Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಿಂಹವನ್ನು ಕಾಡಿನ ರಾಜ ಎನ್ನುವುದೇಕೆ? ಈ ಸತ್ಯ ನಿಮಗೆ ಗೊತ್ತಾ?
ನೀವು ಚಿಕ್ಕ ಮಕ್ಕಳ ಬಳಿ ಹೋಗಿ ಕಾಡಿನ ರಾಜ ಯಾರು ಎಂದು ಕೇಳಿದರೆ ಅವರು ಯಾವ ಅನುಮಾನವೂ ಇಲ್ಲದೆ ಸಿಂಹ ಎನ್ನುತ್ತಾರೆ. ಹಿಂದಿನಿಂದಲೂ ನಾವು ಕೂಡ ಇದನ್ನೇ ನೋಡಿದ್ದೇವೆ, ಕೇಳಿದ್ದೇವೆ. ಸಿನಿಮಾದಲ್ಲಿ, ಪುಸ್ತಕದಲ್ಲೂ ಇದನ್ನೇ ನಾವು ನೋಡಿದ್ದೇವೆ. ಹಾಗಾದ್ರೆ ಸಿಂಹ ಏಕೆ ಕಾಡಿನ ರಾಜ? ಸಿಂಹವನ್ನು ಕಾಡಿನ ರಾಜ ಎಂದು ಘೋಷಿಸಿದ್ದು ಯಾರು?
ನೀವು ಎಂದಾದ್ರು ಈ ಕುರಿತು ಯೋಚಿಸಿದ್ದೀರಾ? ಸಿಂಹ ಕಾಡಿನ ರಾಜ ಆಗಿದ್ದಾದರು ಹೇಗೆ? ಕಾಡಿನಲ್ಲಿ ಸಿಂಹ ಅತ್ಯಂತ ಬಲಶಾಲಿ ಪ್ರಾಣಿ ಅಲ್ಲ. ಅಥವಾ ಅತ್ಯಂತ ವೇಗವಾಗಿಯೂ ಓಡುವುದಿಲ್ಲ. ಹೀಗಿದ್ದರೂ ಸಿಂಹ ಕಾಡಿನ ರಾಜ ಆಗಿದ್ದಾದರೂ ಹೇಗೆ ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿದೆ. ಹಾಗಾದ್ರೆ ನಾವಿಂದು ಕಾಡಿನ ರಾಜ ಸಿಂಹ ಹೇಗೆ ಎಂಬುದನ್ನು ನಾವಿಂದು ತಿಳಿಯುವ ಪ್ರಯತ್ನ ಮಾಡೋಣ.

ಕಾಡಿನಲ್ಲಿ ನೂರಾರು ಪ್ರಾಣಿಗಳಿರುತ್ತವೆ, ಅದರಲ್ಲೂ ಮಾಂಸಹಾರಿ ಪ್ರಾಣಿಗಳು ಅತ್ಯಂತ ಅಪಾಯಕಾರಿಯಾಗಿರುತ್ತವೆ. ಅದರಲ್ಲಿ ಸಿಂಹ ಕೂಡ ಒಂದು. ಆದ್ರೆ ಸಿಂಹಕ್ಕಿಂತ ಶಕ್ತಿಶಾಲಿ ಎಂದು ನಾವು ಹಲವು ಪ್ರಾಣಿಗಳ ಹೆಸರು ಹೇಳಬಹುದು. ಉದಾಹರಣೆಗೆ ಹುಲಿ, ಆನೆ, ಘೇಂಡಾಮೃದಂತಹ ದೈತ್ಯ ಪ್ರಾಣಿಗಳಿವೆ. ಇವು ಸಿಂಹಗಿಂತ ಹೆಚ್ಚು ಬಲಶಾಲಿಯಾಗಿವೆ.
ಹೀಗಿದ್ದರೂ ನಾವು ಸಿಂಹವನ್ನೇ ಕಾಡಿನ ರಾಜ ಎಂದು ಕರೆಯುತ್ತೇವೆ. ಈ ಪ್ರಶ್ನೆಯನ್ನ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಮಾಡಿದ್ದಾರೆ. ಇದಕ್ಕೆ ಬಂದಿರುವ ಉತ್ತರ ನಿಮಗೂ ಸರಿ ಎನಿಸಲಿದೆ. ಕಾಡಿನಲ್ಲಿ ಸಿಂಹಕ್ಕಿಂತ ದೊಡ್ಡ ಪ್ರಾಣಿ ಹಾಗೂ ಶಕ್ತಿ ಶಾಲಿ ಪ್ರಾಣಿಗಳಿದ್ದರೂ ಕಾಡಿನ ರಾಜ ಎಂದು ಏಕೆ ಕರೆಯಲಾಗಿದೆ ಇದಕ್ಕೆ ಏನಾದರು ವೈಜ್ಞಾನಿಕ ಕಾರಣ ಇದೆಯೇ? ಎಂಬ ಪ್ರಶ್ನೆ ಮಾಡಲಾಗಿತ್ತು.
