Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಮೆರಿಕ ಅಧ್ಯಕ್ಷೀಯ ಚುನಾವಣೆ: ಬಾಹ್ಯಾಕಾಶದಿಂದ ಸುನೀತಾ ವಿಲಿಯಮ್ಸ್ ಮತದಾನ..!
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂತಿಮ ಘಟ್ಟ ತಲುಪಿದೆ. ಇಂದು ಕೊನೆಯ ಹಂತದ ಮತದಾನ ನಡೆಯಲಿದೆ. ಅಂದರೆ ಭಾರತದ ಕಾಲಮಾನ ಬುಧವಾರದ ಬೆಳಗ್ಗೆ ಮತದಾನ ಪ್ರಕ್ರಿಯೆ ಪೂರ್ಣವಾಗುತ್ತಿದೆ. ಈ ಬಾರಿಯ ಚುನಾವಣೆ ಉಳಿದ ವರ್ಷಕ್ಕಿಂತಲೂ ಬಹಳ ಅಚ್ಚರಿ ಮೂಡಿಸಿದೆ. ಈ ಬಾರಿ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಅಧ್ಯಕ್ಷೀಯ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಮೂಡಿದೆ.
ಹಾಗೆ ಈ ಬಾರಿಯ ಮತದಾನದ ಫಲಿತಾಂಶ ತಡವಾಗಿ ಪ್ರಕಟವಾಗಬಹುದು ಎನ್ನಲಾಗಿದೆ. ಏಕೆಂದರೆ ಹಲವು ಪ್ರಾಂತ್ಯಗಳಲ್ಲಿ ಬಿರುಸಿನ ಮತದಾನ ನಡೆದಿದೆ. ಹೀಗಾಗಿ ಫಲಿತಾಂಶ ತುಸು ತಡವಾಗಬಹುದು ಎನ್ನಲಾಗಿದೆ. 2020 ರ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ವಿಜೇತರಾಗಿ ಹೊರಹೊಮ್ಮಲು ಬರೋಬ್ಬರಿ 4 ದಿನಗಳ ಕಾಳ ತೆಗೆದುಕೊಳ್ಳಲಾಗಿತ್ತು ಅಷ್ಟು ದೀರ್ಘವಾಗಿ ಅಲ್ಲಿ ಮತ ಎಣಿಕೆ ನಡೆಯುತ್ತದೆ.

ಇನ್ನು ಈ ಬಾರಿಯ ಅಚ್ಚರಿಗಳಲ್ಲಿ ಒಂದಾಗಿರುವ ಮತದಾನ ಪ್ರಕ್ರಿಯೆಯಲ್ಲಿ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಕೂಡ ಭಾಗಿಯಾಗಿದ್ದಾರೆ. ಬಾಹ್ಯಾಕಾಶದಲ್ಲಿ ಸಿಲುಕಿರುವ ಅವರು ಮತದಾನ ನಡೆಸಿರುವುದು ಈ ಬಾರಿಯ ಅಚ್ಚರಿಯಾಗಿದೆ. ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ನಾಸಾ ಖಚಿತಪಡಿಸಿದೆ.
ಬಾಹ್ಯಾಕಾಶದಲ್ಲಿರುವ ಪ್ರತಿಯೊಬ್ಬ ಗಗನಯಾತ್ರಿಯೂ ತಮ್ಮ ಕರ್ತವ್ಯ ಮರೆಯದೆ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬೋಯಿಂಗ್ ಸ್ಟಾರ್‌ಲೈನರ್ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿ ನಾಲ್ವರು ಬಾಹ್ಯಾಕಾಶದಲ್ಲಿದ್ದಾರೆ. ಇವರೆಲ್ಲರೂ ಕೂಡ ಮತದಾನ ಮಾಡಿದ್ದಾರೆ ಎಂದು ನಾಸಾ ತಿಳಿಸಿದೆ.
ಬಾಹ್ಯಾಕಾಶದಿಂದ ಅವರು ಮತದಾನ ಮಾಡಿದ್ದು ಹೇಗೆ?
