Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ವರಮಹಾಲಕ್ಷ್ಮಿ ವ್ರತ 2025: ವರಮಹಾಲಕ್ಷ್ಮಿ ಹಬ್ಬ ಯಾವಾಗ? ಮುಹೂರ್ತ..ದಿನಾಂಕ, ಇಲ್ಲಿದೆ ಸಂಪೂರ್ಣ ಮಾಹಿತಿ!
ಶ್ರಾವಣ ಮಾಸದಲ್ಲಿ ಒಂದೊಂದೇ ಹಬ್ಬಗಳು ಬರಲು ಆರಂಭವಾಗುತ್ತವೆ. ನಾಗರ ಪಂಚಮಿಯ ಬಳಿಕ ಈಗ ವರಮಹಾಲಕ್ಷ್ಮಿ ವ್ರತ ಕೂಡ ಬರುತ್ತಿದೆ. ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗಿದೆ. ಲಕ್ಷ್ಮಿಯ ಆಶೀರ್ವಾದ ಪಡೆದರೆ ನಿಮ್ಮ ಕಷ್ಟಗಳು ನಿವಾರಣೆಯಾಗುವ ಜೊತೆಗೆ ನಿಮ್ಮಲ್ಲಿ ಸಂಪತ್ತಿನ ಹರಿವು ಹೆಚ್ಚಾಗಲಿದೆ ಎಂದು ಕೂಡ ನಂಬಲಾಗಿದೆ.
ಇದೇ ಕಾರಣದಿಂದಾಗಿ ಲಕ್ಷ್ಮಿ ದೇವಿಯನ್ನು ಎಲ್ಲರು ಪೂಜಿಸುತ್ತಾಳೆ. ಲಕ್ಷ್ಮಿ ಒಲಿದರೆ ಬಾಳಿಕ ಕಷ್ಟಗಳು ದೂರಾಗುತ್ತದೆ ಎಂದು ಹೇಳಲಾಗಿದೆ. ಹಣದ ಅಧಿದೇವತೆ ಆಗಿರುವುದರಿಂದ ಈ ದಿನ ಹಣವನ್ನೇ ಲಕ್ಷ್ಮಿಯ ಸ್ವರೂಪದಲ್ಲಿ ಪೂಜಿಸುವುದು ನೋಡಬಹುದು. ಇನ್ನು ವರ ಮಹಾಲಕ್ಷ್ಮಿ ಹಬ್ಬ ಮಹಿಳಾ ಪ್ರಧಾನ ಹಬ್ಬವಾಗಿದೆ. ಮಹಿಳೆಯರು ಸಮೃದ್ಧಿ ಮತ್ತು ಸಂಪತ್ತಿನ ಪೂರೈಕೆದಾರೆಯಾದ ಲಕ್ಷ್ಮಿ ದೇವಿಯ ಪೂಜಿಸುತ್ತಾರೆ.

ಲಕ್ಷ್ಮಿಯನ್ನು ಮಹಾಲಕ್ಷ್ಮಿಯ ಅವತಾರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ವ್ರತಾಚರಣೆ ಮಾಡುವುದರಿಂದ ಆಕೆ ಸಂತೋಷಗೊಳ್ಳುತ್ತಾನೆ ಭಕ್ತರ ಮನೆಯಲ್ಲಿ ನೆಲೆಸುತ್ತಾಳೆ, ಸುಖ ಸಮೃದ್ಧಿ, ಹಣ, ಆಸ್ತಿಯ ನೀಡುತ್ತಾಳೆ ಎಂದು ಸಾಮಾನ್ಯ ನಂಬಿಕೆಯಾಗಿದೆ. ಹಾಗಾದ್ರೆ ಈ ತಿಂಗಳಲ್ಲಿ ವರಮಹಾಲಕ್ಷ್ಮಿ ಹಬ್ಬವು ಯಾವಾಗ ಆಚರಿಸಲಾಗುತ್ತದೆ? ಅದರ ನಿಯಮವೇನು ಎಂಬ ಕುರಿತಾದ ಎಲ್ಲಾ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ.
ವರಲಕ್ಷ್ಮಿ ವ್ರತವನ್ನು ಕೆಲವರು ದೀಪಾವಳಿಯ ಸಮಯದಲ್ಲಿ ಆಚರಿಸುವುದು ನೋಡಬಹುದು. ಲಕ್ಷ್ಮಿ ಪೂಜೆ ಎಂಬ ಹೆಸರಿನಿಂದಲೂ ಅವರು ಕರೆಯುತ್ತಾರೆ. ಹಾಗೆ ಈಗ ವರಮಹಾಲಕ್ಷ್ಮಿಯ ಪೂಜೆ ಮಾಡುವುದು ಕೂಡ ನೋಡಬಹುದು. ಈ ಸಮಯದಲ್ಲಿ ಲಕ್ಷ್ಮಿ ದೇವಿಯ ಆರಾಧಿಸುವುದರಿಂದ ಆಕೆ ವರವನ್ನು ನೀಡುವ ಸಂಪತ್ತು ದೇವತೆಯಾಗಿ ನೀವು ಬೇಡಿದನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ.
