Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ವರಲಕ್ಷ್ಮಿ ವ್ರತ 2023: ಹಬ್ಬಕ್ಕೆ ಸಿದ್ಧತೆಯಲ್ಲಿ ಇರಲಿ ಈ ಪ್ರಮುಖ ಸಾಮಗ್ರಿಗಳು
ವರಲಕ್ಷ್ಮಿ ವ್ರತವನ್ನು ಆಗಸ್ಟ್ 25ಕ್ಕೆ ಮಾಡಲಾಗುವುದು, ಈಗಾಗಲೇ ಹಬ್ಬದ ಶಾಪಿಂಗ್ ಶುರುವಾಗಿರುತ್ತದೆ, ಹಬ್ಬದ ಮಾರನೇಯ ದಿನ ಖರೀದಿಸೋಣ ಎಂದರೆ ಮಾರ್ಕೆಟ್ ಸಿಕ್ಕಾಪಟ್ಟೆ ರಶ್ ಇರುತ್ತೆ, ಹೂ, ತೋರಣ ಕಟ್ಟಲು ಎಲೆಗಳು ಇಂಥವುಗಳನ್ನು ಹೊರತು ಪಡಿಸಿ ಉಳಿದ ಸಾಮಗ್ರಿ ಮೊದಲೇ ಸಿದ್ಧಪಡಿಸಿದರೆ ಆ ದಿನ ಪೂಜಾ ಕಾರ್ಯದ ಕಡೆ ಗಮನಹರಿಸಬಹುದು.
ವರಲಕ್ಷ್ಮಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳೇನು? ಯಾವೆಲ್ಲಾ ಸಾಮಗ್ರಿಗಳು ಕಡ್ಡಾಯವಾಗಿ ಇರಲೇಬೇಕು ಎಂದು ನೋಡೋಣ ಬನ್ನಿ:

* ಕುಂಕುಮ
* ಅರಿಶಿಣ
* ಶ್ರೀಗಂಧದ ಪೇಸ್ಟ್
* ಕನ್ನಡಿ
* ಬಾಚಣಿಕೆ
* ವಿಭೂತಿ
* ಲಕ್ಷ್ಮಿಯ ಮುಖವಾಡ
* ಆಭರಣಗಳು
* ಲಕ್ಷ್ಮಿಗೆ ಸೀರೆ
* ಅಗರ ಬತ್ತಿ
* ಕೆಂಪು, ಹಾಗೂ ಅರಿಶಿಣ ಬಣ್ಣದ ದಾರ
* ಕರ್ಪೂರ
* ಘಂಟೆ
* ಪ್ರಸಾದಕ್ಕೆ ಬೇಕಾಗುವ ಸಾಮಗ್ರಿ
* ದೀಪ (ಮನೆಯಲ್ಲಿರುವ ಬೆಳ್ಳಿ ಅಥವಾ ಕಂಚಿನ ದೀಪವನ್ನು ತೊಳೆದಿಡಿ)
ಮಾರನೇಯ ದಿನವೇ ಈ ಸಾಮಗ್ರಿ ಜೋಡಿಸಿ
*ಹೂಗಳು
* ಬಾಳೆಹಣ್ಣು
* ಹಣ್ಣುಗಳು
* ಮಾವಿನ ಎಲೆ
ಪೂಜಾ ದಿನ ಹಾಲು, ಮೊಸರು ಖರೀದಿಸಿ.
ವರಲಕ್ಷ್ಮಿ ಪ್ರತಿಷ್ಠಾಪನೆ ಮಾಡಲು ಈ ಸಾಮಗ್ರಿ ಬೇಕೇಬೇಕು
ಕಲಶ
ನೀವು ಬೆಳ್ಳಿ, ತಾಮ್ರ, ಹಿತ್ತಾಳೆಯ ಚೊಂಬನ್ನು ಕಳಸವಾಗಿ ಬಳಸಬಹುದು. ಪೂಜೆ ಈ ಮೂರು ಲೋಹಗಳು ಶ್ರೇಷ್ಠ, ಆದ್ದರಿಂದ ಇವುಗಳನ್ನೇ ಬಳಸಿ.
ಪಂಚಪಾತ್ರೆ
ಪೂಜಾ ಕಾರ್ಯದಲ್ಲಿ ಈ ಪಾತ್ರೆಯನ್ನು ಬಳಸಲಾಗುವುದು. ಈ ಪಂಚಪಾತ್ರೆಯಲ್ಲಿ ಹೂ, ಶ್ರೀಗಂಧ ಅಕ್ಷತೆ, ಅರಿಶಿಣ , ಕುಂಕುಮ ಹಾಕಿ,ಆ ಪಾತ್ರೆಯಲ್ಲಿರುವ ನೀರನ್ನು ಚಿಮುಕಿಸಿ ಪೂಜಾ ಸ್ಥಳವನ್ನು ಶುದ್ಧೀಕರಿಸುತ್ತಾರೆ.
