Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
US Open 2025: ಮೊದಲ ಬಾರಿಗೆ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಕಾರ್ಕಳದ ಆಯುಷ್ ಶೆಟ್ಟಿ!!
ಅಮೆರಿಕ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆಡುವುದೇ ಹಲವರ ಕನಸಾಗಿರಲಿದೆ. ಹಾಗೆ ಈ ಟೂರ್ನಿಯಲ್ಲಿ ಗೆಲುವು ಪಡೆಯುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಈಗ ಭಾರತ ಈ ಟೂರ್ನಿಯಲ್ಲಿ ಫೈನಲ್ ಗೆದ್ದು ಇತಿಹಾಸ ಬರೆದಿದೆ. 20 ವರ್ಷದ ಭಾರತೀಯ ಶಟ್ಲರ್ 47 ನಿಮಿಷಗಳಲ್ಲಿ 21-18, 21-13 ಅಂತರದಲ್ಲಿ ಜಯಗಳಿಸಿ, ಈ ಋತುವಿನ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್‌ನಲ್ಲಿ ಭಾರತದ ಪ್ರಶಸ್ತಿ ಬರವನ್ನು ಕೊನೆಗೊಳಿಸಿದರು.
ಪಂದ್ಯವು ಎರಡೂ ಆಟಗಾರರು 6-6 ಅಂತರದಲ್ಲಿ ಸಮಬಲ ಸಾಧಿಸುವ ಮೂಲಕ ಪ್ರಾರಂಭವಾಯಿತು, ನಂತರ ಆಯುಷ್ ಶೆಟ್ಟಿ ವಿರಾಮದ ವೇಳೆಗೆ 11-6 ಮುನ್ನಡೆ ಸಾಧಿಸಿದರು. ಯಾಂಗ್ 16-16 ಅಂತರದಲ್ಲಿ ಸಮಬಲಕ್ಕೆ ಹೋರಾಡಿದರು, ಆದರೆ ಶೆಟ್ಟಿ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಈ ಸಮಯದಲ್ಲಿ ಜಂಪ್ ಸ್ಮ್ಯಾಷಿಂಗ್ ಮೂಲಕ ಮೊದಲ ಸೆಟ್ ಜಯಗಳಿಸಿದರು.

ಎರಡನೇ ಗೇಮ್‌ನಲ್ಲಿ ಶೆಟ್ಟಿ 7-2 ಮುನ್ನಡೆ ಸಾಧಿಸಿ ಕೊನೆಯಲ್ಲಿ 17-12 ರಲ್ಲಿ ಜಯ ಸಾಧಿಸಿದರು. ಆಯುಷ್ ಶೆಟ್ಟಿ ಈ ಹಿಂದೆ 2023 ರ ಒಡಿಶಾ ಮಾಸ್ಟರ್ಸ್ ಸೂಪರ್ 100, 2023 ಬಹ್ರೇನ್ ಇಂಟರ್ನ್ಯಾಷನಲ್ ಮತ್ತು 2024 ರ ಡಚ್ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆಸಿದಿದ್ದರು.
2025 ರಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಶಟ್ಲರ್
ಈ ಋತುವಿನಲ್ಲಿ ಬಿಡಬ್ಲ್ಯೂಎಫ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಆಯುಷ್ ಪಾತ್ರರಾಗಿದ್ದಾರೆ, ಇದು ಭಾರತೀಯ ಬ್ಯಾಡ್ಮಿಂಟನ್‌ನಲ್ಲಿ ಸುಗಮ ಪರಿವರ್ತನೆಯ ಅವಧಿಯ ಸುಳಿವು ನೀಡುತ್ತದೆ. ಪ್ರಸ್ತುತ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ 34 ನೇ ಶ್ರೇಯಾಂಕದಲ್ಲಿರುವ ಅವರು, 2023 ರಲ್ಲಿ ಕೆನಡಾ ಓಪನ್‌ನಲ್ಲಿ ಲಕ್ಷ್ಯ ಸೇನ್ ಜಯಗಳಿಸಿದ ನಂತರ ಮೊದಲ ಬಾರಿಗೆ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಳ್ಳುವ ಮೂಲಕ ಭಾರತದ ಪುರುಷರ ಸಿಂಗಲ್ಸ್ ಪ್ರಶಸ್ತಿಗಾಗಿ ಕಾಯುವಿಕೆಯನ್ನು ಕೊನೆಗೊಳಿಸಿದರು.
