Latest Updates
-
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ!
ಮಗುವನ್ನು ಒಂಟಿಯಾಗಿ ಬಿಟ್ಟು 11 ದಿನ ಟ್ರಿಪ್ ಹೋದ ತಾಯಿ: ಆದರೆ ಕರ್ಮ ಬಿಡಲಿಲ್ಲ ಆಕೆಯನ್ನ
ಈ ವರ್ಷ ಫೆಬ್ರವರಿ ಮಾಸದಲ್ಲಿ ಒಂದು ತಾಯಿಯ ಕ್ರೌರ್ಯ ತುಂಬಾನೇ ಸದ್ದು ಮಾಡಿತು, ಅಂಥವಳು ತಾಯಿಯಾಗಲು ಹೇಗೆ ತಾನೆ ಸಾಧ್ಯ ಎಂದು ಜನರು ಕೇಳಲಾರಂಭಿಸಿದರು.
ಸಿಂಗಲ್ ಮದರ್ ಆದ ಆಕೆ ತನ್ನ ಬಾಯ್‌ಫ್ರೆಂಡ್ಸ್ ಜೊತೆ ವೆಕೇಷನ್ ಹೋಗಲು 16 ತಿಂಗಳ ಮಗುವನ್ನು ಮನೆಯಲ್ಲಿ 11 ದಿನ ಒಂಟಿಯಾಗಿ ಬಿಟ್ಟು ಹೋಗಿದ್ದಳು, ಆ ಮಗು ಹಸಿವಿನಿಂದ ತೀರಿ ಹೋಗಿತ್ತು. ಯುಎಸ್‌ನಲ್ಲಿ ನಡೆದ ಈ ಘಟನೆ ತುಂಬಾನೇ ಸದ್ದು ಮಾಡಿತ್ತು.

ಇದೀಗ ಈಕೆಯ ಸ್ಟೋರಿ ಮತ್ತೊಮ್ಮೆ ಸದ್ದು ಮಾಡುತ್ತಿದೆ, ಕರ್ಮ ಯಾವುದಾದರೂ ರೂಪದಲ್ಲಿ ತಟ್ಟುತ್ತೆ ಎಂದು ಆ ವೀಡಿಯೋ ನೋಡಿದವರು ಹೇಳುತ್ತಿದ್ದಾರೆ.
ಆಕೆಯ ಹೆಸರು ಕ್ರಿಸ್ಟೆಲ್ ಕ್ಯಾಂಡೆಲಾರೆಯೋ, ಆಕೆಗೆ 16 ತಿಂಗಳ ಮಗು ಇತ್ತು, ಈಕೆಗೆ ಇದ್ದಕ್ಕಿದ್ದ ಹಾಗೆ ಟ್ರಿಪ್ ಹೋಗಬೇಕು, ಆದರೆ ನನ್ನ ಟ್ರಿಪ್‌ಗೆ ಮಗು ಇದ್ದರೆ ತೊಂದರೆಯಾಗುತ್ತೆ ಎಂದು ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಲು ತೀರ್ಮಾನಿಸಿದ್ದಾಳೆ.
ಅದರಂತೆ ಆಕೆ 16 ತಿಂಗಳ ಮಗುವನ್ನು ಮನೆಯಲ್ಲಿಯೇ ಬಿಟ್ಟು ಒಂದು ಕಡೆ ಒಂದು ಬಾಯ್‌ಫ್ರೆಂಡ್, ಮತ್ತೊಂದು ಕಡೆಗೆ ಹೋಗುವಾಗ ಮತ್ತೊಬ್ಬ ಬಾಯ್‌ಫ್ರೆಂಡ್ ಅಂತ ಸುತ್ತಿದ್ದಾಳೆ, ಅವಳು ಇಷ್ಟೊಂದು ದಿನ ಟ್ರಿಪ್ ಮಾಡುತ್ತೇನೆ ಎಂದು ಕೊಂಡಿರಲಿಲ್ವಾ? ಅಥವಾ ಬಾಯ್‌ಫ್ರೆಂಡ್ಸ್ ಜೊತೆ ಸುತ್ತುವಾಗ ಮಗುವನ್ನು ನೆನಪಾಗಲಿಲ್ವಾ ಗೊತ್ತಿಲ್ಲ, ಆರಾಮವಾಗಿ ಸುತ್ತಾಡಿದ್ದಾಳೆ.
