Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ವರಮಹಾಲಕ್ಷ್ಮಿ ಪೂಜಾ ವಿಧಾನ ಹೇಗೆ? ಸೀರೆ ಡೆಕೋರ್ ಮಾಡೋದು ಹೇಗೆ?
ಈ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತಿದೆ. ಹಿಂದೂ ನಂಬಿಕೆಯಲ್ಲಿ ಪ್ರತೀ ಹಬ್ಬವೂ ಒಂದು ನಿರ್ಧಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಲಾಗುತ್ತದ. ಶ್ರಾವಣ ಮಾಸದಲ್ಲಿ ಮೊದಲ ಹುಣ್ಣಿಮೆಗಿಂತ ಹಿಂದಿನ ದಿನ ಶುಕ್ರವಾರ ಬಂದರೆ ಅಂದು ವರಮಹಾಲಕ್ಷ್ಮಿ ಹಬ್ಬವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್‌ನಲ್ಲಿ ಈ ಹಬ್ಬ ಬರುವುದು ನೋಡಬಹುದು.
ಸಂಪತ್ತಿನ ಅಧಿದೇವತೆಯಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅವರಲ್ಲಿ ಹಣಕಾಸು ಸಮಸ್ಯೆಗಳು ಬರುವುದಿಲ್ಲ. ಹಾಗೆ ಯಾವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೋ ಅವರಲ್ಲಿ ಎಂದಿಗೂ ಹಣಕಾಸು ಕುರಿತಾದ ಸಮಸ್ಯೆಗಳು ಬರುವುದಿಲ್ಲ ಎಂದು ನಂಬಲಾಗುತ್ತದೆ. ಹಾಗೆ ಈ ದಿನ ಲಕ್ಷ್ಮಿಯನ್ನು ಪೂಜಿಸುವುದರಿಂದ ನಿಮ್ಮಲ್ಲಿ ಹಣಕಾಸು ಸಮಸ್ಯೆಗಳು ದೂರಾಗಲಿದೆ ಹಾಗೆ ನಿಮಗೆ ಸಂಪತ್ತು ಒಲಿಯಲಿದೆ ಎಂಬ ನಂಬಿಕೆಗಳು ಕೂಡ ಇದೆ.

ಇನ್ನು ಸುಮಂಗಲಿತರು ಲಕ್ಷ್ಮಿ ಪೂಜೆಯಲ್ಲಿ ತೊಡಗುತ್ತಾರೆ. ಈ ದಿನ ಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರದ ಮೂಲಕ ಪೂಜೆ ಮಾಡುವುದು. ಆಕೆಯ ಆಶೀರ್ವಾದ ಪಡೆಯುವುದು ನೋಡಬಹುದು. ಸಮುದ್ರ ಮಂಥನದ ಸಂದರ್ಭದಲ್ಲಿ ಜನಿಸಿದ್ದ ವರಮಹಾಲಕ್ಷ್ಮಿಯು ದೇವತೆಗಳ ಅನುಗ್ರಹಿಸಿ ಭಗವಾನ್ ವಿಷ್ಣುವನ್ನು ವರಿಸುತ್ತಾಳೆ. ಹಾಗೆ ಆಕೆ ಬೇಡಿದನ್ನು ನೀಡುವ, ಸಂಪತ್ತು, ಆಸ್ತಿ, ಹಣ ನೀಡುವ ದೇವತೆ ಎಂದು ಪರಿಗಣಿಸಲಾಗಿದೆ.
ಹಾಗಾದ್ರೆ ಮನೆಯಲ್ಲಿಯೇ ನಾವು ಈ ವರಮಾಕ್ಷ್ಮಿ ಪೂಜೆ ಮಾಡುವುದು ಹೇಗೆ?
ಹಬ್ಬದ ದಿನದಿಂದು ಮಹಿಳೆಯರು ಬೇಗನೆ ಎದ್ದು ಸ್ನಾನ ಮುಗಿಸಿ, ಉಪವಾಸ ವ್ರತ ಆರಂಭಿಸಬೇಕು. ಮೊದಲು ಕಲಶದಲ್ಲಿ ನೀರು ತುಂಬಿ ಅದನ್ನು ಅಕ್ಕಿಯನ್ನು ತುಬಿಸಿರುವ ತಟ್ಟಯಲ್ಲಿ ಇಡಬೇಕು. ಹಾಗೆ ಮಾವಿನ ಎಲೆ ಅಥವಾ ವೀಳ್ಯದೆಲೆಯನ್ನು ಕಲಶ ಸುತ್ತ ಜೋಡಿಸಬೇಕು. ಹಾಗೆ ಕಲಶದೊಂದಿಗೆ ಇಡುವಂತಹ ತೆಂಗಿನಕಾಯಿ, ಹಣ್ಣುಗಳು, ಅಡಕೆ, ಹೂವುಗಳು, ಹಸಿ ಬಣ್ಣದ ಬಟ್ಟೆ, ಬಳೆ, ಅರಶಿನ, ಕುಂಕುಮ ಸೇರಿದಂತೆ ಪೂಜಾ ಸಾಮಗ್ರಿಗಳ ಇಟ್ಟುಕೊಳ್ಳಿ.
