Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
Friendship Day 2023 : ಸ್ನೇಹಿತರ ದಿನಕ್ಕೆ ನಿಮ್ಮ ಸ್ನೇಹಿತರಿಗಾಗಿ ಈ ಗಿಫ್ಟ್ ನೀಡಿ!
ರಕ್ತ ಸಂಬಂಧಕ್ಕಿಂತಲೂ ಗಟ್ಟಿಯಾದ ಸಂಬಂಧವೆಂದರೆ ಅದು ಸ್ನೇಹ. ನಮ್ಮ ಕಷ್ಟ ಕಾಲದಲ್ಲಿ ನಮಗಾಗಿ ಪ್ರಾಣ ಕೊಡೋದಕ್ಕೂ ಸಿದ್ಧವಿರೋರು ಅಂದರೆ ಅದು ಸ್ನೇಹಿತರು ಮಾತ್ರ. ಎಷ್ಟೋ ಸಾರಿ ನಾವು ಮನೆಯವರ ಜೊತೆಗೆ ಹೇಳಿಕೊಳ್ಳೋದಕ್ಕೆ ಆಗದೇ ಎಷ್ಟೋ ವಿಚಾರಗಳನ್ನು ನಾವು ಸ್ನೇಹಿತರ ಬಳಿ ಹಂಚಿಕೊಳ್ಳುತ್ತೇವೆ.
ಹಣ, ಆಸ್ತಿ-ಅಂತಸ್ತು ನೋಡಿ ಯಾವತ್ತೂ ಸ್ನೇಹ ಹುಟ್ಟೋದಿಲ್ಲ. ನಿಷ್ಕಲ್ಮಷ ಪ್ರೀತಿಗೆ, ಶುದ್ಧ ಮನಸ್ಸಿಗೆ ಸ್ನೇಹ ಒಲಿಯುತ್ತೆ. ನಿಮಗೂ ಕೂಡ ಜೀವಕ್ಕೆ ಜೀವ ನೀಡುವ ಸ್ನೇಹಿತರು ಇರಬಹುದು. ಈ ಫ್ರೆಂಡ್ ಶಿಪ್ ಡೇಯನ್ನು ಸ್ಪೆಷಲ್ ಮಾಡೋದಕ್ಕೆ ನಿಮ್ಮ ಸ್ನೇಹಿತರಿಗಾಗಿ ವಿಶೇಷವಾದ ಗಿಫ್ಟ್ ಅನ್ನು ನೀವು ನೀಡ್ಬಹುದು. ಅಷ್ಟಕ್ಕು ಈ ಸ್ನೇಹಿತರ ದಿನಕ್ಕೆ ನಿಮ್ಮ ಸ್ನೇಹಿತರಿಗಾಗಿ ಯಾವ ಸ್ಪೆಷಲ್ ಗಿಫ್ಟ್ ಅನ್ನು ನೀಡ್ಬೇಕು ಅಂತ ಕನ್ಫ್ಯೂಸ್ ಆಗಿದ್ದೀರಾ? ಹಾಗಾದ್ರೆ ಇಲ್ಲಿದೆ ಬ್ಯೂಟಿಫುಲ್ ಗಿಫ್ಟ್ ಐಡಿಯಾ..

1. ವಾಚ್
ಈ ಸ್ನೇಹಿತರ ದಿನಕ್ಕೆ ನೀವು ನಿಮ್ಮ ಫ್ರೆಂಡ್ ಗಾಗಿ ವಾಚ್ ಗಿಫ್ಟ್ ಮಾಡಬಹುದು. ಈಗಂತೂ ಟ್ರೆಂಡಿ ವಾಚ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೀಗಾಗಿ ನಿಮ್ಮ ಫ್ರೆಂಡ್ ಗೆ ಇಷ್ಟವಾಗುವ ಯಾವುದಾದರೂ ವಾಚ್ ನೀವು ಗಿಫ್ಟ್ ಆಗಿ ನೀಡಬಹುದು. ಈಗಂತೂ ಸ್ಮಾರ್ಟ್ ವಾಚ್ ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಅವುಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ದುಕೊಳ್ಳಬಹುದು.
