Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ಯಾವ ರೀತಿಯ ಕಾಲಿನ ರಚನೆ ಹೊಂದಿದ್ದೀರಿ? ನಿಮ್ಮ ವ್ಯಕ್ತಿತ್ವವೇನು ಗೊತ್ತಾ?
ಒಬ್ಬರ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ನಾವು ಹಲವು ರೀತಿಯ ವಿಧಾನಗಳ ಬಳಸಬಹುದು, ಅವರ ದೈಹಿಕ ನಡುವಳಿಕೆಗಳಿಂದಲೂ ಕೂಡ ಅವರು ಎಂತಹ ವ್ಯಕ್ತಿ ಎಂಬುದನ್ನು ನಾವು ವಿವರಿಸಬಹುದು. ವ್ಯಕ್ತಿತ್ವ ಪರೀಕ್ಷೆಗಳು ವ್ಯಕ್ತಿಯ ಗುಪ್ತ ಗುಣಗಳೇನು ಎಂಬುದನ್ನು ವಿವರಿಸಲಿ ಸಹಕಾರಿಯಾಗಲಿದೆ. ಹಾಗೆ ಒಬ್ಬ ವ್ಯಕ್ತಿಯ ಗುಪ್ತ ಗುಣಗಳನ್ನು ತಿಳಿಯಲು ಮತ್ತು ಅವರ ಕುರಿತು ಅರಿಯುವ ಆಸಕ್ತಿದಾಯಕ ಮಾರ್ಗವೂ ಇದೆ. ಆದ್ರೆ ಎಲ್ಲಾ ವ್ಯಕ್ತಿತ್ವ ಪರೀಕ್ಷಗಳನ್ನು ನಾವು ವೈಜ್ಞಾನಿಕವಾಗಿ ಸಾಬೀತು ಮಾಡಲು ಸಾಧ್ಯವಿಲ್ಲ. ಆದ್ರೆ ನಾವು ಇತರರ ಗುಣವನ್ನು ಸ್ವಲ್ಪ ಮಟ್ಟಿಗಾದರು ಅಳೆಯಬಹುದು.
ಅದರಲ್ಲೂ ನಾವಿಂದು ನಿಮ್ಮ ಕಾಲಿನ ರಚನೆಯ ಮೂಲಕ ನಿಮ್ಮ ಗುಣಗಳೇನು ಎಂಬುದನ್ನು ತಿಳಿದುಕೊಳ್ಳುವಂತಹ ಪ್ರಯತ್ನ ಮಾಡೋಣ. ಹೌದು ಹಲವರು ನಿಮ್ಮ ಮುಖಛರ್ಯೆ, ನಿಮ್ಮ ದೇಹದ ರಚನೆಯ ಆಧಾರದ ಮೇಲೆಯೂ ನಿಮ್ಮ ಗುಣಗಳನ್ನು ಹೇಳಬಹುದು. ಆದ್ರೆ ನಾವಿಂದು ನಿಮ್ಮ ಕಾಲುಗಳ ರಚನೆಯ ಮೇಲೆ ಯಾವ ರೀತಿಯ ಗುಣಗಳ ಹೊಂದಿದ್ದೀರಿ ಎಂಬುದನ್ನು ನಾವು ತಿಳಿದುಕೊಳ್ಳೋವ ಪ್ರಯತ್ನ ಮಾಡೋಣ.

ಅಂದರ ನಿಮ್ಮ ಕಾಲಿನ ರಚನೆ ತೊಡೆಯಿಂದ ನೆಲಕ್ಕೆ ತಾಕುವವರೆಗೆ ಯಾವ ರೀತಿಯ ರಚನೆ ಹೊಂದಿದೆ ಎಂಬುದರ ಮೇಲೆ ಕೆಲವೊಂದು ವ್ಯಕ್ತಿತ್ವ ವಿವರಿಸಬಹುದಂತೆ. ನಿಮ್ಮ ಕಾಲಿನ ರಚನೆ ನೇರವಾಗಿದೆಯೇ? ಅಥವಾ ಬಿಲ್ಲಿನ ಆಕಾರದಲ್ಲಿ ಒಳಗೆ ಬಾಗಿದೆಯೇ ಇಲ್ಲವೆ ಮೊಣಕಾಲಿಗೆ ತಾಕಿ ನಂತರ ಹೊರಗೆ ಚಾಚಿದೆಯೇ ಎಂಬುದರ ಮೇಲೆ ವ್ಯಕ್ತಿತ್ವ ಹೇಳಬಹುದಂತೆ.
ಹಾಗಾದ್ರೆ ಯಾವ ರೀತಿಯ ಕಾಲಿನ ರಚನೆ ಹೊಂದಿರುವವರು ಯಾವ ರೀತಿ ಗುಣಗಳ ಹೊಂದಿದ್ದಾರೆ ಎಂಬುದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋವ ಪ್ರಯತ್ನ ಮಾಡೋಣ.
