Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
Valentines Day 2025: ಅಪ್ಪಿತಪ್ಪಿಯೂ ಪ್ರೇಮಿಗಳ ದಿನಕ್ಕೆ ಈ ಗಿಫ್ಟ್ ಕೊಡಬೇಡಿ..!
ಪ್ರೇಮಿಗಳಿಗೆಂದೇ ಇರುವ ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಪ್ರೀತಿಸುವವರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವ ದಿನ. ಫೆಬ್ರವರಿ 14ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತಾರೆ. ಈ ದಿನ ಪ್ರೇಮಿಗಳು ಎಷ್ಟೋ ಸಮಯದಿಂದ ಹೇಳದೆ ಮನಸ್ಸಿನಲ್ಲಿಯೇ ಇಟ್ಟ ಪ್ರೇಮವನ್ನು ವ್ಯಕ್ತಪಡಿಸುವ ದಿನವಾಗಿರುತ್ತೆ.
ಪ್ರೇಮವೆಂದರೆ ಕೇವಲ ಯುವಕ ಯುವತಿ ನಡುವಿನ ಬಾಂಧವ್ಯ ಮಾತ್ರವಲ್ಲ ವಿವಾಹವಾಗಿರುವವರಿಗೂ ಇದು ಅತ್ಯಂತ ಮುಖ್ಯ ದಿನವೇ, ಮದುವೆಯ ಬಳಿಕವೂ ಪ್ರೀತಿ ಅನ್ನೋದು ಹಾಗೆಯೇ ಇರುತ್ತದೆ. ಯಾರ ದಾಂಪತ್ಯವು ಪ್ರೀತಿಯಲ್ಲಿ ತುಂಬಿರುತ್ತದೆಯೋ ಆ ದಾಂಪತ್ಯ ಕೊನೆಯವರೆಗೂ ಹಸಿರಾಗಿ, ಯಾವಾಗಲು ಸಂತೋಷದಿಂದ ಕೂಡಿರುತ್ತೆ.

ಹೀಗಾಗಿ ಈ ಪ್ರೇಮಿಗಳ ದಿನಕ್ಕೆ ಪ್ರೇಮಿಗಳು ಮಾತ್ರವಲ್ಲ ಪ್ರೀತಿಯಲ್ಲಿ ನಂಬಿಕೆ ಇಟ್ಟವರು, ಸಂಬಂಧಗಳಲ್ಲಿ ಪ್ರೀತಿಯ ಹುಡುಕುವವರು ಕೂಡ ಆಚರಿಸಬಹುದು. ಹೀಗಾಗಿ ಈ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಅವರಿಗೆ ಇಷ್ಟವಾದ ಗಿಫ್ಟ್‌ಗಳ ನೀಡಿ ಅವರ ಮನಗೆಲ್ಲಲು ಮುಂದಾಗುತ್ತಾರೆ. ಆದ್ರೆ ಕೆಲವೊಂದು ಉಡುಗೊರೆಗಳು ನಿಮ್ಮ ಸಂಬಂಧವನ್ನೇ ಹಾಳು ಮಾಡಬಹುದು ಎಂಬುದು ನಿಮಗೆ ಗೊತ್ತಾ?
ಹೌದು ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಕೆಲವೊಂದು ಉಡುಗೊರೆಯನ್ನು ನೀಡಬಾರದಂತೆ. ಕೆಲವೊಂದು ಉಡುಗೊರೆಗಳು ನಿಮ್ಮ ಸಂಬಂಧದಲ್ಲಿ ಬಿರುಕು ತರಬಹುದು ಎಂದು ಹೇಳಲಾಗಿದೆ. ಆಗಾದ್ರೆ ಯಾವೆಲ್ಲಾ ಉಡುಗೊರೆಗಳನ್ನು ನಾವು ಪ್ರೀತಿ ಪಾತ್ರರಿಗೆ ನೀಡಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪರ್ಪ್ಯೂಮ್
ಸಾಮಾನ್ಯವಗಿ ಹುಡುಗಿ ತನ್ನ ಪ್ರಿಯಕರನಿಗೆ ಅಥವಾ ಯುವಕ ತನ್ನ ಪ್ರಿಯತಮೆಗೆ ಪರ್ಪ್ಯೂಮ್ ಗಿಫ್ಟ್ ಆಗಿ ನೀಡುವುದು ನೋಡಿರುತ್ತೇವೆ. ಆದ್ರೆ ಈ ರೀತಿ ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ನೀಡಬಾರದಂತೆ. ಸುಗಂಧ ದ್ರವ್ಯವನ್ನು ಪಡೆಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಇದು ಸಂಬಂಧಗಳಲ್ಲಿ ನಕಾತಾತ್ಮಕ ಶಕ್ತಿಯನ್ನು ತರಬಹುದು ಎನ್ನಲಾಗಿದೆ. ದಂಪತಿ ನಡುವೆ ಬಿರುಕು ಮೂಡಬಹುದು ಎಂದು ಹೇಳಲಾಗುತ್ತದೆ.
