Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಆಕಾಶದಲ್ಲಿ ರಚನೆಯಾದವು ವಿಚಿತ್ರ ಮೋಡಗಳು: ಇದರ ಹಿಂದಿರುವ ಕೈವಾಡವೇನು?
ಆಕಾಶದಲ್ಲಿ ಯಾವಾಗಲೂ ಒಂದೊಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ. ಯಾವುದಾದ್ರು ವಿಚಿತ್ರ ವಸ್ತು ಕಾಣಿಸುವುದು, ಇಲ್ಲವೆ ವಿಚಿತ್ರ ಘಟನೆಗಳು ಜರುಗುವುದು ನಡೆಯುತ್ತಲೇ ಇರುತ್ತದೆ. ಇದರ ಜೊತೆ ಒಂದಿಷ್ಟು ಯುಎಫ್‌ಓಗಳು ಕಾಣಸಿಗುವುದು ಸಹ ನಡೆಯುತ್ತದೆ.
ಆದರೆ ಈಗೊಂದು ಘಟನೆ ನೆರೆದವರಿಗೆ ಅಚ್ಚರಿ ಮೂಡಿಸಿದೆ. ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಚಿತ್ರ ವಿಚಿತ್ರ ರೀತಿಯ ಮೋಡಗಳು ಕಾಣಿಸಿಕೊಂಡು ನೋಡುಗರಲ್ಲಿ ಅಚ್ಚರಿಗೆ ಕಾರಣವಾಗಿವೆ. ಅವು ಸಣ್ಣ ಸಣ್ಣ ಮೋಡಗಳಲ್ಲ ಬದಲಿಗೆ ದೊಡ್ಡ ಗಾತ್ರದ ಹಿಮದಂತೆ ಕಾಣುವ ಮೋಡದ ರಾಶಿಗಳು ಅತ್ಯಂತ ಕೆಳಗೆ ವಿಚಿತ್ರ ರೀತಿಯಲ್ಲಿ ಕಂಡಿಬಂದಿವೆ.

ಇದನ್ನು ಕಂಡ ಜನರು ತಮ್ಮ ಮೊಬೈಲ್‌ನಲ್ಲಿ ಅಪರೂಪದ ವಿದ್ಯಮಾನಗಳನ್ನು ಸೆರೆಹಿಡಿದಿದ್ದಾರೆ. ಕೆಲವರು ಈ ವಿದ್ಯಮಾನ ಕಂಡು ಅಚ್ಚರಿಗೊಂಡಿದ್ದರೆ ಮತ್ತೆ ಕೆಲವರು ಒಂದೊಂದು ರೀತಿಯ ಕಥೆ ಹೇಳುತ್ತಿದ್ದಾರೆ. ಈ ಮೋಡಗಳು ಆಕಾಶದಿಂದ ಇಳಿದಿರುವ ಯಾವುದೋ ವಾಹನಗಳಂತೆ, ಅನಗ್ರಹ ಜೀವಿಗಳ ವಾಹನಗಳಿಂದ್ದಂತೆ ಕಂಡುಬಂದಿದೆ.
ಹೀಗಾಗಿ ವಿದ್ಯಮಾನ ಕಂಡ ಜನರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳ ಕಂಡ ಜನರು ಸಹ ಅಚ್ಚರಿಗೆ ಒಳಗಾಗಿದ್ದಾರೆ. ಆದರೆ ಇದು ಯಾವ ಅನ್ಯಗ್ರಹ ಜೀವಿಗಳು, ಅಥವಾ ಬೇರೆ ಯಾವುದೇ ಅನ್ಯ ಪ್ರಭಾವದಿಂದ ಉಂಟಾಗಿರುವ ವಿದ್ಯಮಾನವಲ್ಲ ಬದಲಿಗೆ ಇದೊಂದು ಲೆಂಟಿಕ್ಯುಲರ್ ಮೋಡಗಳು.
ಲೆಂಟಿಕ್ಯೂಲರ್ ಮೋಡಗಳು ಅಂದರೆ ಏನು?
ಈ ಮೋಡಗಳು ಪರ್ವತ, ಬೆಟ್ಟಗಳ ತಳಮಟ್ಟದ ಜಾಗದಲ್ಲಿ ಸೃಷ್ಟಿಯಾಗುತ್ತವೆ, ಇದು ಗಾಳಿ ಮತ್ತು ಮೋಡದ ನಡುವಿನ ಘರ್ಷಣೆಯ ಕಾರಣದಿಂದಾಗಿ ರೂಪುಗೊಳ್ಳುತ್ತವೆ. ಟಿಕ್ಯುಲರ್ ಮೋಡಗಳು ಅವುಗಳ ಮಸೂರದಂತಹ ಆಕಾರ ಮತ್ತು ನಯವಾದ, ತಟ್ಟೆಯಂತಹ ನೋಟದಿಂದ ವಿಶಿಷ್ಟವಾದ ಮತ್ತು ಸಮ್ಮೋಹನಗೊಳಿಸುವ ಹವಾಮಾನ ವಿದ್ಯಮಾನವಾಗಿದೆ. ಗಾಳಿಯ ಪ್ರವಾಹಗಳು ಅಡೆತಡೆಗಳನ್ನು ಎದುರಿಸುತ್ತವೆ ಮತ್ತು ವಾತಾವರಣದ ಅಡಚಣೆಗಳನ್ನು ಉಂಟುಮಾಡುತ್ತವೆ. ತೇವಾಂಶವುಳ್ಳ ಗಾಳಿಯು ಈ ಅಡೆತಡೆಗಳ ಮೇಲೆ ಬಲವಂತಾಗಿ ನುಗ್ಗಿದಾಗ ಘನೀಕೃತ ಮೋಡಗಳು ಕಾಣಿಸಿಕೊಳ್ಳುತ್ತದೆ.
