Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಮಕ್ಕಳು ಹೆಚ್ಚು ಮೊಬೈಲ್ ಬಳಸುತ್ತಾರಾ? ಈ ವಿಡಿಯೋ ನೋಡಿದ್ರೆ ಇವತ್ತೆ ಬಿಡೋದು ಖಚಿತ!
ಮನೆಯಲ್ಲಿ ಮಕ್ಕಳು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದರೆ ಅವರಿಂದ ಮೊಬೈಲ್ ಮರಳಿ ಪಡೆಯುವುದು ಕಷ್ಟವಾಗಬಹುದು. ಇತ್ತೀಚಿಗೆ ಮಕ್ಕಳ ಕೈಯಿಂದ ಮೊಬೈಲ್ ಬಳಕೆ ನಿಲ್ಲಿಸುವುದು ಕಷ್ಟವಾಗಿದೆ. ಅದ್ರಲ್ಲೂ ಊಟ ಮಾಡುವಾಗ ನಿದ್ದೆ ಮಾಡುವಾಗಲೂ ಮಕ್ಕಳಿಗೆ ಮೊಬೈಲ್ ಇರಬೇಕು ಎಂಬ ಹಂತ ತಲುಪಿದ್ದಾರೆ.
ಈ ಮೊಬೈಲ್ ಅಭ್ಯಾಸ ಅವರಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳ ತರುತ್ತಿದೆ. ಹಾಗೆ ಮಕ್ಕಳ ಮೊಬೈಲ್ ಅಭ್ಯಾಸವನ್ನು ದೂರ ಮಾಡಲು ಪೋಷಕರು ಇನ್ನಿಲ್ಲದ ಹರಸಾಹಸ ಮಾಡುವುದು ನೋಡಬಹುದು. ಆದ್ರೆ ಇಲ್ಲೊಂದು ಕಡೆ ಮಕ್ಕಳೇ ಸ್ವತಃ ಮೊಬೈಲ್ ಬಳಸೋದನ್ನು ಬಿಡುವಂತೆ ಮಾಡಲು ವಿನೂತನ ಐಡಿಯಾ ಮಾಡಲಾಗಿದೆ.

ನವರಾತ್ರಿಯ ಸಮಯದಲ್ಲಿ ದುರ್ಗೆಯ ಅವತಾರದ ನಡುವೆ ರಾಕ್ಷಸಿಯ ಒಂದು ಅವತಾರವನ್ನು ಮಕ್ಕಳ ಮೊಬೈಲ್ ಅಭ್ಯಾಸ ಬಿಡಿಸುವಂತಹ ಥೀಮ್‌ನಲ್ಲಿ ಮಾಡಲಾಗಿದ್ದು, ಎಲ್ಲರಲ್ಲೂ ಶಾಕ್ ನೀಡಿದೆ. ರಾಕ್ಷಸಿಯ ಅವತಾರ ನೋಡಿದ ಮಕ್ಕಳು ಇನ್ಮುಂದೆ ಮೊಬೈಲ್ ಬಳಕೆ ಮಾಡೋ ಮುನ್ನ ಭಯ ಬೀಳುವಂತಿದೆ. ಮೊಬೈಲ್ ಬಳಸುವ ಮಕ್ಕಳನ್ನು ರಾಕ್ಷಸಿ ಶಿಕ್ಷಿಸುತ್ತಾಳೆ ಎಂಬ ಥೀಮ್‌ನಲ್ಲಿ ಹೇಳಲಾಗಿದೆ.
