Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗ್ರಹಣದ ದಿನ ಆಕಾಶದಲ್ಲಿ ಕಂಡುಬಂತು ವಿಚಿತ್ರ ವಸ್ತು..! ವಿಡಿಯೋ ವೈರಲ್
ಮಾನವರಿಗೆ ಅನ್ಯ ಗ್ರಹ ಅಲ್ಲಿನ ಜೀವಿಗಳು, ಬೇರೆ ಲೋಕದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಏಲಿಯನ್‌ಗಳು, ಯುಎಫ್‌ಓ ಗಳು ಹೀಗೆ ನಿತ್ಯ ಹತ್ತಾರು ರೀತಿಯ ವಿಷಯಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತದೆ. ಅದರಲ್ಲೂ ಇತ್ತೀಚಿಗೆ ಯುಎಫ್‌ಓಗಳ (Unidentified Flying Object) ಕುರಿತಾಗಿ ಹೊಸ ಹೊಸ ವಿಚಾರಗಳು ಹೊರಬೀಳುತ್ತಿವೆ.
ಆದರೆ ಈಗ ಸೂರ್ಯಗ್ರಹಣದ ದಿನದಂದು ಎಲ್ಲರ ದೃಷ್ಟಿ ಆಕಾಶದತ್ತ ಇದ್ದಾಗಲೇ ಆಕಾಶದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಯುಎಸ್‌ನಲ್ಲಿ ಸಂಪೂರ್ಣ ಸೂರ್ಯಗ್ರಹಣ ವೀಕ್ಷಿಸಲು ಲಕ್ಷ ಲಕ್ಷ ಮಂದಿ ಮನೆಯಿಂದ ಹೊರಬಂದು ಆಕಾಶದತ್ತ ಮುಖ ಮಾಡಿದ್ದರು. ಈ ವೇಳೆ ವಿಚಿತ್ರ ಘಟನೆ ನಡೆದಿದೆ.

ಯುಸ್‌ನ ಆರ್ಲಿಂಗ್ಟನ್ ಪ್ರದೇಶದಲ್ಲಿ ಜನರು ಆಕಾಶದಲ್ಲಿ ವಿಚಿತ್ರ ವಸ್ತು ನೋಡಿದ್ದು ಅದನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಗ್ರಹಣದ ಸಮಯದಲ್ಲಿ ಮೋಡಗಳ ಮೇಲೆ ನೆರಳಿನಂತಹ ಆಕೃತಿ ಹಾರಾಟ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆ ವಿಚಿತ್ರ ವಸ್ತು ಮೋಡಗಳ ಮರೆಯಲ್ಲಿ ಅತ್ತಿಂದಿತ್ತ ಹಾರಾಟ ನಡೆಸಿ ಬಳಿಕ ಮರೆಯಾಗಿದೆ.
ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ( ಟ್ವಿಟರ್) 'ಮ್ಯಾಟ್‌ವಾಲೇಸ್ 888' ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. "ಇಂದು ಸೂರ್ಯಗ್ರಹಣದ ಸಮಯದಲ್ಲಿ ಆರ್ಲಿಂಗ್ಟನ್ ಟೆಕ್ಸಾಸ್‌ನ ಮೇಲೆ UFO ಯ ಹೊಸ ವೀಡಿಯೊ ಕಾಣಿಸಿಕೊಂಡಿದೆ ಮತ್ತು ಜನರು ಭಯಭೀತರಾಗಿದ್ದಾರೆ ಏಕೆಂದರೆ ಅದು ಮೋಡಗಳಲ್ಲಿ ಕಣ್ಮರೆಯಾಗಿದೆ" ಎಂದು ಬರೆದುಕೊಳ್ಳಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿದ ಜನರು ಸಹ ಅಚ್ಚರಿಗೆ ಒಳಗಾಗಿದ್ದಾರೆ. ಕೆಲವರು ಇದು ಮೋಡಗಳ ನಡುವಿನ ನೆರಳು ಎಂದು ಮತ್ತೆ ಕೆಲವರು ವಿಮಾನ ಹಾರಾಡುವಾಗ ಸಂಭವಿಸುವ ನೆರಳು ಎಂದು ಹೇಳುತ್ತಿದ್ದಾರೆ. ಆದರೆ ಇದಕ್ಕೆ ಕಾರಣ ಏನು? ಆಕಾಶದಲ್ಲಿ ಹಾರಾಟ ನಡೆಸಿದ ವಸ್ತು ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.
