Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
2025ರಲ್ಲಿ ಹೊರಟಿದ್ದ ವಿಮಾನ 2024ರಲ್ಲಿ ಲ್ಯಾಂಡಿಂಗ್..! ಈ ಅಚ್ಚರಿ ನಡೆದಿದ್ದು ಹೇಗೆ?
ತಿಂಗಳು, ವರ್ಷಗಳ ಹಿಂದೆ ಹೊರಟ ರೈಲಯ ತನ್ನ ನಿಲ್ದಾಣವನ್ನು ತಡವಾಗಿ ತಲುಪಿರುವ ಉದಾಹರಣೆಯನ್ನು ನೀವು ಕೇಳಿರುತ್ತೀರಿ. ವರ್ಷಗಳಿಗೂ ಹೆಚ್ಚು ತಡವಾಗಿ ನಿಲ್ದಾಣ ತಲುಪಿರುವ ರೈಲುಗಳ ಉದಾಹರಣೆ ಇದೆ. ಆದ್ರೆ ಇವತ್ತಿನ ದಿನಾಂಕದಲ್ಲಿ ಹೊರಟು ಹಿಂದಿನ ದಿನ ತಲುಪಿದ ವಿಚಿತ್ರ ಘಟನೆ ಎಲ್ಲಾದರೂ ನಡೆಯುತ್ತಾ? ಇಂತಹದೊಂದು ಘಟನೆ ಈಗ ಕುತೂಹಲಕ್ಕೆ ಕಾರಣವಾಗಿದೆ.
ಪ್ರಯಾಣಿಕರು ತುಂಬಿದ್ದ ವಿಮಾನವೊಂದು 2025ರಲ್ಲಿ ಹಾರಾಟ ಆರಂಭಿಸಿ 2024ರಲ್ಲಿ ಲ್ಯಾಂಡ್ ಆಗಿರುವ ಅಪರೂಪದ ಘಟನೆ ಇದು. ಅರೇ..ಇದು ಹೇಗೆ ಸಾಧ್ಯ ಎಂಬ ಕುತೂಹಲ ನಿಮ್ಮಲ್ಲೂ ಮೂಡಬಹುದು. ಆದ್ರೆ ಈ ರೀತಿಯ ಅಪರೂಪದ ಹಾಗೂ ವಿಚಿತ್ರ ಘಟನೆಗೆ ನೂರಾರು ಮಂದಿ ಸಾಕ್ಷಿಯಾಗಿದ್ದಾರೆ. 2025ರಲ್ಲಿ ಆಕಾಶಕ್ಕೆ ಹಾರಿದ ವಿಮಾನ 2024ರಲ್ಲಿ ಬಂದು ಇಳಿದಿದೆ.

ಏನಿದು ವಿಚಿತ್ರ ಘಟನೆ
ಇದು ನಡೆದಿರುವುದು ಈ ಹೊಸ ವರ್ಷದ ದಿನದಂದು ವಿಮಾನ 2025ರಲ್ಲಿ ಅಂದರೆ ಹೊಸ ವರ್ಷ ಆರಂಭಗೊಂಡಾಗ ಪ್ರಯಾಣಿಕರ ತುಂಬಿಸಿಕೊಂಡು ಹಾರಾಟ ಆರಂಭಿಸಿದೆ. ಆದ್ರೆ ವಿಮಾನ ತನ್ನ ನಿಗದಿತ ನಿಲ್ದಾಣಕ್ಕೆ ಬಂದು ಇಳಿದಾಗ ಅಲ್ಲಿನ್ನು 2024ನೇ ವರ್ಷ ಚಾಲ್ತಿಯಲ್ಲಿದೆ. ಇಂತಹ ಅಚ್ಚರಿ ವಿದ್ಯಮಾನವೊಂದು 2 ದಿನದ ಹಿಂದೆ ನಡೆದಿದೆ.
ಜನವರಿ 1, 2025 ರಂದು ಹಾಂಗ್ ಕಾಂಗ್‌ನಿಂದ ಹೊರಟ ಪ್ರಯಾಣಿಕರ ವಿಮಾನವು ಲಾಸ್ ಏಂಜಲೀಸ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದಾಗ ಅಲ್ಲಿನ್ನು 2024ನೇ ವರ್ಷವೇ ಆಗಿತ್ತು. ಕ್ಯಾಥೆ ಪೆಸಿಫಿಕ್ ಫ್ಲೈಟ್ 880 ಹಾಂಗ್‌ಕಾಂಗ್‌ನ ಸ್ಥಳೀಯ ಸಮಯ ಸುಮಾರು 12 ಗಂಟೆಗೆ ಟೇಕ್ ಆಫ್ ಆಗಿತ್ತು. ಇದು ಲಾಸ್ ಎಂಜಲೀಸ್‌ಗೆ ಪ್ರಯಾಣಿಸಲು ಸುಮಾರು 12 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಆದ್ರೆ ವಿಮಾನ ಲಾಸ್ ಎಂಜಲಿಸ್‌ಗೆ ಬಂದು ಇಳಿಯುವಾಗ ರಾತ್ರಿ 8:30 ಆಗಿತ್ತು.
