Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಆಕಾಶದಿಂದ ಕಾಮನಬಿಲ್ಲು ಹೇಗೆ ಕಾಣುತ್ತೆ ಗೊತ್ತಾ? ನಾವು ಅರ್ಧ ಕಾಮನಬಿಲ್ಲು ನೋಡಲು ಕಾರಣವೇನು?
ನೀವು ಪರಿಸರದಲ್ಲಿ ಸಂಭವಿಸುವಂತಹ ಹಲವು ವಿಸ್ಮಯಗಳನ್ನು ನೋಡಿರುತ್ತೀರಿ. ನಿತ್ಯ ಇಲ್ಲವೆ ಆಗಾಗ ಏನಾದರೊಂದು ಅಚ್ಚರಿ ನಡೆಯುತ್ತಲೇ ಇರುತ್ತದೆ. ಹಾಗೆ ಮಳೆ ಬರುವಾಗ ಬಿಸಿಲು ಕೂಡ ಇದ್ದರೆ ಆಗ ನಮಗೆ ಕಾಮನಬಿಲ್ಲು ನೋಡಲು ಸಿಗುತ್ತೆ. ಕಾಮನ ಬಿಲ್ಲು 7 ಬಣ್ಣಗಳಿಂದ ಕೂಡಿರುವ ಪ್ರಕೃತಿಯ ವಿಸ್ಮಯವೇ ಸರಿ.
ಬಾನಂಗಳದಲ್ಲಿ ಮೂಡುವ ಈ ಕಾಮನ ಬಿಲ್ಲನ್ನು ಚಿಕ್ಕವರು ದೊಡ್ಡವರು ಎನ್ನದೆ ಎಲ್ಲರು ಅಚ್ಚರಿಯಿಂದ ಕಣ್ತುಂಬಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಹಾಗೆ ಈ ಕಾಮನ ಬಿಲ್ಲು ಮೂಡಲು ಕಾರಣವೇನು ಎಂಬುದನ್ನ ಕೂಡ ನಾವು ಅರಿತಿದ್ದೇವೆ. ಸೂರ್ಯನ ಬೆಳಕಿನ ಕಿರಣಗಳಿಗೆ ಮಳೆಯ ಹನಿಗಳು ಪ್ರತಿಫಲಿಸಿದಾಗ ಬೆಳಕು ವಕ್ರೀಭವನಗೊಂಡು ಬೆಳಕಿನಲ್ಲಿ ಅಡಗಿರುವ ಏಳು ಬಣ್ಣಗಳು ಆಕಾಶದಲ್ಲಿ ಕಾಮನಬಿಲ್ಲಿನ ರೂಪದಲ್ಲಿ ಮೂಡುತ್ತವೆ. ಕೆಂಪು ಬಣ್ಣಕ್ಕೆ ಅತ್ಯಂತ ಅಧಿಕ ತರಂಗಾಂತರದ ಗುಣ ಇರುವುದರಿಂದ ಅದು ಕಾಮನಬಿಲ್ಲಿನ ಮೇಲೆ ಅಂದರೆ ಮೊದಲ ಬಣ್ಣವಾಗಿ ನಮಗೆ ಕಾಣಿಸುತ್ತದೆ.

ಈ ಅಚ್ಚರಿ ಯಾವಾಗಲು ಸಂಭವಿಸುವುದಿಲ್ಲ, ವಕ್ರೀಭವನ ಹಾಗೂ ಬೆಳಕಿನ ಕ್ರಿಯೆಗಳು ಒಂದು ಸಂಯೋಗದಲ್ಲಿದ್ದಾಗ ಮಾತ್ರ ಸಂಭವಿಸುತ್ತದೆ. ಬಿಸಿಲು ಮಳೆ ಬರುವಾಗಲೆಲ್ಲ ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಈ ಕಾಮನ ಬಿಲ್ಲು ಮೂಡಲೇ ಬೇಕು ಎಂಬ ನಿಯಮವೇನಿಲ್ಲ. ಹಾಗೆ ಮಳೆ ಆಗದೆ ಇದ್ದಾಗ ಕೂಡ ಕೆಲವೊಮ್ಮೆ ಕಾಮನ ಬಿಲ್ಲು ಮೂಡುವುದು ನಾವು ನೋಡುತ್ತೇವೆ. ಇದೂ ವ್ರಕೀಭವನದ ಕಾರಣದಿಂದಾಗಿಯೇ ಉಂಟಾಗುತ್ತದೆ. ಆದರೆ ಮೋಡದ ಕಾರಣದಿಂದ ಈ ಕಾಮನ ಬಿಲ್ಲು ಮೂಡುತ್ತದೆ.
