Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಭಾರತಕ್ಕೆ ಒಂಟಿಯಾಗಿ ಹೋಗಬೇಡಿ! ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ.. ವಿಚಿತ್ರ ಎಚ್ಚರಿಕೆ ನೀಡಿದ ಅಮೆರಿಕ
ಭಾರತಕ್ಕೆ ಒಂಟಿಯಾಗಿ ಹೋಗಬೇಡಿ! ತನ್ನ ಪ್ರಜೆಗಳಿಗೆ ವಿಚಿತ್ರ ಎಚ್ಚರಿಕೆ ನೀಡಿದ ಅಮೆರಿಕ. ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆ. ಹೌದು, ಅಮೆರಿಕ (America) ಭಾರತಕ್ಕೆ (India) ಭೇಟಿ ನೀಡುವ ತನ್ನ ದೇಶದ ಪ್ರಜೆಗಳಿಗೆ ಎಚ್ಚರಿಕೆ (Travel Warning) ನೀಡಿದೆ. ಅದರಲ್ಲೂ ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಜಾಗರೂಕತೆಯಿಂದ ಇರಲು ಸೂಚಿಸಿದೆ. ಭಾರತದಲ್ಲಿನ ಅಪರಾಧ ಮತ್ತು ಭಯೋತ್ಪಾದನೆಯನ್ನು ಉಲ್ಲೇಖಿಸಿ ಈ ಎಚ್ಚರಿಕೆ ನೀಡಲಾಗಿದೆ. ಭಾರತದ ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರ, ಮಾರುಕಟ್ಟೆ, ಸರ್ಕಾರಿ ಕಚೇರಿ ಸೇರಿದಂತೆ ಹಲವೆಡೆ ಹಿಂಸಾತ್ಮಕ ಅಪರಾಧಗಳು ಜರುಗುತ್ತವೆ. ಯಾವ ಕ್ಷಣದಲ್ಲಾದರೂ ಭಯೋತ್ಪಾದಕಾ ದಾಳಿ ನಡೆಯಬಹುದು ಎಂದು ಅಮೆರಿಕ ವಿಚಿತ್ರ ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಅಮೆರಿಕ ಹೊಸ ಪ್ರಯಾಣ ಸಲಹೆ ಹೊರಡಿಸಿದೆ. ವಿಶೇಷವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದೆ. ಜೂನ್ 16, 2025 ರಂದು ಅಮೆರಿಕ ಈ ಸಲಹೆಯನ್ನು ಬಿಡುಗಡೆ ಮಾಡಿದೆ. ಈ ಎಚ್ಚರಿಕೆಯಲ್ಲಿ ಲೈಂಗಿಕ ಕಿರುಕುಳ, ಭಯೋತ್ಪಾದನೆ ಮತ್ತು ಕೆಲವು ಪ್ರದೇಶಗಳಲ್ಲಿನ ಅಸ್ಥಿರತೆಯಂತಹ ಅಪಾಯಗಳ ಬಗ್ಗೆ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಅತ್ಯಾಚಾರ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಏಕಾಂಗಿಯಾಗಿ ಪ್ರಯಾಣಿಸುವ ಮಹಿಳಾ ಪ್ರವಾಸಿಗರಿಗೆ ಆತಂಕಕಾರಿಯಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. ಲೆವೆಲ್ 2 ಸಲಹೆ ಎಂದರೇನು? ಯಾವ ರಾಜ್ಯಗಳು ಹೆಚ್ಚಿನ ಅಪಾಯದ ವಲಯದಲ್ಲಿವೆ? ಎಂಬುದನ್ನು ತಿಳಿಯೋಣ ಬನ್ನಿ.

ಲೆವೆಲ್-2 ಪ್ರಯಾಣ ಸಲಹೆ ಎಂದರೇನು?
ಲೆವೆಲ್ -2 ಪ್ರಯಾಣ ಸಲಹೆ ಎಂದರೇನು ಅಂತ ಅನೇಕರಿ ತಿಳಿದಿಲ್ಲ. ವಾಸ್ತವವಾಗಿ, ಲೆವೆಲ್ -2 ಪ್ರಯಾಣ ಸಲಹೆಯು (level 2 advisory India) ಅಮೆರಿಕದ ವಿದೇಶಾಂಗ ಇಲಾಖೆಯಿಂದ ನೀಡಲಾಗುವ ಸುರಕ್ಷತಾ ರೇಟಿಂಗ್ ಆಗಿದೆ. ಇದು ಒಂದು ದೇಶಕ್ಕೆ ಪ್ರಯಾಣಿಸುವಾಗ ಪ್ರಯಾಣಿಕರು ಹೆಚ್ಚುವರಿ ಜಾಗರೂಕರಾಗಿರಬೇಕು ಎಂದು ಸೂಚಿಸುತ್ತದೆ. ಇದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.