ಇಂಟರ್ನ್ಯಾಷನಲ್ ಡೇಟ್ ಲೈನ್ (ಅಕಾ ಐಡಿಎಲ್) ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ ಒಂದು ಅದೃಶ್ಯ ರೇಖೆಯಾಗಿದೆ. ಇದು ಎರಡು ದಿನಾಂಕಗಳನ್ನು ಪರಸ್ಪರ ಬೇರ್ಪಡಿಸುವ ಬಿಂದು ಎಂದು ಒಪ್ಪಿಕೊಳ್ಳಲಾಗಿದೆ. ಈ ರೇಖೆಯನ್ನು ದಾಟಿದರೆ ಸುಮಾರು 6 ಗಂಟೆಗಳ ವ್ಯತ್ಯಾಸ ನೋಡಬಹುದು. ಅಂದರೆ ಒಂದು ಬದಿಯಲ್ಲಿ ವಾಸಿಸುವ ಮಂದಿ ಒಂದು ದಿನ ಮುಂದೆ ಇರುತ್ತಾರೆ. ಆದ್ರೆ ಮತ್ತೊಂದು ಬದಿಯಲ್ಲಿ ಒಂದು ದಿನ ಹಿಂದೆ ಜೀವಿಸುತ್ತಿರುತ್ತಾರೆ.
ಈ ಫೆಸಿಫಿಕ್ ತೀರದಲ್ಲಿ ಎರಡು ದಿನಗಳನ್ನು ಒಂದೇ ದಿನದಲ್ಲಿ ನಾವು ಜೀವಿಸಬಹುದು. ಹಾಗೆ ಇದೊಂದು ವಿಚಿತ್ರ ವಿದ್ಯಮಾನ ನಡೆಯವ ಸ್ಥಳವಾಗಿ ಮಾರ್ಪಟ್ಟಿದೆ. ಇಲ್ಲಿ ಅಂತಾರಾಷ್ಟ್ರೀಯ ಸಮಯ ಗಡಿ ರೇಖೆ ಇರುವುದರಿಂದ ಇಂತಹ ವಿದ್ಯಮಾನ ಸಾಮಾನ್ಯ ಎನ್ನುವಂತಾಗುತ್ತದೆ. ಅಂತರರಾಷ್ಟ್ರೀಯ ದಿನಾಂಕ ರೇಖೆಯು ಸುಮಾರು 180° ಪೂರ್ವದಲ್ಲಿ ನೆಲೆಗೊಂಡಿದೆ. ಇದು ಯುಕೆ ಗ್ರೀನ್‌ವಿಚ್ ಮೂಲಕ ಹಾದುಹೋಗುತ್ತದೆ. ಈ ಎರಡು ಬದಿಯ ಪ್ರದೇಶದಲ್ಲಿ ಬೇರೆ ಬೇರೆ ಸಮಯಕ್ಕೆ ಇದು ಕಾರಣವಾಗುತ್ತದೆ.
ಈ ರೇಖೆಯ ಮೇಲೆ ನೀವು ಯಾವುದೇ ವಿಮಾನದಲ್ಲಿ ಹಾರಾಡಿದರು ಕೂಡ ಸಮಯದಲ್ಲಿ ಮಾತ್ರವಲ್ಲ ದಿನಾಂಕದಲ್ಲೂ ಬದಲಾವಣೆಯಾಗುವುದು ನೋಡಬಹುದು. ಅದರಲ್ಲೂ 2025ರಂದು ಹಾರಾಟ ನಡೆಸಿದಾಗ ನೀವು 2024ಕ್ಕೆ ಬಂದು ಇಳಿಯಬೇಕಾಗುತ್ತದೆ. ಇಂದೊಂದು ರೀತಿಯಲ್ಲಿ ಟೈಮ್ ಟ್ರಾವೆಲಿಂಗ್ ಎನ್ನಬಹುದು.



Click it and Unblock the Notifications
