Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ಈ 8 ಗುಣಗಳನ್ನು ಹೊಂದಿರುತ್ತಾರೆ!
ಹುಟ್ಟಿದ ಎಲ್ಲಾ ಮಕ್ಕಳು ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಗುಣ ಇರುತ್ತದೆ. ಹೆಚ್ಚಾಗಿ ನಮ್ಮ ಗುಣಗಳು ನಾವು ಹುಟ್ಟಿದ ತಿಂಗಳು ಅಂದ್ರೆ ನಮ್ಮ ರಾಶಿಗೆ ಅನುಗುಣವಾಗಿ ಇರುತ್ತದೆ.
ಅದ್ರಲ್ಲೂ ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ತುಂಬಾನೇ ಡಿಫ್ರೆಂಟ್ ಆಗಿರ್ತಾರೆ. ಅವರಲ್ಲಿರುವ ಕೆಲವೊಂದು ಬೆಸ್ಟ್ ಕ್ವಾಲಿಟಿಗಳು ಅವರು ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡೋದಕ್ಕೆ ನೆರವಾಗುತ್ತದೆ. ಅಷ್ಟಕ್ಕು ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳಲ್ಲಿ ಏನೆಲ್ಲಾ ಗುಣಗಳು ಇರುತ್ತೆ ಅನ್ನೋದನ್ನು ತಿಳಿಯೋಣ.

1. ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ
ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ಈ ತಿಂಗಳಿನಲ್ಲಿ ಹುಟ್ಟಿದವರು ಅವರ ಜನ್ಮ ದಿನಾಂಕದ ಪ್ರಕಾರ ಸಿಂಹ ಅಥವಾ ಕನ್ಯಾ ರಾಶಿಗೆ ಸೇರಿದವರಾಗಿರುತ್ತಾರೆ. ಇವರು ಬಲವಾದ ಇಚ್ಛಾಶಕ್ತಿಯುಳ್ಳವರು, ಹೆಮ್ಮೆಯುಳ್ಳವರು, ನಿಷ್ಠಾವಂತರು ಮತ್ತು ಧೈರ್ಯಶಾಲಿಗಳು. ಅವರು ಮುಕ್ತವಾಗಿ ಮಾತನಾಡುತ್ತಾರೆ.
2. ಇವರು ಬಹಳಷ್ಟು ಸಂಘಟಿತರಾಗಿರುತ್ತಾರೆ
ಆಗಸ್ಟ್ ನಲ್ಲಿ ಜನಿಸಿದ ಕನ್ಯಾ ರಾಶಿಯವರು ಹಾಸ್ಯದ, ಕಠಿಣ ಪರಿಶ್ರಮ ಮತ್ತು ಪ್ರಾಯೋಗಿಕ ಗುಣ ಹೊಂದಿರುತ್ತಾರೆ. ಇವರ ವ್ಯಕ್ತಿತ್ವ ಎಲ್ಲರನ್ನೂ ಆಕರ್ಷಿಸುವಂತಿರಬೇಕು. ಈ ತಿಂಗಳಲ್ಲಿ ಹುಟ್ಟಿದವರು ಬುದ್ಧಿವಂತರು ಮತ್ತು ವಿಶ್ವಾಸಾರ್ಹರು ಆಗಿರುತ್ತಾರೆ. ಈ ಮಕ್ಕಳು ಜವಾಬ್ದಾರಿಯುತವಾಗಿ ಬೆಳೆಯುತ್ತಾರೆ.
3. ಭವಿಷ್ಯದ ನಾಯಕರಾಗುತ್ತಾರೆ
ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಆತ್ಮವಿಶ್ವಾಸ, ಸಂಘಟಿತ ಮತ್ತು ಪ್ರಾಯೋಗಿಕ ಮನೋಭಾವದವರಾಗಿರುತ್ತಾರೆ. ಇವು ಉತ್ತಮ ನಾಯಕನ ಮೂಲ ಗುಣಗಳು. ಆಗಸ್ಟ್ ನಲ್ಲಿ ಹುಟ್ಟಿದವರು ಒಂದು ದೊಡ್ಡ ಕಂಪನಿಯನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ. ಅವರಲ್ಲಿರುವ ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾದಿಂದ ಅವರು ಈ ಸ್ಥಾನಕ್ಕೆ ಏರುತ್ತಾರೆ.