2. ಪರ್ಸನಲೈಸ್ಡ್ ಗಿಫ್ಟ್
ನಿಮ್ಮ ಸ್ನೇಹಿತರಿಗಾಗಿ ನೀವು ಪರ್ಸನಲೈಸ್ಡ್ ಗಿಫ್ಟ್ ಗಳನ್ನು ನೀಡಬಹುದು. ಫೋಟೋ ಫ್ರೇಮ್, ಕಾಫಿ ಮಗ್ ಇವುಗಳಲ್ಲಿ ನಿಮ್ಮಿಬ್ಬರ ಫೋಟೋವನ್ನು ಹಾಕಿಸಿ. ಅವರಿಗೆ ಗಿಫ್ಟ್ ನೀಡಿ. ಆ ಫೋಟೋಗಳು ನಿಮ್ಮ ನೆನಪಿನ ಬುತ್ತಿಯನ್ನು ಬುಚ್ಚಿಡುವಂತಿರಬೇಕು. ಖಂಡಿತ ನಿಮ್ಮ ಸ್ನೇಹಿತನಿಗೆ ಇಷ್ಟ ಆಗುತ್ತೆ.
3. ಹೊರಗಡೆ ಸುತ್ತಾಡಿ
ನಿಮ್ಮ ಸ್ನೇಹಿತನಿಗೆ ಏನು ಕೊಡಬೇಕು ಅಂತ ನಿಮಗೆ ಕನ್ಫ್ಯೂಸ್ ಆಗ್ತಿರ್ಬಹುದು. ಈ ಗಿಫ್ಟ್ ಅವರಿಗೆ ಇಷ್ಟ ಆಗುತ್ತಾ ಅಂತ ನೀವು ತಲೆ ಕೆಡಿಸಿ ಕೊಂಡಿರ್ತೀರಿ. ಅದರ ಬದಲಾಗಿ ಅವರನ್ನು ಎಲ್ಲಾದರೂ ಆಚೆ ಕರೆದುಕೊಂಡು ಹೋಗಿ. ಅವರಿಗೆ ಇಷ್ಟ ಆಗೋ ಸ್ಥಳಕ್ಕೆ ಕರೆದುಕೊಂಡು ಹೋಗಿ. ಸುಂದರವಾದ ಕ್ಷಣಗಳನ್ನು ಒಟ್ಟಾಗಿ ಕಳೆಯಿರಿ. ಹೊರಗಡೆ ಹೋಗಿ ವಿಶೇಷ ಊಟ ಮಾಡಿ. ಖಂಡಿತ ನಿಮ್ಮ ಫ್ರೆಂಡ್ ಖುಷಿ ಪಡುತ್ತಾರೆ.
4. ಸೆಲ್ಫ್ ಕೇರ್ ಗಿಫ್ಟ್ ನೀಡಿ
ಒಂದು ವೇಳೆ ನಿಮ್ಮ ಫ್ರೆಂಡ್ ಹುಡುಗಿಯಾಗಿದ್ದರೆ ಅವರಿಗೆ ಸೆಲ್ಫ್ ಕೇರ್ ಮಾಡೋದಿಕ್ಕೆ ಅಂತಾನೇ ಅನೇಕ ಗಿಫ್ಟ್ ಗಳನ್ನು ನೀವು ಕೊಡ್ಬಹುದು. ಮೇಕಪ್ ಕಿಟ್, ಫೆಸ್ ವಾಷ್, ಸೋಪ್, ಶ್ಯಾಂಪು, ಸೀರಂ ಇತ್ಯಾದಿ. ಇನ್ನೂ ಹುಡುಗರಿಗೂ ಕೂಡ ಸೆಲ್ಫ್ ಕೇರ್ ಗಿಫ್ಟ್ ನೀಡಬಹುದು. ಆದರೆ ಹೆಚ್ಚಿನ ಹುಡುಗರು ಈ ಪ್ರಾಡಕ್ಟ್ ಗಳನ್ನು ಬಳಸೋದಿಲ್ಲ. ನ್ಯಾಚುರಲ್ ಆಗಿ ಇರೋದಕ್ಕೆ ಇಷ್ಟ ಪಡುತ್ತಾರೆ.
