Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿರುದ್ಯೋಗಿಗಳಿಗೂ ಇದೆ ನಕಲಿ ಆಫಿಸ್..! ದಿನಕ್ಕೆ ₹150 ನೀಡಿ ಇಡೀ ದಿನ ಕುಳಿತು ವಾಪಸ್ ಬನ್ನಿ..!!
ಇಡೀ ವಿಶ್ವದಲ್ಲಿ ಈಗ ಕಾಡುತ್ತಿರುವ ಬಹಳಷ್ಟು ಸಮಸ್ಯೆಗಳ ನಡುವೆ ನಿರುದ್ಯೋಗ ಕೂಡ ಒಂದಾಗಿದೆ. ಅದರಲ್ಲೂ ಜನಸಂಖ್ಯೆ ಹೆಚ್ಚಾಗಿರುವ ದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ಬಹುದೊಡ್ಡ ತಲೆನೋವು. ಜನಸಂಖ್ಯೆ ಹೆಚ್ಚಳ ಇರುವ ಎಲ್ಲಾ ದೇಶಗಳಲ್ಲು ಈ ಸಮಸ್ಯೆ ಇದ್ದೇ ಇರುತ್ತೆ. ಭಾರತದಲ್ಲೂ ಕೂಡ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ. ಇನ್ನು ಚೀನಾದಲ್ಲಿಯೂ ಕೂಡ ಇದೆ ಸಮಸ್ಯೆ.
ನಿರುದ್ಯೋಗಿಗಳು ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಜೀವನ ಅಂತ್ಯಗೊಳಿಸುವ ಹಲವು ಘಟನೆಗಳನ್ನು ನಾವು ನೋಡಿರುತ್ತೇವೆ. ಹಾಗೆ ನಿರುದ್ಯೋಗಿಗಳಿಗೆ ಮದುವೆಯಾಗಲು ಹುಡುಗಿ ನೀಡುವುದಿಲ್ಲ, ಹಾಗೆ ಸಮಾಜದಲ್ಲಿ ಒಂದು ಗೌರವ ಸಿಗುವುದಿಲ್ಲ ಎಂಬುದು ನಮ್ಮ ನಡುವೆಯೇ ನಿತ್ಯ ನೋಡುತ್ತಿರುತ್ತೇವೆ. ಆದ್ರೆ ಇಲ್ಲೊಂದು ಕಡೆ ನಕಲಿ ಆಫಿಸ್‌ಗಳಿವೆ, ಅಲ್ಲಿ ನೀವು ಕೆಲಸ ಮಾಡುವಂತಿಲ್ಲ. ಹಾಗಾದ್ರೆ ಏನಿದರ ವಿಶೇಷ ಗೊತ್ತಾ?

ಹೌದು ಕೆಲಸವೇ ಇಲ್ಲದೆ ಮನೆಯಲ್ಲಿ ಇರುವುದು ಸಮಸ್ಯೆ ತರಬಹುದು, ಹಾಗೆ ಒಂದಿಷ್ಟು ಜನ ನಿಮ್ಮ ನಿರುದ್ಯೋಗವನ್ನೇ ಆಡಿಕೊಂಡು ನಗಬಹುದು. ಆದ್ರೆ ಚೀನಾದಲ್ಲಿ ನಕಲಿ ಆಫಿಸ್‌ಗಳಿವೆ. ಅಲ್ಲಿಗೆ ನೀವು ನಿತ್ಯ ತೆರಳಿ ಸುಮ್ಮನೆ ಕುಳಿತು ಸಂಜೆ ವಾಪಾಸು ಬರಬಹುದು. ಇದು ನಿಮ್ಮನ್ನು ಉದ್ಯೋಗಿಗಳು ಎಂಬಂತೆ ಹೊರ ಜಗತ್ತಿಗೆ ತೋರಿಸುತ್ತದೆ. ಹಾಗೆ ಸಮಾಜದಲ್ಲಿ ಗೌರವ ತಂದು ಕೊಡಲಿದೆ.
