Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಯುಗಾದಿ ಬಳಿಕ ಈ 5 ರಾಶಿಯವರಿಗೆ ಯಶಸ್ಸು ಸಿಗಲಿದೆ, ಸಂಪತ್ತು ಹೆಚ್ಚಲಿದೆ
ಯುಗಾದಿ ರಾಶಿಫಲ 2023-24 ನೋಡುವುದಾದರೆ ಈ ವರ್ಷ ದ್ವಾದಶ ರಾಶಿಗಳಲ್ಲಿ 5 ರಾಶಿಗಳ ಮೇಲೆ ತುಂಬಾನೇ ಶುಭ ಫಲ ಬೀರಲಿದೆ. ಈ ರಾಶಿಗಳಲ್ಲಿ ಗುರು, ಶನಿ, ರಾಹು-ಕೇತು ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ಈ ವರ್ಷ ತುಂಬಾನೇ ಒಳ್ಳೆಯದಾಗಲಿದೆ.

ಈ ಹಿಂದೆ ಅನುಭವಸಿದ ಕಷ್ಟಗಳು ದೂರಾಗಿ ಈ ವರ್ಷ ಈ 5 ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ ಅಂತಾರಲ್ಲ ಹಾಗಿರಲಿದೆ ಬದುಕು ನೋಡಿ:

ಮೇಷ ರಾಶಿ: ಶುಭಫಲ
ಮೇಷ ರಾಶಿಯವರ ಯುಗಾದಿ 2023-24ರ ರಾಶಿಫಲ ನೋಡುವುದಾದರೆ ಈ ವರ್ಷ ಗ್ರಹಗತಿಗಳ ಸ್ಥಾನ ಅನುಕೂಲಕರವಾಗಿದೆ. ಆದ್ದರಿಂದ ಈ ವರ್ಷ ನಿಮಗೆ ತುಂಬಾನೇ ಶುಭ ಎಂದು ಹೇಳಬಹುದು. ರಾಹು ನಿಮ್ಮ ರಾಶಿಯಲ್ಲಿಯೇ ಇದ್ದಾನೆ.
ಏಪ್ರಿಲ್ 22ಕ್ಕೆ ಗುರು ಕೂಡ ನಿಮ್ಮ ರಾಶಿಯಲ್ಲಿಯೇ ಇರಲಿದ್ದಾನೆ. ಶನಿಯು ನಿಮ್ಮ ರಾಶಿಯ 11ನೇ ಮನೆಯಲ್ಲಿದೆ. ಕೇತು ನಿಮ್ಮ 8ನೇ ಮನೆಯಲ್ಲಿಯೇ ಇರಲಿದ್ದು ಕೇತು ಪ್ರಭಾವ ಕೂಡ ನವೆಂಬರ್ 29ರವರೆಗೆ ಇರಲಿದೆ. ಇನ್ನು ಶನಿ ಮೇಷ ರಾಶಿಯವರ 11ನೇ ಮನೆಯಲ್ಲಿದೆ.
ನಿಮಗೆ ಗುರುವಿನ ಸ್ಥಾನದಿಂದಾಗಿ ಈ ಯುಗಾದಿ ಬಳಿಕ ತುಂಬಾನೇ ಶುಭಫಲ. ಈವರೆಗೆ ಇದ್ದ ಆರ್ಥಿಕ ಸಮಸ್ಯೆ ದೂರಾಗುವುದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು. ಈ ವರ್ಷ ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡುವಿರಿ. ನಿಮ್ಮ ಕೆಲಸಗಳು ಸುಗಮವಾಗಿ ನೆರವೇರಲಿದೆ. ಸ್ವಂತ ಉದ್ಯೋಗ ಮಾಡುವವರು ಈ ವರ್ಷ ಒಳ್ಳೆಯ ಆರ್ಥಿಕ ಲಾಭ ಗಳಿಸುವಿರಿ.
