Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Valentine Day 2025: ರೋಸ್ ಡೇ ಬಗ್ಗೆ ನಿಮಗೆಷ್ಟು ಗೊತ್ತು.? ಯಾವ ಬಣ್ಣದ ಗುಲಾಬಿ ಏನು ಅರ್ಥ ನೀಡುತ್ತೆ?
ಫೆಬ್ರವರಿ ತಿಂಗಳು ಎಂದಕೂಡಲೆ ಪ್ರೇಮಿಗಳ ದಿನ ನೆನಪಾಗುತ್ತೆ. ಹಾಗೆ ಈ ದಿನ ಎಲ್ಲರಿಗೂ ವಿಶೇಷ ಎನಿಸದೆ ಇರಬಹುದು ಆದ್ರೆ ಪ್ರೇಮಿಗಳಿಗಂತು ಈ ದಿನ ವಿಶೇಷವೇ. ಹಾಗೆ ಪ್ರೇಮಿಗಳ ದಿನವನ್ನು ಫೆಬ್ರವರಿ 14ರಂದು ಆಚರಿಸೋದು ನಮಗೆ ಗೊತ್ತು. ಆದ್ರೆ ಇಂದಿನಿಂದಲೇ ಪ್ರೇಮಿಗಳ ದಿನ ಆರಂಭವಾಗುತ್ತೆ. ಅಂದರೆ 7 ದಿನದ ಮುನ್ನ ಪ್ರೇಮಿಗಳ ವಾರ ಆರಂಭಗೊಳ್ಳುತ್ತೆ. 7 ದಿನವೂ ಒಂದಲ್ಲಾ ಒಂದು ಆಚರಣೆ ಇದ್ದೇ ಇರುತ್ತೆ. ಕೊನೆಯ ದಿನ ಮಾತ್ರ ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತೆ.
ಈ ಪ್ರೇಮಿಗಳ ವಾರದಲ್ಲಿ ಇಂದು ರೋಸ್ ಡೇ ಆಗಿ ಆಚರಿಸಲಾಗುತ್ತಿದೆ. ಈ ದಿನದಂದು ತಮ್ಮ ಪ್ರೇಮಿಗೆ ಗುಲಾಬಿ ಹೂವು ನೀಡು ಕಾರ್ಯ. ಅವರ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮುನ್ನ ಅವರನ್ನು ಸಂತೋಷ ಪಡಿಸುವ ಕೆಲಸ. ಹಾಗೆ ಗುಲಾಬಿ ಹೂವು ಪ್ರೇತಿಯ ಸಂಕೇತ ಆಗಿರುವುದರಿಂದ ಪ್ರೇಮಿಗಳ ವಾರ ಕೂಡ ಈ ಹೂವಿನಿಂದಲೇ ಆರಂಭವಾಗುತ್ತಿದೆ.

ಆದ್ರೆ ಈ ದಿನ ಯಾವ ಬಣ್ಣದ ರೋಸ್ ನೀಡಬೇಕು ಎಂಬುದು ನಿಮಗೆ ಗೊತ್ತಾ? ಇದರಲ್ಲಿ ವಿಶೇಷ ಏನಿದೆ ಎಂದು ನೀವು ಭಾವಿಸಬಹುದು. ಆದ್ರೆ ಈ ಹೂವಿನ ಬಣ್ಣಕ್ಕೂ ಒಂದೊಂದು ಅರ್ಥವಿದೆ. ಒಂದೊಂದು ಗುಲಾಬಿ ಬಣ್ಣದ ಹಿಂದೆಯೂ ಅದಕ್ಕೊಂದು ಕಾರಣವಿದೆ. ಇನ್ನು ಈ ರೋಸ್ ಡೇ ಹುಟ್ಟಿಕೊಂಡಿದ್ದು ಹೇಗೆ ಅನ್ನೋದು ನಿಮಗೆ ಗೊತ್ತಾ?
ಈ ರೋಸ್ ಡೇ ಯಾವಾಗ ಆರಂಭವಾಯಿತು ಎಂಬ ಕುರಿತ ನಿಖರ ಮಾಹಿತಿ ಹಾಗೂ ನಿಖರ ದಿನಾಂಕಗಳು ಲಭ್ಯವಿಲ್ಲ. ಆದರೆ ರೋಮನ್ ಪುರಾಣಗಳಲ್ಲಿ ಗುಲಾಬಿ ಹೂವುಗಳು ಪ್ರೀತಿ ಮತ್ತು ಉತ್ಸಾಹದ ಸಂಕೇತವಾಗಿದೆ. ಅತ್ಯಂತ ಸಾಂಪ್ರದಾಯಿಕವಾವಗಿ ನಾವು ಡಿಸ್ನಿಯ ಬ್ಯೂಟಿ ಅಂಡ್ ದಿ ಬೀಸ್ಟ್ ಸಿನಿಮಾ ಕಥೆಯಲ್ಲಿ ಹೆಚ್ಚಾಗಿ ಈ ಗುಲಾಬಿ ಹೂವಿನ ಬಳಕೆ ಹೆಚ್ಚಾಗಿ ಪ್ರೀತಿಯ ಸಂಕೇತವಾಗಿ ಬಳಸಿರುವುದು ನೋಡಬಹುದಾಗಿದೆ.