ಇಲ್ಲೊಬ್ಬ ವ್ಯಕ್ತಿ ನಿರುದ್ಯೋಗಿಗಳಿಗೆ ಅಂತಲೇ ಆಫಿಸ್ ತೆರೆದಿದ್ದಾನೆ. ಇಲ್ಲಿ ಕೆಲಸ ಇಲ್ಲದವರು ದಿನಕ್ಕೆ ಇಂತಿಷ್ಟು ಹಣ ನೀಡಿ ಇಡೀ ದಿನ ಸುಮ್ಮನೆ ಕುಳಿತು ಸಂಜೆ ಮನೆಗೆ ವಾಪಾಸು ಬರಬಹುದು. ದಿನವೊಂದಕ್ಕೆ 150 ರೂಪಾಯಿ ನೀಡಿ ಒಂದು ಸೀಟ್‌ನಲ್ಲಿ ಇಡೀ ದಿನ ಕುಳಿತುಕೊಳ್ಳುವ ಕೆಲಸ ಇದು. ಇದರಿಂದ ನೀವು ನಿರುದ್ಯೋಗಿಗಳೆಂದು ಮನೆಯಲ್ಲಿ ಅಥವಾ ಸಮಾಜದಲ್ಲಿ ತೋರಿಸಿಕೊಳ್ಳಲು ಆಗದಿರುವವರಿಗೆ ಸಹಾಯಕವಾಗಲಿದೆಯಂತೆ.
ಅವರಿಗೆ ಕೆಲಸ ಸಿಗುವವರೆಗೂ ಇದೇ ರೀತಿ ನಕಲಿ ಆಫಿಸ್‌ಗೆ ತೆರಳಬಹುದು. ಇದು ನಿಮಗೂ ಮಾನಸಿಕ ನೆಮ್ಮದಿ ತರಲಿದೆಯಂತೆ. ಚೀನಾದ ಹೆಬೈ ಪ್ರದೇಶದ ವೀಡಿಯೊವೊಂದು ವೈರಲ್ ಆಗಿದ್ದು, ನಿರುದ್ಯೋಗಿಗಳಿಗೆ ಕೆಲಸದ ಸ್ಥಳಗಳನ್ನು ದಿನಕ್ಕೆ 29.9 ಯುವಾನ್‌ಗೆ ಊಟ ಸೇರಿದಂತೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಇರಬಹುದು ಎಂಬ ಜಾಹಿರಾತು ನೀಡಲಾಗಿತ್ತು.
ಚೀನಾದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುತ್ತಿವೆ, ಈ ಪ್ರಮಾಣ ಹೆಚ್ಚಳವಾದ ಕಾರಣ ವ್ಯಕ್ತಿಯೊಬ್ಬ ಈ ನಕಲಿ ಆಫಿಸ್ ತೆರೆಯುವ ಪ್ಲಾನ್ ಮಾಡಿದ್ದಾನೆ. ಕೆಲಸ ಕಳೆದುಕೊಂಡು ಒತ್ತಡದಲ್ಲಿರುವ ಮಂದಿ ಈ ರೀತಿ ನಕಲಿ ಆಫಿಸ್‌ನ ಬಳಸಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ತಿಂಗಳ ಕಾಲ ಅವರು ಕೆಲಸ ಇಲ್ಲದಿದ್ದರೂ ಕೂಡ ಆಫಿಸ್‌ಗೆ ತೆರಳಿರುವ ಭಾವನೆಯಲ್ಲಿರಬಹುದು.
ಇನ್ನು ಈ ಆಫಿಸ್‌ನಲ್ಲಿ ನೀವು ಬಾಸ್‌ಗಳಾಗಿಯೂ ಇರಬಹುದು. ಹಾಗೆ ಫೋಟೋ, ರೀಲ್ಸ್, ನಿಮ್ಮ ಸ್ವಂತ ಆಫಿಸ್‌ನಂತೆ ಇಲ್ಲಿಯೂ ಟೀಮ್, ಗ್ರೂಪ್ ಮಾಡಿಕೊಳ್ಳಬಹುದು. ಸದ್ಯ ಈ ಟ್ರೆಂಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರ ಚರ್ಚೆಗೂ ಕಾರಣವಾಗುತ್ತಿದೆ. ಇದು ಸಹಕಾರಿಯಾಗುವ ಜೊತೆಗೆ ಒಂದಿಷ್ಟು ಜನರು ಇದೊಂದು ಮೋಸ ಎಂದು ಸಂಬೋಧಿಸಿದ್ದಾರೆ. ಹಾಗೆ ನೀವು ಈ ನಕಲಿ ಆಫಿಸ್‌ನಿಂದಲೇ ಕುಳಿತು ಹೊಸ ಉದ್ಯೋಗಕ್ಕೆ ಅರ್ಜಿ ಹಾಕಬಹುದು. ಇಲ್ಲಿಂದಲೇ ಮುಂದಿನ ಕೆಲಸಗಳಿಗೆ ತಯಾರಿ ಮಾಡಿಕೊಳ್ಳಬಹುದು.



Click it and Unblock the Notifications