ಲಕಷ್ಮಿ ದೇವಿಯ ಮೂರ್ತಿಗೆ ಅಲಂಕಾರ ಮಾಡುವುದು, ಆಭರಣ ಹಾಕುವುದು, ಹೂವು ಹೀಗೆ ಎಲ್ಲಾ ಹಂತವನ್ನು ಸರಿಯಾಗಿ ಮಾಡಬೇಕು. ಹಾಗೆ ಕೈಗೆ ಅರಶಿಣ ದಾರದ ಕಂಕಣ ಕಟ್ಟಿಕೊಳ್ಳಬೇಕು. ಕಲಶಕ್ಕೆ ನೆರಿಗೆ ಬರುವಂತೆ ಸೀರೆ ಉಡಿಸಿಕೊಳ್ಳುವುದು. ಮಾಂಗಲ್ಯ ಸೇರಿದಂತೆ ಆಭರಣಗಳು ಬಳೆಗಳಿಂದ ಸುಂದರವಾಗಿ ಅಲಂಕರಿಸಿಕೊಳ್ಳುವುದು.
ಕಲಶದ ಬಳಿ ದೀಪ ಹಚ್ಚಿ, ಅಕ್ಷತೆಯನ್ನು ದೇವಿಗೆ ಹಾಕಿ. ಹಣ್ಣು, ಹೂವು, ಸಿಹಿತಿಂಡಿಗಳನ್ನು ದೇವಿಗೆ ನೈವೇದ್ಯವಾಗಿಟ್ಟು ಆರತಿ ಬೆಳಗುವುದು. ಹಾಗೆ ಪ್ರಸಾದ ಹಂಚುವುದು. ಬಳಿಕ ಮಾರನೆ ದಿನ ಈ ಕಲಶವನ್ನು ತೆಗೆಯುವುದು ಬಹಳ ಸೂಕ್ತ.
ಹಾಗೆ ಲಕ್ಷ್ಮಿ ದೇವಿಗೆ ಕಡಲೆ ಬೇಳೆಯ ಪಾಯಸ ಇಲ್ಲವೆ ಯಾವುದಾದರು ಬಗೆಯ ಹೋಳಿಗೆಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಹಾಗೆ ಪೂಜೆ ಸಮಯದಲ್ಲಿ ಓಂ ಹೀಂ ಶ್ರೀ ಲಕ್ಷ್ಮೀಭ್ಯೋ ನಮಃ ಈ ಮಂತ್ರವನ್ನು 21 ಬಾರಿ ಪಠಿಸುವ ಮೂಲಕ ದೇವಿಗೆ ಪೂಜೆ ಸಲ್ಲಿಸಿ. ಪೂಜೆ ಸಂಪೂರ್ಣಗೊಂಡ ಬಳಿಕ ಮನೆಗೆ ಮುತೈದೆಯರನ್ನು ಕರೆದು ಅವರಿಗೆ ಅರಶಿಣ ಕುಂಕುಮ ನೀಡುವುದು ಹಬ್ಬದ ಮತ್ತೊಂದು ಸಂಪ್ರದಾಯವಾಗಿದೆ.
ಕಲಶದೊಂದಿಗೆ ಸೀರೆ ಉಡಿಸಲು ಬೇಕಾಗುವ ಸಾಮಗ್ರಿಗಳು
ಸೀರೆ
ಬ್ಲೌಸ್ ಪೀಸ್
ಬಿಂದಿಗೆ (ಕಂಚಿನದ್ದಾದರೆ ಒಳ್ಳೆಯದು)
ಚಿಕ್ಕ ಬಿಂದಿಗೆ
ಸೆಫ್ಟಿಪಿನ್
ಅಕ್ಕಿ
ನೀರು
ಆಭರಣಗಳು (ಅಗತ್ಯವಿದ್ದರೆ)
ರೆಡಿ ಮೇಡ್ ಪಾದ ಮತ್ತು ಕೈ(ಅಗತ್ಯವಿದ್ದರೆ)
ತೆಂಗಿನ ಕಾಯಿಯಲ್ಲಿ ಬರೆದ ದೇವಿಯ ಮುಖ
ಹೂವು, ಮಾಲೆ
ಶರ್ಟ್ ಹ್ಯಾಂಗರ್
ಬಾಲ್ ಪಿನ್ಸ್
ದಾರ
ಫ್ಲೆಕ್ಸಿ ವೈಯರ್
ನ್ಯೂಸ್ ಪೇಪರ್
ಕತ್ತರಿ
ಸೆಲ್ಲೋ ಟೇಪ್



Click it and Unblock the Notifications