Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರಲ್ಲಿ ಕಂಡು ಬರುವ ಸ್ವಭಾವಗಳಿವು
ವ್ಯಕ್ತಿಯಿಂದ ವ್ಯಕ್ತಿಗೆ ಗುಣಗಳಲ್ಲಿ ಭಿನ್ನವಾಗಿರುತ್ತದೆ,ಆದರೆ ಕೆಲವು ವ್ಯಕ್ತಿಗಳ ನಡುವೆ ಕೆಲ ಗುಣಗಳು ಒಂದೇ ಇರುತ್ತದೆ. ನಾವು ಹುಟ್ಟಿದ ತಿಂಗಳಿಗೂ ನಮ್ಮ ಗುಣಗಳಿಗೂ ಕೆಲವೊಂದು ಸಾಮ್ಯತೆ ಇರುತ್ತದೆಯಂತೆ. ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರಲ್ಲಿ ಕಂಡು ಬರುವ ಗುಣಗಳಿವು ನೋಡಿ:

ಪ್ರಸಿದ್ಧಿ ಗಳಿಸುತ್ತಾರೆ
ಇವರು ಬೇಗನೆ ಇತರರನ್ನು ಆಕರ್ಷಿಸುತ್ತಾರೆ. ತಾವು ಯಾವ ವೃತ್ತಿ ಮಾಡುತ್ತಾರೋ ಆ ವೃತ್ತಿಯಲ್ಲಿ ಗಮನ ಸೆಳೆಯುತ್ತಾರೆ, ಇವರು ಇದ್ದ ಕಡೆ ಇವರೇ ಸೆಂಟರ್ ಆಫ್ ಅಟ್ರಾಕ್ಷನ್.
ನೇರ ನುಡಿಯವರು
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರು ತುಂಬಾ ನೇರ ಸ್ವಭಾವದವರು. ಇವರು ಇನ್ನೊಬ್ಬರನ್ನು ಮೆಚ್ಚಿಸಲಿಕ್ಕೆ ಮಾತನಾಡಲ್ಲ, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಅವರು ತಮಗೆ ಸರಿ ಅನಿಸಿದ್ದನ್ನು ಮಾಡುತ್ತಾರೆ, ಅಲ್ಲದೆ ತಮಗೆ ನೋಯಿಸಿದವರನ್ನು ಅವರು ಕ್ಷಮಿಸುವುದಿಲ್ಲ. ಸಂಬಂಧದಲ್ಲಿ ತುಂಬಾ ನಿಯತ್ತು ಇರುತ್ತದೆ. ತಾವು ಪ್ರೀತಿಸುತ್ತಿರುವವರನ್ನು ಖುಷಿಯಾಗಿಡಲು ಸದಾ ಪ್ರಯತ್ನಿಸುತ್ತಾರೆ. ಮೋಸವನ್ನು ಎಂದಿಗೂ ಕ್ಷಮಿಸಲ್ಲ.
ಗುಟ್ಟು ಕಾಪಾಡುವುದರಲ್ಲಿ ಎತ್ತಿದ ಕೈ
ಫೆಬ್ರವರಿ ತಿಂಗಳಿನಲ್ಲಿ ರಹಸ್ಯ ಕಾಪಾಡುವುದರಲ್ಲಿ ಎತ್ತಿದ ಕೈ. ತುಂಬಾ ಕ್ಲೋಸ್ ಇದ್ದರೂ ಕೂಡ ಇವರು ಎಲ್ಲಾ ವಿಷಯಗಳನ್ನು ಹೇಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಸ್ವಭಾವ ಕೆಲವೊಮ್ಮೆ ಒಳ್ಳೆಯದು ಅನಿಸಿದರೂ ಇನ್ನು ಕೆಲವೊಮ್ಮೆ ಕೆಟ್ಟದು ಅನಿಸುವುದು, ನಾವು ಇಷ್ಟು ಕ್ಲೋಸ್ ಇದ್ದರೂ ನಮಗೆ ಏನೂ ಹೇಳಲ್ಲ ಅಲ್ವಾ ಎಂದನಿಸುವಷ್ಟು ವಿಚಿತ್ರ ಸ್ವಭಾವದವರು. ಇವರ ಬಳಿ ರಹಸ್ಯವನ್ನು ಧೈರ್ಯವಾಗಿ ಹೇಳಬಹುದು.
