Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಬ್ಯಾಂಕ್ ಲಾಕರ್‌ನಲ್ಲಿಟ್ಟ ವಸ್ತು ಕಳುವಾದ್ರೆ ಬ್ಯಾಂಕ್ ಏನು ಮಾಡುತ್ತೆ.? ನಿಮಗೆಷ್ಟು ಪರಿಹಾರ ಸಿಗುತ್ತೆ?
ಮನೆಯಲ್ಲಿ ಈಗ ಹಣ, ಒಡವೆಗಳು, ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳುವುದೇ ಒಂದು ದೊಡ್ಡ ತಲೆ ನೋವಿನ ಕೆಲಸ. ಯಾಕಂದ್ರೆ ಯಾವಾಗ ಕಳ್ಳತನವಾಗುತ್ತದೆಯೋ ಇಲ್ಲವೆ ಯಾವುದಾದರು ಅನಾಹುತಗಳು ನಡೆದು ಬೆಲೆಬಾಳುವ ವಸ್ತುಗಳು ಕೈಗೆ ಸಿಗದಂತೆ ನಾಶವಾಗುತ್ತದೆಯೋ ಎಂಬ ಭಯದಲ್ಲೇ ಜನರು ದಿನ ಕಳೆಯುತ್ತಿರುತ್ತಾರೆ.
ಆದ್ರೆ ಈಗ ಬ್ಯಾಂಕ್‌ಗಳು ಲಾಕರ್‌ಗಳ ಸೇವೆ ನೀಡುತ್ತಾ ಬಂದಿವೆ. ನಿಮ್ಮ ವಸ್ತುಗಳನ್ನ ಬ್ಯಾಂಕ್ ಲಾಕರ್‌ನಲ್ಲಿ ಇಡುವುದು ಈಗ ಎಲ್ಲರಲ್ಲೂ ಕಾಮನ್ ಎನ್ನುವಂತಾಗಿದೆ. ಏಕೆಂದರೆ ಬ್ಯಾಂಕ್‌ನಲ್ಲಿಟ್ಟರೆ ನಿಮ್ಮ ವಸ್ತುಗಳು ಹೆಚ್ಚು ಸೇಫ್ ಎಂಬ ಭಾವನೆಯಲ್ಲಿರುತ್ತೀರಿ. ಹೀಗಾಗಿ ವರ್ಷಕ್ಕೆ ಇಂತಿಷ್ಟು ಹಣ ಪಾವತಿಸಿ ಬ್ಯಾಂಕ್ ಲಾಕರ್ ಸೇವೆ ಪಡೆದಿರುತ್ತಾರೆ.

ಬ್ಯಾಂಕ್ ಲಾಕರ್‌ನಲ್ಲಿ ಹಣ, ಒಡವೆ, ಆಸ್ತಿ ಪತ್ರಗಳು ಹೀಗೆ ಬೆಲೆಬಾಳುವ ಎಲ್ಲಾ ವಸ್ತುಗಳ ಇಡುವುದನ್ನು ನಾವು ನೋಡಿರುತ್ತೇವೆ. ನೀವು ಮನೆ ಬಿಟ್ಟು ಹೊರಗೆ ಹೆಚ್ಚು ಕಾಲ ಕಳೆಯುವವರಾಗಿದ್ದರೆ ಇಂತಹ ಕಾರ್ಯಕ್ಕೆ ನೀವು ಕೂಡ ಮುಂದಾಗಿರುತ್ತೀರಿ. ಆದ್ರೆ ಬ್ಯಾಂಕ್‌ನಲ್ಲಿಟ್ಟ ನಿಮ್ಮ ವಸ್ತುಗಳು ಎಷ್ಟು ಸುರಕ್ಷಿತ ಎಂಬುದು ನಿಮಗೆ ಗೊತ್ತಾ?
ಒಂದು ವೇಳೆ ಬ್ಯಾಂಕ್ ಲಾಕರ್‌ನಲ್ಲಿದ್ದ ನಿಮ್ಮ ವಸ್ತುಗಳು ಕಳುವಾದರೆ ಏನಾಗುತ್ತದೆ? ಬ್ಯಾಂಕ್ ನಿಮ್ಮ ನಷ್ಟ ಭರಿಸಲಿದೆಯೇ ಎಂಬ ಅನುಮಾನ ನಿಮಗೂ ಮೂಡಿರಬಹುದು. ಆದ್ರೆ ಬ್ಯಾಂಕ್ ಲಾಕರ್‌ನಲ್ಲಿಟ್ಟ ವಸ್ತುಗಳು ಕಳುವಾದರೆ ನಿಮಗೆ ಬ್ಯಾಂಕ್ ಅಷ್ಟೇ ಮೌಲ್ಯದ ನಷ್ಟವನ್ನು ಭರಿಸುವುದಿಲ್ಲ. ಹಾಗಾದ್ರೆ ಬ್ಯಾಂಕ್ ಏನು ಮಾಡಲಿದೆ ಗೊತ್ತಾ?
ನಿಮ್ಮ ಲಾಕರ್ ಕಳುವಾದರೆ ಏನಾಗಲಿದೆ?