ಹಾಗಾದ್ರೆ 2025ರಲ್ಲಿ ವರಮಹಾಲಕ್ಷ್ಮಿ ಹಬ್ಬ ಯಾವಾಗ?
ಈ ಹಬ್ಬವನ್ನು ಹಿಂದೂ ಮಾಸವಾದ ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ಆಚರಿಸಲಾಗುತ್ತದೆ. ಅಂದರೆ ಈ ಆಗಸ್ಟ್‌ನ 8ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಕೆಲವರು ಹಿಂದಿನ ದಿನ ಗುರುವಾರದ ರಾತ್ರಿಯಿಂದಲೇ ಉಪವಾಸದ ತಯಾರಿ ಹಾಗೆ ಮಾರನೆ ದಿನದ ಹಬ್ಬಕ್ಕೆ ತಯಾರಿ ಆರಂಭಿಸುತ್ತಾರೆ.
2025ರಲ್ಲಿ ವರಮಹಾಲಕ್ಷ್ಮಿ ಹಬ್ಬದ ಮೂಹೂರ್ತಗಳ ತಿಳಿದುಕೊಳ್ಳೋಣ
- ಸಿಂಹ ಲಗ್ನ ಪೂಜೆ ಮುಹೂರ್ತ ಬೆಳಗ್ಗೆ 06:29 ರಿಂದ 08:46
- ವೃಶ್ಚಿಕ ಲಗ್ನ ಪೂಜೆ ಮುಹೂರ್ತ ಮಧ್ಯಾಹ್ನ 01:22 ರಿಂದ ಮಧ್ಯಾಹ್ನ 03:41
- ಕುಂಭ ಲಗ್ನ ಪೂಜೆ ಮುಹೂರ್ತ ಸಂಜೆ 07:27ರಿಂದ ರಾತ್ರಿ 08:54
- ವೃಷಭ ಲಗ್ನ ಪೂಜೆ ಮುಹೂರ್ತ ರಾತ್ರಿ 11:55ರಿಂದ ಬೆಳಗೆ 01:50
ಲಕ್ಷ್ಮಿ ದೇವಿಯ ಕಳಶ ಅಲಂಕಾರ ಹೇಗೆ ಮಾಡಬೇಕು?
ಹಬ್ಬದ ಹಿಂದಿನ ದಿನವೇ ನೀವು ಕಳಶಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿ ಇಟ್ಟುಕೊಳ್ಳಬಹುದು. ಹಲವರು ಬೆಳ್ಳಿಯ ಮುಖದ ಲಕ್ಷ್ಮಿಯ ಮೂರ್ತಿಯನ್ನು ಪೂಜೆ ಬಳಸುತ್ತಾರೆ. ಕಳಶದಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲು ಮೊದಲನೆಯದಾಗಿ ನಿಮ್ಮ ದೇವರ ಕೋಣೆಯಲ್ಲಿ ದೊಡ್ಡ ಜಾಗ ಇಲ್ಲದೆ ಇದ್ದಲ್ಲಿ ದೇವರ ಕೋಣೆಯ ಎದುರು ಅಥವಾ ನೀವು ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ಕೂರಿಸುವ ಜಾಗದಲ್ಲಿ ಒಂದು ಟೇಬಲ್ ಇಟ್ಟು ಅದರ ಮೇಲೆ ಸ್ಥಾಪನೆ ಮಾಡಬಹುದು.
ಈ ದಿನ ಮಹಿಳೆಯರು ಉಪವಾಸ ಆಚರಿಸುತ್ತಾರೆ ಮತ್ತು ಲಕ್ಷ್ಮಿ ದೇವಿಯ ಮೂರ್ತಿಗೆ ಪೂಜಿಸುತ್ತಾರೆ. ಹಲವರು ಮನೆಯಲ್ಲಿ ಪೂಜೆ ಸಲ್ಲಿಸಿ ದೇವಾಲಯಕ್ಕೂ ಭೇಟಿ ನೀಡುತ್ತಾರೆ. ಈ ಪೂಜೆಗಾಗಿ ಅರಿಶಿನ, ಕುಂಕುಮ, ಹೂವುಗಳು, ಹಣ್ಣುಗಳು, ನೈವೇದ್ಯ ಮತ್ತು ವಿಶೇಷವಾಗಿ ಒಂಬತ್ತು ಗಂಟುಗಳನ್ನು ಹೊಂದಿರುವ ಹಳದಿ ದಾರವನ್ನು (ತೋರಂ) ದೇವತೆಗೆ ಅರ್ಪಿಸಲಾಗುತ್ತದೆ. ನಂತರ ಮಹಿಳೆಯರು ಈ ದಾರವನ್ನು ತಮ್ಮ ಬಲಗೈಗೆ ಕಟ್ಟುತ್ತಾರೆ.



Click it and Unblock the Notifications
