Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ವರಮಹಾಲಕ್ಷ್ಮಿ ಹಬ್ಬ 2023: ಲಕ್ಷ್ಮಿ ಅಲಂಕಾರ ಮಾಡುವುದು ಹೇಗೆ?
ಇನ್ನು ಕೇವಲ ಎರಡು ದಿನಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಬರಲಿದೆ ಇದೇ ಬರುವ ಆಗಸ್ಟ್ 25 ಶುಕ್ರವಾರ ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ವೈದಿಕ ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ನೀವು ಲಕ್ಷ್ಮಿಯನ್ನು ಎಷ್ಟು ಚೆನ್ನಾಗಿ ಅಲಂಕಾರ ಮಾಡಿ ಎಷ್ಟು ಭಕ್ತಿಯಿಂದ ಪೂಜೆ ಮಾಡುತ್ತಿರೋ ಅಷ್ಟು ಆಕೆ ಕೃಪೆ ನೀಡುತ್ತಾಳೆ. ಹಾಗಾಗಿ ನೀವು ನಿಮ್ಮ ಕೈಲಾದಷ್ಟು ಸರಿಯಾದ ರೀತಿಯಲ್ಲಿ ದೇವಿಯ ಅಲಂಕಾರವನ್ನು ಮಾಡಿ ಪೂಜೆ ಮಾಡುವುದು ಒಳ್ಳೆಯದು. ಲೇಖನದಲ್ಲಿ ಸರಳವಾಗಿ ಲಕ್ಷ್ಮಿ ದೇವಿಯ ಅಲಂಕಾರ ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ.

ಲಕ್ಷ್ಮಿ ದೇವಿಯ ಕಳಶ ಅಲಂಕಾರ
ಹಬ್ಬದ ಹಿಂದಿನ ದಿನವೇ ನೀವು ಕಳಶಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿ ಇಟ್ಟುಕೊಳ್ಳಬಹುದು. ಕಳಶದಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲು ಮೊದಲನೆಯದಾಗಿ ನಿಮ್ಮ ದೇವರ ಕೋಣೆಯಲ್ಲಿ ದೊಡ್ಡ ಜಾಗ ಇಲ್ಲದೆ ಇದ್ದಲ್ಲಿ ದೇವರ ಕೋಣೆಯ ಎದುರು ಅಥವಾ ನೀವು ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ಕೂರಿಸುವ ಜಾಗದಲ್ಲಿ ಒಂದು ಟೇಬಲ್ ಇಟ್ಟು ಅದರ ಮೇಲೆ ಸ್ಥಾಪನೆ ಮಾಡಬಹುದು.
ಒಂದು ಟೇಬಲ್ ಮೇಲೆ ಚಿಕ್ಕದಾಗಿರುವ ಮಣೆಯನ್ನು ಇಡೀ. ಮನೆಯ ಮೇಲೆ ಸ್ವಸ್ತಿಕ ಅಥವಾ ಬೇರೆ ನಿಮಗೆ ತಿಳಿದಿರುವ ರಂಗೋಲಿ ಹಾಕಿ. ನಂತರ ಒಂದು ದೊಡ್ಡದಾಗಿರುವ ಬಟ್ಟಲಿನಲ್ಲಿ ಅಕ್ಕಿಯನ್ನು ಹಾಕಿ, ಅದರ ಮೇಲೆ ಕೊಡಪಾನ ಇಟ್ಟು, ಅದರ ಮೇಲೆ ಚೊಂಬು ಅಥವಾ ಕಳಶವನ್ನು ಇಡಿ. ಇಲ್ಲಿ ಬೆಳ್ಳಿ ಚೊಂಬು ತಾಮ್ರ ಅಥವಾ ಹಿತ್ತಾಳೆ ಚೊಂಬನ್ನು ಬಳಸಬಹುದು. ಇದ್ಯಾವುದೂ ಇಲ್ಲದೆ ಇದ್ದಲ್ಲಿ ಮಾತ್ರ ಸ್ಟೀಲ್ ಚೊಂಬನ್ನು ಬಳಸಿ.
ಈ ಚೊಂಬಿಗೆ ಹಿಂದುಗಡೆಯಿಂದ ಒಂದು ಕೋಲನ್ನು ದಾರದ ಸಹಾಯದಿಂದ ಕಟ್ಟಿ. ಇದರಿಂದ ದೇವರಿಗೆ ಅಲಂಕಾರ ಮಾಡಲು ಸುಲಭವಾಗುತ್ತದೆ. ಈಗ ಮುಖ್ಯವಾಗಿರುವ ಹಂತ ಲಕ್ಷ್ಮಿ ದೇವಿಗೆ ಸೀರೆಯನ್ನು ಉಡಿಸುವುದು.
