Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಮುದ್ರಕ್ಕಿಳಿದವನ ಬೆನ್ನಿಗೆ ಅಂಟಿದ ಆಕ್ಟೋಪಸ್..! ಆಮೇಲೆ ಆಗಿದ್ದೇನು..?
ಸಮುದ್ರದಲ್ಲಿ ಈಜುವುದು ಅದರ ಆಳಕ್ಕೆ ತೆರಳಿ ಸಮುದ್ರದ ಅಡಿಯಲ್ಲಿರುವ ಸೌಂದರ್ಯ ಅನ್ವೇಷಣೆ ನಡೆಸುವುದು ಹಲವರ ಅಭ್ಯಾಸವಾಗಿರುತ್ತೆ. ಯುರೋಪ್‌ನಲ್ಲಿ ಇದೊಂದು ಹವ್ಯಾಸವಾಗಿದೆ. ಅಲ್ಲಿ ನಿಮಗೆ ಸಮುದ್ರ ತೀರದಲ್ಲಿ ಪ್ರವಾಸಿಗರಿಗೆಂದೇ ವಿಶೇಷ ರೀತಿಯ ತರಬೇತಿ ನೀಡಿ ಸಮುದ್ರಕ್ಕೆ ಕರೆದೊಯ್ಯುವ ವ್ಯವಸ್ಥೆಯೂ ಇದೆ.
ಇನ್ನು ಸಮುದ್ರದ ಆಳದಲ್ಲಿ ಎಷ್ಟು ಜೀವಸಂಕುಲವಿದೆ ಎಂದರೆ ನೀವೂ ಊಹಿಸಲು ಸಹ ಸಾಧ್ಯವಿಲ್ಲ. ಸಾಗರದಾಳದ ಜೀವಸಂಕುಲ ಬೇರೆ ಎಲ್ಲಿಯೂ ನೋಡಲು ಸಿಗುವುದಿಲ್ಲ. ಇನ್ನು ಇವುಗಳ ಅನ್ವೇಷಣೆಗಿಳಿದರೆ ಒಂದಲ್ಲಾ ಒಂದು ವಿಚಿತ್ರಗಳು ಎದುರಾಗುತ್ತಲೆ ಇರುತ್ತದೆ. ಇದೇ ರೀತಿ ಇಲ್ಲೊಬ್ಬ ಸಮುದ್ರಕ್ಕಿಳಿದ ವ್ಯಕ್ತಿ ಸಹ ಸಂಕಟಕ್ಕೆ ಸಿಲುಕಿ ಬಿಟ್ಟಿದ್ದಾನೆ.

ಹೌದು ಡೈವಿಂಗ್ ಮಾಡುವಾತ ಆಕ್ಸಿಜನ್ ಮಾಸ್ಕ್ ಧರಿಸಿ ಸಮುದ್ರಕ್ಕೆ ಹಾರಿದ್ದ ವ್ಯಕ್ತಿಯ ಬೆನ್ನಿಗೆ ದೈತ್ಯಾಕಾರದ ಆಕ್ಟೋಪಸ್‌ವೊಂದು ಅಂಟಿಕೊಂಡಿದೆ. ಬೆನ್ನಿಗಂಟಿರುವ ಆಕ್ಟೋಪಸ್‌ನಿಂದ ಬಿಡಿಸಿಕೊಳ್ಳು ಆತ ಪಡಬಾರದ ಕಷ್ಟ ಪಡುತ್ತಿದ್ದಾನೆ. ಆಕ್ಟೋಪಸ್‌ನ ಹಿಡಿತ ಎಷ್ಟು ಬಿಗಿಯಾಗಿರುತ್ತೆ ಅಂದ್ರೆ ಆತ ತನ್ನ ಕೈ ಬಳಸಿ ಅದನ್ನು ಎಳೆಯುತ್ತಿದ್ದರು ಇಂಚಿತ್ತು ಅಲುಗಾಡದೆ ಬೆನ್ನಿಗೆ ಅಂಟಿಕೊಂಡಿದೆ.