ಗಾಜಿನ ವಸ್ತುಗಳು
ಸಾಮಾನ್ಯವಾಗಿ ಪ್ರೇಮಿಗಳ ದಿನದಂದು ನೀವು ಗಾಜಿನಿಂದ ಮಾಡಿದ ಯಾವುದಾದರು ಉಡುಗೊರೆ ನೀಡಲು ನಿರ್ಧರಿಸಿದ್ದರೆ ಅದನ್ನು ಬಿಟ್ಟು ಬಿಡಿ. ಏಕೆಂದರೆ ಗಾಜಿನಿಂದ ಮಾಡಿದ ವಸ್ತುಗಳು ಸಂಬಂಧಗಳಲ್ಲಿ ಗಟ್ಟಿತನದ ಪ್ರತೀಕವಲ್ಲ, ಬದಲಿಗೆ ಮುರಿದು ಬೀಳುವ ಸಂಕೇತವಂತೆ. ಹೀಗಾಗಿ ಪ್ರೇಮಿಗಳು ಈ ದಿನ ಗಾಜಿನ ವಸ್ತುಗಳ ಗಿಫ್ಟ್ ನೀಡಬಾರದು. ಅದರಲ್ಲೂ ಟೀ ಕಪ್‌ಗಳು, ನೆನಪಿನ ಕಾಣಿಕೆ ಗಾಜಿನಲ್ಲಿದ್ದರೆ ಅದನ್ನು ನೀಡಬೇಡಿ. ಅದೊಂದು ದಿನ ಒಡೆದರೆ ನಿಮ್ಮ ಸಂಬಂಧದಲ್ಲೂ ಬಿರುಕು ಮೂಡಬಹುದು ಎಂದು ಹೇಳಲಾಗುತ್ತದೆ.
ವಾಚ್
ಹೆಚ್ಚಾಗಿ ಪ್ರೇಮಿಗಳು ಒಂದೇ ರೀತಿಯ ಎರಡು ವಾಚ್‌ಗಳನ್ನು ಈ ದಿನ ಖರೀದಿಸಿ ಪರಸ್ಪರ ಉಡುಗೊರೆಯಾಗಿ ನೀಡುವುದು ನೋಡಿರುತ್ತೀರಿ. ಆದ್ರೆ ಇದು ಉತ್ತಮ ಉಡುಗೊರೆ ಅಲ್ಲವಂತೆ. ಏಕೆಂದರೆ ಇದು ಅವರ ಅದೃಷ್ಟವನ್ನು ಬದಲಾಯಿಸಬಹುದು, ಅಂದರೆ ದುರ್ಬಲವಾಗಿಸಬಹುದು. ಗಡಿಯಾರವು ಬೇರೆಯಾಗುವ ಸಾಧ್ಯತೆ ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ರಾಮ ಸೀತೆ ವಿಗ್ರಹ
ಪ್ರೇಮಿಗಳು ಈ ದಿನದಂದು ರಾಮ ಹಾಗೂ ಸೀತೆಯ ವಿಗ್ರಹ ನೀಡುವುದು ನೋಡಬಹುದು. ಆದ್ರೆ ಈ ವಿಗ್ರಹ ನೀಡಬಾರದು ಎಂದು ಹೇಳಲಾಗುತ್ತೆ. ಏಕೆಂದರೆ ರಾಮ ಹಾಗೂ ಸೀತೆ ಆದರ್ಶ ದಂಪತಿ ಆಗಿದ್ದರೂ ಕೂಡ ಅನೇಕ ಕಷ್ಟಗಳ ಎದುರಿಸಬೇಕಾಗಿತ್ತು. ವನವಾಸ, ಅಪಹರಣದಂತಹ ಕಷ್ಟಗಳ ಎದುರಿಸಿ ಅವರು ಆದರ್ಶ ದಂಪತಿ ಆದರು. ಹೀಗಾಗಿ ಈ ವಿಗ್ರಹ ನೀಡಬಾರದು ಎಂದು ಹೇಳಲಾಗುತ್ತೆ.
ತಾಜ್ ಮಹಲ್
ಪ್ರೀತಿಯ ಸಂಕೇತ ಎಂದು ಕರೆಯಲಾಗುವ ತಾಜ್‌ಮಹಲ್ ಅನ್ನು ಪ್ರೇಮಿಗಳು ಹೆಚ್ಚಾಗಿ ಗಿಫ್ಟ್ ಮಾಡುತ್ತಾರೆ. ಆದ್ರೆ ಈ ದಿನ ತಾಜ್‌ಮಹಲ್ ನೀಡುವುದು ಉತ್ತಮ ಆಯ್ಕೆಯಲ್ಲವಂತೆ. ಅದರಲ್ಲೂ ಗಾಜಿನಿಂದ ಮಾಡಿರುವ ತಾಜ್ ಮಹಲ್ ಎಂದಿಗೂ ಉಡುಗೊರೆಯಾಗಿ ನೀಡಬಾರದು ಎನ್ನಲಾಗುತ್ತೆ. ಏಕೆಂದರೆ ಮನೆಯಲ್ಲಿ ಅಥವಾ ಮಲಗುವ ಕೋಣೆಯಲ್ಲಿ ತಾಜ್‌ಮಹಲ್ ಇಡುವುದು ದುರಾದೃಷ್ಟಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ.



Click it and Unblock the Notifications