Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಈ ಮಹಿಳೆಗೆ ಎರಡು ಗರ್ಭಕೋಶ, ಎರಡಲ್ಲೂ ಮಗು ಬೆಳೆಯುತ್ತಿದೆ!
ಹೆಣ್ಮಕ್ಕಳಲ್ಲಿ ಒಂದು ಗರ್ಭಕೋಶವಿರುತ್ತದೆ, ಎರಡು ಗರ್ಭಕೋಶವಿರುವ ಅಪರೂಪದ ಪ್ರಕರಣಗಳೂ ಇವೆ. ಆದರೆ 32 ವರ್ಷದ ಈ ಮಹಿಳೆಗೆ ಎರಡು ಗರ್ಭಕೋಶ ಮಾತ್ರವಲ್ಲಿ ಎರಡೂ ಗರ್ಭಕೋಶದಲ್ಲಿ ಮಗುವಿದೆ ಎಂಬುವುದು ವೈದ್ಯಲೋಕದ ಅಚ್ಚರಿಗೆ ಕಾರಣವಾಗಿದೆ. ಇದು ತುಂಬಾ ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ.
ಕೆಲ್ಸೆ ಹ್ಯಾಚರ್ ಎಂಬ ಈ ಮಹಿಳೆ ಈಗ ಗರ್ಭಿಣಿಯಾಗಿದ್ದು ಇಬ್ಬರು ಮಕ್ಕಳಿಗೆ ಜನ್ಮ ನೀಡಲಿದ್ದಾರೆ, ಆದರೆ ಈ ಮಕ್ಕಳು ಒಂದೇ ಗರ್ಭದೊಳಗೆ ಬೆಳೆಯುತ್ತಿಲ್ಲ, ಆದರೆ ಬೇರೆ-ಬೇರೆ ಗರ್ಭದಲ್ಲಿ ಬೆಳೆಯುತ್ತಿದೆ ಎಂಬುವುದೇ ವಿಶೇಷ.

ಇವರು doubleuhatchlings ಎಂಬ ಇನ್‌ಸ್ಟಾಗ್ರಾಮ್ ಅಕೌಂಟ್ ಓಪನ್ ಮಾಡಿ ಅದರಲ್ಲಿ ತಮ್ಮ ಪ್ರೆಗ್ನನ್ಸಿ ಬಗ್ಗೆ ಅಪ್‌ಡೇಟ್ ನೀಡುತ್ತಿದ್ದು ಈಕೆಯ ಸ್ಟೋರಿ ಜನರಲ್ಲಿ ಕುತೂಹಲ ಉಂಟು ಮಾಡಿದೆ. ಎರಡು ಗರ್ಭವೇ ಎಂಬುವುದೇ ಜನರ ಕುತೂಹಲಕ್ಕೆ ಕಾರಣವಾಗಿದೆ.
ಹ್ಯಾಚರ್‌ಗೆ ತನಗೆ ಎರಡು ಗರ್ಭಕೋಶವಿದೆ ಎಂಬುವುದು ಅವರ 17ನೇ ವಯಸ್ಸಿನಲ್ಲಿ ತಿಳಿದು ಬಂತು. ಇದನ್ನು ವೈದ್ಯಕೀಯ ಭಾಷೆಯಲ್ಲಿ"uterus didelphys"ಎಂದು ಕರೆಯಲಾಗಿದೆ. ಇದು ಅಪರೂಪದಲ್ಲಿ ಅಪರೂಪದ ಕೇಸ್, ವಿಶ್ವದಲ್ಲಿರುವ ಶೇ. 0.3ರಷ್ಟು ಮಹಿಳೆಯರಲ್ಲಿ ಮಾತ್ರ ಕಂಡು ಬರುತ್ತದೆ. ಇವರಿಗೆ ಈಗಾಗಲೇ ಮೂರು ಮಕ್ಕಳಿದ್ದಾರೆ, ಮತ್ತೆ ಗರ್ಭಿಣಿಯಾದಾಗ ಪರೀಕ್ಷೆ ಮಾಡಿದಾಗ ಆಕೆಗೆ ಫುಲ್ ಶಾಕ್. ಗರ್ಭಿಣಿಯಾಗಿ 8ನೇ ವಾರದಲ್ಲಿ ಅಂದರೆ 2ನೇ ತಿಂಗಳಿನಲ್ಲಿ ಅಲ್ಟ್ರಾಸೌಂಡ್ ಮಾಡಿದಾಗ ಅವಳಿ ಮಕ್ಕಳಿರುವುದು ಗೊತ್ತಾಗಿದೆ ಆದರೆ ಅಚ್ಚರಿಯೆಂದರೆ ಎರಡು ಮಕ್ಕಳು ಬೇರೆ ಬೇರೆ ಗರ್ಭದಲ್ಲಿ ಬೆಳೆಯುತ್ತಿರುವುದು ತಿಳಿದು ಬಂದಿದೆ.
ಅಲ್ಟ್ರಾಸೌಂಡ್ ಮೂಲಕ ಈ ವಿಷಯ ತಿಳಿದಾಗ ನಮಗೆ ತುಂಬಾನೇ ನಗು ಬಂತು ಎಂದು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಒಂದು ವೇಳೆ ಅವರಿಗೆ ಎರಡು ಬಾರಿ ಅಂಡಾಣುಗಳ ಉತ್ಪತ್ತಿಯಾಗಿರಬಹುದು, ಒಂದೊಂದು ಅಂಡಾಣುಗಳು, ವೀರ್ಯಾಣುಗಳ ಸಂಪರ್ಕಕ್ಕೆ ಬಂದು ಒಂದೊಂದು ಫಿಲೋಪಿಯನ್ ಮೂಲಕ ಗರ್ಭಕೋಶವನ್ನು ಸೇರಿರಬಹುದು, ಎರಡು ಅಂಡಾಣುಗಳು ಫಲವತ್ತತೆಯಾಗಿ ಬೇರೆ-ಬೇರೆ ಗರ್ಭಕೋಶದಲ್ಲಿ ಮಕ್ಕಳು ಬೆಳೆಯುತ್ತವೆ.
ಈಚರ್ ತಮ್ಮ ಪ್ರೆಗ್ನೆನ್ಸಿ ಜರ್ನಿ ಕುರಿತು ಅಪ್‌ಡೇಟ್‌ಗಳನ್ನು ಹಾಕುತ್ತಿರುತ್ತಾರೆ, ಈ ವಿಚಿತ್ರ ಗರ್ಭಧಾರಣೆಯ ಸ್ಟೋರಿ ಈಗ ಸಾಕಷ್ಟು ಗಮನ ಸೆಳೆದಿದೆ.
ಕ್ರಿಸ್ಮೆಸ್ ವಾರದಲ್ಲಿ ಸಹಜ ಹೆರಿಗೆಯಾಗಲಿದೆ
ಹ್ಯಾಚರ್‌ಗೆ ಸಹಜ ಹೆರಿಗೆಯಾಗಲಿದೆ ಎಂದು ವೈದ್ಯರು ತಿಳಿಸಿದ್ದಾರಂತೆ. ದಂಪತಿ ಈಗ ಮುದ್ದಾದ ಎರಡು ಹೆಣ್ಮಕ್ಕಳ ನಿರೀಕ್ಷೆಯಲ್ಲಿದ್ದು ಕ್ರಿಸ್ಮೆಸ್ ವಾರದಲ್ಲಿ ಹೆರಿಗೆಯಾಗಬಹುದು ಎಂದು ಹ್ಯಾಚರ್ ತಮ್ಮ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿದ್ದಾರೆ.



Click it and Unblock the Notifications