ಹರಿವಾಣ
ನೀವು ಹೂ ಹಣ್ಣುಗಳನ್ನು ತಟ್ಟೆಯಲ್ಲಿ ಇಡಬಹುದು ಅಥವಾ ಹರಿವಾಣ ತಟ್ಟೆ ಎಂದು ಸಿಗುತ್ತದೆ, ಅದನ್ನು ಖರೀದಿಸಿ ಬಳಸಬಹುದು, ಇದನ್ನು ಬೇಕಾದರೆ ಸ್ಟೀಲ್ ಪ್ಲೇಟ್‌ಗಳನ್ನು ಬಳಸಬಹುದು.
ಆರತಿ ತಟ್ಟೆ
ನೀವು ಪೂಜಾ ಕಾರ್ಯಗಳಲ್ಲಿ ಆರತಿ ತಟ್ಟೆಯನ್ನು ಬಳಸಲಾಗುವುದು, ಸಾಮಾನ್ಯವಾಗಿ ಆರತಿ ತಟ್ಟೆ ಎಲ್ಲಾ ಮನೆಗಳಲ್ಲಿ ಇರುತ್ತದೆ, ಇಲ್ಲಾ ಅಂದ್ರೆ ಒಂದು ಖರೀದಿಸಿ.
ಘಂಟೆ: ಪೂಜೆಯಲ್ಲಿ ಘಂಟೆಯ ಶಬ್ದ ತುಂಬಾ ದೈವಿಕ ಅನುಭವವನ್ನು ನೀಡುತ್ತದೆ. ಪೂಜೆಯಲ್ಲಿ ಚಿಕ್ಕ ಗಂಟೆಯನ್ನು ಬಳಸಿ.
ಅರಿಶಿಣ-ಕುಂಕುಮದ ಬಟ್ಟಲು
ಮನೆಗೆ ಬಂದವರಿಗೆ ಅರಿಶಿಣ ಕುಂಕುಮ ನೀಡಲು ಅರಿಶಿಣ ಕುಂಕುಮದ ಬಟ್ಟಲುಗಳು ಬೇಕು.
ಬಹುತೇಕ ಸಾಮಗ್ರಿ ಹಿಂದೂಗಳ ಪೂಜಾ ಕೋಣೆಯಲ್ಲಿ ಇರುತ್ತದೆ, ಇಲ್ಲದಿರುವ ವಸ್ತುಗಳನ್ನು ಖರೀದಿಸಿ.
ಲಕ್ಷ್ಮಿಯ ಅಲಂಕಾರ
* ಲಕ್ಷ್ಮಿಯ ಮೂರ್ತಿ ಅಥವಾ ಮುಖವಾಡವನ್ನು ಬಳಸಬಹುದು
* ಲಕ್ಷ್ಮಿಗೆ ರೇಷ್ಮೆ ಸೀರೆಯನ್ನೇ ಖರೀದಿಸಿ
* ಚಿನ್ನದ ಆಭರಣಗಳನ್ನು ಲಕ್ಷ್ಮಿಗೆ ತೊಡಿಸಿ
* ಹಸಿರು-ಕೆಂಪು ಗಾಜಿನ ಬಳೆಗಳಿರಲಿ
* ಹೂ, ಹೂವಿನ ಮಾಲೆ ಇವುಗಳನ್ನು ಖರೀದಿಸಿ, ಲೈಟಿಂಗ್ಸ್, ಅಲಂಕಾರಿಕ ವಸ್ತುಗಳನ್ನು ಬಳಸಬಹುದು.
ನೈವೇದ್ಯಕ್ಕೆ ಬೇಕಾಗುವ ಸಾಮಗ್ರಿ' ನೀವು ಲಕ್ಷ್ಮಿ ಪಾಯಸ, ಹೋಳಿಗೆ, ಸಜ್ಜಿಗೆ ಇವುಗಳನ್ನು ನೈವೇದ್ಯವನ್ನಾಗಿ ಇಡಬಹುದು, ಆದ್ದರಿಂದ ಇವುಗಳ ತಯಾರಿಗೆ ಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸಿ.
ಪೂಜಾ ಸಾಮಗ್ರಿ ಸ್ವಚ್ಛಗೊಳಿಸಲು ಟಿಪ್ಸ್
* ಹಿತ್ತಾಳೆ ಅಥವಾ ತಾಮ್ರದ ಪೂಜಾ ಪಾತ್ರೆಗಳನ್ನು ಹುಣಸೆಹಣ್ಣಿಗೆ ಸ್ವಲ್ಪ ಉಪ್ಪು ಹಾಕಿ ತಿಕ್ಕಿ ತೊಳಿಯಿರಿ, ಫಳ-ಫಳ ಹೊಳೆಯುವುದು
* ಬೆಳ್ಳಿ ಪಾತ್ರೆಗಳನ್ನು ಅಂಟ್ವಾಳ ಕಾಯಿ ಅಥವಾ ಟೀ ಪುಡಿಯನ್ನು ಹಾಕಿ ತಿಕ್ಕಿದರೆ ಹೊಳಪು ಬರುತ್ತದೆ.



Click it and Unblock the Notifications