Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ದೇಶದ ಮೊಟ್ಟ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ; ಈ ರೈಲಿನ ವಿಶೇಷ ಏನು ಗೊತ್ತಾ?
ವಂದೇ ಭಾರತ್ ರೈಲು ಭಾರತದ ಪ್ರೀಮಿಯಂ ರೈಲುಗಳ ಸಾಲಿನಲ್ಲಿ ಮೊದಲ ಸಾಲಿನಲ್ಲಿದೆ. ರೈಲ್ವೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಈ ಹೈ ಸ್ಪೀಡ್ ರೈಲುಗಳನ್ನು ಪರಿಚಯಿಸಲಾಗಿತ್ತು. ಈ ಯಶಸ್ಸಿನ ಬಳಿಕ ಈಗ ವಂದೇ ಭಾರತ್ ಸ್ಲೀಪರ್ ರೈಲನ್ನು ಉದ್ಘಾಟಿಸಲಾಗಿದೆ. ದೇಶದ ಬಹುನಿರೀಕ್ಷಿತ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಮಾಲ್ಡಾ ಟೌನ್‌ನಲ್ಲಿ ಹಸಿರು ನಿಶಾನೆ ತೋರಿದ್ದಾರೆ. ಈ ಮೂಲಕ ಮೊದಲ ವಂದೇ ಭಾರತ್ ರೈಲು ಕಾರ್ಯಾರಂಭ ಮಾಡಿದೆ.
ಈ ರೈಲು ಹೌರಾ ಮತ್ತು ಅಸ್ಸಾಂನ ಗುವಾಹಟಿ ನಡುವೆ ಹೊಸ ಸಂಚಾರ ಆರಂಭಿಸಿದೆ. ಪ್ರಯಾಣಿಕರಿಗೆ ವಿಮಾನದ ಮಾದರಿಯ ಪ್ರೀಮಿಯಂ ಹಾಗೂ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸಲಿದೆ. ವಂದೇ ಭಾರತ್ ಸ್ಲೀಪರ್ ರೈಲು ದೂರದ ರೈಲು ಪ್ರಯಾಣಕ್ಕೆ ಮತ್ತು ಗುಣಮಟ್ಟದ ಸೇವೆ ನೀಡುವುದೇ ಇದ ಉದ್ದೇಶವಾಗಿದೆ.

ಹೌರಾ ಮತ್ತು ಕಾಮಾಖ್ಯ ನಡುವಿನ ಸರಿಸುಮಾರು 966 ಕಿಲೋಮೀಟರ್ ದೂರವನ್ನು ಕ್ರಮಿಸಲು ಪ್ರಸ್ತುತ ಇರುವ ಸರಾಯ್ ಘಾಟ್ ಎಕ್ಸ್‌ಪ್ರೆಸ್ ಸುಮಾರು 17 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದ್ರೆ ಇಂದು ಆರಂಭಗೊಂಡ ಈ ವಂದೇ ಭಾರತ್ ರೈಲು ಕೇವಲ 13ರಿಂದ 14 ಗಂಟೆಗಳ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
ವಂದೇ ಭಾರತ್ ಸ್ಲೀಪರ್ 180 ಕಿ.ಮೀ/ಗಂ ವಿನ್ಯಾಸ ವೇಗ ಹೊಂದಿದೆ. ಇದರಲ್ಲಿ ಹನ್ನೊಂದು 3-ಟೈರ್, ನಾಲ್ಕು 2-ಟೈರ್ ಮತ್ತು ಒಂದು ಎಸಿ ಬೋಗಿ ಸೇರಿದಂತೆ ಒಟ್ಟು 16 ಬೋಗಿಗಳಿವೆ. ವಾರದಲ್ಲಿ 6 ದಿನಗಳ ಕಾಲ ಈ ರೈಲು ಕಾರ್ಯನಿರ್ವಹಿಸಲಿದೆ. ಈ ರೈಲು ಕೇವಲ ವೇಗಕ್ಕೆ ಮಾತ್ರವಲ್ಲದೆ, ಐಷಾರಾಮಿ ಸೌಕರ್ಯಗಳಿಗೂ ಹೆಸರುವಾಸಿಯಾಗಿದೆ. ಈ ರೈಲು ಪ್ರತಿ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಹಾಗೆ ಇದರಲ್ಲಿ ದೇಶೀಯ ನಿರ್ಮಿತ ಸ್ವದೇಶ್ ಕವಚ್ ರಕ್ಷಣಾ ವಿಧಾನವನ್ನು ಸಹ ಅಳವಡಿಸಲಾಗಿದೆ. ಇದರಿಂದ ರೈಲಿನ ಸುರಕ್ಷತೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗಿದೆ.