• ಲೆವೆಲ್ 1: ಸಾಮಾನ್ಯ ಎಚ್ಚರಿಕೆ
• ಲೆವೆಲ್ 2: ಹೆಚ್ಚುವರಿ ಎಚ್ಚರಿಕೆ
• ಲೆವೆಲ್ 3: ಪ್ರಯಾಣದ ಬಗ್ಗೆ ಮರುಪರಿಶೀಲನೆ ಮಾಡಿ
• ಲೆವೆಲ್ 4: ಪ್ರಯಾಣ ಮಾಡಬೇಡಿ
ಅಮೆರಿಕವು ಭಾರತವನ್ನು ಲೆವೆಲ್ -2 ವರ್ಗದಲ್ಲಿ ಇಟ್ಟಿದೆ. ಇದರರ್ಥ ಅಮೆರಿಕ ಪ್ರಜೆಗಳು ಅಥವಾ ನಾಗರಿಕರು ಭಾರತದಲ್ಲಿ ಪ್ರಯಾಣಿಸಬಹು. ಆದರೆ, ವಿಶೇಷವಾಗಿ ಮಹಿಳೆಯರು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಎಚ್ಚರಿಕೆ ಮತ್ತು ಜಾಗರೂಕರಾಗಿರಬೇಕು.
ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ
ಅಮೆರಿಕವು ಭಾರತಕ್ಕೆ ಲೆವೆಲ್-2 ಪ್ರಯಾಣ ಸಲಹೆಯನ್ನು ನೀಡಿದ್ದು, ಈ ಸಲಹೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ ಮತ್ತು ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಭಾರತದಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅಮೆರಿಕ ತಿಳಿಸಿದೆ. ಒಬ್ಬಂಟಿ ಅಥವಾ ಏಕಾಂಗಿ ಮಹಿಳಾ ಪ್ರಯಾಣಿಕರು ವಿಶೇಷವಾಗಿ ಜಾಗರೂಕರಾಗಿರಲು ಸಲಹೆ ನೀಡಿದೆ. ರಾತ್ರಿಯಲ್ಲಿ ಒಂಟಿಯಾಗಿ ತಿರುಗಾಡದಂತೆ ಮತ್ತು ಅಪರಿಚಿತರೊಂದಿಗೆ ಪ್ರಯಾಣಿಸದಂತೆ ತಾಕೀತು ಮಾಡಲಾಗಿದೆ.
ಹೆಚ್ಚು ಅಪಾಯ ವಲಯದಲ್ಲಿರುವ ರಾಜ್ಯಗಳು
ಲೆವೆಲ್ -2 ಸಲಹೆಯಲ್ಲಿ ಕೆಲವು ರಾಜ್ಯಗಳನ್ನು ಹೆಚ್ಚು ಅಪಾಯದ ವಲಯದಲ್ಲಿ ಸೇರಿಸಲಾಗಿದೆ. ಆ ರಾಜ್ಯಗಳ ಬಗೆಗಿನ ಮಾಹಿತಿ ಇಲ್ಲಿದೆ.
• ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ, ಭಾರತ-ಪಾಕಿಸ್ತಾನ ಗಡಿ, ಮಧ್ಯ ಮತ್ತು ಪೂರ್ವ ಭಾರತದ ಕೆಲವು ಭಾಗಗಳಿಗೆ ವಿಶೇಷ ಎಚ್ಚರಿಕೆ ಸೂಚಿಸಲಾಗಿದೆ. ಭಯೋತ್ಪಾದನೆ ಮತ್ತು ಹಿಂಸಾಚಾರದ ಘಟನೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
• ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್ (ಈಶಾನ್ಯ ರಾಜ್ಯಗಳು): ಮಣಿಪುರ ಮತ್ತು ಈಶಾನ್ಯ ರಾಜ್ಯಗಳಿ ತೆರಳದಂತೆ ಎಚ್ಚರಿಕೆಯಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಜನಾಂಗೀಯ ಉದ್ವಿಗ್ನತೆ ಮತ್ತು ಪ್ರತಿಭಟನೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
• ಪಂಜಾಬ್ ಮತ್ತು ದೆಹಲಿ ಎನ್‌ಸಿಆರ್ (NCR) ಪ್ರದೇಶಗಳು: ಇತ್ತೀಚಿನ ಅಪರಾಧಗಳು ಮತ್ತು ಹಿಂಸಾತ್ಮಕ ಘಟನೆಗಳ ಬಗ್ಗೆ ಎಚ್ಚರಿಕೆಯಿಂದಿರಲು ಸಲಹೆ ನೀಡಲಾಗಿದೆ.
