Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಿಟಕಿ..ಆತ್ಮ..ಅವಿವಾಹಿತರಿಗೂ ಇತ್ತು ಟ್ಯಾಕ್ಸ್..! ಈ ವಿಚಿತ್ರ ಪದ್ಧತಿ ಕೇಳಿದ್ದೀರಾ?
2025-26ನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದ್ದು, ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸುತ್ತಿದ್ದಾರೆ. ಹಾಗೆ ಇ ಬಜೆಟ್ ಕುರಿತು ಜನರಲ್ಲಿ ಕುತೂಹಲ ಮೂಡುವುದು ಸಾಮಾನ್ಯ, ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಬಹುದು. ಯಾವೆಲ್ಲಾ ವಸ್ತುಗಳಿಗೆ ತೆರಿಗೆ ಕಡಿಮೆಯಾಗುತ್ತಿದೆ. ಏನೆಲ್ಲಾ ವಸ್ತು ದುಬಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಅದರಲ್ಲೂ ತೆರಿಗೆ ವಿಚಾರ ಎಲ್ಲರ ಕಿವಿ ನೆಟ್ಟಗಾಗುವಂತೆ ಮಾಡುತ್ತೆ. ಯಾವ ವಸ್ತುಗಳು ಹೆಚ್ಚು ತೆರಿಗೆಯ ವ್ಯಾಪ್ತಿಗೆ ಬರಲಿವೆ. ಯಾವೆಲ್ಲಾ ಕಡಿಮೆ ತೆರಿಗೆಗೆ ಒಳಪಡಲಿವೆ ಎಂಬುದನ್ನು ತಿಳಿಯುವ ಕುತೂಹಲ ಇದ್ದೇ ಇರುತ್ತೆ. ಹಾಗೆ ವಿಶ್ವದ ಎಲ್ಲಾ ದೇಶಗಳಲ್ಲು ತೆರಿಗೆ ವಿಧಿಸುವುದು ನೋಡಬಹುದು. ಸರ್ಕಾರಗಳು ಆಡಳಿತ ನಡೆಸುವುದೇ ಈ ತೆರಿಗೆ ಹಣದಿಂದ.

ಹೀಗಾಗಿ ವಿಶ್ವದ ಎಲ್ಲಾ ದೇಶಗಳಲ್ಲೂ ಈ ತೆರಿಗೆ ಇದ್ದೇ ಇರುತ್ತೆ. ಆದ್ರೆ ಕೆಲವೊಂದು ದೇಶದಲ್ಲಿ ಚಿತ್ರ ವಿಚಿತ್ರ ತೆರಿಗೆಗಳಿವೆ. ಹೌದು ಕೆಲವೊಂದು ಎಷ್ಟು ವಿಚಿತ್ರ ತೆರಿಗೆ ವಿಧಿಸುವ ದೇಶಗಳಿವೆ ಎಂಬುದನ್ನು ತಿಳಿದರೆ ನಿಮಗೂ ಅಚ್ಚರಿ ಆಗುತ್ತೆ. ಹಾಗಾದ್ರೆ ನಾವಿಂದು ಯಾವೆಲ್ಲಾ ದೇಶಗಳಲ್ಲಿ ಯಾವೆಲ್ಲಾ ವಿಚಿತ್ರ ತೆರಿಗೆಗಳಿದ್ದವು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅವಿವಾಹಿತರಿಗೆ ಟ್ಯಾಕ್ಸ್
ರೋಮ್ ಪ್ರದೇಶದಲ್ಲಿ ಈ ರೀತಿಯ ವಿಚಿತ್ರ ತೆರಿಗೆಯೊಂದು ಜಾರಿಯಲ್ಲಿತ್ತು. ಅಲ್ಲಿ 9ನೇ ಶತಮಾನದಲ್ಲಿ ರಾಜ ಅಗಸ್ಟನು ಈ ಅವಿವಾಹಿತರ ತೆರಿಗೆ ಜಾರಿಗೆ ತಂದಿದ್ದ. ಯುವಕ ಯುವತಿಯರು ಬಹುಬೇಗ ಮದುವೆಯಾಗುವುದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ತೆರಿಗೆ ಜಾರಿ ಮಾಡಲಾಗಿತ್ತು. 20ರಿಂದ 60 ವರ್ಷದೊಳಗಿನ ಮದುವೆ ಆಗಿರದ ಮಂದಿ ಈ ತೆರಿಗೆಯನ್ನು ಕಡ್ಡಾಯವಾಗಿ ಕಟ್ಟಬೇಕಿತ್ತು.
ಹಾಗೆ 1924ರಲ್ಲಿ ಇಟಲಿಯ ಸರ್ವಧಿಕಾರಿ ಬೆನಿಟೋ ಮುಸಲೊನಿ ಕೂಡ ಈ ಅವಿವಾಹಿತರ ಟ್ಯಾಕ್ಸ್ ಜಾರಿ ಮಾಡಿದ್ದ. 21 ರಿಂದ 50 ವರ್ಷದೊಳಗಿನವರು ಮದುವೆಯಾಗದಿದ್ದರೆ ಅವರಿಗೆ ತೆರಿಗೆ ಹೇರಲಾಗುತ್ತಿತ್ತು.