ಈ ಸ್ಥಿರವಾದ ಗಾಳಿಯ ಹರಿವು ಮತ್ತು ಗಾಳಿಯ ಮಾದರಿಗಳ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಲೆಂಟಿಕ್ಯುಲರ್ ಮೋಡಗಳು ರೂಪುಗೊಳ್ಳುತ್ತವೆ. ಈ ಲೆಂಟಿಕ್ಯುಲರ್ ಮೋಡಗಳು ಸಂಪೂರ್ಣವಾಗಿ ನೈಸರ್ಗಿಕವಾಗಿರುತ್ತವೆ ಇದರಿಂದ ಯಾವ ಹಾನಿಯೂ ಆಗುವುದಿಲ್ಲ. ಆದರೆ ಗಾಳಿಯ ಒತ್ತಡದ ಕಾರಣದಿಂದ ಇವು ಭೂಮಿಯ ಸಮೀಪಕ್ಕೆ ಬರಲಿದೆ. ಒಂದು ವೇಳೆ ತಾಪಮಾನ ತಣ್ಣಗಾಗಿದ್ದರೆ ಬಹಳ ಕಾಲದ ವರೆಗೂ ಗಾಳಿಯಲ್ಲಿ ತೇಲುತ್ತಲೇ ಇರುತ್ತದೆ.
ಈ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಜನರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದು ಅಪಾಯ ಮುನ್ಸೂಚನೆ ಎಂದು ಆಘಾತಕ್ಕೆ ಒಳಗಾದವರಂತೆ ಹೌಹಾರಿದ್ಧಾರೆ. ಮತ್ತೆ ಕೆಲವರು ಇದೊಂದು ಎಡಿಟ್ ಮಾಡಲಾದ ಫೋಟೋ ಆಗಿವೆ. ಈ ರೀತಿಯ ಮೋಡಗಳು ರೂಪುಗೊಳ್ಳಲು ಸಾಧ್ಯವೇ ಇಲ್ಲ ಎಂದು ಈ ವೈಜ್ಞಾನಿಕ ವಿದ್ಯಮಾನಕ್ಕೆ ತಣ್ಣೀರು ಹಾಕುವ ಯತ್ನ ಮಾಡಿದ್ದಾರೆ.
ಮತ್ತೆ ಕೆಲವರು ಇದು ಅನ್ಯಗ್ರಹ ಜೀವಿಗಳ ಕೈವಾಡ ಎಂದಿದ್ದಾರೆ. ಇತ್ತಿಚಿಗೆ ಆಕಾಶದಲ್ಲಿ ಚಿತ್ರ ವಿಚಿತ್ರ ಘಟನೆಗಳು, ವಸ್ತುಗಳು ಕಾಣಿಸಿಕೊಳ್ಳುತ್ತಿದ್ದು, ಇದೂ ಕೂಡ ಅದರ ಒಂದು ಭಾಗವಾಗಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಮತ್ತೆ ಕೆಲವರು ಪ್ರಕೃತಿಯ ಈ ಸೌಂದರ್ಯಕ್ಕೆ ಮನ ಸೋತಿದ್ದಾರೆ. ನಿಸರ್ಗದಲ್ಲಿ ಉಂಟಾಗುವ ಇಂತಹ ಅಚ್ಚರಿಗಳು ಮನಸ್ಸಿಗೆ ಉಲ್ಲಾಸ ತರುತ್ತವೆ. ಇಂತಹ ಅದ್ಭುತ ನಿಸರ್ಗ ಮಾತ್ರ ಸೃಷ್ಟಿಸಲು ಸಾಧ್ಯ ಎಂದು ಬಳಕೆದಾರರೊಬ್ಬರು ಈ ಅಪರೂಪದ ವಿದ್ಯಮಾನಕ್ಕೆ ಮನಸೋತಿದ್ದಾರೆ.
ಆದ್ರೆ ಆಕಾಶ ಎಂಬುದು ಎಷ್ಟು ನಿಗೂಢತೆಗಳ ಇಟ್ಟುಕೊಂಡಿದೆ ಎಂಬುದಕ್ಕೆ ಇಂತಹ ನೂರಾರು ಘಟನೆಗಳು ಸಾಕ್ಷಿಯಾಗುತ್ತವೆ. ಅದರಲ್ಲೂ ಇಂತಹ ವಿಚಿತ್ರ ಘಟನೆಗಳು ನಡೆದಾಗ ಜನರಲ್ಲಿ ಅಚ್ಚರಿಯ ಜೊತೆಗೆ ಕುತೂಹಲವೂ ಮೂಡುತ್ತದೆ.



Click it and Unblock the Notifications