ಈ ಮತದಾನ ಪ್ರಕ್ರಿಯೆಯು ನಾವು ಸಾಮಾನ್ಯವಾಗಿ ಮತಕೇಂದ್ರಕ್ಕೆ ಹೋಗಲು ಸಾಧ್ಯವಾಗದೆ ಇರುವ ಮತದಾರರಿಂದ ಮಾಡಲ್ಪಡುವ ಮತದಾನ ಪ್ರಕ್ರಿಯೆಯನ್ನೇ ಹೋಲುತ್ತದೆ. ಈ ಮತದಾನವು ಬಾಹ್ಯಾಕಾಶ ಕೇಂದ್ರಿಂದ 1.2 ಮಿಲಿಯನ್ ಮೈಲು ದೂರದಲ್ಲಿರುವ ನಿಯಂತ್ರಣ ಕೇಂದ್ರಕ್ಕೆ ಸಂಚರಿಸಲಿದೆ. ಅಂದರೆ ಇಲ್ಲಿ ಮಾಡಲಾದ ಮತದಾನ ಪ್ರಕ್ರಿಯೆಯು ಟೆಕ್ಸಾಸ್‌ನ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ದಾಖಲಾಗಿತ್ತದೆ. ಇದು ಗೌಪ್ಯ ಮತದಾನ ಆಗಿರುವುದರಿಂದ ಯಾರಿಗೂ ಈ ಮತದಾನದ ಕುರಿತಂತೆ ತಿಳಿಯುವುದಿಲ್ಲ.
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿಯೇ ಗೈರು ಹಾಜರಿಯ ಒಂದು ಪೇಪರ್ ಹಾಗೂ ಫೆಡರಲ್ ಪೋಸ್ಟ್ ಕಾರ್ಡ್ ಅನ್ನು ಭರ್ತಿ ಮಾಡುತ್ತಾರೆ. ಅಂದರೆ ಅವರ ನಿಗದಿತ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಆಗುವುದಿಲ್ಲ ಎಂಬ ಒಂದು ಅರ್ಜಿಯಾದರೆ ಮತ್ತೊಂದು ತಾವು ಪೋಸ್ಟಲ್‌ನಿಂದ ಮತದಾನ ಮಾಡುತ್ತಿದ್ದೇವೆ ಎಂಬುದನ್ನು ದೃಢೀಕರಿಸುವ ಅರ್ಜಿಯಾಗಿರುತ್ತದೆ.
ಈ ಮತದಾನವು ಮೆಕ್ಸಿಕೋದಲ್ಲಿರುವ ಏಜೆನ್ಸಿ ಟೆಸ್ಟ್ ಫೆಸಿಲಿಟಿಯ ಆಂಟೆನಾ ಮೂಲಕ ದಾಖಲಾಗುತ್ತದೆ. ಈ ಮತಪತ್ರವು ಎನ್‌ಕ್ರಿಪ್ಟೆಡ್ ಮಾದರಿಯಲ್ಲಿರುತ್ತದೆ, ಮತದಾನ ಕೇಂದ್ರದ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಯಾರೊಬ್ಬರಿಗೂ ಈ ಪೇಪರ್ ಬಳಕೆಯ ಅಥಾರಿಟಿ ಇರುವುದಿಲ್ಲ.
1997 ರಲ್ಲಿ ಡೇವಿಡ್ ವುಲ್ಫ್ ಎಂಬ ಗಗನಯಾತ್ರಿ ಮೊಟ್ಟ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಮತ ಚಲಾಯಿಸಿದ್ದರು. 2020 ರ ಚುನಾವಣೆಯ ಸಮಯದಲ್ಲಿ ಕೇಟ್ ರೂಬಿನ್ಸ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮತ ಚಲಾಯಿಸಿದ ಕೊನೆಯ ಗಗನಯಾತ್ರಿಯಾಗಿದ್ದರು. ಆದರೆ ಈಗ ಬಾಹ್ಯಾಕಾಶದಲ್ಲಿ ಮಂದಿ ಮತಚಲಾಯಿಸಲಿದ್ದಾರೆ.



Click it and Unblock the Notifications