ಈ ಪ್ರಶ್ನೆಗೆ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಎಂಬುವರು ಉತ್ತರಿಸಿದ್ದರು. ಸಿಂಹವು ಕಾಡಿನ ದೊಡ್ಡ ಪ್ರಾಣಿಯಲ್ಲ. ಬಲಶಾಲಿಯೂ ಅಲ್ಲ. ಹಾಗಾದರೆ ಅವನನ್ನು ಕಾಡಿನ ರಾಜ ಎಂದು ಏಕೆ ಕರೆಯುತ್ತಾರೆ? ಕಸ್ವಾನ್ ಸಿಂಹಗಳ ಬಗ್ಗೆ ಆಗಾಗ್ಗೆ ಕಡೆಗಣಿಸದ ಕೆಲವು ಸಂಗತಿಗಳನ್ನು ವಿವರಿಸಿದರು. ಮೊದಲನೆಯದಾಗಿ, ಸಿಂಹಗಳು ಕಾಡಿನಲ್ಲಿ ವಾಸಿಸುವುದಿಲ್ಲ, ಆದರೆ ಹುಲ್ಲುಗಾವಲು ಮತ್ತು ಕುರುಚಲು ಅರಣ್ಯದಂತಹ ಪ್ರದೇಶದಲ್ಲಿ ಮಾತ್ರ ವಾಸಿಸುತ್ತವೆ. ಆದರೆ ಪ್ರಕೃತಿಯಲ್ಲಿ ಯಾರು ರಾಜರಿಲ್ಲ. ಇದನ್ನು ಮಾನವರು ಮಾಡಿರುವ ರನೆಯಾಗಿದೆ ಎಂದು ಉತ್ತರಿಸಿದರು.
ಪ್ರತಿಯೊಂದು ಪ್ರಾಣಿಗಳು ತಮ್ಮದೇ ನಿಯಮ, ತಮ್ಮದೇ ಸಾಮಾಜಿಕ ನಡುವಳಿಕೆ ಹೊಂದಿವೆ. ಆದರೆ ಸಿಂಹವನ್ನು ಕಾಡಿನ ರಾಜ ಎಂದು ಸಂಬೋಧಿಸಿರುವುದು ನಾವು. ಕಾಡಿನಲ್ಲಿ ಬೇರೆ ಪ್ರಾಣಿಗಳು ಸಿಂಹವನ್ನು ಕಾಡಿನ ರಾಜ ಎಂದು ಪರಿಗಣಿಸುವುದಿಲ್ಲ. ನಾವು ಇದಕ್ಕೆ ನೀಡುವ ಕಾರಣ ಎಂದರೆ ಸಿಂಹ ಕುಟುಂಬವನ್ನು ಪಾಲನೆ ಮಾಡಲಿದೆ. ಹಾಗೆ ಹೆಣ್ಣು ಸಿಂಹಗಳು ಬೇಟೆಯಾಡುತ್ತವೆ. ಆದರೆ ಗಂಡು ಸಿಂಹ ಮೊದಲು ಬೇಟೆಯಾಡಿದ ಮಾಂಸ ಸವಿಯುತ್ತದೆ. ಹಾಗೆ ಗಂಡು ಸಿಂಹಗಳು ತಮ್ಮ ಸ್ವಂತ ಮನೆ ಹೊಂದುತ್ತವೆ. ಅಂದರೆ ತಮ್ಮದೇ ಜಾಗ ಎಂಬುದನ್ನು ಅವರು ಗುರುತಿಸಿಕೊಳ್ಳುತ್ತವೆ. ಈ ಜಾಗ ಉಳಿಸಿಕೊಳ್ಳಲು ಅವು ಮತ್ತೊಂದು ಗಂಡಿನ ಜೊತೆ ಕಾದಾಟ ನಡೆಸಲಿವೆ. ಹೀಗಾಗಿ ಸಿಂಹಗಳನ್ನು ಕಾಡಿನ ರಾಜ ಎಂಬುದಾಗಿ ಕರೆಯಲಾಗಿದೆ.
ಇದನ್ನು ಬಿಟ್ಟರೆ ಸಿಂಹವನ್ನು ಕಾಡಿನ ರಾಜ ಎನ್ನಲು ಬೇರೆ ಯಾವುದೇ ಕಾರಣವಿಲ್ಲ. ಹಾಗೆ ಸಿಂಹಗಳು ನೋಡಲು ರಾಜರಂತೆ ರಾಯಲ್ ಸ್ಟೈಲ್‌ನಲ್ಲಿ ಬದುಕುತ್ತವೆ. ಹೆಣ್ಣು ಹುಲಿಗಳು ಒಟ್ಟಾಗಿ ಒಂದು ಗಂಡು ಸಿಂಹ ಜೊತೆಗೆ ಬದುಕುತ್ತವೆ. ಒಂದು ವೇಳೆ, ಮರಿ ಗಂಡು ಸಿಂಹಗಳು ದೊಡ್ಡದಾದ ಬಳಿಕ ಈ ಕುಟುಂಬದಿಂದ ಬೇರೆ ಆಗಬೇಕಾಗುತ್ತದೆ, ಕೆಲವೊಮ್ಮೆ ತಂದೆಯೊಂದಿಗೆ, ಸಹೋದರನೊಂದಿಗೆ ಕಾದಾಟ ನಡೆಸಿ ಬೇರೆಯಾಗಬೇಕಾಗುತ್ತದೆ. ಬೇರೆಯಾಗಿ ತನ್ನದೇ ಕುಟುಂಬ ಕಟ್ಟಿಕೊಳ್ಳಬೇಕಾಗುತ್ತದೆ. ಈ ಎಲ್ಲಾ ಕಾರಣಕ್ಕೆ ಸಿಂಹವನ್ನು ಕಾಡಿನ ರಾಜ ಎಂದು ಕರೆಯಲಾಗಿದೆ.



Click it and Unblock the Notifications