ಈ ವಿಡಿಯೋ ಈಗ ವೈರಲ್ ಆಗಿದ್ದು, ಸಮುದ್ರದಾಳದ ಅನ್ವೇಷಣೆ ನಡೆಸುತ್ತಿದ್ದವರು ಶಾಕ್ ಆಗಿದ್ದಾರೆ. ಏಕೆಂದರೆ ಈ ಆಕ್ಟೋಪಸ್‌ಗಳು ಜೀವಕ್ಕೂ ಸಹ ಹಾನಿ ಮಾಡಬಹುದು. ಆದರೆ ಈ ವಿಡಿಯೋದಲ್ಲಿ ಆಕ್ಟೋಪಸ್ ಆತನ ಬೆನ್ನಿಗೆ ಅಂಟಿಕೊಂಡಿರುವುದು ಬಿಟ್ಟರೆ ಅದರಿಂದ ಆತನಿಗೆ ಹಾನಿಯಾಗಿರುವಂತೆ ಕಾಣುತ್ತಿಲ್ಲ. ಆದರೆ ಅದರಿಂದ ಆತ ತಪ್ಪಿಸಿಕೊಳ್ಳುವುದು ಮಾತ್ರ ಕಷ್ಟವಾಗಿದೆ.
ಈ ಆಕ್ಟೋಪಸ್‌ಗಳ ಕಾಲುಗಳಂತಿರುವ ಆಕೃತಿಯ ಹೆಚ್ಚು ಬಲವಾಗಿ ಅಂಟಿಕೊಳ್ಳಲು ಸಹಾಯ ಮಾಡುತ್ತವೆ. ಒಂದು ರೀತಿ ವಾಕ್ಯೂಮ್‌ನಂತೆ ಅವು ಕೆಲಸ ಮಾಡುತ್ತವೆ. ಹೀಗಾಗಿ ಒಮ್ಮೆ ಹಿಡಿದುಬಿಟ್ಟರೆ ಅಷ್ಟು ಬೇಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿಯೂ ಸಹ ವ್ಯಕ್ತಿಯ ಬೆನ್ನಿಗೆ ಅಂಟಿರುವ ಆಕ್ಟೋಪಸ್ ಬಿಗಿಯಾಗಿ ಹಿಡಿದುಬಿಟ್ಟಿದೆ. ಆತ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರು ಅದು ಸಾಧ್ಯವಾಗುತ್ತಿಲ್ಲ.
ಆಕ್ಟೋಪಸ್‌ಗಳು ಸಾಯಿಸುತ್ತವೆಯೇ..?
ಆಕ್ಟೋಪಸ್‌ಗಳಲ್ಲಿ ಹತ್ತಾರು ಜಾತಿಗಳಿವೆ. ಅದರಲ್ಲೂ ಅತೀ ಚಿಕ್ಕ ಆಕ್ಟೋಪಸ್‌ನಿಂದ ಹಿಡಿದು ದೊಡ್ಡ ದೊಡ್ಡ ಗಾತ್ರದ ಆಕ್ಟೋಪಸ್‌ಗಳು ಸಹ ಸಮುದ್ರದ ಆಳದಲ್ಲಿವೆ. ಅದರಲ್ಲಿ ಕೆಲವು ಅತ್ಯಂತ ಅಪಾಯಕಾರಿಯಾಗಿವೆ. ನೀಲಿ ಬಣ್ಣದ ಉಂಗುರದಂತಹ ಆಕೃತಿಗಳನ್ನು ಮೈ ಮೇಲೆ ಹೊಂದಿರುವ ಆಕ್ಟೋಪಸ್‌ಗಳು ಈ ಜಗತ್ತಿನ ಅತ್ಯಂತ ಅಪಾಯಕಾರಿ ಆಕ್ಟೋಪಸ್‌ಗಳಾಗಿವೆ. ಇವು ತಮ್ಮ ದೇಹದಲ್ಲಿ ಟೆಟ್ರೋಡೋಟಾಕ್ಸಿನ್ ಅನ್ನು ಹೊಂದಿರುತ್ತದೆ, ಇದು ವಿಶ್ವದ ಅತ್ಯಂತ ಮಾರಣಾಂತಿಕ ವಿಷಗಳಲ್ಲಿ ಒಂದಾಗಿದೆ.