4. ರಾಜರಂತೆ ಬದುಕುತ್ತಾರೆ
ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರು ಎಲ್ಲೇ ಇರಲಿ, ಹೇಗೆಯೇ ಇರಲಿ ಅವರು ರಾಜ ವೈಭೋಗವನ್ನು ಅನುಭವಿಸುತ್ತಾರೆ. ಅವರು ಎಲ್ಲರಿಂದಲೂ ಗೌರವವನ್ನು ಪಡೆದುಕೊಳ್ಳುತ್ತಾರೆ. ಇವರು ಮಾಡೋ ಒಳ್ಳೆಯ ಕೆಲಸಕ್ಕಾಗಿ ಪ್ರಶಂಸೆ ಪಡೆದುಕೊಳ್ಳದೇ ಇರೋದಿಲ್ಲ.
5. ಏಕಾಂತಕ್ಕೆ ಆದ್ಯತೆ ನೀಡುತ್ತಾರೆ
ಆಗಸ್ಟ್ ತಿಂಗಳಿನಲ್ಲಿ ಜನಿಸಿದವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳೋದಿಲ್ಲ. ಖಾಸಗಿ ಜೀವನಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಾರೆ. ಯಾರೊಂದಿಗೂ ಹೆಚ್ಚು ಬೆರೆಯೋದಕ್ಕೆ ಇಷ್ಟ ಪಡೋದಿಲ್ಲ. ಹೊರಗಿನವರನ್ನು ಅಷ್ಟು ಸುಲಭವಾಗಿ ನಂಬೋದಿಲ್ಲ.
6. ಸುಲಭವಾಗಿ ಅವರನ್ನು ಮೆಚ್ಚಿಸೋದಕ್ಕೆ ಸಾಧ್ಯವಿಲ್ಲ
ಆಗಸ್ಟ್ ತಿಂಗಳಿನಲ್ಲಿ ಜನಿಸಿದವರು ಒಂದು ರೀತಿಯ ಸ್ಟಾಂಡರ್ಡ್ ಕಾಯ್ದುಕೊಳ್ಳುತ್ತಾರೆ. ಯಾವುದೇ ವಿಚಾರಕ್ಕಾದರೂ ಈ ರಾಶಿಯವರನ್ನು ಅಷ್ಟೊಂದು ಸುಲಭವಾಗಿ ಮೆಚ್ಚಿಸೋದಕ್ಕೆ ಆಗೋದಿಲ್ಲ. ಇವರು ಬೇರೆಯವರ ಮಾತಿನಿಂದ ಅಷ್ಟೊಂದು ಸುಲಭವಾಗಿ ಪ್ರಭಾವಿತರಾಗೋದಿಲ್ಲ.
7. ಇವರು ಹಠಮಾರಿಗಳು
ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರು ತುಂಬಾನೇ ಹಠಮಾರಿಗಳು. ಬೇರೆಯವರು ಹೇಳಿದ ಮಾತನ್ನು ಅವರು ಕೇಳೋದಿಲ್ಲ. ತಾವು ಹೇಳಿದ್ದೇ ಆಗಬೇಕು ಅನ್ನೋ ಹಠ ಇವರಲ್ಲಿರುತ್ತದೆ. ಯಾವುದೇ ಕಾರಣಕ್ಕೂ ಬೇರೆಯವರ ಮಾತು ಕೇಳೋದಿಲ್ಲ.
8. ಸ್ವಯಂ ಪ್ರೇರಿತರಾಗಿ ಇರುತ್ತಾರೆ
ಆಗಸ್ಟ್ ನಲ್ಲಿ ಜನಿಸಿದವರು ಸ್ವಯಂ ಪ್ರೇರಿತರಾಗಿದ್ದಾರೆ. ಮತ್ತು ತಮ್ಮ ಉತ್ಸಾಹವನ್ನು ಕಳೆದುಕೊಳ್ಳದೆ ಕಷ್ಟಕರ ಸಂದರ್ಭಗಳನ್ನು ಎದುರಿಸುತ್ತಾರೆ. ಹಾಗೂ ಇತರರಿಗೂ ಪ್ರೇರೇಪಣೆ ನೀಡುವ ಗುಣ ಇವರಲ್ಲಿದೆ. ಒಟ್ಟಿನಲ್ಲಿ ಇವರು ನಾಯಕತ್ವದ ಪಾತ್ರಗಳಿಗೆ ಪರಿಪೂರ್ಣರಾಗಿರುತ್ತಾರೆ.
ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರಲ್ಲಿ ಧನಾತ್ಮಕ ಗುಣಗಳೇ ಹೆಚ್ಚಾಗಿರುತ್ತದೆ. ಹಾಗೂ ಇದು ಅವರು ಭವಿಷ್ಯದ ನಾಯಕರಾಗೋದನ್ನು ಸೂಚಿಸುತ್ತದೆ.



Click it and Unblock the Notifications