ಮೂತ್ರ ಮಾರಾಟಕ್ಕೆ ತೆರಿಗೆ
ರೋಮ್‌ನಲ್ಲಿ ಈ ವಿಚಿತ್ರ ತೆರಿಗೆಯೊಂದು ಜಾರಿಯಲ್ಲಿತ್ತು. ವಿಚಿತ್ರ ಏನೆಂದರೆ ಮೂತ್ರ ಮಾಡುವವರು ಮಾತ್ರವಲ್ಲ ಮೂತ್ರ ಮಾರಾಟ ಮಾಡುವವರ ಮೇಲೆಯೂ ಟ್ಯಾಕ್ಸ್ ಇತ್ತು. ರೋಮ್ ನಗರದಲ್ಲಿ ಬಟ್ಟೆಗಳ ತೊಳೆಯಲು, ಜನರ ಮೂತ್ರದಿಂದ ತಯಾರಿಸಿದ್ದ ದ್ರಾವಣ ಬಳಸಲಾಗಿತ್ತಿತ್ತು, ಇದರಲ್ಲಿ ಅಮೋನಿಯಾ ಅಂಶ ಇರುವ ಕಾರಣ ಕೊಳೆಗಳ ನಿವಾರಣೆ ಮಾಡುತ್ತೆ ಎನ್ನಲಾಗುತ್ತಿತ್ತು. ಹೀಗಾಗಿ ಈ ಮೂತ್ರ ಮಾರಾಟ ಮಾಡುತ್ತಿದ್ದವರ ಮೇಲೆಯೂ ತೆರಿಗೆ ಇತ್ತು.
ಆತ್ಮಗಳಿಗೂ ಇತ್ತು ತೆರಿಗೆ
ನಾವು ಸತ್ತ ಬಳಿಕವು ಟ್ಯಾಕ್ಸ್ ಕಟ್ಟುವ ವಿಚಿತ್ರ ಸಂಪ್ರದಾಯವೊಂದಿತ್ತು. ರಷ್ಯಾದ ರಾಜ ಪೀಟರ್ ದಿ ಗ್ರೇಟ್ ಎಂಬಾತ 1718ರಲ್ಲಿ ವಿಚಿತ್ರ ತೆರಿಗೆ ಜಾರಿ ಮಾಡಿದ್ದ. ಯಾರು ಆತ್ಮಗಳನ್ನು ನಂಬುತ್ತಾರೋ ಅವುಗಳನ್ನು ಪೂಜಿಸುತ್ತಾರೋ ಅವರು ತೆರಿಕೆ ಕಟ್ಟಬೇಕಿತ್ತು. ಒಂದು ವೇಳೆ ನಂಬದಿದ್ದರೆ ಅವರಿಗೆ ಧರ್ಮ ನಿಷ್ಠೆ ಇಲ್ಲ ಎಂಬ ಆರೋಪ ಹೊರಿಸಲಾಗುತ್ತಿತ್ತು. ಹಾಗೆ ಧರ್ಮದಲ್ಲಿ ನಂಬಿಕೆ ಇಡದ ವ್ಯಕ್ತಿಗೆ ದುಬಾರಿ ತೆರಿಗೆ ಜಾರಿಯಲ್ಲಿತ್ತು. ಹೀಗಾಗಿ ಎಲ್ಲರು ಈ ಆತ್ಮಗಳ ತೆರಿಗೆ ಕಟ್ಟುತ್ತಿದ್ದರು.
ಮನೆ ಕಿಟಕಿಗೆ ಬೀಳುತ್ತಿತ್ತು ತೆರಿಗೆ
1696ರಲ್ಲಿ ಇಂಗ್ಲೆಂಡ್ 3ನೇ ಕಿಂಗ್ ವಿಲಿಯಂ ಆಡಳಿತದಲ್ಲಿ ಭಾರೀ ಆರ್ಥಿಕ ಸಂಕಷ್ಟ ಎದುರಾಗಿತ್ತು. ಹಣಕಾಸು ಕೊರತೆಯಿಂದ ರಾಜ್ಯ ಪರದಾಡಿತ್ತು, ಈ ವೇಳೆ ಆತ ಯಾವ ಮನೆಯಲ್ಲಿ ಎಷ್ಟು ಕಿಟಕಿಗಳನ್ನು ಹೊಂದಾಗಿದೆಯೋ ಅಷ್ಟು ತೆರಿಗೆ ವಿಧಿಸಲು ಮುಂದಾದರು. ಹೆಚ್ಚು ಕಿಟಕಿಗಳ ಹೊಂದಿದ್ದರೆ ಅದು ಶ್ರೀಮಂತರ ದೊಡ್ಡ ಮನೆ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಕಡಿಮೆ ಕಿಟಕಿ ಇದ್ದರೆ ಅದು ಬಡವರ ಮನೆ ಎಂದು ವಿಶ್ಲೇಷಿಸಲಾಗಿತ್ತು.



Click it and Unblock the Notifications