ಯಾರು ಈ ಆಯುಷ್ ಶೆಟ್ಟಿ?
ಆಯುಷ್ ಶೆಟ್ಟಿ ಉಡುಪಿ ಜಿಲ್ಲೆಯ ಕಾರ್ಕಳದವರು. ಚಿಕ್ಕವರಿಂದಲೇ ಬ್ಯಾಡ್ಮಿಂಟನ್ ಗೇಮ್‌ನಲ್ಲಿ ಗುರುತಿಸಿಕೊಂಡಿದ್ದ ಅವರು, ಈಗ ಯುಎಸ್ ಓಪನ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡು ಇತಿಹಾಸ ಬರೆದಿದ್ದಾರೆ. ಆಯುಷ್‌ಗೆ ಉಡುಪಿ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು, ಈ ಯುಸ್ ಓಪನ್ ಪ್ರಶಸ್ತಿ ಗೆದ್ದಿರುವುದು ಮತ್ತೊಂದು ಗರಿ ಹೆಚ್ಚಿಸಿದೆ. ಅವರಿಗಿನ್ನು 20 ವರ್ಷವಾಗಿದ್ದು ಈ ಯುಎಸ್ ಓಪನ್ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಕೂಡ ಪಡೆದಿದ್ದಾರೆ.
ಆಯುಷ್ ಶೆಟ್ಟಿ ಯುವ ಬ್ಯಾಡ್ಮಿಂಟನ್ ಆಟಗಾರ ಮೇ 3 2005 ರಂದು ಕಾರ್ಕಳ ಬಳಿಯ ಸಾಣೂರಿನಲ್ಲಿ ಜನಿಸಿದ್ದರು. ಎಂಟು ವರ್ಷ ವಯಸ್ಸಿನಲ್ಲೇ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದರು, ಆರಂಭದಲ್ಲಿ ಅವರ ತಂದೆಯಿಂದ ತರಬೇತಿ ಪಡೆಯುತ್ತಿದ್ದರು. ಮನೆಯ ಹಿತ್ತಲಿನಲ್ಲಿ ಸಣ್ಣ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. ಇದಾದ ಅವರ ಪ್ರತಿಭೆ ಗುರುತಿಸಿದ ಮನೆಯವರು ಬೆಂಗಳೂರಿನಲ್ಲಿ ಹೆಚ್ಚಿನ ತರಬೇತಿಗಾಗಿ ಸೇರಿಸಿದ್ದರು. ಅಲ್ಲಿಂದ ಅವರು ಸ್ಪರ್ಧಾತ್ಮಕ ಟೂರ್ನಿಗಳಲ್ಲೂ ಭಾಗವಹಿಸಲು ಆರಂಭಿಸಿದರು.
ಆಯುಷ್ ಶೆಟ್ಟಿ ಅವರು ಅಮೆರಿಕದ ಸ್ಪೋಕೇನ್‌ನಲ್ಲಿ ನಡೆದ 2023 ರ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್‌ನ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು. ಇದು ಅವರನ್ನು ಬ್ಯಾಡ್ಮಿಂಟನ್‌ನಲ್ಲಿ ಭಾರತದ ಯುವ ಪ್ರತಿಭೆ ಎಂಬ ಹೆಗ್ಗುರುತಿಗೆ ಕಾರಣವಾಯಿತು. ಇದಾದ ಬಳಿಕ ಅವರು 2021 ರಲ್ಲಿ ಡೆನ್ಮಾರ್ಕ್ ಜೂನಿಯರ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲೂ ಕೂಡ ಜಯ ದಾಖಲಿಸಿದರು. ಒಡಿಶಾ ಮಾಸ್ಟರ್ಸ್ ಸೂಪರ್ 100 (2023), ಬಹ್ರೇನ್ ಇಂಟರ್ನ್ಯಾಷನಲ್ ಚಾಲೆಂಜ್ (2023) ಮತ್ತು ಡಚ್ ಓಪನ್ (2024) ನಲ್ಲಿ ರನ್ನರ್-ಅಪ್ ಸ್ಥಾನಗಳನ್ನು ಪಡೆದರು.



Click it and Unblock the Notifications