ಕ್ರಿಯೇಟಿವ್ ಸ್ವಭಾವದವರು
ಫೆಬ್ರವರಿ ತಿಂಗಳಿನಲ್ಲಿ ತುಂಬಾನೇ ಕ್ರಿಯೇಟಿವ್ ಸ್ವಭಾವದವರು. ಹೊಸದನ್ನು ಕಲಿಯಲು ತುಂಬಾ ಆಸಕ್ತಿ ತೋರಿಸುತ್ತಾರೆ. ಅವರು ಯಾವುದೇ ಕೆಲಸ ಮಾಡಲಿ ತುಂಬಾ ಕ್ರಿಯೇಟಿವ್ ಆಗಿ ತೊಡಗಿಕೊಳ್ಳುತ್ತಾರೆ. ಈ ತಿಂಗಳಿನಲ್ಲಿ ಜನಿಸಿದವರು ಆರ್ಟಿಸ್ಟ್, ಫೋಟೋಗ್ರಾಫರ್, ಕ್ರಿಯೇಟಿವ್ ಡಿಸೈನರ್, ಉದ್ಯಮಿಗಳು, ವಿಜ್ಞಾನಿಗಳು ಈ ರೀತಿಯ ಕ್ರಿಯೇಟಿವ್ ಕ್ಷೇತ್ರದಲ್ಲಿದ್ದರೆ ತುಂಬಾನೇ ಬೆಳೆಯುತ್ತಾರೆ.
ಆರೋಗ್ಯ ವಿಷಯದಲ್ಲಿ ಸ್ವಲ್ಪ ದುರ್ಬಲರು
ಫೆಬ್ರವರಿ ತಿಂಗಳು ಬೇಗನೆ ಕಾಯಲೆ ಬೀಳುತ್ತಾರೆ. ಈ ತಿಂಗಳಿನಲ್ಲಿ ಜನಿಸಿದವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಆಗಾಗ ಕಾಯಿಲೆ ಬೀಳುತ್ತಿರುತ್ತಾರೆ, ಈ ತಿಂಗಳಿನಲ್ಲಿ ಜನಿಸಿದವರು ಆರೋಗ್ಯದ ಬಗ್ಗೆ ತುಂಬಾನೇ ಗಮನ ನೀಡಬೇಕು. ಇವರಿಗೆ ನರಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬರುವುದು ಕಡಿಮೆ ಆದರೆ ಇವರಿಗೆ ನಿದ್ದೆಗೆ ಸಂಬಂಧಿಸಿದ ಸಮಸ್ಯೆ ಕಂಡು ಬರುವುದು.
ಫೆಬ್ರವರಿಯಲ್ಲಿ 29ಕ್ಕೆ ಜನಿಸಿದರೆ
ನಾಲ್ಕು ವರ್ಷಕ್ಕೊಮ್ಮೆ ಫೆಬ್ರವರಿ 29 ಇರುತ್ತದೆ. ಫೆಬ್ರವರಿ 29ಕ್ಕೆ ಜನಿಸಿದರೆ 4 ವರ್ಷಗಳಿಗೊಮ್ಮೆ ಅವರಿಗೆ ತಮ್ಮ ಜನ್ಮ ದಿನಾಂಕದಂದು ಹುಟ್ಟು ಹಬ್ಬ ಆಚರಿಸಿಕೊಳ್ಳುವ ಅವಕಾಶ ಸಿಗುತ್ತದೆ. 12 ತಿಂಗಳಿನಲ್ಲಿ ಅಧಿಕ ಕಡಿಮೆ ದಿನಾಂಕಗಳನ್ನು ಹೊಂದಿರುವ ತಿಂಗಳೆಂದರೆ ಅದು ಫೆಬ್ರವರಿ. ಈ ತಿಂಗಳಿನಲ್ಲಿ ಬರೀ 28 ದಿನಗಳು ಮಾತ್ರ, ನಾಲ್ಕು ವರ್ಷಕ್ಕೊಮ್ಮೆ ಒಂದು ದಿನಕ ಅಧಿಕ ಬರುತ್ತದೆ.



Click it and Unblock the Notifications