ನೇರವಾದ ರಚನೆ ಕಾಲುಗಳು
ನಿಮ್ಮ ಕಾಲಿನ ರಚನೆಯು ನೇರವಾಗಿದ್ದರೆ ಅಂದರೆ ನಿಂತಾಗ ನಿಮ್ಮ ಕಾಲುಗಳು ನೇರವಾಗಿ ನೆಲದ ಕಡೆಗಿದ್ದರೆ ಓರೆಯಾಗಿಲ್ಲ ಎಂದು ನಿಮಗೆ ಅನಿಸಿದರೆ ನೀವು ಈ ರೀತಿಯ ಗುಣಗಳನ್ನು ಹೊಂದಿರಬಹುದಂತೆ. ನೀವು ತಾರ್ಕಿಕ, ಸೃಜನಶೀಲ ಮತ್ತು ಸಾಹಸಮಯ ವ್ಯಕ್ತಿಯಾಗಿರಲಿದ್ದೀರಿ. ನೀವು ತುಂಬಾ ಬುದ್ಧಿವಂತರು ಮತ್ತು ಯಾವುದೇ ಪರಿಸ್ಥಿತಿಗೆ ಬಹುಬೇಗ ಹೊಂದಿಕೊಳ್ಳುವವರು. ನಿಮ್ಮ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವಿರಿ. ಇದು ಇತರರು ನಿಮ್ಮ ಪಾತ್ರವನ್ನು ಮೆಚ್ಚುವಂತೆ ಮಾಡುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಬಹಳಷ್ಟು ಆಸೆಗಳನ್ನು ತ್ಯಾಗ ಮಾಡುವವರು. ಯಾವಾಗಲು ಬೇರೆಯವರ ಸಂತೋಷ ಬಯಸುವ ಮಂದಿಯಾಗಿದ್ದೀರಿ. ಆಳವಾಗಿ ಯೋಚಿಸುವುದು, ಯಾವುದಾದರು ನಿರ್ಧಾರವನ್ನು ಪ್ರಶ್ನಿಸುವ ಬದಲಾಗಿ ಅದನ್ನು ಒಪ್ಪಿಕೊಳ್ಳುವಂತಹ ಗುಣವನ್ನು ಹೊಂದಿರುವವರಂತೆ.
ಬಿಲ್ಲಿನ ಆಕಾರದ ಕಾಲುಗಳು
ನಿಮ್ಮ ಕಾಲುಗಳು ಬಿಲ್ಲಿನಂತೆ ಬಾಗಿದ್ದರೆ, ಅಂದರೆ ಒಳಭಾಗದ ಕಡೆಗೆ ಬಾಗಿದ್ದರೆ ನೀವು ಬಹಳಷ್ಟು ಸಾಹಸಗಳ ಮಾಡಲು ಇಷ್ಟ ಪಡುವವರು. ನಿಮ್ಮನ್ನು ನಂಬಿ ಬಂದವರನ್ನು ಎಂದಿಗೂ ಕೈ ಬಿಡದೆ ಅವರನ್ನು ನಿಮ್ಮ ಜೊತೆಗೆ ಕರೆದೊಯ್ಯುವವರು. ಇತರರು ಹೇಳುವುದನ್ನು ಕುರುಡಾಗಿ ನಂಬುವ ಬದಲು, ನೀವೇ ಯೋಚಿಸಿ ಅದಕ್ಕೆ ತಕ್ಕಂತೆ ವರ್ತಿಸುವಿರಿ. ನೀವು ಬಹಳ ಶಾಂತ ಸ್ವಭಾವದರವರು. ನೀವು ಎಷ್ಟೇ ಕಷ್ಟದ ಕೆಲಸವನ್ನಾದರೂ ಸುಲಭವಾಗಿ ಮಾಡಿ ಮುಗಿಸಲು ಮುಂದಾಗುವ ಮಂದಿ. ನೀವು ಯಾರ ಮೇಲೆಯೂ ಅವಲಂಭಿತರಾಗಿರಲು ಇಷ್ಟಪಡುವುದಿಲ್ಲ.
ಹೊರಗೆ ಬಾಗಿದ ಕಾಲುಗಳು
ನಿಮ್ಮ ಕಾಲಿನ ಮೊಣಕಾಲುಗಳು ಹತ್ತಿರದಲ್ಲಿದ್ದು ಪಾದಗಳು ಹೊರಗೆ ಬಾಗಿದರೆ ನೀವು ದಯೆ ಇರುವ ಜನರು. ನಿಮ್ಮಲ್ಲಿ ಆತ್ಮವಿಶ್ವಾಶ ಬಹಳ ಹೆಚ್ಚು ಯಾವುದೇ ಕೆಲಸವನ್ನು ಅಂಜಿಕೆ ಇಲ್ಲದೆ ಮಾಡುವವರು. ಜೀವನದ ಕುರಿತು ಆಶಾಭಾವನೆಯ ಜೊತೆಗೆ ಎಲ್ಲಾ ಕೆಲಸದಲ್ಲೂ ಧೈರ್ಯ ಇರುವ ಮಂದಿ. ಎಲ್ಲರನ್ನು ಕಾಳಜಿಯಿಂದ ನೋಡುವವರು. ಸ್ನೇಹಪ್ರಿಯರು, ಮಾತುಗಾರರಾಗಿರುತ್ತೀರಿ. ಯಾವಾಗಲು ನಿಮ್ಮ ಸುತ್ತು ಸಂತೋಷ ಹರಡುವವರು. ಶ್ರಮ ಜೀವಿಗಳಾಗಿರುತ್ತೀರಿ. ನಿಮ್ಮ ಕುಟುಂಬದ ಮೇಲೆ ಅತೀ ಹೆಚ್ಚು ಪ್ರೀತಿ ಹೊಂದಿರುವ ವ್ಯಕ್ತಿ ನೀವಾಗಿರುತ್ತೀರಿ. ಕಲಸದ ವಿಚಾರದಲ್ಲಿಯೂ ನೀವು ಅದೃಷ್ಟವಂತರು.



Click it and Unblock the Notifications