Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಆಗಸ್ಟ್ 16ಕ್ಕೆ ವರಮಹಾಲಕ್ಷ್ಮಿ:ಪೂಜೆಗೆ ಯಾವ ಸಮಯ ತುಂಬಾ ಶ್ರೇಷ್ಠವಾಗಿದೆ?
ಸನಾತನ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪೂಜಿಸಲಾಗುವುದು. ಲಕ್ಷ್ಮಿಯ ಕೃಪೆ ಇದ್ದರೆ ಜೀವನದಲ್ಲಿ ಸಂತೋಷ, ಶಾಂತಿ, ಸಂಪತ್ತು ಮತ್ತು ಸಮೃದ್ಧಿ ಕೊರತೆ ಉಂಟಾಗಲ್ಲ ಎಂದು ಹೇಳಲಾಗುವುದು.
ಶುಕ್ರವಾರ ಲಕ್ಷ್ಮಿ ಆರಾಧನೆಗೆ ವಿಶೇಷವಾದ ದಿನ, ಆದರೆ ಕೆಲ ವಿಶೇಷ ಸಂದರ್ಭದಲ್ಲಿ ಲಕ್ಷ್ಮಿಯನ್ನು ಆರಾಧಿಸಿದರೆ ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂದು ಹೇಳಲಾಗುವುದು, ಅಂಥ ಒಂದು ದಿನವೇ ವರಮಹಾಲಕ್ಷ್ಮಿ ವ್ರತದ ದಿನ.

ವರಮಹಾಲಕ್ಷ್ಮಿಯ ದಿನದಂದು ಅಷ್ಟಲಕ್ಷ್ಮಿಯನ್ನು ಪೂಜಿಸಲಾಗುವುದು. ಈ ವರ್ಷ ಆಗಸ್ಟ್ 16ರಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದಂದು ಪೂಜೆಗೆ ಶ್ರೇಷ್ಠ ಸಮಯ ಯಾವಾಗ, ಪೂಜಾ ವಿಧಿ-ವಿಧಾನಗಳೇನು ಎಂದು ನೋಡೋಣ ಬನ್ನಿ:
ವರಮಹಾಲಕ್ಷ್ಮಿಯಂದು ಲಕ್ಷ್ಮಿ ಪೂಜೆಗೆ ಶ್ರೇಷ್ಠ ಸಮಯ
ಸಿಂಹ ಲಗ್ನದಲ್ಲಿ ಬೆಳಗ್ಗೆ 05:54ರಿಂದ 08:13ರೊಳಗ ಪೂಜಿಸಬೇಕು.
ನಂತರ ಮಧ್ಯಾಹ್ನ ವೃಶ್ಚಿಕ ಲಗ್ನ ಮಧ್ಯಾಹ್ನ 12:53 ರಿಂದ 03:13 ರವರೆಗೆ ಸಮಯವಿದೆ.
ನಂತರ ಪ್ರದೋಷ ಅಂದರೆ ಸಂಜೆಯ ಸಮಯದಲ್ಲಿ ಮಾಡಬಹುದು.
ವರಮಹಾಲಕ್ಷ್ಮಿ ಹಬ್ಬದಂದು ಅಷ್ಟಲಕ್ಷ್ಮಿಯರ ಆರಾಧನೆ
ವರಲಕ್ಷ್ಮಿ ವ್ರತದ ದಿನದಂದು ಅಷ್ಟಲಕ್ಷ್ಮಿಯರ ಆಶೀರ್ವಾದ ಸಿಗುವುದು, ಹಾಗಾಗಿ ಎಲ್ಲಾ ರೀತಿಯ ಸೌಕರ್ಯ ಲಭಿಸಲಿದೆ. ಈ ಹಬ್ಬವನ್ನು ಕರ್ನಾಟಕ ಮಾತ್ರವಲ್ಲ ಇತರ ಕಡೆಯೂ ಆಚರಿಸಲಾಗುವುದು, ಆದರೆ ಕರ್ನಾಟಕದಲ್ಲಿ ಉಪವಾಸ ನಿಯಮ ಅನುಸರಿಸಿ, ಲಕ್ಷ್ಮಿಯನ್ನು ಅಲಂಕರಿಸಿ ಆಚರಿಸಲಾಗುವುದು. ವರಮಹಾಲಕ್ಷ್ಮಿ ಆಚರಣೆ ಮಾಡಿದರೆ ಅಷ್ಟಲಕ್ಷ್ಮಿಯರಾದ ಆದಿಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ವೀರಲಕ್ಷ್ಮಿ, ವಿಜಯಲಕ್ಷ್ಮಿ ಮತ್ತು ವಿದ್ಯಾಲಕ್ಷ್ಮಿ ಯ ಕೃಪೆ ದೊರೆಯಲಿದೆ, ಹಾಗಾಗಿ ಈ ದಿನಕ್ಕೆ ತುಂಬಾನೇ ಮಹತ್ವವಿದೆ.
