Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಜೈಪುರದಲ್ಲಿ ಲೋಹದ ವಸ್ತು ಹಾರಾಟ..! ಏನಿದು ಹಾರುವ ತಟ್ಟೆ ವಿಡಿಯೋ..!
ನೀವು ಆಕಾಶದಲ್ಲಿ ವಿಚಿತ್ರ ವಸ್ತುಗಳ ಹಾರಾಡುವುದು, ಕಾಣಿಸಿಕೊಳ್ಳುವ ಕುರಿತ ಘಟನೆಗಳ ಕೇಳಿರುತ್ತೀರಿ. ಕೆಲವು ತಿಂಗಳಿನಿಂದ ಇಂತಹ ಘಟನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಅಮೆರಿಕದ ಪ್ರಮುಖ ನಗರಗಳಲ್ಲಿ ಈ ಘಟನೆಗಳು ಮರುಕಳಿಸುತ್ತಿವೆ.
ಅದರಲ್ಲೂ ಮಾನವರಿಗೆ ಅನ್ಯ ಗ್ರಹ ಅಲ್ಲಿನ ಜೀವಿಗಳು, ಬೇರೆ ಲೋಕದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಏಲಿಯನ್‌ಗಳು, ಯುಎಫ್‌ಓ ಗಳು ಹೀಗೆ ನಿತ್ಯ ಹತ್ತಾರು ರೀತಿಯ ವಿಷಯಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತದೆ.

ಆದರೆ ಕೆಲವು ಬಾರಿ ನಾವು ಕಣ್ಣಿಂದ ನೋಡಿದರು ಅದನ್ನು ನಂಬಲು ಸಾಧ್ಯವಿಲ್ಲದ ರೀತಿ ಅವು ನಿಗೂಢತೆಯಿಂದ ಕೂಡಿರುತ್ತವೆ. ಅವು ಪ್ರತಿಬಾರಿ ನಡೆದಾಗಲೂ ಜನರನ್ನು ಅಷ್ಟೇ ಕುತೂಹಲಕ್ಕೆ ತಳ್ಳುತ್ತವೆ. ಜೊತೆಗೆ ಮತ್ತಷ್ಟು ಊಹಾಪೋಹಗಳು ಹುಟ್ಟಿಕೊಳ್ಳುತ್ತವೆ. ಆಕಾಶದಲ್ಲಿ ವಿಸ್ಮಯಗಳು ನಡೆಯುವುದು ಹೊಸತೇನು ಅಲ್ಲ. ವಿಚಿತ್ರ ರೀತಿಯ ವಸ್ತುಗಳು ಕಾಣಿಸಿಕೊಳ್ಳುವುದು, ವಿಚಿತ್ರ ಬೆಳಕು, ಯುಎಫ್‌ಓಗಳು ಕಂಡಿರುವ ಪಟ್ಟಿಯೇ ಇಲ್ಲಿ ಇಡಬಹುದು.
ಆದ್ರೆ ಈ ಪಟ್ಟಿಗೆ ಈಗ ಭಾರತದಲ್ಲೇ ನಡೆದಿರುವ ಘಟನೆಯೊಂದು ಸೇರಿಕೊಂಡಿದೆ. ಹೌದು ನಾವು ಅಮೆರಿಕದಲ್ಲೋ, ಲಂಡನ್‌ನಲ್ಲೋ ಅಥವಾ ದೂರದ ದೇಶದಲ್ಲಿ ಈ ರೀತಿಯ ವಿದ್ಯಮಾನ ನಡೆಯುವುದನ್ನು ಕೇಳಿದ್ದೇವೆ. ಆದರೆ ಈಗ ನಮ್ಮ ದೇಶದ ರಾಜಸ್ಥಾನದ ಜೈಪುರದಲ್ಲಿ ಈಂತಹ ಘಟನೆ ನಡೆದಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅನ್ಯಗ್ರಹ ಜೀವಿಗಳ ಅಸ್ತಿತ್ವವನ್ನು ಹೇಳಿಕೊಳ್ಳುವ ವಿವಿಧ ವೀಡಿಯೊಗಳನ್ನು ನಾವು ಆಗಾಗ್ಗೆ ನೋಡುತ್ತೇವೆ. ಇಂತಹ ವೀಡಿಯೊಗಳು ಸಾಮಾನ್ಯವಾಗಿ ಅಮೆರಿಕದ್ದಲ್ಲಿ ನಡೆದಿದೆ ಅಂತಲೇ ಹೇಳಲಾಗುತ್ತಿತ್ತಿ.
ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಮೇ 4ರಂದು ನಡೆದಿದೆ ಎನ್ನಲಾಗಿದೆ. ಕೆಲವರು ಆಕಾಶದಲ್ಲಿ ಹಾರುವ ರಚನೆಯನ್ನು ಗುರುತಿಸಿದ್ದಾರೆ ಅದು ಪಕ್ಷಿ ಅಥವಾ ವಿಮಾನದಂತೆ ಕಾಣಿಸುವುದಿಲ್ಲ ಬದಲಿಗೆ ಯಾವುದೋ ವಸ್ತು ಮೋಡಗಳ ನಡುವೆ ಮರೆಯಾಗುವುದು ಕಾಣಬಹುದು.
ಬಹುಮಹಡಿ ಕಟ್ಟಡಗಳ ಮೇಲೆ ಕಪ್ಪು ಬಣ್ಣದ ವಸ್ತುವೊಂದು ಚಲಿಸುವುದು ವಿಡಿಯೋದಲ್ಲಿ ಕಾಣಬಹುದು. ಅದು 5 ಸೆಕೆಂಡ್‌ಗಳ ಒಳಗೆ ಮೋಡಗಳ ಒಳಗೆ ಮರೆಯಾಗುತ್ತಿದೆ. ಇದರ ರಚನೆ ವಿಮಾನದಂತೆ, ಡ್ರೋನ್‌ನಲ್ಲಿ ಕಾಣಿಸುತ್ತುಲ್ಲ. ಬದಲಿಗೆ ಒಂದು ಲೋಹದ ಆಕಾರದಲ್ಲಿ ಅದು ಕಾಣಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಅಚ್ಚರಿಗೆ ಕಾರಣವಾಗಿದೆ.
Bien_forever ಹೆಸರಿನ Instagram ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. "UFO ಭಾರತದ ಜೈಪುರದಲ್ಲಿ ಗುರುತಿಸಲ್ಪಟ್ಟಿದೆ (ಮೇ 4, 2024). ಇದರ ಬಗ್ಗೆ ನಿನಗೆ ಏನು ಅನ್ನಿಸುತ್ತದೆ?" ಎಂದು ಬರೆಯಲಾಗಿದೆ. ಈ ವಿಡಿಯೋ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಜನರು ಅಚ್ಚರಿಯ ಜೊತೆಗೆ ಒಂದಿಷ್ಟು ಪ್ರಶ್ನೆಗಳನ್ನೂ ಸಹ ಮುಂದಿಟ್ಟಿದ್ದಾರೆ.
ವಿಡಿಯೋವನ್ನು ವೀಕ್ಷಿಸಿದ ನಂತರ ಕೆಲವರು ಇದು UFO ಎಂದು ಹೇಳಿದರೆ ಕೆಲವರು ವಿಡಿಯೋವನ್ನು ಸತ್ಯಾಸತ್ಯತೆಗೆ ಒಳಪಡಿಸಿ ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ. ಆದರೆ ಹಲವರು ಈ ವಿಡಿಯೋ ಅಸಲಿ ಎಂದು ಹೇಳಿದ್ದಾರೆ. ಅಲ್ಲದೆ ಏಲಿಯನ್‌ಗಳು ಭಾರತಕ್ಕೂ ಭೇಟಿ ನೀಡಲು ಆರಂಭಿಸಿವೆ ಎಂದು ಕುಹಕವಾಡಿದ್ದಾರೆ.
ಇನ್ನು ಈ ರೀತಿ ವಸ್ತುಗಳು ಅಮೆರಿಕದಾದ್ಯಂತ ಕಂಡುಬರುತ್ತಿವೆ. ಯುಸ್‌ನ ಆರ್ಲಿಂಗ್ಟನ್ ಪ್ರದೇಶದಲ್ಲಿ ಜನರು ಆಕಾಶದಲ್ಲಿ ವಿಚಿತ್ರ ವಸ್ತು ನೋಡಿದ್ದು ಅದನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು. ಕಳೆದ ಸೂರ್ಯಗ್ರಹಣದ ಸಮಯದಲ್ಲಿ ಈ ವಿಚಿತ್ರ ವಿದ್ಯಮಾನ ನಡೆದಿತ್ತು. ಮೋಡಗಳ ಮೇಲೆ ನೆರಳಿನಂತಹ ಆಕೃತಿ ಹಾರಾಟ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಆ ವಿಚಿತ್ರ ವಸ್ತು ಮೋಡಗಳ ಮರೆಯಲ್ಲಿ ಅತ್ತಿಂದಿತ್ತ ಹಾರಾಟ ನಡೆಸಿ ಬಳಿಕ ಮರೆಯಾಗಿತ್ತು.



Click it and Unblock the Notifications