ಆಕಾಶದಿಂದ ಸೆರೆಹಿಡಿದ ವೃತ್ತಾಕಾರದ ಕಾಮನಬಿಲ್ಲು
ಇನ್ನು ಕಾಮನ ಬಿಲ್ಲು ಅರ್ಧ ಚಂದ್ರಾಕೃತಿಯಲ್ಲಿ ಮೂಡುವುದನ್ನು ನಾವೆಲ್ಲಾ ನೋಡಿದ್ದೇವೆ. ಕೆಲವೊಮ್ಮೆ ಎರಡೆರಡು ಕಾಮನಬಿಲ್ಲು ಒಟ್ಟಿಗೆ ಮೂಡುವುದು ಕೂಡ ನೋಡಬಹುದು. ಹಾಗೆ ಆಕಾಶದಿಂದ ನೋಡಿದಾಗ ಮೃತ್ತಾಕಾರವಾಗಿ ದೊಡ್ಡ ಛತ್ರಿಯಂತೆ ಇದು ಕಾಣಿಸುತ್ತದೆ. ಕಾಮನಬಿಲ್ಲು ವಾಸ್ತವವಾಗಿ ಪೂರ್ಣ ವೃತ್ತವಾಗಿದೆ. ಆದರೆ ನಾವು ಸಾಮಾನ್ಯವಾಗಿ ಬಾಗಿರುವ ಕಾಮನ ಬಿಲ್ಲನ್ನು ಮಾತ್ರ ನೋಡುತ್ತೇವೆ. ಆದ್ರೆ ನೀವು ಎತ್ತರದ ಪ್ರದೇಶದಲ್ಲಿದ್ದರೆ ಮಾತ್ರ ನಿಮಗೆ ಸಂಪೂರ್ಣ ಕಾಮನಬಿಲ್ಲು ನೋಡಲು ಸಿಗುತ್ತದೆ.
ಪೂರ್ಣ-ವೃತ್ತದ ಮಳೆಬಿಲ್ಲನ್ನು ವಿಮಾನದಿಂದ ನೋಡಬಹುದಾಗಿದೆ, ಏಕೆಂದರೆ ಹೆಚ್ಚಿನ ಎತ್ತರದಿಂದ ನೋಡಿದಾಗ, ಭೂಮಿಯ ಮೇಲ್ಮೈಯು ಮಳೆಬಿಲ್ಲಿನ ಕೆಳಗಿನ ಭಾಗಕ್ಕೆ ಅಡ್ಡಿಯಾಗುವುದಿಲ್ಲ ಹೀಗಾಗಿ ನಾವು ವಿಮಾನದಲ್ಲಿದ್ದರೆ ವೃತ್ತಾಕಾರದ ಕಾಮನ ಬಿಲ್ಲು ನೋಡಲು ಸಿಗುತ್ತದೆ, ಆದ್ರೆ ಭೂಮಿ ಮೇಲೆ ನಾವಿದ್ದಾಗ ಅರ್ಧ ಭಾಗ ಕಾಣಸಿಗುತ್ತದೆ. ಇನ್ನರ್ಧ ಭೂಮಿಯ ಸುತ್ತ ಮುಳುಗಿರುತ್ತದೆ.
ನೀವು ಸಮುದ್ರ ದಡದಲ್ಲಿದ್ದಾಗ ಅಥವಾ ಬೇರೆ ಎಲ್ಲಾದರು ಕಾಮನ ಬಿಲ್ಲು ನೋಡಿದಾಗ ಅದು ಭೂಮಿಯಿಂದ ಮೇಲೆದ್ದು ಬಂದಂತೆಯೇ ಕಾಣಿಸುತ್ತದೆ. ಇದು ಇನ್ನರ್ಧ ಭಾಗ ನೋಡಲು ನಮಗೆ ಸಾಧ್ಯವಾಗುವುದಿಲ್ಲ. ಸೂರ್ಯ 42 ಡಿಗ್ರಿಗಿಂತ ಕೆಳಗೆ ಇದ್ದಾಗ ಕಾಮನಬಿಲ್ಲು ಮೂಡುತ್ತದೆ. ಹೀಗಾಗಿ ಸಂಜೆಯ ಸಮಯದಲ್ಲಿ ಮೂಡುವ ಕಾಮನಬಿಲ್ಲು ನಿಖರವಾಗಿ ಸುಂದರವಾಗಿ ಕಾಣಿಸುತ್ತದೆ. ಅದರಲ್ಲೂ ಬಯಲು ಪ್ರದೇಶದಲ್ಲು ಮೂಡುವ ಕಾಮನಬಿಲ್ಲು ತೀರ ಪ್ರಕಾಶಮಾನವಾಗಿ ಕಾಣಿಸುತ್ತದೆ. ಇಲ್ಲಿ ಬೆಳಕಿನ ವಕ್ರೀಭವನ ಪ್ರಕ್ರಿಯೆಗೆ ಯಾವುದೇ ವಸ್ತುಗಳು ಅಡ್ಡಿಯಾಗದ ಕಾರಣ ಸುಂದರ ಕಾಮನಬಿಲ್ಲು ನೋಡಬಹುದು. ಸಾಮಾನ್ಯವಾಗಿ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮಳೆಬಿಲ್ಲಿನ (50%) ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ನೋಡುತ್ತೀರಿ.



Click it and Unblock the Notifications