ಒಂದು ಸೀರೆಯನ್ನು ಚೆನ್ನಾಗಿ ಪ್ಲೇಟ್ ಗಳನ್ನಾಗಿ ಮಾಡಿ ಮಡಚಿ ಅದಕ್ಕೆ ಪಿನ್ ಹಾಕಿಟ್ಟುಕೊಳ್ಳಿ. ನಂತರ ಅದನ್ನು ಕಲಶಕ್ಕೆ ಕೂರಿಸುವ ಕೊಡಪಾನಕ್ಕೆ ಹಾಗೂ ಚೊಂಬಿನ ಸೂಕ್ತ ಸುತ್ತಿ. ಸೀರೆ ಬಿದ್ದು ಹೋಗದ ಹಾಗೆ ನೀವು ದಾರದ ಸಹಾಯದಿಂದ ಹಿಂದುಗಡೆ ಕಟ್ಟಬಹುದು ಅಥವಾ ಪಿನ್ನುಗಳ ಸಹಾಯದಿಂದ ಸೀರೆಯನ್ನು ಪ್ಲೇಟ್ಸ್ ಅಥವಾ ನೆರಿಗೆ ಬರುವಂತೆ ಮಾಡಬಹುದು.
ಸೀರೆ ಉಡಿಸಿದ ನಂತರ ಅದಕ್ಕೆ ಸೊಂಟದ ಪಟ್ಟಿ ಹಾಕಿದ್ರೆ ಲಕ್ಷ್ಮಿ ದೇವಿ ಇನ್ನಷ್ಟು ಸುಂದರವಾಗಿ ಕಾಣುತ್ತಾಳೆ. ನೀವು ಹಿಂದಿನ ದಿನವೇ ಎಲ್ಲ ತಯಾರಿ ಮಾಡಿ ಇಟ್ಟುಕೊಳ್ಳಬಹುದು ಕಲಶವನ್ನು ಅಥವಾ ಚೊಂಬನ್ನು ಸುಲಭವಾಗಿ ತೆಗೆಯುವ ಹಾಗೆ ಸೀರೆಯನ್ನು ಉಳಿಸಿ. ಯಾಕೆಂದರೆ ಅದೇ ಚೊಂಬಿನಲ್ಲಿ ನೀವು ಗಂಗೆ ನೀರನ್ನು ತುಂಬಿಸಬೇಕಾಗುತ್ತದೆ. ನಂತರ ಚೊಂಬಿನ ಕಂಠಕ್ಕೆ ಅಥವಾ ಮೇಲ್ಭಾಗದಲ್ಲಿ ಐದು ವೀಳ್ಯದ ಎಲೆ ಅಥವಾ ಐದು ಮಾವಿನ ಎಲೆಯನ್ನು ಇಟ್ಟು ಅದರ ಮೇಲೆ ಜುಟ್ಟು ಇರುವಂತಹ ತೆಂಗಿನಕಾಯಿಯನ್ನು ಇಡಬೇಕು. ಈ ತೆಂಗಿನ ಕಾಯಿಗೆ ದೇವಿ ಮುಖವನ್ನು ಕಟ್ಟಬೇಕು. ಬೆಳ್ಳಿ ದೇವಿಯ ಮುಖ ಇದ್ದರೆ ಅದನ್ನು ಕಟ್ಟಬಹುದು ಅಥವಾ ಸಾಮಾನ್ಯವಾಗಿ ಗ್ರಾಂಥಿ ಅಂಗಡಿಯಲ್ಲಿ ಸಿಗುವ ಹಳದಿ ಲಕ್ಷ್ಮಿ ಮುಖವನ್ನು ತಂದು ಕಳಶಕ್ಕೆ ಕಟ್ಟಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ. ಇನ್ನು ನಿಮಗೆ ಲಕ್ಷ್ಮಿ ಮುಖವನ್ನು ಜೋಡಿಸಲು ಸಾಧ್ಯವಾಗದೇ ಇದ್ದಲ್ಲಿ ನೀವು ಕಳಶಕ್ಕಾಗಿ ಕೋರಿಸುವ ತೆಂಗಿನ ಕಾಯಿಗೆ, ಅರಿಶಿಣ ಲೇಪನ ಮಾಡಿ, ಕುಂಕುಮದಿಂದ ಲಕ್ಷ್ಮಿಯ ಮುಖವನ್ನು ಬಿಡಿಸಿ ಪ್ರತಿಷ್ಠಾಪನೆ ಮಾಡಬಹುದು.
ಲಕ್ಷ್ಮಿ ದೇವಿ ಕಳಶ ಪ್ರತಿಷ್ಠಾಪನೆ ಮಾಡುವಾಗ ಹಿಂಬದಿಯಲ್ಲಿ, ಅಲಂಕಾರಕ್ಕೆ ಇರುವಂತ ಬ್ಯಾಕ್ ಡ್ರಾಪ್ ಗಳನ್ನು ಇಳಿಬಿಡಬಹುದು. ಇದಕ್ಕಾಗಿ ನೀವು ಬಾಳೆ ಎಲೆಯಂತೆ ಇರುವ ಬ್ಯಾಕ್ ಡ್ರಾಪ್, ಅಥವಾ ಹೂವಿನ ಅಲಂಕಾರ ಆಯ್ಕೆ ಮಾಡಿಕೊಂಡರೆ ಚೆನ್ನಾಗಿರುತ್ತೆ.