ಈ ವಿಡಿಯೋ ಸುಮಾರು 4 ಮಿಲಿಯನ್ ವೀಕ್ಷಣೆ ಕಂಡಿದೆ. ಎತ್ತರದಲ್ಲಿ ಹಾರಾಟ ನಡೆಸುವ ವಿಮಾನದ ನೆರಳು ಮೋಡಗಳ ಮೇಲೆ ಬಿದ್ದಾಘ ಈ ರೀತಿ ಉಂಟಾಗುತ್ತದೆ ಎಂದು ಹಲವರು ಹೇಳಿದ್ದಾರೆ. ಆದರೆ ವಿಮಾನದ ನೆರಳು ಇಷ್ಟು ವೇಗವಾಗಿ ಚಲಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹ ಎದುರಾಗಿದೆ. ಇನ್ನು ಕೆಲವರು ಇದು ಗ್ರಹಣ ಸಮಯದಲ್ಲಿ ಉಂಟಾಗುವ ವಿಲಕ್ಷಣ ಘಟನೆ ಎಂದಿದ್ದಾರೆ.
ಜೊತೆಗೆ ಇದನ್ನು ನಾಸಾ ವಿಜ್ಞಾನಿಗಳು ಪತ್ತೆ ಮಾಡಬೇಕಿದೆ. ಇದು ಅನ್ಯಗ್ರಹ ಜೀವಿಗಳ ಮೂಲಕ ಬಂದಿರುವ ವಾಹನ ಇದ್ದರೂ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಅಲ್ಲಿ ಕಂಡ ವಸ್ತು ಯಾವುದು ಎಂಬುದು ನಿಗೂಢವಾಗಿಯೇ ಉಳದಿದೆ.
ಇದಕ್ಕೂ ಮೊದಲು ಅಮೆರಿಕದ ಅರಿಝೋನಾದಲ್ಲಿ ನಿಗೂಢವಾದ ನೀಲಿ ಬಣ್ಣದ ಹೊಳೆಯುವ ವಸ್ತುವೊಂದು ಆಕಾಶದಲ್ಲಿ ಕಂಡುಬಂದಿತ್ತು. ಇದೂ ಸಹ ಬಾರೀ ಕುತೂಹಲಕ್ಕೆ ಕಾರಣವಾಗಿತ್ತು. UFO ದೃಶ್ಯಗಳು ಏರಿಕೆಯನ್ನು ಅನುಭವಿಸುವುದರೊಂದಿಗೆ, ಈ ಘಟನೆಯು ಸಂಶೋಧಕರು ಮತ್ತು ಸಾಮಾನ್ಯ ಜನರ ಗಮನವನ್ನು ಸೆಳೆದಿದೆ, ಅಂತಹ ವಿಚಿತ್ರ ಘಟನೆಗಳ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಸ್ಕಾಟ್ಸ್‌ಡೇಲ್ ನಿವಾಸಿಯೊಬ್ಬರು ಸಹಚರರೊಂದಿಗೆ ಸಂಜೆಯ ವಿಹಾರಕ್ಕೆ ಹೊರಟಾಗ, ವಸ್ತುವನ್ನು ಗುರುತಿಸಿ ರೆಕಾರ್ಟ್ ಮಾಡಿಕೊಂಡಿದ್ದರು.
ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಈ ನೀಲಿ ಆಕಾರದ ಬೆಳಕು ಮೇಲೆ ಕೆಳಗೆ ಚಲಿಸುತ್ತಿತ್ತು ಎಂದಿದ್ದರು. ಆಕಾಶದಲ್ಲಿ ಸುಮಾರು 30 ನಿಮಿಷಕ್ಕೂ ಹೆಚ್ಚು ಹೊತ್ತು ಕಂಡುಬಂದಿದೆ ಎಂದಿದ್ದರು. ಆದರೆ ಅಲ್ಲಿಂದ ಯಾವ ಶಬ್ದವೂ ಕೇಳಿಬರುತ್ತಿರಲಿಲ್ಲ. ಕೆಲವೊಮ್ಮೆ ಬೆಳಕು ಮಂದವಾಗಿದ್ದರೆ ಇನ್ನೂ ಕೆಲವೊಮ್ಮೆ ಪ್ರಕಾಶವಾಗಿ ಹೊಳೆಯುತ್ತಿತ್ತು ಎಂದು ವಿವರಿಸಿದ್ದರು. ಈ ಘಟನೆಗೂ ಈವರೆಗೆ ಪರಿಹಾರ ಸಿಕ್ಕಿಲ್ಲ. ಆ ಬೆಳಕು ಯಾವುದು ಎಂದು ಪತ್ತೆಯಾಗಿಲ್ಲ.



Click it and Unblock the Notifications