Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸತ್ತ ಇಲಿ-ಮೊಲಗಳನ್ನು ಒಣಗಿಸಿ ಪೆನ್ಸಿಲ್ ಬಾಕ್ಸ್, ಕಿವಿಯೋಲೆ ರಚಿಸುವ ವಿಚಿತ್ರ ವ್ಯಕ್ತಿ..!!
ಇಂಟರ್‌ನೆಟ್‌ನಲ್ಲಿ ಎಷ್ಟೊಂದು ವಿಚಿತ್ರ ಘಟನೆಗಳು ನಮ್ಮ ಕಣ್ಣಿಗೆ ಬೀಳುತ್ತವೆ ಅಂದ್ರೆ ನೋಡಿದವರಿಗೆ ಆಘಾತದ ಜೊತೆಗೆ ಅಚ್ಚರಿ ಮೂಡಿಸುತ್ತವೆ. ಕೆಲವೊಂದು ಘಟನೆಗಳನ್ನು ನಾವು ನಂಬುವುದೇ ಕಷ್ಟವಾಗುತ್ತವೆ. ಅಂತಹ ಕೆಲವು ಘಟನೆಗಳನ್ನ ಇತ್ತೀಚಿಗೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಈಗಂತು ಆನ್‌ಲೈನ್‌ನಲ್ಲಿ ಫೇಮಸ್ ಆಗಲು ವೈರಲ್ ಆಗಲು ಲೈಕ್ಸ್‌ಗಳಿಗಾಗಿ ಎಂತಹ ಹುಚ್ಚುತ್ತನಕ್ಕೂ ಜನರು ಕೈಹಾಕುತ್ತಾರೆ.
ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡ ಸತ್ತಿರುವ ಇಲಿ ಹಾಗೂ ಮೊಲವನ್ನು ಒಣಗಿಸಿ ಆತ ಅದನ್ನು ಗೃಹಪಯೋಗಿ ವಸ್ತುವಾಗಿ ಬದಲಾಯಿಸಿರುವ ವಿಲಕ್ಷಣ ಘಟನೆಯೊಂದು ನಡೆದಿದೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಕೆಲವು ಫೋಟೋಗಳು ನೋಡುಗರಲ್ಲಿ ನಡುಕ ಹುಟ್ಟಿಸುವಂತಿದೆ. ಆತ ಸತ್ತ ಪ್ರಾಣಿಗಳನ್ನು ಫ್ರೀಜಿಂಗ್ ಮಾಡಿ ಒಣಗಿಸಿ ಬಳಸುತ್ತಿದ್ದಾನೆ.

ಅದರಲ್ಲಿ ಬಿಳಿ ಬಣ್ಣದ ಇಲಿಯನ್ನು ಕಿವಿಯೋಲೆಯನ್ನಾಗಿಯೂ, ಪೆನ್ಸಿಲ್ ಕೇಸ್ ಹಾಗೂ ಸತ್ತ ಕಂದು ಬಣ್ಣದ ಮೊಲವನ್ನು ಟೋಸ್ಟರ್ ಆಗಿಯೂ ಪರಿವರ್ತಿಸಿದ್ದಾನೆ. ಆತನ ಕಾರ್ಯಕ್ಕೆ ಜನರು ಶಾಕ್ ಆಗಿದ್ದಾರೆ. ಆತ ಕಲಾವಿದನಾಗಿದ್ದರು ಇಂತಹ ಕಾರ್ಯಗಳ ಮಾಡುವುದು ಊಹೆಗೂ ನಿಲುಕದ್ದಾಗಿದೆ.
ನಾನು ಒಣಗಿದ ಪ್ರಾಣಿಗಳನ್ನು ಫ್ರೀಜ್ ಮಾಡಿ ಅವುಗಳಿಂದ ವಸ್ತುಗಳ ತಯಾರಿಸಲು ಇಷ್ಟಪಡುತ್ತೇವೆ. ಆದರೆ ಜನರು ಇದನ್ನು ನೋಡಿ ಯಾಕೆ ಮಾಡುತ್ತೀರಿ?, ಯಾರಿಗಾಗಿ ಮಾಡುತ್ತಿದ್ದೀರಿ ಎಂದೆಲ್ಲಾ ಪ್ರಶ್ನೆಗಳ ಮಾಡುತ್ತಾರೆ ಆದರೆ ನನಗಿದು ಸಂತೋಷ ನೀಡುತ್ತದೆ ಎಂದು ಆತ ವಿಡಿಯೋ ಒಂದರಲ್ಲಿ ಹಂಚಿಕೊಂಡಿದ್ದಾನೆ.
ಆತ ಕಾಡುಗಳಲ್ಲಿ ಸತ್ತಿರುವ ಪ್ರಾಣಿಗಳನ್ನು ಸಂಗ್ರಹಿಸಿ ತರುತ್ತಾನಂತೆ. ಅವುಗಳ ಅಂಗಾಂಗಗಳ ತೆಗೆದು ಶುಚಿಗೊಳಿಸಿ ಪ್ರೀಜರ್ ಮೂಲಕ ಅವುಗಳು ಕೊಳೆಯದಂತೆ ಇಟ್ಟು ನಂತರ ಗಟ್ಟಿಯಾದಾಗ ವಿವಿಧ ವಸ್ತುಗಳನ್ನು ತಯಾರಿಸಿ ಸಮಯ ಕಳೆಯುತ್ತಾನೆ ಎಂದು ಹೇಳಲಾಗಿದೆ. ನಾನೊಬ್ಬ ಪ್ರಾಣಿ ಪ್ರೇಮಿ, ಅದು ಸತ್ತ ಮೇಲೆ ಮತ್ತಷ್ಟು ಸುಂದರವಾಗಿ ಕಾಣಬೇಕು ಎಂಬ ಉದ್ದೇಶಕ್ಕೆ ಇದನ್ನು ಮಾಡುತ್ತಿರುವೆ ಎಂದು ಹೇಳಿಕೊಂಡಿದ್ದಾನೆ.