ವರಲಕ್ಷ್ಮಿ ಹಬ್ಬದಂದು ಅನುಸರಿಸಬೇಕಾದ ಪೂಜಾ ವಿಧಾನಗಳ
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಉಪವಾಸ ಪ್ರತಿಜ್ಷೆ ತೆಗೆದುಕೊಂಡು ನಂತರ ಲಕ್ಷ್ಮಿಯನ್ನು ಅಲಂಕರಿಸಬೇಕು.
ಮುಖವಾಡ ಹಾಕಿ, ರೇಷ್ಮೆ ಸಿರೆ ಉಡಿಸಿ, ಲಕ್ಷ್ಮಿಗೆ ಆಭರಣಗಳನ್ನು ತೊಡಿಸಿ, ಹೂವುಗಳು, ಹಣ್ಣುಗಳು, ಸಿಹಿ ತಿಂಡಿಗಳು, ಧೂಪ ಇವೆಲ್ಲವನ್ನು ನೀಡಿ ಪೂಜಿಸಲಾಗುವುದು.
ಅದರಲ್ಲಿಯೂ ವರಮಹಾಲಕ್ಷ್ಮಿ ಹಬ್ಬದಂದು ಕಲಶ ಸ್ಥಾಪಿಸಿ ಪೂಜಿಸಲಾಗುವುದು.
ಕಳಸ ಸ್ಥಾಪನೆ
ಪೂಜಾಸ್ಥಳವನ್ನು ಗೋಮೂತ್ರ ಅಥವಾ ತೀರ್ಥ ಸಿಂಪಡಿಸಿ ರಂಗೋಲಿ ಬಿಡಿಸಿ ಐದು ಬಾಳೆ ಎಲೆ ಹಾಕಿ, ಅದರಲ್ಲಿ ಅಕ್ಕಿ ಹಾಕಿ ಅದರ ಮೇಲೆ
ಕಲಶ ಇಡಿ, ಅದರೊಳಗಡೆ ಒಣ ದ್ರಾಕ್ಷಿ, ಖರ್ಜೂರ, ಬಾದಾಮಿ, ಗೋಡಂಬಿ, ನಾಣ್ಯ, ಬೆಳ್ಳಿ ಅಥವಾ ಬಂಗಾರ, ಚಿಕ್ಕ ಅರಿಶಿಣ ತುಂಡು ಹಾಕಿ ನೀರು ತುಂಬಿ. ನಂತರ ಮಾವಿನ ಸೊಪ್ಪಿನಿಂದ ಅಲಂಕರಿಸಿ. ಅದರ ಮೇಲೆ ಜುಟ್ಟು ಇರುವ ತೆಂಗಿನಕಾಯಿ ಇಡಿ. ನಂತರ ಕಲಶಕ್ಕೆ ಸೀರೆ, ಆಭರಣ ಬೇರೆ ಅಲಂಕಾರ ಮಾಡಬಹುದು. ನಂತರ ಕಲಶಕ್ಕೆ ಲಕ್ಷ್ಮಿಯನ್ನು ಆಹ್ವಾನಿಸಿ.
ನಂತರ ಲಕ್ಷ್ಮಿಗೆ ಪೂಜೆಯನ್ನು ಸಲ್ಲಿಸಿದ ಬಳಿಕ ಮುತ್ತೈದೆಯರಿಗೆ ತಾಂಬುಲ ನೀಡಿ ಆಶೀರ್ವಾದ ಪಡೆಯಿರಿ.



Click it and Unblock the Notifications











