Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಡೆಲಿವರಿ ಸಮಯದಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಹಾಕ್ಕೊಂಡಿದ್ದ ಟಿ-ಶರ್ಟ್ ಬೆಲೆ ಎಷ್ಟು ಗೊತ್ತಾ?
ಚಿರಂಜೀವಿ ಪುತ್ರ ರಾಮ್ ಚರಣ್ ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದವರು. ಆದ್ರೆ ಯಾವಾಗ RRR ರಿಲೀಸ್ ಆಯ್ತೋ ಅಲ್ಲಿಂದ ಭಾರತದಾದ್ಯಂತ ಹೆಸರು ಗಳಿಸ್ತಾರೆ. ಇನ್ನೂ RRR ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆದು ವಿಶ್ವದಾದ್ಯಂತ ಸೌಂಡ್ ಮಾಡಿತ್ತು. ಇತ್ತೀಚಿಗಷ್ಟೇ ರಾಮ್ ಚರಣ್ ದಂಪತಿಗಳು ಮದುವೆಯಾಗಿ ಬರೋಬ್ಬರಿ ಹತ್ತು ವರ್ಷಗಳ ನಂತರ ಹೆಣ್ಣು ಮಗುವನ್ನು ಪಡೆದಿದ್ದಾರೆ.
ಆದ್ರೆ ರಾಮ್ ಚರಣ್ ದಂಪತಿಗೆ ಹೆಣ್ಣು ಮಗು ಆಗಿದೆ ಅನ್ನೋದಕ್ಕಿಂತಲೂ ಆ ದಿನ ರಾಮ್ ಚರಣ್ ಪತ್ನಿ ಹಾಕಿದ್ದ ಟೀ-ಶರ್ಟ್ ತುಂಬಾನೇ ಸದ್ದು ಮಾಡ್ತಿದೆ. ಅಷ್ಟಕ್ಕು ಡೆಲಿವರಿ ಸಮಯದಲ್ಲಿ ರಾಮ್ ಚರಣ್ ಪತ್ನಿ ಹಾಕಿದ್ದ ಟೀ-ಶರ್ಟ್ ನಲ್ಲಿ ಅಂತಹ ವಿಶೇಷ ಏನಿತ್ತು? ಆ ಬಟ್ಟೆಯ ಬೆಲೆ ಎಷ್ಟು ಅನ್ನೋದ್ರ ಬಗ್ಗೆ ತಿಳಿಯೋಣ.

ಸೆಲೆಬ್ರಿಟಿ ಎಂದ ಮೇಲೆ ಅವರು ಎಲ್ಲೇ ಹೋದರೂ ಕೂಡ ಅವರ ಮೇಲೆ ಎಲ್ಲರಿಗೂ ಒಂದು ಕಣ್ಣು ಇದ್ದೇ ಇರುತ್ತೆ. ಡೆಲಿವರಿಗಾಗಿ ರಾಮ್ ಚರಣ್ ಜೊತೆ ಉಪಾಸನ ಅಪೋಲೋ ಆಸ್ಪತ್ರೆಗೆ ಆಗಮಿಸಿದ್ರು. ಈ ಸಂದರ್ಭದಲ್ಲಿ ಕ್ಯಾಮರಾ ಕಣ್ಣು ಈ ಜೋಡಿಯ ಮೇಲಿತ್ತು. ಈ ದಿನ ಉಪಾಸನ ಗುಲಾಬಿ ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಹಾಕಿದ್ರು. ನೋಡೋದಕ್ಕೆ ಈ ಟೀ ಶರ್ಟ್ ಸಿಂಪಲ್ ಆಗಿದ್ರೂ ಕೂಡ ಇದರ ಬೆಲೆ ಕೇಳಿದ್ರೆ ಎಂತವರು ಶಾಕ್ ಆಗೋದು ಗ್ಯಾರಂಟಿ.
ಹೌದು, ಆ ದಿನ ಉಪಾಸನ ಬ್ರಾಂಡೆಟ್ ಟೀ-ಶರ್ಟ್ ಅನ್ನು ಧರಿಸಿದ್ರು. ಇದು ಕೊಂಚ ದುಬಾರಿ ಅಂತಾನೇ ಹೇಳಬಹುದು. ಯಾಕಂದ್ರೆ ಗುಚ್ಚಿ ಬ್ರಾಂಡ್ ನ ಸಿಂಪಲ್ ಟೀ-ಶರ್ಟ್ ಇದಾಗಿದ್ದು, ಆದರೆ ಇದರ ಬೆಲೆ ಬರೋಬ್ಬರಿ 34,842 ರೂಪಾಯಿ ಆಗಿತ್ತಂತೆ. ಇಷ್ಟೊಂದು ದುಬಾರಿ ಬಟ್ಟೆ ಹಾಕಿಕೊಂಡು ಡೆಲಿವರಿಗೆ ಬಂದಿದ್ರಾ ಅನ್ನೋದು ಇದೀಗ ಬಹುದೊಡ್ಡ ವಿಚಾರವಾಗಿದೆ. ಸಾಮಾನ್ಯ ಜನರಿಗಾದರೆ ಇದೇ ದುಡ್ಡಿನಲ್ಲಿ ಡಿಲಿವರಿಯೇ ಆಗ್ತಿತ್ತು ಅಂತ ಜನ ಕಾಮೆಂಟ್ ಮಾಡ್ತಿದ್ದಾರೆ.
ಸೆಲೆಬ್ರಿಟಿಗಳು ಅಂದ್ರೆ ಹಾಗೆನೇ ಅಲ್ವಾ? ಅವರು ಧರಿಸೋ ಪ್ರತಿಯೊಂದು ವಸ್ತುಗಳು ಕೂಡ ದುಬಾರಿಯಾಗಿದ್ದು, ಬೆಲೆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ಬಟ್ಟೆ ಹಾಕಿ ಕೊಳ್ಳೋದಕ್ಕೆ ಆರಾಮದಾಯಕವಾಗಿದ್ರೆ ಸಾಕು ಅಂತ ಮಾತ್ರ ಅವರು ಲೆಕ್ಕಾಚಾರ ಹಾಕ್ತಾರೆ ಅಷ್ಟೇ.
ಇನ್ನೂ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಉಪಾಸನಾಗೆ ಮಗು ಆಗಿದ್ದಕ್ಕಿಂತ ಜನ ಅವರ ಟೀ ಶರ್ಟ್ ಬಗ್ಗೆನೇ ಮಾತನಾಡಿಕೊಳ್ಳೋದಕ್ಕೆ ಶುರು ಹಚ್ಚಿಕೊಂಡಿದ್ದಾರೆ.



Click it and Unblock the Notifications