ರೋಮನ್ ಪುರಾಣಗಳಲ್ಲಿ ಗುಲಾಬಿಗಳು ಸೌಂದರ್ಯ ಮತ್ತು ಪ್ರೀತಿಯ ಸಂಕೇತವಾಗಿದ್ದವು. ಪ್ರಾಚೀನ ಗ್ರೀಸ್‌ನಲ್ಲಿ ಅಫ್ರೋಡೈಟ್ ಅನ್ನು ಗುಲಾಬಿಯ ದೇವತೆ ಎಂದೂ ಕರೆಯಲಾಗುತ್ತಿತ್ತು. ನಂತರ ಶುಭ ಕಾರ್ಯಗಳಲ್ಲಿ ಈ ಗುಲಾಬಿಗಳ ಬಳಕೆ ಹೆಚ್ಚಾಗಿತ್ತು, ಅನಂತರ ನಿಧಾನವಾಗಿ ಕೆಂಪು ಗುಲಾಬಿ ಪ್ರೀತಿಯ ಸಂಕೇತವಾಯಿತು. ಯುವ ಪ್ರೇಮಿಗಳಿಗೆ ಇದು ತಮ್ಮ ಮನದ ಮಾತು ಹೇಳುವ ಸಂಪರ್ಕ ಸಾಧನವಾಯಿತು.
ವಿವಿಧ ಬಣ್ಣದ ಗುಲಾಬಿಗಳ ಹಿಂದಿನ ಅರ್ಥವೇನು?
ನೇರಳೆ ಗುಲಾಬಿ: ಮೊದಲ ನೋಟದಲ್ಲಿ ಪ್ರೀತಿಯ ಆಕರ್ಷಣೆ
ಪಿಂಕ್ : ಪ್ರೀತಿ, ಮೆಚ್ಚುಗೆ
ಹಳದಿ ಗುಲಾಬಿ : ಸ್ನೇಹ
ಕೆಂಪು ಗುಲಾಬಿ: ಗಾಢವಾದ ಪ್ರೀತಿ, ವಾತ್ಸಲ್ಯ
ಕಿತ್ತಳೆ ಬಣ್ಣದ ಗುಲಾಬಿ: ಉತ್ಸಾಹ, ಶಕ್ತಿಶಾಲಿ
ಬಿಳಿ ಗುಲಾಬಿ: ಮುಗ್ಧತೆ ಮತ್ತು ಶುದ್ಧತೆ
ಪ್ರೇಮಿಗಳ ದಿನ ಆರಂಭವಾಗಿದ್ದು ಯಾವಾಗ?
ಪ್ರೇಮಿಗಳ ದಿನ ಯಾವಾಗ ಆರಂಭವಾಗಿತ್ತು ಎಂಬುದನ್ನು ನಾವು ಹುಡುಕಲು ಮುಂದಾದ್ರೆ ಶತಮಾನಗಳ ಹಿಂದಿನ ಕಾಲಕ್ಕೆ ಕರೆದೊಯ್ಯಲಿದೆ. ಕ್ರಿ.ಶ 269ರಲ್ಲಿ ಮೊದಲ ಬಾರಿಗೆ ಈ ಪ್ರೇಮಿಗಳ ದಿನ ಎಂಬ ಉಲ್ಲೇಖ ನೋಡಬಹುದು. ಇಟಾಲಿಯನ್ ಇತಿಹಾಸಕಾರ ಜಾಕೋಬಸ್ ಡಿ ವೊರಜೀನ್ ಬರೆದ 'ಗೋಲ್ಡನ್ ಲೆಜೆಂಡ್: ಲೈವ್ಸ್ ಆಫ್ ದಿ ಸೇಂಟ್ಸ್' ಎಂಬ ಪುಸ್ತಕದಲ್ಲಿ ಪ್ರೇಮಿಗಳ ದಿನ ರೊಮನ್ ರಾಜ ಕ್ಲಾಡಿಯೆಸ್ ಕಾಲದಲ್ಲಿ ಆರಂಭಗೊಂಡಿತ್ತು ಎಂದು ಉಲ್ಲೇಖಿಸಿದ್ದಾರೆ.



Click it and Unblock the Notifications