ಹೊಸ ಉದ್ಯಮಕ್ಕೆ ಕೈ ಹಾಕಲು ಬಯಸುವುದಾದರೆ ಈ ವರ್ಷ ಅನುಕೂಲಕರವಾಗಿದೆ. ಈ ವರ್ಷ ಕೆಲಸದ ಒತ್ತಡ ಕಡಿಮೆ ಇರಲಿದೆ.
ಅವಾಹಿತರಿಗೆ ಈ ವರ್ಷ ಕಂಕಣ ಬಲ ಕೂಡಿ ಬರಲಿದೆ. ಮಗುವಿನ ನಿರೀಕ್ಷಿತ ದಂಪತಿಗಳಿಗೆ ಖುಷಿ ಸುದ್ದಿ ಸಿಗಲಿದೆ. ಈ ವರ್ಷ ಗುರು ಧರ್ಮ ಸ್ಥಾನ ನೋಡುತ್ತಿರುವುದರಿಂದ ದೈವಿಕ ಕಾರ್ಯದಲ್ಲಿದ್ದ ವಿಘ್ನಗಳು ದೂರಾಗಲಿದೆ.
ವಿದ್ಯಾರ್ಥಿಗಳಿಗೂ ಈ ವರ್ಷ ತುಂಬಾನೇ ಅನುಕೂಲಕರವಾಗಿದೆ. ನೀವು ವಿದೇಶಕ್ಕೆ ಹೋಗಿ ಕೆಲಸ ಮಾಡಲು ಬಯಸುವುದಾದರೆ ಒಳ್ಳೆಯ ಅವಕಾಶಗಳು ದೊರೆಯಲಿದೆ. ಒಟ್ಟಾರೆಯಾಗಿ ಈ ಯುಗಾದಿ ಬೆಲ್ಲದ ಸಿಹಿಯನ್ನು ಹೊತ್ತು ತಂದಿದೆ.

ಮಿಥುನ ರಾಶಿ:
ಮಿಥುನ ರಾಶಿಯವರ ಯುಗಾದಿ 2023-24ರ ರಾಶಿಫಲ ನೋಡುವುದಾದರೆ ರಾಹು ಮತ್ತು ಗುರು ನಿಮ್ಮ 11ನೇ ಮನೆಯಲ್ಲಿ ಇರುವುದರಿಂದ ಅವುಗಳ ಸ್ಥಾನ ನಿಮಗೆ ಶುಭವಾಗಿದೆ. ಶನಿ ನಿಮ್ಮ 9ನೇ ಮನೆಯಲ್ಲಿ ಹಾಗೂ ಕೇತು ನಿಮ್ಮ 6ನೇ ಮನೆಯಲ್ಲಿ ಇರುವುದರಿಂದ ಇವುಗಳ ಸ್ಥಾನ ಕೂಡ ನಿಮಗೆ ಶುಭವಾಗಿರಲಿದೆ.
ಗುರು ಹಾಗೂ ರಾಹು ನಿಮಗೆ ಲಾಭದ ಸ್ಥಾನದಲ್ಲಿರುವುದರಿಂದ ನೀವು ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಪಡೆಯುವಿರಿ, ಆದ್ದರಿಂದ ಈ ವರ್ಷ ನಿಮಗೆ ತುಂಬಾನೇ ಶುಭ ಫಲ. ಆದ್ದರಿಂದ ಈ ವರ್ಷ ಹೊಸ ಉದ್ಯಮ ಪ್ರಾರಂಭಿಸಲು ಬಯಸುವುದಾದರೆ ಈ ವರ್ಷ ನಿಮಗೆ ತುಂಬಾನೇ ಶುಭವಾಗಿದೆ.
ಈ ವರ್ಷ ನಿಮ್ಮ ಸಂಪತ್ತು ಹೆಚ್ಚಲಿದೆ. ಇನ್ನು ಈ ಹಿಂದೆ ಮಾಡಿದ ಸಾಲ ತೀರಿಸುವಿರಿ. ಸ ವಿದ್ಯಾರ್ಥಿಗಳಿಗೆ ಈ ವರ್ಷ ತುಂಬಾನೇ ಅನುಕೂಲಕರವಾಗಿದೆ. ನೀವು ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುತ್ತಿದ್ದಾರೆ ನಿಮ್ಮ ಕನಸು ನೆರವೇರಲಿದೆ.