ಕೇಂದ್ರ ಸರ್ಕಾರ ಹೇಳಿದ್ದೇನು?
ಅಮೆರಿಕ ಪ್ರಕಟಿಸಿರುವ ಈ ಪ್ರಯಾಣದ ಎಚ್ಚರಿಕೆಯ ಬಳಿಕ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಮಹಿಳಾ ಸುರಕ್ಷತೆಗಾಗಿ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದೆ. ಅಲ್ಲದೆ, ಹೆಚ್ಚಿನ ಅಂತರರಾಷ್ಟ್ರೀಯ ಪ್ರವಾಸಿಗರು ಸುರಕ್ಷಿತವಾಗಿ ಹಿಂತಿರುಗುತ್ತಾರೆ ಎಂದು ತಿಳಿಸಿದೆ.
ಮಹಿಳಾ ಪ್ರಯಾಣಿಕರಿಗೆ ಸುರಕ್ಷತಾ ಸಲಹೆಗಳು
• ನಿಮ್ಮ ಕುಟುಂಬ ಅಥವಾ ಸ್ನೇಹಿತರಿಗೆ ನೀವು ಇರುವ ಸ್ಥಳದ ಬಗ್ಗೆ ತಿಳಿಸಿ.
• ಸ್ಥಳೀಯ ಮಾರ್ಗದರ್ಶಿಗಳು ಮತ್ತು ವಿಶ್ವಾಸಾರ್ಹ ಟ್ರಾವೆಲ್ ಏಜೆನ್ಸಿಗಳೊಂದಿಗೆ ಪ್ರಯಾಣಿಸಿ.
• ಅಪರಿಚಿತರಿಂದ ದೂರವಿರಿ.
• ರಾತ್ರಿಯ ಸಮಯದಲ್ಲಿ ಒಂಟಿಯಾಗಿ ಪ್ರಯಾಣಿಸುವುದನ್ನು ನಿಲ್ಲಿಸಿ.
• ಹೋಟೆಲ್ ಮತ್ತು ಸಾರಿಗೆ ಬುಕಿಂಗ್‌ಗಳನ್ನು ಮೊದಲೇ ಮಾಡಿ.
ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಮೇಘಾಲಯ, ಒಡಿಶಾ ರಾಜ್ಯಗಳಿಗೆ ಅಮೆರಿಕ ಸರ್ಕಾರಿ ಉದ್ಯೋಗಿಗಳು ಪೂರ್ವಾನುಮತಿ ಇಲ್ಲದೆ ಪ್ರಯಾಣಿಸುವಂತಿಲ್ಲ. ಆದರೆ, ಈ ರಾಜ್ಯಗಳ ರಾಜಧಾನಿಗಳಿಗೆ ಪ್ರಯಾಣಕ್ಕೆ ಅನುಮತಿ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಭಾರತದಲ್ಲಿ ಕೆಲಸ ಮಾಡುವ ಅಮೆರಿಕ ಸರ್ಕಾರದ ಉದ್ಯೋಗಿಗಳು ಸಹ ಈ ರಾಜ್ಯಗಳಿಗೆ ಪ್ರಯಾಣಿಸಲು ವಿಶೇಷ ಅನುಮತಿ ಪಡೆಯಬೇಕು.
ಒಟ್ಟಾರೆ, ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅಮೆರಿಕದ ಪ್ರಯಾಣ ಸಲಹೆ ಎಚ್ಚರಿಕೆಯನ್ನು ನೀಡಿದೆ. ಇತ್ತ ಕೇಂದ್ರ ಸರ್ಕಾರವು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಯಾಣಿಕರು ಜಾಗರೂಕರಾಗಿರಲು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.



Click it and Unblock the Notifications

