Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೇಮಿಗಳ ದಿನ ಆಚರಿಸೋದು ಇಲ್ಲಿ ನಿಷೇಧ: ನಮ್ಮ ನಂದಿ ಬೆಟ್ಟವೂ ಈ ಪಟ್ಟಿಯಲ್ಲಿದೆ!
ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಪ್ರತಿ ವರ್ಷದ ಪ್ರೇಮಿಗಳ ದಿನಕ್ಕಾಗಿ ಕಾಯುವ ಜೋಡಿ ನೋಡಬಹುದು. ಪ್ರೇಮಿಗಳು ಈ ದಿನ ಪರಸ್ಪರ ಗಿಫ್ಟ್ ನೀಡುವುದು, ಪ್ರವಾಸಕ್ಕೆ ತೆರಳುವುದು ಸೇರಿ ಈ ದಿನವನ್ನ ವಿಶೇಷ ರೀತಿಯಲ್ಲಿ ಆಚರಿಸುವುದು ನೋಡಬಹುದು. ಹಾಗೆ ಪ್ರೇಮಿಗಳ ದಿನಕ್ಕೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಸಹ ನೋಡಬಹುದು.
ಹಾಗೆ ಈ ಪ್ರೇಮಿಗಳ ದಿನವನ್ನು ಹಲವು ದೇಶಗಳು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತವೆ. ಹಾಗೆ ಮತ್ತೆ ಕೆಲವು ದೇಶಗಳಲ್ಲಿ ವ್ಯಾಲೆನ್‌ಟೈನ್ ಡೇ ನಿಷೇಧವಾಗಿದೆ ಎಂಬುದು ನಿಮಗೆ ಗೊತ್ತಾ? ಹೌದು ಹಲವು ದೇಶದಲ್ಲಿ ಪ್ರೇಮಿಗಳ ದಿನ ಆಚರಣೆಗೆ ನಿಷೇಧವಿದೆ, ಜೊತೆಗೆ ಹಲವು ರೀತಿ ಕಠಿಣ ನಿಮಯಗಳಿವೆ. ಭಾರತದಲ್ಲೂ ಒಂದು ಸ್ಥಳಕ್ಕೆ ಪ್ರೇಮಿಗಳಿಗೆ ನಿಷೇಧವಿದೆ ಎಂಬುದು ನಿಮಗೆ ಗೊತ್ತಾ?

ಯೂರೋಪ್‌ನ ಈ ಪ್ರೇಮಿಗಳ ದಿನ ಆಚರಣೆಯು ವಿಶ್ವದ ಬಹುತೇಕ ಭಾಗಕ್ಕೆ ಪಸರಿಸಿದೆ. ಆದ್ರೆ ಹಲವು ದೇಶದಲ್ಲಿ ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿಯಂತೆ ಬಿಂಬಿಸಲಾಗಿದೆ. ಹಾಗೆ ಹಲವು ಕಡೆಗಳಲ್ಲಿ ಈ ಆಚರಣೆ ನಿಷೇಧಕ್ಕೂ ಒಳಗಾಗಿರುವುದು ನೋಡಬಹುದು. ಹಾಗಾದ್ರೆ ಯಾವೆಲ್ಲಾ ದೇಶದಲ್ಲಿ ಪ್ರೇಮಿಗಳ ದಿನ ಆಚರಣೆ ಬ್ಯಾನ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮಲೇಷ್ಯಾ
ಮಲೇಷ್ಯಾ ಮುಸ್ಲಿಂ ಬಹುಸಂಖ್ಯಾತ ದೇಶವಾಗಿದ್ದು ಅಲ್ಲಿ ಪ್ರೇಮಿಗಳ ದಿನ ಆಚರಿಸುವುದು ಇಸ್ಲಾಮಿಕ್ ಕಾನೂನಿಗೆ ವಿರುದ್ಧ ಎಂದು ಪರಿಗಣಿಸಲಾಗಿದೆ. 2005ರಲ್ಲಿ ಈ ದಿನ ಆಚರಿಸುವುದನ್ನು ನಿಷೇಧಿಸಿ ಫತ್ವಾ ಹೊರಡಿಸಲಾಗಿದೆ.
ಇಂಡೋನೇಷ್ಯಾ
ಇಂಡೋನೇಷ್ಯಾದಲ್ಲಿ ಪ್ರೇಮಿಗಳ ದಿನವು ಪ್ರಸಿದ್ಧಿ ಪಡೆದಿಲ್ಲ. ಹಲವು ಧರ್ಮಗುರುಗಳು, ಇಸ್ಲಾಮಿಕ್ ಕಾನೂನಿನಲ್ಲಿ ಇದನ್ನು ನಿಷೇಧಿಸಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ, ದೇಶದ ಕೆಲವೇ ಭಾಗದಲ್ಲಿ ಈಗ ಆಚರಣೆಯಲ್ಲಿದೆ.