5. ಪರ್ಫ್ಯೂಮ್
ಪರ್ಫ್ಯೂಮ್ ಫ್ರೆಂಡ್ ಶೀಪ್ ಡೇ ಗೆ ಬೆಸ್ಟ್ ಗಿಫ್ಟ್ ಅಂತಾನೇ ಹೇಳಬಹುದು. ಮಹಿಳೆಯರು ಅಥವಾ ಪುರುಷರು ಯಾರಿಗಾದರೂ ಆಗಲಿ ಈ ಪರ್ಫ್ಯೂಮ್ ಅನ್ನು ಗಿಫ್ಟ್ ಆಗಿ ನೀಡಬಹುದು. ಅದೂ ಕೂಡ ಅವರ ಪರ್ಸನಾಲಿಟಿಗೆ ಸೂಟ್ ಆಗುವ ರೀತಿಯ ಪರ್ಫ್ಯೂಮ್ ಗಿಫ್ಟ್ ಮಾಡಿ.
6. ಪುಸ್ತಕಗಳು
ಪುಸ್ತಕವು ಒರ್ವ ಮನುಷ್ಯನ ವ್ಯಕ್ತಿತ್ವವನ್ನು ಬೆಳಗುತ್ತಂತೆ. ನಿಮ್ಮ ಸ್ನೇಹಿತರಿಗೆ ಪುಸ್ತಕ ಓದುವ ಹವ್ಯಾಸ ಇರಲಿ ಅಥವಾ ಇಲ್ಲದಿರಲಿ ಅವರಿಗೆ ನೀವು ಪುಸ್ತಕವನ್ನು ಗಿಫ್ಟ್ ಆಗಿ ನೀಡಿ. ನಿಮ್ಮಿಂದಾದರೂ ಅವರು ಪುಸ್ತಕ ಅಭ್ಯಾಸವನ್ನು ಬೆಳೆಸಿಕೊಳ್ಳಲಿ. ಹೀಗಾಗಿ ಯಾವುದಾದರೂ ಒಳ್ಳೆಯ ಪುಸ್ತಕವನ್ನು ಗಿಫ್ಟ್ ಆಗಿ ನೀಡಿ.
7. ಸಸ್ಯಗಳು
ನಿಮ್ಮ ಸ್ನೇಹಿತರಿಗಾಗಿ ನೀವು ಸಸ್ಯಗಳನ್ನು ಉಡುಗೊರೆಯಾಗಿ ನೀಡಬಹುದು. ಮನೆಯೊಳಗಡೆ ಇಟ್ಟುಕೊಳ್ಳಲು ಸಾಧ್ಯವಾಗುವ ಗಿಡಗಳನ್ನಾದರೂ ನೀಡಬಹುದು. ಅಥವಾ ಹೊರಾಂಗಣ ಸಸ್ಯಗಳನ್ನಾದರೂ ಉಡುಗೊರೆಯಾಗಿ ನೀಡಿ. ಇದರಿಂದ ಪರಿಸರಕ್ಕೂ ಕೂಡ ಒಳ್ಳೆಯದಾಗುತ್ತದೆ.
ಹೀಗೆ ನೀವು ನಿಮ್ಮ ಸ್ನೇಹಿತರಿಗೆ ನೀಡುವ ಉಡುಗೊರೆ ಬಜೆಟ್ ಫ್ರೆಂಡ್ಲಿಯಾಗಿಯೂ ಇರಬೇಕು. ಹಾಗೂ ನಿಮ್ಮ ಸ್ನೇಹಿತರಿಗೆ ಇಷ್ಟ ಆಗುವಂತಹ ಉಡುಗೊರೆಯನ್ನೇ ನೀಡಿದರೆ ಒಳ್ಳೆಯದು.



Click it and Unblock the Notifications