ರಾಕ್ಷಸಿ ಮೊಬೈಲ್ ಹಿಡಿದ ಮಗುವಿನ ಪ್ರತಿಕೃತಿಯ ಕಾಲನ್ನು ಹಿಡಿದು ತಲೆ ಕೆಳಗಾಗಿ ನೇತು ಹಾಕಿದ ರೀತಿ ಚಿತ್ರಿಸಲಾಗಿದೆ. ಮೊಬೈಲ್ ಬಳಸಿದರೆ ರಾಕ್ಷಸಿ ಈ ರೀತಿ ಮಾಡುತ್ತಾಳೆ ಎಂಬುದನ್ನು ಬಿಂಬಿಸುವ ಚಿತ್ರಣ ನೋಡಬಹುದು. ಈ ಚಿತ್ರಣ ನೋಡಿದ ಮಕ್ಕಳು ಅಕ್ಷರಶಃ ದಂಗಾಗಿದ್ದಾರೆ. ರಾಕ್ಷಸಿಯ ರುದ್ರಾವತಾರ ನೋಡಿದ ಮಕ್ಕಳು ಸ್ಥಳದಲ್ಲೇ ಭಯಭೀತರಾಗಿ ಕಣ್ಣೀರಿಟ್ಟಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗೆಯ ಪೆಂಡಾಲ್ ವೊಂದರ ಚಿತ್ರಣ ಇದಾಗಿದ್ದು, ವಿಡಿಯೋ ಸಹ ನೋಡಲು ಭಯಂಕರವಾಗಿದೆ. ಹಾಗೆ ಇದನ್ನು ನೋಡಿದ ಮಕ್ಕಳಿಗೂ ದಿಗ್ಭ್ರಮೆಗೊಂಡು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ರೀತಿಯ ವಿಚಿತ್ರ ಅವತಾರದ ರಾಕ್ಷಸಿಯನ್ನು ಎಲ್ಲಿ ಸ್ಥಾಪಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ ಆದ್ರೆ ಈ ಭಯಾನಕ ಅವತಾರದ ರಾಕ್ಷಸಿಯ ನೋಡಿ ಎಲ್ಲರು ಒಮ್ಮೆ ಆಘಾತಕ್ಕೊಳಗಾಗಿದ್ದಾರೆ. ವಿನೂತನ ರೀತಿಯಲ್ಲಿ ಮಕ್ಕಳಿಂದ ಮೊಬೈಲ್ ಅಭ್ಯಾಸ ಬಿಡಿಸಲು ಅವರು ಮಾಡಿರುವ ಪ್ರಯತ್ನಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಸದ್ಯ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದೊಂದು ಉತ್ತಮ ವಿಧಾನ ಎಂಬುದಾಗಿಯೂ ಮತ್ತೆ ಕೆಲವರು ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಏಕೆಂದರೆ ಮಕ್ಕಳು ಕೂಡ ಈಗ ಬಹಳ ಬುದ್ದಿವಂತರಾಗಿದ್ದಾರೆ. ಅವರು ಕೂಡ ದೇವರು, ದೆವ್ವದಂತಹ ವಿಚಾರಗಳಿಂದ ಭಯ ಪಡುವುದಿಲ್ಲ. ಮೊಬೈಲ್ ಬಳಕೆ ಕಡಿಮೆ ಮಾಡಲು ಪೋಷಕರೇ ಯಾವುದಾದರು ಬೇರೆ ಪ್ರಯತ್ನ ಮಾಡಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಹಾಗೆ ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕಾದರೆ ಮೊದಲು ಪೋಷಕರೇ ಮೊಬೈಲ್ ಬಳಕೆ ಕಡಿಮೆ ಮಾಡಬೇಕಾಗುತ್ತದೆ. ಪೋಷಕರನ್ನು ನೋಡಿಯೇ ಮಕ್ಕಳು ಕೂಡ ಮೊಬೈಲ್ ಬಳಸುತ್ತಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಮಕ್ಕಳು ಈ ದೇವಿಯ ಮೂರ್ತಿ ನೋಡಿ ಸ್ಥಳದಲ್ಲಿ ಭಯ ಬೀಳುತ್ತಾರೆ ಆದ್ರೆ ಮನೆಗೆ ಬಂದಾಗ ಮತ್ತದೆ ಮೊಬೈಲ್ ಬಳಕೆ ಆರಂಭಿಸುತ್ತಾರೆ. ಮಕ್ಕಳು ಯಾವುದನ್ನು ಹೆಚ್ಚು ಸಮಯ ನೆನೆಪಿನಲ್ಲಿಟ್ಟುಕೊಳ್ಳುವುದಿಲ್ಲ ಎಂದು ಒಬ್ಬರು ಬರೆದ್ದಾರೆ.
ಹಾಗೆ ಈ ವಿಡಿಯೋದಿಂದ ಒಂದಿಷ್ಟು ಮಕ್ಕಳ ಮೇಲಂತು ಪರಿಣಾಮ ಬೀರಲಿದೆ. ಅವರಲ್ಲಿ ಇದು ಭಯ ಸೃಷ್ಟಿಸಲಿದೆ. ಹಾಗೆ ಮೊಬೈಲ್ ಬಳಸಿದರೆ ಇದೇ ರೀತಿ ನಮಗೂ ಶಿಕ್ಷೆ ಬರಬಹುದು ಎಂದು ಭಾವಿಸುವ ಸಾಧ್ಯತೆ ಇದೆ ಎಂದು ಮನವರಿಕೆ ಆಗಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ.



Click it and Unblock the Notifications