ನನಗೆ ಸ್ಫೂರ್ತಿ ನೀಡುವ ವಿಷಯವೆಂದರೆ ಯಾರನ್ನಾದರೂ ನಗಿಸಲು ಸಾಧ್ಯವಾಗುತ್ತದೆ ಎಂಬ ಭರವಸೆ, ಅದು ನನಗೂ ಖುಷಿ ಕೊಡುತ್ತದೆ. ನಾನು ಯಾರನ್ನಾದರು ಖುಷಿಯಾಗಿಡುವುದೇ ಈ ಪ್ರಪಂಚದ ಅತ್ಯುತ್ತಮ ಕೆಲಸ ಎಂದು ನಾನು ಭಾವಿಸಿದ್ದೇನೆ. ಅದನ್ನು ನಾನು ಮಾಡುತ್ತಿದ್ದೇನೆ. ಈ ಕೆಲಸ ಮಾಡಲು ನನಗೆ ಇಷ್ಟು ಕಾರಣ ಮಾತ್ರ ಸಾಕು ಎಂದಿದ್ದಾನೆ.
ಒಂದು ಇಲಿಯಲ್ಲಿ ಪೆನ್ಸಿಲ್ ಹಾಗೂ ಶಾರ್ಪ್ನರ್ ತಯಾರಿಸಿದ್ದಾನೆ. ಅವುಗಳನ್ನು ವಸ್ತುಗಳನ್ನಾಗಿ ಆತ ಪರಿವರ್ತಿಸುತ್ತಾನೆ. ಆದರೆ ಈ ವಿಡಿಯೋ ವೈರಲ್ ಆದ ಬಳಿಕ ಆತನ ಕಲೆಯ ವಿರುದ್ಧ ಟೀಕೆಗಳು ಕೇಳಿಬಂದಿವೆ. ಸತ್ತಿರುವ ಪ್ರಾಣಿಗಳು ಆತನಿಗೆ ಸಿಗುವುದು ಹೇಗೆ ಎಂಬ ಪ್ರಶ್ನೆಯಿಂದ ಹಿಡಿದು ಆತನ ಮನಸ್ಥಿತಿಯ ಬಗ್ಗಯೂ ಪ್ರಶ್ನೆಗಳು ಮೂಡಿವೆ.
ಸದ್ಯ ಈ ವಿಡಿಯೋ ಬರೋಬ್ಬರಿ 2.8 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದ್ದು ಈ ವಿಡಿಯೋ ಕೆಳಗೆ ಹಲವರು ಕೇಳಿರುವ ಪ್ರಶ್ನೆಗಳನ್ನು ನಾವಿಂದು ನೋಡೋಣ.
ನಮಗ್ಯಾಕೋ ಈತ ಸರಣಿ ಕೊಲೆಗಾರನಂತೆ ಕಾಣುತ್ತಾನೆ. ಸತ್ತ ಪ್ರಾಣಿಗಳು ಅದರಲ್ಲೂ ಮೊಲ, ಇಲಿ ಸಿಗುವುದು ಹೇಗೆ? ಅವು ತಮ್ಮ ಗೂಡಿನೊಳಗೆ ಹೆಚ್ಚಾಗಿ ಸಾಯುತ್ತವೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಈ ವಿಡಿಯೋ ನೋಡಿದರೆ ಗಾಬರಿಯಾಗುತ್ತಿದೆ, ಏಕೆಂದರೆ ಇದು ಬರಿ ಸ್ಯಾಂಪಲ್ ಆಗಿರಬಹುದು. ದೊಡ್ಡ ದೊಡ್ಡ ಪ್ರಾಣಿಗಳಲ್ಲಿ ಈತ ಇನ್ನೂ ಏನೇನು ಮಾಡಿದ್ದಾನೋ ಯಾರಿಗೆ ಗೊತ್ತು ಎಂದು ಮತ್ತೊಬ್ಬರಿ ಬರೆದಿದ್ದಾರೆ.
ಇದು ಆತನ ಹವ್ಯಾಸ ಅಥವಾ ಕಲೆ ಎಂದರೆ ನಾನು ಒಪ್ಪಿಕೊಳ್ಳುವುದಿಲ್ಲ. ಇದೊಂದು ವಿಕೃತಿಯಾಗಿದೆ. ಸತ್ತ ಪ್ರಾಣಿಗಳನ್ನು ಈ ರೀತಿ ಮನೆಯಲ್ಲಿ ಅದರಲ್ಲೂ ಕಲಾಕೃತಿಗಳಂತೆ ಬಳಸುವುದು ಸರಿಯಲ್ಲ ಎಂದು ಹೇಳಿದ್ದಾರೆ.



Click it and Unblock the Notifications
