Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ವೈಶಾಖ ಮಾಸ ವಿಶೇಷತೆಯೇನು? ಧಾರ್ಮಿಕ , ಜ್ಯೋತಿಷ್ಯದ ದೃಷ್ಟಿಯಿಂದ ಈ ಮಾಸದ ವಿಶೇಷತೆಯೇನು?
ವೈಶಾಖ ಮಾಸ ಪ್ರಾರಂಭವಾಗಿದೆ, ಜೂನ್ 6ಕ್ಕೆ ಮುಗಿಯಲಿದೆ. ವೈಶಾಖ ಮಾಸ ಧಾರ್ಮಿಕ ಕಾರಣದಿಂದ ಪ್ರಮುಖವಾಗಿದೆ. ಇದೇ ಮಾಸದಲ್ಲಿ ಅಕ್ಷಯ ತೃತೀಯ ಬರುವುದು, ಈ ಮಾಸ ಜ್ಯೋತಿಷ್ಯದ ದೃಷ್ಟಿಯಿಂದಲೂ ಪ್ರಮುಖವಾಗಿದೆ. ಅಲ್ಲದೆ ಈ ಮಾಸದಲ್ಲಿ ನೀವು ಕಾರ್ಯಗಳನ್ನು ಮಾಡಿದರೆ ತುಂಬಾ ಒಳ್ಳೆಯದಂತೆ:

ವೈಶಾಖ ಮಾಸದಲ್ಲಿ ಏನು ಮಾಡಬೇಕು
ದಾನ : ನೀವು ಈ ತಿಂಗಳಿನಲ್ಲಿ ದಾನ ಮಾಡಿದರೆ ವರ್ಷದವರೆಗೆ ದಾನ ಮಾಡಿದ ಫಲ ಸಿಗಲಿದೆ, ಆದ್ದರಿಂದ ಈ ತಿಂಗಳಿನಲ್ಲಿ ಮಾಡುವ ದಾನ ಪ್ರಮುಖವಾಗಿದೆ
ತರ್ಪಣ ಬಿಡಬಹುದು: ತೀರಿ ಹೋದ ಪಿತೃರಿಗೆ ತರ್ಪಣ ನೀಡುವುದರಿಂದ ಅವರಿಗೆ ಮೋಕ್ಷ ದೊರೆಯುವುದು. ತರ್ಪಣವನ್ನು ಈ ತಿಂಗಳಿನಲ್ಲಿಯೂ ಮಾಡಬಹುದು. ವೈಶಾಖ ಮಾಸದ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಪೂರ್ವಜರಿಗೆ ತರ್ಪಣ ನೀಡಿದರೆ ಅವರಿಗೂ ಮೋಕ್ಷ ಸಿಗುವುದು, ನಿಮಗೆ ಪಿತೃದೋಷದಿಂದ ಪರಿಹಾರ ಸಿಗುವುದು.
ಯಜ್ಞ,ಯಾಗ: ವೈಶಾಖದ ಸಮಯದಲ್ಲಿ ನಡೆಸುವ ಪೂಜೆ ಮತ್ತು ಆಚರಣೆಗಳು ತುಂಬಾನೇ ಫಲ ನೀಡುತ್ತದೆ, ಹಾಗಾಗಿ ಅಕ್ಷಯ ತೃತೀಯದಂದು ಯಾಗಗಳನ್ನು ಮಾಡಲಾಗುವುದು. ಮತ್ತು ಈ ಸಮಾರಂಭಗಳಲ್ಲಿ ಸಾಮುದಾಯಿಕ ಭೋಜನದಲ್ಲಿ ಪಾಲ್ಗೊಳ್ಳಲು ಶಿಫಾರಸು ಮಾಡಲಾಗುತ್ತದೆ.
ಏನು ಮಾಡಬಾರದು?
ಮದ್ಯ, ಮಾಂಸ ಸೇವಿಸಬಾರದು
ಮೈಗೆ ಎಣ್ಣೆ ಹಾಕಬಾರದು
ಹಗಲು ಹೊತ್ತಿನಲ್ಲಿ ನಿದ್ರಿಸಬಾರದು
ವೈಶಾಖ ಮಾಸದಲ್ಲಿ ಬರುವ ವಿಶೇಷ ದಿನಗಳು
ಅಕ್ಷಯ ತೃತೀಯ: ಮೇ 10, 2024 ಶುಕ್ರವಾರ
ವೃಷಭ ಸಂಕ್ರಾಂತಿ: ಮೇ 14, 2024 ಮಂಗಳವಾರ
ಮೋಹಿನಿ ಏಕಾದಶಿ : ಮೇ 19, 2024 ಭಾನುವಾರ
ಪ್ರದೋಷ ವ್ರತ : ಮೇ 20, 2024 ಸೋಮವಾರ
ವೈಶಾಖ ಹುಣ್ಣಿಮೆ ವ್ರತ: ಮೇ 23, 2024 ಗುರುವಾರ
ಸಂಕಷ್ಟಿ ಚತುರ್ಥಿ: ಮೇ 26, 2024, ಭಾನುವಾರ
ಗ್ರಹ ಸಂಚಾರ
ಮೇ 10ಕ್ಕೆ ಬುಧ ಸಂಚಾರ: ಬುಧನು ಮೇ 10ಕ್ಕೆ ಮೇಷ ರಾಶಿಗೆ ಸಂಚರಿಸಲಿದೆ, ಇದರಿಂದ ಬುಧಾದಿತ್ಯ ಯೋಗ ಉಂಟಾಗುವುದು. ಈ ಬುಧಾದಿತ್ಯ ಯೋಗ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುವುದು.
ವೃಷಭ ರಾಶಿಯಲ್ಲಿ ಸೂರ್ಯ ಸಂಕ್ರಾಂತಿ: ಮೇ 14 ಸೂರ್ಯ ವೃಷಭ ರಾಶಿಗೆ ಸಂಚರಿಸಲಿದೆ. ಈ ಸೂರ್ಯ ಸಂಚಾರ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಇನ್ನು ಗುರು ಗ್ರಹವು ವೃಷಭ ರಾಶಿಯಲ್ಲಿಯೇ ಇದೆ, ಇದರಿಂದ ಗುರು ಹಾಗೂ ಸುರ್ಯನ ಸಂಯೋಗವಾಗಲಿದೆ.
ವೃಷಭ ರಾಶಿಯಲ್ಲಿ ಶುಕ್ರ ಸಂಚಾರ: ಮೇ 19ಕ್ಕೆ ಅದೃಷ್ಟದ ಗ್ರಹವಾದ ಶುಕ್ರ ಕೂಡ ವೃಷಭ ರಾಶಿಗೆ ಸಂಚರಿಸಲಿದೆ. ಶುಕ್ರ ಸಂಚರಿಸಿದಾಗ ಗುರು, ಸೂರ್ಯ, ಶುಕ್ರ ಗ್ರಹದ ಸಂಯೋಗವಾಗಲಿದೆ.
ವೃಷಭ ರಾಶಿಯಲ್ಲಿ ಬುಧ ಸಂಚಾರ: ಈ ಮಾಸ ಬುಧ ಎರಡು ಬಾರಿ ಸಂಚರಿಲಿದೆ. ಮೇ 10ಕ್ಕೆ ಮೇಷ ರಾಶಿಗೆ ಸಂಚರಿಸಿದ ಬುಧ ವೃಷಭ ರಾಶಿಗೆ ಸಂಚರಿಸಲಿದೆ.



Click it and Unblock the Notifications