ಇನ್ನು ಮರುದಿನ ಕಳಶದಲ್ಲಿ ನೀರನ್ನು ತುಂಬಿಸಿದ ನಂತರ, ನಿಮ್ಮ ಬಳಿ ಇರುವ ಚಿನ್ನಾಭರಣಗಳನ್ನು ಹಾಕಿ ಲಕ್ಷ್ಮಿಗೆ ಅಲಂಕಾರ ಮಾಡಬಹುದು. 16 ಎಳೆ ಗೆಜ್ಜೆ ವಸ್ತ್ರವನ್ನು ತಪ್ಪದೆ ಲಕ್ಷ್ಮಿಗೆ ಹಾಕಿ. ಇದರ ಜೊತೆಗೆ ಹತ್ತಿಯಿಂದ ತಯಾರು ಮಾಡಲಾಗಿರುವ ಹಾರಗಳು ಕೂಡ ಸಿಗುತ್ತವೆ ಅವುಗಳನ್ನು ನೀವು ಅಲಂಕಾರಕ್ಕೆ ಬಳಸಿಕೊಳ್ಳಬಹುದು.
ಲಕ್ಷ್ಮಿ ದೇವಿಗೆ ತಾಳಿ ಆಭರಣ
ಇನ್ನು ಲಕ್ಷ್ಮಿ ದೇವಿಗೆ ಯಾವುದೇ ಆಭರಣ ಹಾಕದೆ ಇದ್ದರೂ ತಾಳಿ ಹಾಕುವುದನ್ನು ಮರೆಯಬೇಡಿ ಅರಿಶಿನದಾರದಿಂದ ಅರಿಶಿನ ಕೊಂಬನ್ನು ಕಟ್ಟಿ ಅದನ್ನು ಲಕ್ಷ್ಮಿ ದೇವಿಗೆ ಹಾಕಿದರು ಸರಿ ಆದರೆ ಲಕ್ಷ್ಮೀದೇವಿಗೆ ತಾಳಿಯನ್ನು ಹಾಕಿದಾಗ ಮಾತ್ರ ವರಮಹಾಲಕ್ಷ್ಮಿ ಪೂಜೆ ಸಂಪನ್ನು ವಾಗುತ್ತದೆ.
ಸಂಪೂರ್ಣವಾಗಿ ಲಕ್ಷ್ಮಿ ದೇವಿ ಅಲಂಕಾರ ಆದ ನಂತರ ನೀವು ಇಟ್ಟಿರುವ ಟೇಬಲ್ ಸುತ್ತ ಹೂವಿನ ಅಲಂಕಾರ ಮಾಡಿ ಲಕ್ಷ್ಮೀದೇವಿ ಕಲಶ ಪ್ರತಿಷ್ಠಾಪನೆ ಮಾಡಿರುವ ಎರಡು ಬದಿಯಲ್ಲಿ ದೀಪ ಸ್ತಂಭಗಳನ್ನು ಇಡಿ. ನಂತರ ನಿಮಗೆ ಅನುಕೂಲವಾಗುವಂತಹ ಯಾವುದೇ ರೀತಿಯ ಅಲಂಕಾರಿಕ ವಸ್ತುಗಳನ್ನು ಬಳಸಿಕೊಂಡು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು.
ಲಕ್ಷ್ಮಿ ದೇವಿಗೆ ಅರಿಶಿನ ಕುಂಕುಮ ಅರಿಶಿಣದ ಕೊಂಬು, ದಾರ, ಹಸಿರು ಬಳೆ, ಅಕ್ಕಿ, ವೀಳ್ಯದೆಲೆ ಅಡಿಕೆ ಇವುಗಳನ್ನು ಒಳಗೊಂಡ ಬಾಗಿನವನ್ನು ಸಿದ್ಧಪಡಿಸಿ ಲಕ್ಷ್ಮೀದೇವಿಗೆ ಮುಂದೆ ಇಡುವುದನ್ನು ಮರೆಯಬೇಡಿ. ಈ ರೀತಿ ಲಕ್ಷ್ಮಿ ದೇವಿಯನ್ನು ಅಲಂಕಾರ ಮಾಡಿದ ಬಳಿಕ ನಿಮ್ಮ ಮನೆಯ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ಮಾಡಿ, ಮುತೈದೆಯರ್ಗೆ ಅರಿಶೀನ ಕುಂಕುಮ ಅಥವಾ ಬಾಗಿನ ಕೊಟ್ಟು ವರಮಹಾಲಕ್ಷ್ಮಿ ಹಬ್ಬವನ್ನು ಸಂಪನ್ನಗೊಳಿಸಿ ಇದರಿಂದ ಲಕ್ಷ್ಮಿ ದೇವಿ ಕೃತಾರ್ಥಳಾಗುತ್ತಾಳೆ. ನಿಮಗೆ ಅದೃಷ್ಟದ ಮಳೆಯನ್ನು ಸುರಿಸುತ್ತಾಳೆ. ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.



Click it and Unblock the Notifications