ಹಸಿದು ಹೇಲು ತಿಂದ ಮಗು
ಮಗುವಿಗೆ ಹಸಿವು, ಬಾಯಾರಿಕೆ ಮನೆಯಲ್ಲಿ ಯಾರೂ ಇಲ್ಲ ತುಂಬಾ ಅತ್ತಿದೆ, ತನ್ನ ಹೇಲು, ಉಚ್ಚೆ ತಿಂದಿದೆ, ಹಸಿವಿನಿಂದ ಅತ್ತು-ಅತ್ತು ನಿತ್ರಾಣವಾಗಿದೆ, ಹಾಗೆಯೇ ಆ ಮಗು ಸಾವನ್ನಪ್ಪುತ್ತೆ, ಇವಳು ಬಂದು ನೋಡುತ್ತಾಳೆ, ಮಗುವಿಗೆ ಪ್ರಜ್ಞೆಯಿಲ್ಲ ಎಂದು ಭಾವಿಸಿ ಆಸ್ಪತ್ರೆಗೆ ಕೊಂಡೊಯ್ಯುತ್ತಾಳೆ, ವೈದ್ಯರು ಮಗು ಸತ್ತಿದೆ ಎಂದು ಹೇಳುತ್ತಾರೆ, ಆದರೆ ಇವಳು ಮಾತ್ರ ತನ್ನ ತಪ್ಪನ್ನು ಮುಚ್ಚಿ ಇಡಲು ಬಯಸುತ್ತಾಳೆ. ಮಗು ಸಾಯುವಾಗ ಮಗುವಿನ ದೇಹ ತುಂಬಾನೇ ನಿರ್ಜಲೀಕರಣದಿಂದ ಕೂಡಿತ್ತು ಎಂದು ವೈದ್ಯರು ಹೇಳುತ್ತಾರೆ. ಮಗುವಿನ ಮುಖದಲ್ಲಿ ಅದು ಕಕ್ಕ ತಿಂದ ಕಕ್ಕ ಹಾಗೆಯೇ ಒಣಗಿತ್ತು.
ಖಿನ್ನತೆಯಿಂದ ಬಳಲುತ್ತಿದ್ದೆ ಎಂದ ತಾಯಿ
ಯಾರಿಗೂ ಗೊತ್ತಿಲ್ಲ ನಾನೆಷ್ಟು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು, ನನ್ನ ತಪ್ಪು ನಾನು ಸಮರ್ಥಿಸಿಕೊಳ್ಳುವುದಿಲ್ಲ, ಆ ದೇವರು, ಮಗಳು ನನ್ನನ್ನು ಕ್ಷಮಿಸುತ್ತಾಳೆ ಎಂದು ಅಳುತ್ತಾಳೆ, ಆದರೆ ಹೀಗೆ ಮಾಡಿದರೆ ಯಾವ ದೇವರು ತಾನೆ ಸಹಿಸುತ್ತಾರೆ, ಆಕೆಗೆ ಜೀವನಪೂರ್ತಿ ಜೈಲ್‌ನಲ್ಲಿಯೇ ಕಳೆಯುವ, ಜೈಲ್ ಹೊರಗಡೆ ಹೋಗದಂಥ ಶಿಕ್ಷೆ ನೀಡಲಾಗುವುದು.
ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ ಆಕೆಯದು ಎನ್ನುವ ವೀಡಿಯೋ
ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ಮಹಿಳೆ ಹುಚ್ಚಿಯಂತೆ ಕಿರುಚುತ್ತಿದ್ದಾಳೆ, ಅವಳ ಕೈ-ಕಾಲುಗಳನ್ನು ಪೊಲೀಸರು ಕಟ್ಟಿ ಹಾಕಿದ್ದಾರೆ, ಅವಳಿಗೆ ಏನೋ ಇಂಜೆಕ್ಷನ್ ಕೊಡುತ್ತಿದ್ದಾರೆ, ಜನರು ಅದು ಕ್ರಿಸ್ಟೆಲ್ ಕ್ಯಾಂಡೆಲಾರೆಯೋ ಎಂದು ಹೇಳಲಾಗುತ್ತಿದೆ, ಕರ್ಮ ಯಾರನ್ನೂ ಬಿಡಲ್ಲ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಕೆಲವರು ಅದು ಆಕೆಯದು ಅಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಆಕೆಗೆ ಜೀವನ ಪರ್ಯಾಂತ ಜೈಲಿನಲ್ಲಿಯೇ ಕಳೆಯುವ ಶಿಕ್ಷೆ ಸಿಕ್ಕಿದ್ದು ನಿಜ, ಆದರೆ ಅವಳಿಗೆ ಸಾಯುವ ಇಂಜೆಕ್ಷನ್ ನೀಡಿದ್ದಾರೆ ಎಂಬುವುದು ಫೇಕ್ ಸುದ್ದಿ ಇರಬಹುದು.
ಎಂಥದ್ದೇ ಆಗಲಿ ಯಾವ ತಾಯಿಯೂ ಮಾಡಬಾರದ ಕೃತ್ಯ ಆಕೆ ಮಾಡಿದ್ದಾಳೆ, ಇತ್ತೀಚೆಗೆ ಕೇರಳದಲ್ಲಿ ತಾಯಿಯೊಬ್ಬಳು ಆಗಷ್ಟೇ ಹುಟ್ಟಿದ ಮಗುವನ್ನು 5ನೇ ಮಹಡಿಯಿಂದ ಬಿಸಾಡಿದ್ದಳು.. ತಾಯಿ ಮನಸ್ಸು ಇಷ್ಟೊಂದು ಕ್ರೂರಿಯಾದರೆ ಆಕೆ ತಾಯಿಯಾದಳೇ..



Click it and Unblock the Notifications