ಈ ಆಕ್ಟೋಪಸ್‌ಗಳು ಕಚ್ಚಿದರೆ ಶಾಶ್ವತ ಅಂಗವೈಕಲ್ಯ ಹಾಗೂ ಸಾವು ಸಹ ಸಂಭವಿಸುತ್ತದೆ. ನೀಲಿ-ಉಂಗುರದ ಆಕ್ಟೋಪಸ್‌ಗಳು ನಾಲ್ಕು ಜಾತಿಗಳನ್ನು ಒಳಗೊಂಡಿರುವ ಒಂದು ಗುಂಪಾಗಿದೆ.: ದೊಡ್ಡ ನೀಲಿ-ಉಂಗುರದ ಆಕ್ಟೋಪಸ್ (ಹಪಲೋಕ್ಲೇನಾ ಲುನುಲಾಟಾ), ದಕ್ಷಿಣ ನೀಲಿ-ಉಂಗುರದ ಆಕ್ಟೋಪಸ್ (ಹಪಲೋಕ್ಲೇನಾ ಮ್ಯಾಕುಲೋಸಾ), ನೀಲಿ-ರೇಖೆಯ ಆಕ್ಟೋಪಸ್ (ಹಪಲೋಕ್ಲೇನಾ ಫ್ಯಾಸಿಯಾಟಾ) ಮತ್ತು ಸಾಮಾನ್ಯ ನೀಲಿ-ಉಂಗುರದ ಆಕ್ಟೋಪಸ್ Hapalochlaena nierstraszi).
ಈ ಆಕ್ಟೋಪಸ್‌ಗಳು ನಿಮ್ಮ ಅಂಗೈಯಲ್ಲಿ ಹೊಂದಿಕೊಳ್ಳುವಷ್ಟು ಚಿಕ್ಕದಾಗಿರುತ್ತವೆ, ಟೆಟ್ರೊಡಾಟಾಕ್ಸಿನ್ ಅನ್ನು ಹೊಂದಿರುತ್ತವೆ - ಯಾವುದೇ ತಿಳಿದಿರುವ ಪ್ರತಿವಿಷವಿಲ್ಲದ ಶಕ್ತಿಯುತ ನ್ಯೂರೋಟಾಕ್ಸಿನ್, ಇದು ಸಣ್ಣ ಪ್ರಮಾಣದಲ್ಲಿಯೂ ಸಹ ನಿಮಿಷಗಳಲ್ಲಿ ಮನುಷ್ಯರನ್ನು ಪಾರ್ಶ್ವವಾಯುವಿಗೆ ತಳ್ಳುತ್ತದೆ ಮತ್ತು ಕೊಲ್ಲುತ್ತದೆ.
ಆದರೆ ಉಳಿದಂತೆ ಬಹುತೇಕ ಆಕ್ಟೋಪಸ್‌ಗಳಿಂದ ಜೀವಕ್ಕೆ ಹಾನಿಯಿಲ್ಲ. ಆದರೆ ಅವು ವಿಪರೀತ ನೋವುಂಟು ಮಾಡುವ ನಂಜು ಹೊಂದಿರುತ್ತವೆ. ಆದರೆ ಈ ವಿಡಿಯೋದಲ್ಲಿರುವ ಆಕ್ಟೋಪಸ್ ವಿಷಕಾರಿಯಂತೆ ಕಾಣುವುದಿಲ್ಲ. ಬದಲಾಗಿ ಆತನಿಂದ ಅದೂ ಸಹ ಬಿಡುಗಡೆಗೆ ಯತ್ನಿಸುತ್ತಿರುವಂತೆ ಕಾಣುತ್ತಿದೆ. ಆತ ಮತ್ತೆ ನೀರಿನಲ್ಲಿ ಮುಳುಗಿದರೆ ತನ್ನ ಪಾಡಿಗೆ ತಾನು ಮತ್ತೆ ಸಮುದ್ರದ ಆಳಕ್ಕೆ ತೆರಳುತ್ತದೆ.



Click it and Unblock the Notifications
