Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಸೈಫ್ ಅಲಿ ಖಾನ್ 150 ಕೊಠಡಿ ಅರಮನೆ ಬಗ್ಗೆ ಗೊತ್ತಾ? ಇದರ ಬೆಲೆ ಎಷ್ಟಿದೆ ಗೊತ್ತಾ?
ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಮೇಲೆ ದರೋಡೆಕೋರ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಇಡೀ ಸಿನಿಮಾರಂಗವನ್ನು ಆತಂಕಕ್ಕೆ ತಳ್ಳಿದೆ. ಹಾಗೆ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಸೈಫ್ ಅಲಿ ಖಾನ್‌ಗೆ ಸುಮಾರು 6ಕ್ಕೂ ಹೆಚ್ಚು ಕಡೆ ಆತ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಸದ್ಯ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದು ಕಡೆ ಭದ್ರತಾ ಲೋಪ ಹಾಗೂ ಹಲ್ಲೆ ಮಾಡಿದಾತನ ಶೋಧಕ್ಕೆ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ. ಹಾಗೆ ಪ್ರಕರಣದ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸೋದಾಗಿ ಹೇಳಿದ್ದಾರೆ. ಸದ್ಯ ಕೆಲಸದಾಕೆ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ. ಹಾಗೆ ಟೈಟ್ ಸೆಕ್ಯೂರಿಟಿಯ ನಡುವೆ ಆತ 10ನೆ ಮಹಡಿ ವರೆಗೂ ತಲುಪಿದ್ದು ಹೇಗೆ ಎಂಬ ಅನುಮಾನಗಳು ಸಹ ಹುಟ್ಟಿಕೊಂಡಿದೆ.

ಇನ್ನು ಬಾಲಿವುಡ್‌ನಲ್ಲಿ ಸಕ್ಸಸ್‌ಫುಲ್ ನಟರ ಪೈಕಿ ಸೈಫ್ ಅಲಿ ಖಾನ್ ಕೂಡ ಒಬ್ಬರು. ಸೈಫ್ ಅಲಿ ಖಾನ್ ಅವರ ನಿವ್ವಳ ಆಸ್ತಿ ಬರೋಬ್ಬರಿ 1,200 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ನಟ ಸೈಫ್ ಪ್ರತಿ ಸಿನಿಮಾಗೆ 10-15 ಕೋಟಿ ರೂ ಸಂಭಾವನೆಯಾಗಿ ಪಡೆಯುತ್ತಾರೆ ಎಂದು ತಿಳಿದುಬಂದಿದೆ. 2023ರಲ್ಲಿ ಅವರು ಸುಮಾರು 30 ಕೋಟಿ ರೂಪಾಯಿಯನ್ನು ತಮ್ಮ ಆಸ್ತಿಗೆ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ. 2024-25ರಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ.
ಸೈಫ್ ನಟನೆ ಮಾತ್ರವಲ್ಲ, ಸೈಫ್ ಇಲ್ಯುಮಿನಾಟಿ ಫಿಲ್ಮ್ ಮತ್ತು ಬ್ಲ್ಯಾಕ್ ನೈಟ್ ಫಿಲ್ಮ್ಸ್ ಎಂಬ ಎರಡು ಸಿನಿಮಾ ನಿರ್ಮಾಣ ಸಂಸ್ಥೆ ಕೂಡ ಹೊಂದಿದ್ದಾರೆ. ಹಾಗೆ ಹೌಸ್ ಆಫ್ ಪಟೌಡಿ ಎಂಬ ಬಟ್ಟೆ ಬ್ರಾಂಡಿಂಗ್ ಹೊಂದಿದ್ದಾರೆ. ಹಾಗೆ ಸೈಫ್ ಪತ್ನಿ ಕರೀನಾ ಕಪೂರ್ ಕೂಡ ಸುಮಾರು 485 ಕೋಟಿ ರೂಪಾಯಿ ನಿವ್ವಳ ಆಸ್ತಿ ಮೌಲ್ಯ ಹೊಂದಿದ್ದಾರೆ.
