಕ್ಕೆ ಆಗೋದಿಲ್ಲ. ಇದರಿಂದ ಪಿತೃದೋಷ ಉಂಟಾಗುವ ಸಾಧ್ಯತೆಗಳಿದೆ.
ಒಂದಕ್ಕಿಂತ ಹೆಚ್ಚು ಫೋಟೋ ಹಾಕಬೇಡಿ
ಮನೆಯಲ್ಲಿ ಸತ್ತ ಪೂರ್ವಜರ ಒಂದು ಫೋಟೋ ಇದ್ದರೆ ಸಾಕು. ಒಂದಕ್ಕಿಂತ ಹೆಚ್ಚು ಫೋಟೋ ಹಾಕೋದ್ರಿಂದ ಆ ಮನೆಗೆ ಒಳ್ಳೆಯದಾಗೋದಿಲ್ವಂತೆ. ಮನೆಗೆ ಕೆಟ್ಟದಾಗುತ್ತೆ ಅಂತ ಹೇಳಲಾಗುತ್ತದೆ. ಹೀಗಾಗಿ ಸತ್ತ ಪೂರ್ವಜರ ಒಂದೇ ಫೋಟೋ ಮನೆಯಲ್ಲಿದ್ದರೆ ಸಾಕು.
ಲಿವಿಂಗ್ ರೂಂ ನಲ್ಲಿ ಸತ್ತವರ ಫೋಟೋ ಹಾಕಬೇಡಿ!
ಹೆಚ್ಚಾಗಿ ನಾವು ಸತ್ತವರ ಫೋಟೋವನ್ನು ಲಿವಿಂಗ್ ರೂಂ ನಲ್ಲೇ ಹಾಕುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಎಲ್ಲರಿಗೂ ಕಾಣುವಂತೆ ಸತ್ತವರ ಫೋಟೋವನ್ನು ಹಾಕಬಾರದು. ಅದ್ರಲ್ಲೂ ಹೊರಗಿನವರಿಗೆ ಕಾಣುವಂತೆ ಆ ಫೋಟೋ ಇರಲೇಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತಂತೆ. ಇನ್ನೂ ಬೆಡ್ ರೂಂ ನಲ್ಲಿ ಕೂಡ ಯಾವುದೇ ಕಾರಣಕ್ಕೂ ಸತ್ತ ವ್ಯಕ್ತಿಯ ಫೋಟೋ ಹಾಕದಿರಿ.
ದೇವರ ಕೋಣೆಯಲ್ಲಿ ಸತ್ತವರ ಫೋಟೋ ಇಡಬೇಡಿ!
ಸತ್ತವರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಕೆಲವು ಮನೆಗಳಲ್ಲಿ ಸತ್ತವರ ಫೋಟೋವನ್ನು ದೇವರ ಕೋಣೆಯಲ್ಲಿ ಇಡಲಾಗುತ್ತದೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡೋದಕ್ಕೆ ಹೋಗಬೇಡಿ. ಇದರಿಂದ ಮನೆಯಲ್ಲಿ ಅಶಾಂತಿ ಸೃಷ್ಟಿಯಾಗಬಹುದು. ಇನ್ನೂ ಸತ್ತವರ ಫೋಟೋವನ್ನು ಹಾಗೂ ಬದುಕಿರುವವರ ಫೋಟೋವನ್ನು ಜೊತೆ ಜೊತೆಯಾಗಿ ಇಡಬಾರದು ಇದರಿಂದ ಬದಯಕಿರುವವರ ಆಯಸ್ಸು ಕೂಡ ಕಡಿಮೆಯಾಗುತ್ತಂತೆ.
ಯಾವ ದಿಕ್ಕಿನಲ್ಲಿ ಸತ್ತವರ ಫೋಟೋ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವಜರ ಚಿತ್ರವನ್ನು ಯಾವಾಗಲೂ ಉತ್ತರ ದಿಕ್ಕಿನಲ್ಲಿ ಇಡಬೇಕು. ದಕ್ಷಿಣ ದಿಕ್ಕನ್ನು ಪೂರ್ವಜರ ದಿಕ್ಕು ಎಂದು ಪರಿಗಣಿಸುವುದರಿಂದ ಉತ್ತರ ದಿಕ್ಕಿನಲ್ಲಿ ಚಿತ್ರವನ್ನು ಇರಿಸುವ ಮೂಲಕ ಚಿತ್ರವು ದಕ್ಷಿಣ ದಿಕ್ಕಿಗೆ ಮುಖಮಾಡುವಂತೆ ಇರುತ್ತದೆ. ಅದಕ್ಕಾಗಿಯೇ ಪೂರ್ವಜರ ಚಿತ್ರಗಳನ್ನು ಚಿತ್ರದ ಮುಖವು ದಕ್ಷಿಣ ದಿಕ್ಕಿಗೆ ಇರುವಂತೆ ಇಡಬೇಕು. ಇನ್ನೂ ಯಾವುದೇ ಕಾರಣಕ್ಕೂ ಚಿತ್ರಗಳನ್ನು ಎಂದಿಗೂ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳ ಮೇಲೆ ಇಡಬಾರದು. ಹೀಗೆ ಮಾಡುವುದರಿಂದ ಮನೆಯ ಸುಖ-ಸಮೃದ್ಧಿ ಹಾಳಾಗುತ್ತಂತೆ.
ಹೆಚ್ಚಿನ ಸಂದರ್ಭದಲ್ಲಿ ಸತ್ತವರ ಫೋಟೋವನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಅನ್ನೋದ್ರ ಬಗ್ಗೆ ತಲೆಕೆಡಿಸಿಕೊಂಡಿರೋದಿಲ್ಲ. ಜಾಗ ಸಿಕ್ಕಲ್ಲಿ ಫೋಟೋವನ್ನು ಇಡುತ್ತೇವೆ. ಆದರೆ ಇನ್ನೂ ಮುಂದಾದರೂ ವಾಸ್ತು ಪ್ರಕಾರವೇ ಸತ್ತವರ ಫೋಟೋವನ್ನು ಮನೆಯಲ್ಲಿಟ್ಟರೆ ಉತ್ತಮ.



Click it and Unblock the Notifications