ಇರಾನ್
ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಉಲ್ಲೇಖಿಸಿ ಇರಾನ್ ಕೂಡ ಪ್ರೇಮಿಗಳ ದಿನವನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ. ರಂಜಾನ್ ಅನ್ನು ಸಹ ಇರಾನ್ ನಿಷೇಧಿಸಿದೆ, ಆದ್ರೆ ಕೆಲವು ಭಾಗದಲ್ಲಿ ಆಚರಣೆಗಳನ್ನು ನೋಡಬಹುದು, ಅದು ಕೇವಲ ಖಾಸಗಿ ಸ್ಥಳದಲ್ಲಿ ಮಾತ್ರ ಆಚರಣೆ ನೋಡಬಹುದು.
ಪಾಕಿಸ್ತಾನ
ಪಾಕಿಸ್ತಾನದಲ್ಲಿ ಪ್ರೇಮಿಗಳ ದಿನದ ವಿರುದ್ಧ ಹಲವಾರು ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿದ್ದವು. 2018ರಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಪ್ರೇಮಿಗಳ ದಿನವನ್ನು ನಿಷೇಧಿಸಿದೆ.
ಸೌದಿ ಅರೇಬಿಯಾ
ಸೌದಿ ಅರೇಬಿಯಾದಲ್ಲಿ ಸಾರ್ವಜನಿಕವಾಗಿ ಪ್ರೇಮಿಗಳ ದಿನ ಆಚರಿಸುವುದು ನಿಷೇಧವಾಗಿದೆ. ಆದ್ರೆ ನೀವು ಖಾಸಗಿಯಾಗಿ ಆಚರಿಸಬಹುದು. ಸೌದಿ ಅರೇಬಿಯಾದಲ್ಲಿ 2014 ರಲ್ಲಿ ಪ್ರೇಮಿಗಳ ದಿನದಂದು ಮಹಿಳೆಯರೊಂದಿಗೆ ನೃತ್ಯ ಮಾಡಿದ್ದಕ್ಕಾಗಿ ಐದು ಸೌದಿ ನಾಗರಿಕರಿಗೆ 39 ವರ್ಷಗಳ ಜೈಲು ಶಿಕ್ಷೆ ಮತ್ತು 4,500 ಛಡಿಯೇಟು ಶಿಕ್ಷೆ ವಿಧಿಸಲಾಯಿತು.
ಬೆಂಗಳೂರಿಗೂ ಇದೇ ನಿಷೇಧದ ಬಿಸಿ
ವಿಶ್ವದ ಈ ಭಾಗದಲ್ಲಿ ಪ್ರೇಮಿಗಳ ದಿನ ಆಚರಣೆಗಳು ನಿಷೇಧವಾಗಿದೆ. ಆದ್ರೆ ನಂದಿಬೆಟ್ಟದಲ್ಲೂ ಕೂಡ ಪ್ರೇಮಿಗಳಿಗೆ ನಿರ್ಬಂಧ ಇರೋದು ನಿಮಗೆ ಗೊತ್ತಾ? ಹೌದು ಪ್ರತಿ ವರ್ಷ ಪ್ರೇಮಿಗಳ ದಿನ ಹಾಗೆ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಪ್ರಸಿದ್ಧ ನಂದಿ ಬೆಟ್ಟಕ್ಕೆ ನಿಷೇಧವಿರಲಿದೆ. ಸಾರ್ವಜನಿಕರು ನಂದಿ ಬೆಟ್ಟ ಪ್ರವೇಶವನ್ನು ನಿಷೇಧಿಸಲಾಗಿರುತ್ತದೆ.
ಚಿಕ್ಕಬಳ್ಳಾಪುರಕ್ಕೆ ಹೊಂದಿಕೊಂಡಿರುವ ನಂದಿ ಬೆಟ್ಟದಲ್ಲಿ ಪ್ರೇಮಿಗಳ ದಿನದಂದು ನಿಷೇಧ ಇರಲಿದೆ. ಜನಸಂದಣಿ ನಿರ್ವಹಣೆ ಮತ್ತು ಸಾರ್ವಜನಿಕ ಸುರಕ್ಷತಾ ಕಾಳಜಿಗಳನ್ನು ಉಲ್ಲೇಖಿಸಿ ಉಪ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಫೆಬ್ರವರಿ 14 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಯಾವುದೇ ಸಾರ್ವಜನಿಕರು, ಖಾಸಗಿ ವಾಹನಗಳು ನಂದಿ ಬೆಟ್ಟ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಹೆಚ್ಚಿನ ಸಾರ್ವಜನಿಕರು ಸೇರುವುದು ಅಲ್ಲಿನ ಪರಿಸರ ಹಾಗೂ ಪ್ರಾಣಿ ಸಂಕುಲಕ್ಕೆ ಹಾನಿ ಉಂಟು ಮಾಡಬಹುದು ಎಂದು ವಿವರಿಸಲಾಗಿದೆ.



Click it and Unblock the Notifications