ಒಂದು ವೇಳೆ ಬ್ಯಾಂಕ್ ಲಾಕರ್‌ನಲ್ಲಿಟ್ಟ ವಸ್ತುಗಳು ಕಳುವಾದರೆ ಅದಕ್ಕೆ ಬ್ಯಾಂಕ್ ಎಂದಿಗೂ ಜವಾಬ್ದಾರರಾಗಿರುವುದಿಲ್ಲ. ಇತ್ತೀಚಿಗೆ ಚಿನ್ಹಾಟ್‌ನಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಶಾಖೆಯಲ್ಲಿ ಲಾಕರ್‌ಗಳಿಂದ ₹1 ಕೋಟಿಗೂ ಹೆಚ್ಚು ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿತ್ತು. ಆದರೆ ಈ 1 ಕೋಟಿ ರೂಪಾಯಿ ಮೌಲ್ಯದ ವಸ್ತುಗಳ ಬದಲಿಗೆ ಬ್ಯಾಂಕ್ ಸಣ್ಣ ಪ್ರಮಾಣದ ಪರಿಹಾರ ನೀಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಲಾಕರ್ ಶುಲ್ಕದ 100 ಪಟ್ಟು ಪರಿಹಾರ
ಬ್ಯಾಂಕ್‌ಗಳು ನಿಮ್ಮ ಲಾಕರ್‌ಗೆ ವಾರ್ಷಿಕವಾಗಿ ಇಂತಿಷ್ಟು ಎಂಬ ಶುಲ್ಕ ನಿಗದಿ ಮಾಡಿರುತ್ತವೆ. ಈ ಶುಲ್ಕವು ಲಾಕರ್‌ಗಳ ಗಾತ್ರದ ಆಧಾರದ ಮೇಲೆ ನಿರ್ಧರಿತವಾಗುತ್ತವೆ. ವಾರ್ಷಿಕವಾಗಿ 1,500 ರೂಪಾಯಿಯಿಂದ 9,000 ರೂಪಾಯಿ ವರೆಗೂ ಇರಲಿದೆ. ಕೆಲವೊಂದು ಬ್ಯಾಂಕ್‌ಗಳು 10 ಸಾವಿರ ರೂಪಾಯಿಗೂ ಅಧಿಕ ಶುಲ್ಕ ವಿಧಿಸುತ್ತವೆ.
ಒಂದು ವೇಳೆ ನಿಮ್ಮ ಲಾಕರ್ ಕಳುವಾದರೆ ಆ ಲಾಕರ್‌ಗೆ ನೀವು ವಾರ್ಷಿಕವಾಗಿ ಪಾವತಿಸುತ್ತಿದ್ದ ಶುಲ್ಕದ 100 ಪಟ್ಟು ಹಣ ಪರಿಹಾರವಾಗಿ ಸಿಗಲಿದೆ. ಅಂದರೆ ನೀವು ವಾರ್ಷಿಕವಾಗಿ ಲಾಕರ್‌ಗೆ ₹1,500 ನೀಡಿದ್ದರೆ ಬ್ಯಾಂಕ್ ₹1,50,000 ಹಾಗೆ ₹9,000 ಆಗಿದ್ದರೆ ₹9,00,000 ಪರಿಹಾರವಾಗಿ ಬ್ಯಾಂಕ್ ನೀಡಲಿದೆ.
ಈ ಎಲ್ಲಾ ಪ್ರಕ್ರಿಯೆಗಳು ನಡೆಯುವುದು ಬಹಳ ತ್ರಾಸದಾಯಕ ಎನಿಸಬಹುದು. ಏಕೆಂದರೆ ಬ್ಯಾಂಕ್ ನೀಡುವ ಕೆಲವು ಫಾರ್ಮ್‌ಗಳ ತುಂಬಬೇಕಾಗುತ್ತದೆ. ಲಾಕರ್ ವಿಷಯಗಳ ವಿವರವಾದ ಫಾರ್ಮ್ ಮತ್ತು ಅಫಿಡವಿಟ್ ಅನ್ನು ಭರ್ತಿ ಮಾಡಲು ಕೇಳಲಾಗುತ್ತದೆ. ತನಿಖೆಯ ನಂತರ, ವಾರ್ಷಿಕ ಲಾಕರ್ ಸೇವಾ ಶುಲ್ಕದ 100 ಪಟ್ಟು ಪರಿಹಾರವನ್ನು ಒದಗಿಸಲಾಗುತ್ತದೆ.
ಲಾಕರ್‌ನಿಂದ ಕಳುವಾದಾಗ ಕದ್ದ ವಸ್ತುಗಳಿಗೆ, ಗ್ರಾಹಕರು ಖರೀದಿ ರಸೀದಿಗಳು ಅಥವಾ ಆಸ್ತಿ-ಸಂಬಂಧಿತ ದಾಖಲೆಗಳಾದ ಮನೆ ತೆರಿಗೆ ಅಥವಾ ಆಸ್ತಿ ಪತ್ರಗಳಿಗೆ ವಿದ್ಯುತ್ ಬಿಲ್‌ಗಳು ಸೇರಿದಂತೆ ಮಾಲೀಕತ್ವದ ಪುರಾವೆಗಳನ್ನು ಒದಗಿಸಬೇಕು. ಇದೆಲ್ಲವೂ ತಾಳೆಯಾಗದೆ ನಿಮಗೆ ಯಾವುದೇ ಪರಿಹಾರ ಕೂಡ ಸಿಗುವುದಿಲ್ಲ.



Click it and Unblock the Notifications