ವಿವಾಹ ತಡವಾಗುತ್ತಿದ್ದರೆ ಈ ವರ್ಷ ಕಂಕಣ ಬಲ ಕೂಡಿ ಬರಲಿದೆ. ವೈವಾಹಿಕ ಜೀವನ ಕೂಡ ಚೆನ್ನಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯಲಿದೆ.
ನೀವು ಪ್ರತಿದಿನ ಹನುಮಾನ್ ಚಾಲೀಸ ಮಂತ್ರ ಪಠಿಸಿ, 16 ವಾರ ಕಪ್ಪು ಎಳ್ಳನ್ನು ಶನಿ ದೇವರಿಗೆ ಅರ್ಪಿಸಿ ಇದರಿಂದ ಮತ್ತಷ್ಟು ಶುಭಫಲ ದೊರೆಯುವುದು.

ಸಿಂಹ ರಾಶಿ:
ಸಿಂಹ ರಾಶಿಯವರ ಯುಗಾದಿ 2023-24ರ ರಾಶಿಫಲ ನೋಡುವುದಾದರೆ ರಾಹು ಮತ್ತು ಗುರು 9ನೇ ಮನೆಯಲ್ಲಿದ್ದು , ಶನಿ ನಿಮ್ಮ 7ನೇ ಕೇತು ನಿಮ್ಮ 4ನೇ ಮನೆಯಲ್ಲಿ ಇರಲಿದೆ. ಈ ಎಲ್ಲಾ ಗ್ರಹಗಳ ಸ್ಥಾನವೂ ನಿಮಗೆ ಅನುಕೂಲಕರವಾಗಿದೆ.
ಕಳೆದ ವರ್ಷ ಅನುಭವಿಸಿದ ಹಣದ ತೊಂದರೆ ಈ ವರ್ಷ ಇರುವುದಿಲ್ಲ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣುವಿರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಒಳ್ಳೆಯ ಲಾಭ ಉಂಟಾಗಲಿದೆ. ಗುರು ನಿಮ್ಮ ಅದೃಷ್ಟದ ಮನೆಯಲ್ಲಿ ಕೂರುವುದರಿಂದ ನಿಮಗೆ ಚಿಂತೆಯೇ ಬೇಡ ಎಲ್ಲಾ ಹಣಕಾಸಿನ ಸಮಸ್ಯೆಯಿಂದ ಮುಕ್ತರಾಗುತ್ತೀರಿ.
ಮನೆಯಲ್ಲಿ ಪೂಜೆ , ಶುಭ ಕಾರ್ಯ ನಡೆಯಲಿದೆ.ಕೆಲಸದಲ್ಲಿ ಬದಲಾವಣೆ ಬಯಸಿದರೆ ಒಳ್ಳೆಯ ಫಲ ಸಿಗುವುದು. ನೀವು ಬೇರೆಯವರಿಗೆ ಸಹಾಯ ಮಾಡಲು ಹೋಗಿ ಕಷ್ಟಕ್ಕೆ ಸಿಲುಕಬಹುದು, ಆದ್ದರಿಂದ ನಿಮ್ಮ ಕೈಯಲ್ಲಾದ ಸಹಾಯ ಮಾಡಿ.