ಸೈಫ್ ಮುಂಬೈನ ಬಾಂದ್ರಾದಲ್ಲಿರುವ ನಾಲ್ಕು ಅಂತಸ್ತಿನ ಅದ್ಭುತ ಫ್ಲಾಟ್‌ನಲ್ಲಿ ನೆಲೆಸಿದ್ದಾರೆ. ಸೈಫ್ ಅವರು ಸದ್ಗುರು ಬಿಲ್ಡರ್ಸ್ ನಿರ್ಮಾಣದ ಸದ್ಗುರು ಶರಣ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ಇದರ ಬೆಲೆ ಸುಮಾರು 100 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸ್ವಿಮ್ಮಿಂಗ್ ಪೂಲ್, ಥಿಯೇಟರ್, ಅತ್ಯಾಧುನಿಕ ಕಿಚನ್, ಪಾರ್ಕಿಂಗ್ ಎಲ್ಲಾ ಸೌಕರ್ಯವಿದೆ. ಇದೇ ಅಪಾರ್ಟ್‌ಮೆಂಟ್‌ನಲ್ಲಿ ಈಗ ಘಟನೆ ನಡೆದಿದೆ.
ಹಾಗೆ ಸೈಪ್ ಬಳಿ 1.71 ಕೋಟಿ ರೂ. ಮೌಲ್ಯದ ಐಷಾರಾಮಿ ಮರ್ಸಿಡೀಸ್ ಬೆನ್ಜ್ ಎಸ್ 350 ಹೊಂದಿದ್ದಾರೆ. ಹಾಗೆ ಆಡಿ ಕ್ಯೂ7 ಮತ್ತು ಜೀಪ್ ವ್ರ್ಯಾಗ್ಲರ್ ಕಾರು ಹೊಂದಿದ್ದಾರೆ. ಇದಿಷ್ಟೇ ಅಲ್ಲ ಹರಿಯಾಣದಲ್ಲಿ ಬಹುದೊಡ್ಡ ಅರಮನೆಯನ್ನೇ ಅವರು ಹೊಂದಿದ್ದಾರೆ. ಇದನ್ನು ಇಬ್ರಾಹಿಂ ಕೋಥಿ ಎಂದು ಕರೆಯಲಾಗುತ್ತದೆ. ಈ ಭವ್ಯ ಅರಮನೆಯ ಒಟ್ಟು ಮೌಲ್ಯ ಬರೋಬ್ಬರಿ 800 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು 10 ಎಕರೆಗೂ ಅಧಿಕ ಸ್ಥಳದಲ್ಲಿ ಹರಡಿಕೊಂಡಿದೆ. ಈ ಅರಮನೆ ಬರೋಬ್ಬರಿ 150 ಕೊಠಡಿಗಳ ಹೊಂದಿದೆ.
ಈ ಅರಮನೆ ಕಟ್ಟಿದ್ಯಾರು?
1900ರ ದಶಕದಲ್ಲಿ ಈ ಅರಮನೆಯನ್ನು ಸೈಫ್ ಅಲಿ ಖಾನ್ ಅವರ ಅಜ್ಜ ನವಾಬ್ ಇಫ್ತಿಕರ್ ಅಲಿ ಖಾನ್ ನಿರ್ಮಿಸಿದ್ದಾರೆ. ಈ ಅರಮನೆಯ ಶೈಲಿಯು ದೆಹಲಿಯ ಇಂಪೀರಿಯಲ್ ಹೋಟೆಲ್‌ನಿಂದ ಸ್ಪೂರ್ತಿ ಪಡೆದಿದೆ. ಆದ್ರೆ 2005ರಿಂದ 2014ರ ವರೆಗೆ ಈ ಅರಮನೆ ನೀಮ್ರಾನ್ ಹೋಟೆಲ್ ಅವರ ಅಧಿಕಾರದಲ್ಲಿತ್ತು. ಬಳಿಕ ಸೈಫ್ ಮತ್ತೆ ಇದನ್ನು ಖರೀದಿಸಿದರು.



Click it and Unblock the Notifications