ಈ ರೈಲಿನ ವಿಶೇಷತೆಗಳೇನು?
ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ 823 ಪ್ರಯಾಣಿಕರ ಆಸನ ಮತ್ತು ಸ್ಲೀಪರ್ ಸಾಮರ್ಥ್ಯ ಹೊಂದಿದೆ. ಪ್ರತಿ ಸೀಟಿಗೆ ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲ್ಯಾಂಪ್ ಮತ್ತು ಫೋಲ್ಡಬಲ್ ಸ್ನ್ಯಾಕ್ ಟೇಬಲ್‌ಗಳಿವೆ. ಹಾಗೆ ಹೈಟೆಕ್ ಶೌಚಾಲಯ ವ್ಯವಸ್ಥೆ ಸಹ ನೋಡಬಹುದು. ಅದ್ರಲ್ಲೂ ವಿಮಾನ ಮಾದರಿಯ ಬಯೋ ವ್ಯಾಕ್ಯೂಮ್ ವ್ಯವಸ್ಥೆ ಇದೆ. ಇದು ರೈಲು ನಿಲ್ದಾಣದಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ಹಾಗೆ ಎಸಿ ಕೋಚ್‌ಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಕೂಡ ಇರಲಿದೆ.
ಬೆಸ್ಟ್ ಫುಡ್ ಸಿಗೋದು ಇಲ್ಲೆ
ಭಾರತದ ಹಲವು ರೈಲುಗಳಲ್ಲಿ ಊಟ, ಉಪಹಾರದ ವ್ಯವಸ್ಥೆ ಇದೆ. ಹಾಗೆ ಈ ವಂದೇ ಭಾರತ್‌ನ ಸ್ಲೀಪರ್ ಕೋಚ್ ರೈಲಿನಲ್ಲಿ ಊಟ ಉಪಹಾರ ಬಹಳ ವಿಶೇಷವಾಗಿರಲಿದೆ. ಪ್ರಯಾಣಿಕರಿಗೆ ಆಯಾ ಭಾಗದ ಸಂಸ್ಕೃತಿಗೆ ಹಾಗೆ ಆಚರಣೆಗೆ ಅನುಗುಣವಾಗಿ ಫುಡ್ ಸಹ ಸಿಗಲಿದೆ. ಗುವಾಹಟಿಯಿಂದ ಹೊರಡುವ ರೈಲಿನಲ್ಲಿ ಅಸ್ಸಾಮಿ ಖಾದ್ಯ ಹಾಗೂ ಹೌರಾದಿಂದ ಹೊರಡುವ ರೈಲಿನಲ್ಲಿ ಬಂಗಾಳಿ ಶೈಲಿಯ ರುಚಿಕರ ಆಹಾರ ಲಭ್ಯವಿರುತ್ತದೆ.
ವಂದೇ ಭಾರತ್ ಸ್ಲೀಪರ್ ರೈಲಿನ ಟಿಕೆಟ್ ದರ ಎಷ್ಟಿದೆ?
ಭಾರತೀಯ ರೈಲ್ವೆ ಸೂಚಿಸಿದ ದರಗಳಂತೆ, 400 ಕಿ.ಮೀ.ವರೆಗಿನ ಎಸಿ 3-ಟೈರ್ ಟಿಕೆಟ್‌ಗಳು ₹960 ರೂ.ನಿಂದ ಆರಂಭವಾಗುತ್ತವೆ. ಹೌರಾ - ಗುವಾಹಟಿ ಎಸಿ-3 ಟೈರ್- 2,299 ರೂಪಾಯಿಯಿಂದ ಆರಂಭಗೊಳ್ಳಲಿದೆ. ಹಾಗೆ ಎಸಿ2 ಟೈರ್- 2,970, ಫಸ್ಟ್ ಎಸಿ- 3,640 ರೂಪಾಯಿ ಆಗಿದೆ. ಹಾಗೆ ಹೌರಾದಿಂದ ನ್ಯೂಜಲ್ಪೈಗುರಿ ಮಾರ್ಗದಲ್ಲಿ ಎಸಿ-3 ಟೈರ್- 1,334, ಎಸಿ 2 ಟೈರ್- 1,724, ಫಸ್ಟ್ ಎಸಿ-2,113 ರೂ. ನಿಗಧಿ ಮಾಡಲಾಗಿದೆ.



Click it and Unblock the Notifications