ನೀವು ಹಣವನ್ನು ಸಾಲ ನೀಡಬೇಡಿ, ಏಕೆಂದರೆ ಕೊಟ್ಟ ಹಣ ಮತ್ತೆ ನಿಮ್ಮ ಕೈ ಸೇರುವುದಿಲ್ಲ, ಆದ್ದರಿಂದ ನಿಮಗೆ ಸಹಾಯ ಮಾಡಬೇಕೆಂದು ಬಯಸಿದರೆ ದಾನ ಮಾಡಿ. ಸಿಂಹ ರಾಶಿಯವರಿಗೆ ಗುರು ಚಾಂಡಾಲ ಯೋಗವಿರುವುದರಿಂದ ನವೆಂಬರ್‌ವರೆಗೆ ಸ್ವಲ್ಪ ಅಡೆತಡೆ ಇರುತ್ತದೆ, ಆದರೆ ನವೆಂಬರ್ ನಂತರ ನಿಮಗೆ ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಪೂರ್ಣವಾಗುವುದು.
ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.

ಧನು ರಾಶಿ:
ಧನು ರಾಶಿಯವರ ಯುಗಾದಿ 2023-24ರ ರಾಶಿಫಲ ನೋಡುವುದಾದರೆ ರಾಹು 5ನೇ ಮನೆಯಲ್ಲಿ ಹಾಗೂ ಗುರು 5ನೇ ಮನೆಯಲ್ಲಿ ಇರುವುದರಿಂದ ಈ ವರ್ಷ ಈ ಎರಡೂ ಗ್ರಹಗಳು ನಿಮಗೆ ಶುಭ ಫಲ ನೀಡಲಿದೆ. ಶನಿ ನಿಮ್ಮ3ನೇ ಮನೆಯಲ್ಲಿ ಕೇತು ನಿಮ್ಮ 12ನೇ ಮನೆಯಲ್ಲಿ ಇರಲಿದೆ.
ಈ ನಾಲ್ಕು ಗ್ರಹಗಳ ಸ್ಥಾನ ನಿಮಗೆ ತುಂಬಾನೇ ಶುಭವಾಗಿದೆ. ಶನಿ ಕುಂಭ ರಾಶಿಗೆ ಪ್ರವೇಶಿಸಿದಾಗ ನೀವು ಸಾಡೇಸಾತಿಯಿಂದ ಸಂಪೂರ್ಣ ಮುಕ್ತರಾಗಿದ್ದೀರಿ, ಇನ್ನು ನಿಮಗೆ ಎಲ್ಲಾ ಒಳಿತೇ ಆಗುವುದು. ಶನಿ ಸಾಡೇಸಾತಿ ಸಮಯದಲ್ಲಿಅನುಭವಿಸಿದ ಆರ್ಥಿಕ ಸಂಕಷ್ಟಗಳು ದೂರಾಗಿ ಉಳಿದಾಯದತ್ತ ಗಮನ ಹರಿಸುತ್ತೀರಿ.
ಕುಟುಂಬದಲ್ಲಿನ ಸಮಸ್ಯೆ ಬಗೆಹರಿದು ಮನೆಯಲ್ಲಿ ಖುಷಿ ಇರಲಿದೆ. ನೀವು ತಂದೆಯ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಈ ವರ್ಷ ಖರ್ಚು ಕಮ್ಮಿಇರಲಿದೆ. ಗುರು ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ವರ್ಷ ನಿಮಗೆ ಗುರು ಯೋಗಕಾರಕವಾಗಿದೆ.
ಗುರುದೆಸೆ ಪ್ರಭಾವದಿಂದ ಈ ವರ್ಷ ನಿಮಗೆ ತುಂಬಾನೇ ಒಳ್ಳೆಯದಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲರವಾಗಿದೆ, ನೀವು ಬಯಸಿದ್ದು ನೆರವೇರಲಿದೆ. ವಿದ್ಯಾರ್ಥಿಗಳಿಗೂ ಈ ವರ್ಷ ಅನುಕೂಲಕರವಾಗಿದೆ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ನಿಮ್ಮ ಕೆಲಸ ಕಾರ್ಯಗಳು ನವೆಂಬರ್ ನಂತರ ಮತ್ತಷ್ಟು ಚುರುಕಾಗುವುದು. ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷ ನೀವು ತುಂಬಾ ಶುಭ ಫಲ ಕಾಣುವಿರಿ.



Click it and Unblock the Notifications
